Asianet Suvarna News Asianet Suvarna News

ಯಾವ ಪ್ರಾಂತ್ಯದಲ್ಲಿ ನಾವು ಪ್ರಬಲ ಎನ್ನುವುದಕ್ಕಿಂತ 28 ಸ್ಥಾನಗಳಲ್ಲೂ ಗೆಲ್ಲುವುದೇ ನಮ್ಮ ಆದ್ಯತೆ: ಎಚ್‌ಡಿಕೆ

ಎಲ್ಲಾ 28 ಸ್ಥಾನ ಗೆಲ್ಲುವುದು ನಮ್ಮ ಆದ್ಯತೆ. ರಾಜ್ಯದಲ್ಲಿ ನಮ್ಮದೊಂದು ಸಣ್ಣ ಪಕ್ಷ. 28 ಸ್ಥಾನಗಳನ್ನು ಗೆದ್ದರೆ ನಮಗೆ ಒಂದು ಧ್ವನಿ ಬರುತ್ತದೆ. ಅದಕ್ಕೆ ನಾಡಿನ ಜನತೆ ನಮ್ಮ ಮೈತ್ರಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ 

Former CM HD Kumaraswamy Talks Over Lok Sabha Elections 2024 grg
Author
First Published Nov 28, 2023, 8:44 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು

ಕೊಡಗು(ನ.28): ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ನಡೆಯುವುದೇ, ಅದರಲ್ಲಿ ಜೆಡಿಎಸ್ಗೆ ಟಿಕೆಟ್ ದೊರೆಯುವುದೇ ಎನ್ನುವ ಪ್ರಶ್ನೆಗೆ ನಾವು ಯಾವ ಭಾಗದಲ್ಲಿ ನಮ್ಮ ಪಕ್ಷ ಪ್ರಾಬಲ್ಯವಿದೆ ಎನ್ನುವುದು ಮುಖ್ಯವಲ್ಲ. ಆದರೆ 28 ಕ್ಕೆ 28 ಸ್ಥಾನ ಗೆಲ್ಲುವ ದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. 

ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು, ಎಲ್ಲಾ 28 ಸ್ಥಾನ ಗೆಲ್ಲುವುದು ನಮ್ಮ ಆದ್ಯತೆ. ರಾಜ್ಯದಲ್ಲಿ ನಮ್ಮದೊಂದು ಸಣ್ಣ ಪಕ್ಷ. 28 ಸ್ಥಾನಗಳನ್ನು ಗೆದ್ದರೆ ನಮಗೆ ಒಂದು ಧ್ವನಿ ಬರುತ್ತದೆ. ಅದಕ್ಕೆ ನಾಡಿನ ಜನತೆ ನಮ್ಮ ಮೈತ್ರಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಕೊಡಗಿನ ಹಾಕತ್ತೂರಿನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಜೆಡಿಎಸ್ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ಕೇಂದ್ರವು ರಾಜ್ಯಕ್ಕೆ ಸರಿಯಾಗಿ ಅನುದಾನ ಕೊಡುತ್ತಿಲ್ಲ ಎನ್ನುವ ಹಲವು ಸಮಸ್ಯೆಗಳಿವೆ ಎಂದು ಪದೇ ಪದೇ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಾರೆ. ರಾಜ್ಯದಿಂದ 4 ಲಕ್ಷ ಕೋಟಿ ಕೇಂದ್ರಕ್ಕೆ ಆದಾಯ ಹೋಗುತ್ತದೆ, ಆದರೆ ನಮಗೆ ಬರೀ 56 ಸಾವಿರ ಕೋಟಿ ರೂಪಾಯಿಯನ್ನು ಕೊಡುತ್ತಾರೆ ಎನ್ನುತ್ತಾರೆ. ಇದು ಇವತ್ತು ಆಗಿರುವ ಸಮಸ್ಯೆ ಅಲ್ಲ, ಸ್ವಾತಂತ್ರ್ಯ ಬಂದ ನಂತರ ಈ ರೀತಿ ನಡೆದುಕೊಂಡು ಬರುತ್ತಿದೆ ಎಂದು ಹಿಂದಿನ ಎಲ್ಲಾ ಸರ್ಕಾರಗಳ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ. 

