ನನ್ನ ಹೆಣವೂ ಬಿಜೆಪಿ, ಆರೆಸ್ಸೆಸ್‌ಗೆ ಹೋಗಲ್ಲ: ಸಿದ್ದರಾಮಯ್ಯ
ನನಗೆ ರಾಷ್ಟ್ರಪತಿ ಇಲ್ಲವೇ, ಪ್ರಧಾನ ಮಂತ್ರಿ ಮಾಡುತ್ತೇವೆ ಅಂದರೂ ನನ್ನ ಹೆಣ ಕೂಡ ಬಿಜೆಪಿ-ಆರ್‌ಆರ್‌ಎಸ್‌ಗೆ ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಹೇಳಿದರು.
ರಾಮನಗರ (ಜ.30): ನನಗೆ ರಾಷ್ಟ್ರಪತಿ ಇಲ್ಲವೇ, ಪ್ರಧಾನ ಮಂತ್ರಿ ಮಾಡುತ್ತೇವೆ ಅಂದರೂ ನನ್ನ ಹೆಣ ಕೂಡ ಬಿಜೆಪಿ-ಆರ್‌ಆರ್‌ಎಸ್‌ಗೆ ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟುವಾಗಿ ಹೇಳಿದರು. ಮಾಗಡಿ ಪಟ್ಟಣದಲ್ಲಿ ಎಚ್ಕೆಜಿಎನ್ ಶಾದಿಮಹಲ್ ಅನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಬಿಜೆಪಿಯವರಿಗೆ ದ್ವೇಷವೇ ರಾಜಕಾರಣವಾದರೆ, ಜೆಡಿಎಸ್ನವರಿಗೆ ಅಧಿಕಾರ ಮುಖ್ಯವೇ ಹೊರತು ಅದಕ್ಕೆ ಜಾತ್ಯತೀತ ತತ್ವ ಸಿದ್ಧಾಂತ ಯಾವುದೂ ಇಲ್ಲ ಎಂದು ಬಿಜೆಪಿ ಸರ್ಕಾರ ಹಾಗೂ ಜೆಡಿಎಸ್ ಪಕ್ಷದ ರಾಜಕೀಯ ನಡೆಯ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯವರು ಮನುಷ್ಯ-ಮನುಷ್ಯರ ನಡುವೆ ಗೋಡೆ ಕಟ್ಟಿದ್ವೇಷದ ರಾಜಕಾರಣ ಮಾಡುತ್ತಾರೆ. ಇನ್ನು ಜೆಡಿಎಸ್ನವರಿಗೆ ಸಿದ್ಧಾಂತವಿಲ್ಲ. ಅಧಿಕಾರಕ್ಕಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪೈಕಿ ಯಾರ ಜೊತೆ ಬೇಕಾದರೂ ಹೋಗುತ್ತಾರೆ ಟೀಕಿಸಿದರು. ನಾನು ಹಿಂದೂ ವಿರೋಧಿ ಅಲ್ಲ. ನನ್ನನ್ನು ಸುಮ್ಮನೆ ಹಿಂದೂ ವಿರೋಧಿ ಎಂಬಂತೆ ಬಿಂಬಿಸಿದ್ದಾರೆ. ಅವನ್ಯಾವನೋ ಸಿ.ಟಿ.ರವಿ ಅಂತ ಒಬ್ಬ ಇದ್ದಾನೆ. ಅವನು ನನ್ನ ಹೆಸರನ್ನು ಸಿದ್ರಾಮುಲ್ಲಾ ಖಾನ್ ಅಂತ ಕರೆಯುತ್ತಾನೆ. ನಮ್ಮ ಮನೆ ದೇವರು ಸಿದ್ದರಾಮೇಶ್ವರ, ನಮ್ಮ ಊರ ಹೆಸರು ಸಿದ್ದರಾಮನ ಹುಂಡಿ. ಅದಕ್ಕೆ ನಮ್ಮಪ್ಪ ಸಿದ್ದರಾಮಯ್ಯ ಅಂತ ಹೆಸರಿಟ್ಟಿದ್ದಾರೆ. ನಾನೂ ಅಪ್ಪಟ ಹಿಂದೂ ಎಂದು ಹೇಳಿದರು.
