ನಳಿನ್ ಕುಮಾರ್ ಕಟೀಲ್ ಮಾತಿಗೆ ಯಡಿಯೂರಪ್ಪ ಬೇಸರ
* ನಳಿನ್ ಕುಮಾರ್ ಕಟೀಲ್ ಮಾತಿಗೆ ಯಡಿಯೂರಪ್ಪ ಬೇಸರ
* ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕುರಿತಂತೆ ಹೇಳಿಕೆ ನೀಡಿದ್ದ ನಳೀನ್ ಕುಮಾರ್ ಕಟೀಲ್
* ಇದು ಸಮರ್ಥನಿಯವಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ
ವಿಜಯಪುರ, (ಅ.20): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಂಧಗಿ ಉಪಚುನಾವಣೆ ಪ್ರಯುಕ್ತ ಇಂದು (ಅ.20 ) ಮೊರಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ(BS Yediyurappa), ಕಟೀಲ್ ಅವರು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ ಅವರನ್ನ ಡ್ರಗ್ ಪೆಡ್ಲರ್ (Drug Peddler) ಎಂದಿರುವುದು ಸೂಕ್ತವಲ್ಲ. ಈ ರೀತಿ ಅಗೌರವದಿಂದ ಮಾತನಾಡಿರುವುದು ಸಮರ್ಥನಿಯವಲ್ಲ ಎಂದರು.
ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಭಾಷಣ
ಆ ರೀತಿ ಯಾರ ಬಗ್ಗೆನೂ ಮಾತನಾಡಬಾರದು. ಆ ರೀತಿ ಮಾತನಾಡುವ ಅಗತ್ಯವಿಲ್ಲ. ರಾಹುಲ್ ಅವರಿಗೂ ಒಂದು ಗೌರವವಿದೆ. ಅಗೌರ ತರುವ ಹಾಗೇ ಯಾರು ಮಾತನಾಡಬಾರದು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ನಿನ್ನೆ (ಅ.19) ಮಾತನಾಡಿದ್ದ ನಳಿನ್ ಕುಮಾರ್ ಕಟೀಲ್, ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್ ಪೆಡ್ಲರ್. ಅವರು ಹೇಗೆ ದೇಶವನ್ನು ಮುನ್ನಡೆಸುತ್ತಾರೆ? ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಪಕ್ಷ ನಾಯಕತ್ವ ರಹಿತವಾಗಿದೆ ಮತ್ತು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಡುವೆ ತೀವ್ರ ಸ್ಪರ್ಧೆ ಇತ್ತು. ಪಕ್ಷವನ್ನು ನಡೆಸಲು ಸಾಧ್ಯವಾಗದ ಈ ವ್ಯಕ್ತಿಗಳು ದೇಶವನ್ನು ಹೇಗೆ ನಡೆಸುತ್ತಾರೆ ಎಂದು ಪ್ರಶ್ನಿಸಿದ್ದರು.
ರಾಹುಲ್ ಗಾಂಧಿ ಡ್ರಗ್ ಅಡಿಕ್ಟ್: ಕಟೀಲ್ ಹೇಳಿಕೆಗೆ ಬಿಜೆಪಿ ಸಮರ್ಥನೆ
ರಾಹುಲ್ ಗಾಂಧಿ ಡ್ರಗ್ಸ್ ಅಡಿಕ್ಟ್, ಪೆಡ್ಲರ್ ಎಂದು ವರದಿ’ ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ಖಂಡನೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.