ನಿಮ್ಮ ಜೊತೆ ನಾನಿರುತ್ತೇನೆ: ದಾಸರಹಳ್ಳಿ ಕ್ಷೇತ್ರದ ಮುಖಂಡರಿಗೆ ಎಚ್‌ಡಿಕೆ ಧೈರ್ಯ

ಬಡತನ ಇರುವ ರಾಜ್ಯಗಳಿಗೆ ಹೆಚ್ಚು ಅನುದಾನ ಹೋಗುತ್ತಿದೆ. ಇದು ಇವರಿಗೂ ಗೊತ್ತಿರುವ ವಿಚಾರವೇ, ಆದರೆ ಅದನ್ನು ಮಾಧ್ಯಮಗಳ ಮುಂದೆ ಮಾತನಾಡುವುದಲ್ಲ. ನೀತಿ ಆಯೋಗದ ಸಭೆಯಲ್ಲಿ ಹೋಗಿ ಮಾತನಾಡಿ. ಇಲ್ಲವೇ ಕೇಂದ್ರದ ಪ್ರಮುಖರೊಂದಿಗೆ ಹೋಗಿ ಮಾತನಾಡಿ. ಅದಕ್ಕೆ ನೀವು ಗಮನಕೊಡಿ ಎಂದು ಎಚ್ ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಮೈಸೂರು ಜಿಲ್ಲೆಯಲ್ಲಿ ಅಲೆಮನೆಯಲ್ಲಿ ಹೆಣ್ಣು ಭ್ರೂಣಹತ್ಯೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಅದು ಬಹಳ ಅತ್ಯಂತ ಆಘಾತಕಾರಿ ಮತ್ತು ಅಮಾನವೀಯವಾದ ಘಟನೆಯಾಗಿದೆ. ಈ ಪ್ರಕರಣವನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಯಾರ ಯಾರ ಪಾತ್ರವಿದೆ ಎನ್ನುವುದನ್ನು ಸರಿಯಾಗಿ ತನಿಖೆ ಮಾಡಿ ಪತ್ತೆಹಚ್ಚಬೇಕು. ಯಾವ ಅಧಿಕಾರಿಗಳ ನಿಷ್ಕ್ರಿಯತೆ ಇದೆ, ಗೊತ್ತಿದು ಗೊತ್ತಿದ್ದು ಇದರ ಬಗ್ಗೆ ಗಮನ ಹರಿಸದೇ ಇದ್ದಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

ಅಂತವರನ್ನು ಅರೆಸ್ಟ್ ಮಾಡಿ ಜಾಮೀನಿನ ಮೇಲೆ ಬಿಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಅಂತಹವರ ವಿರುದ್ಧ ಕಠಿಣವಾದ ಸೆಕ್ಷನ್ ಗಳನ್ನು ಹಾಕುವ ತೀರ್ಮಾನ ಮಾಡಲಿ. ಇದು ಸ್ಯಾಂಪಲ್‌ ಅಷ್ಟೇ, ಆರೋಗ್ಯ ಇಲಾಖೆ ಅಧಿಕಾರಿಗಳು ಇದು ಗೊತ್ತೇ ಇಲ್ಲ ಎನ್ನಬಹುದು. ಅದರಿಂದ ಸರ್ಕಾರ ಎಲ್ಲವನ್ನು ಕೂಲಂಕಷವಾಗಿ ಪರಿಶೀಲಿಸಲಿ. ವರದಿ ತರಿಸಿ ಯಾರು, ಯಾರು ಇದರಲ್ಲಿ ನಿಷ್ಕ್ರಿಯತೆಯಲ್ಲಿ ಇದ್ದಾರೆ. ಯಾರು ಇದಕ್ಕೆಲ್ಲ ಕಾರಣರಿದ್ದಾರೆ. ಅವರ ವಿರುದ್ಧ ಬಹಳ ಕಠಿಣವಾದ ಕ್ರಮ ಕೈಗೊಳ್ಳುವಂತೆ ಎಚ್ಡಿಕೆ ಒತ್ತಾಯಿಸಿದ್ದಾರೆ. 

Follow Us:
Download App:
  • android
  • ios