Kolar: ಸಿದ್ದರಾಮಯ್ಯ ಸ್ಪರ್ಧೆ: ಇನ್ನೂ ಬಗೆಹರಿಯದ ಗೊಂದಲ
ಮಹಾತ್ಮಗಾಂಧಿ ಕೂಡ ಅಪ್ಪಟ ಹಿಂದೂ ಆಗಿದ್ದವರು. ಹಿಂದೂ-ಮುಸ್ಲಿಂರ ಸಾಮರಸ್ಯಕ್ಕೆ ಹೋರಾಟ ಮಾಡುತ್ತಿದ್ದರು. ಆ ಮಹಾನ್ ವ್ಯಕ್ತಿಯನ್ನು ಕೊಲೆ ಮಾಡಿದ ಗೋಡ್ಸೆಯನ್ನು ಪೂಜಿಸುತ್ತೀರಿ. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸುತ್ತಿದ್ದಾರೆ. ಆದರೆ, ಅವರು ಯಾರು ಮನುವಾದ ಹಾಗೂ ಪುರೋಹಿತ ಶಾಹಿ ಆಚರಣೆ ಮಾಡುತ್ತಾರೋ ಅದು ದೇಶಕ್ಕೆ ಶಾಪವೆಂದು ಹೇಳಿದ್ದರು. ಅವರ ಮಾತುಗಳಿಂದಲೂ ಬಿಜೆಪಿಯವರಿಗೆ ಜ್ಞಾನೋದಾಯವಾಗಿಲ್ಲ ಎಂದರು.
ನಾನೇಕೆ ಹೊಸ ಪಕ್ಷ ಕಟ್ಟಲಿ?: ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿಗೆದ್ದು ತೋರಿಸಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನೇಕೆ ಹೊಸ ಪಕ್ಷ ಕಟ್ಟಲಿ. ಕುಮಾರಸ್ವಾಮಿ ಹೇಳಿದ ಅಂತ ನಾನು ಹೊಸ ಪಕ್ಷ ಕಟ್ಟಬೇಕಾ? ಬಿಜೆಪಿ ಪಕ್ಷ ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾನು ಕಾಂಗ್ರೆಸ್ ಲೀಡರ್, ಶಾಸಕಾಂಗ ಪಕ್ಷದ ನಾಯಕ ಎಂದರು. ಬಿಜೆಪಿ ಜೊತೆ ಹೋದವರು ಯಾರು. ನಮಗೂ ಜೆಡಿಎಸ್‌ಗೂ ಸಂಬಂಧವಿಲ್ಲ. ಅವರು ಯಾವುದೇ ತತ್ವ ಸಿದ್ಧಾಂತ ಇಟ್ಟುಕೊಂಡಿಲ್ಲ. ಬಿಜೆಪಿಗೆ ಅನುಕೂಲ ಮಾಡಲು, ಕಾಂಗ್ರೆಸ್ ವೋಟ್ ಹೊಡೆಯಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.
ಅಮಿತ್ ಶಾ 40% ಸರ್ಕಾರ ಯಾವುದೆಂದು ಉತ್ತರಿಸಲಿ: ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ದೆಹಲಿ ನಾಯಕರಿಗೆ ಎಟಿಎಂ ಆಗಿತ್ತು ಎಂದು ಹೇಳುತ್ತಿದ್ದಾರೆ. ಅವರಿಗೆ ಧೈರ್ಯವಿದ್ದರೆ ಯಾರ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರವೆಂದು ಕರೆಯುತ್ತಿದ್ದಾರೆಂದು ಉತ್ತರಿಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ಪರ್ಸೆಂಟ್ ಸಸರ್ಕಾರ ಅಂತ ನನ್ನ ಕಾಲದಲ್ಲಿ ಕರೆದಿದ್ದರಾ. ಯಾರ ಕಾಲದಲ್ಲಿ 40 ಪರ್ಸೆಂಟ್ ಅಂತ ಕರೆದರೆಂದು ಹೇಳಲಿ. ಚುನಾವಣೆಗಾಗಿ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ಹೊಸ ಪಕ್ಷ ಕಟ್ಟಿಗೆದ್ದು ತೋರಿಸಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನೇಕೆ ಹೊಸ ಪಕ್ಷ ಕಟ್ಟಲಿ. ಕುಮಾರಸ್ವಾಮಿ ಹೇಳಿದ ಅಂತ ನಾನು ಹೊಸ ಪಕ್ಷ ಕಟ್ಟಬೇಕಾ. ಬಿಜೆಪಿ ಪಕ್ಷ ಸೋಲಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಾನು ಕಾಂಗ್ರೆಸ್ ಲೀಡರ್, ಶಾಸಕಾಂಗ ಪಕ್ಷದ ನಾಯಕ ಎಂದರು. ಬಿಜೆಪಿ ಜೊತೆ ಹೋದವರು ಯಾರು? ನಮಗೂ ಅವರಿಗೂ ಸಂಬಂಧ ಇಲ್ಲ. ಅವರು ಯಾವುದೇ ತತ್ವ ಸಿದ್ದಾಂತ ಇಟ್ಟುಕೊಂಡಿಲ್ಲ. ಬಿಜೆಪಿಗೆ ಅನುಕೂಲ ಮಾಡಲು, ಕಾಂಗ್ರೆಸ್ ವೋಟ್ ಹೊಡೆಯಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.