ಪ್ರಧಾನಿ ಮೋದಿ ರಾಜ್ಯಕ್ಕೆ ಬರ್ತಿರೋದು ರೆಸ್ಟ್ ಪಡೆಯಲು: ಎಚ್.ಡಿ.ಕುಮಾರಸ್ವಾಮಿ
ದೇಶದ ಅಭಿವೃದ್ಧಿ ಮಾಡಿ ಸುಸ್ತಾಗಿದ್ದಾರೆ. ಪಾಪು ಅವರು ರೆಸ್ಟ್ ಪಡೆಯಲು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿದರು.
ರಾಮನಗರ (ಏ.09): ದೇಶದ ಅಭಿವೃದ್ಧಿ ಮಾಡಿ ಸುಸ್ತಾಗಿದ್ದಾರೆ. ಪಾಪು ಅವರು ರೆಸ್ಟ್ ಪಡೆಯಲು ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕರ್ನಾಟಕ ಪ್ರವಾಸ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹುಲಿ ವಿಹಾರಕ್ಕಾಗಿ ಬಂಡೀಪುರಕ್ಕೆ ಬರುತ್ತಿದ್ದಾರೆ. ರಾಜ್ಯದ ಜನರ ಕಷ್ಟಸುಖ ವಿಚಾರಿಸಲು ಅಲ್ಲ. ಕೆಲಸ ಮಾಡಿ ಸುಸ್ತಾಗಿದ್ದಾರೆ. ಹಾಗಾಗಿ ರೆಸ್ಟ್ ಪಡೆಯಲು ಬರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಗುಜರಾತ್ ನಾಯಕರ ಮೆಚ್ಚಿಸುವ ಪ್ರಯತ್ನ: ಬಿಜೆಪಿ ರಾಜ್ಯ ನಾಯಕರು, ಗುಜರಾತ್ ನಾಯಕರನ್ನು ಮೆಚ್ಚಿಸಲು ಅಮೂಲ್ ಮೂಲಕ ಕೆಎಂಎಫ್ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು. ಬಿಡದಿ ಸಮೀಪದ ಕೇತಗಾನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಂಎಫ್ ಅನ್ನು ಹಂತ ಹಂತವಾಗಿ ಮುಗಿಸಲು ಹುನ್ನಾರ ನಡೆಯುತ್ತಿದೆ. ಬಿಜೆಪಿ ರಾಜ್ಯ ನಾಯಕರು ಕರ್ನಾಟಕದ ಪರ ಇದ್ದಾರಾ ಅಥವಾ ಗುಜರಾತ್ ಪರ ಇದ್ದಾರಾ ಎಂದು ಪ್ರಶ್ನಿಸಿದರು.
ವಂಶ ಬಗ್ಗೆ ಹೇಳಿಕೆ: ಶ್ರುತಿ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ನಿಂದ ದೂರು
ಅಮೂಲ್ ತನ್ನ ಬ್ರ್ಯಾಂಡ್‌ನಲ್ಲಿಯೇ ಹಾಲು ಮಾರಾಟಕ್ಕೆ ಮುಂದಾಗಿದೆ. ಇದರ ಹಿಂದಿನ ಉದ್ದೇಶ ಏನೆಂಬುದನ್ನು ಅರಿತುಕೊಳ್ಳಬೇಕು. ಈ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗಳನ್ನು ಗಮನಿಸಿದ್ದೇನೆ. ದೇವೇಗೌಡರು ಪ್ರಧಾನಿ ಆಗಿದ್ದಾಗ 13 ಒಕ್ಕೂಟಗಳು ಉತ್ತಮ ಸ್ಥಿತಿಯಲಿತ್ತು. ಅವೆಲ್ಲವೂ ರೈತರ ಬದುಕಿಗೆ ಆಸರೆಯಾಗಿತ್ತು. ಆದರಿಂದು ಹಂತಹಂತವಾಗಿ ದಾಳಿ ಮಾಡಲು ಹೊರಟಿದ್ದಾರೆ. ಕೆಎಂಎಫ್ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದು, ಹಣ ಲೂಟಿ ಮಾಡುವುದಷ್ಟೇ ಅವರ ಉದ್ದೇಶವಾರು ಎಂದು ಕಿಡಿಕಾರಿದರು.
ಈ ದಾಳಿಯಿಂದಾಗುವ ಡ್ಯಾಮೇಜ್ ಏನೆಂಬುದು ಅವರಿಗೆ ಅರ್ಥ ಆಗುತ್ತಿಲ್ಲ. ಅದರ ಬಗೆಗಿನ ಪರಿಜ್ಞಾನವೂ ಇಲ್ಲ. ನಾವು ಹೇಳುತ್ತಿರುವುಗು ಹುಡುಗಾಟಿಕೆ ಮಾತಲ್ಲ. ಇದನ್ನು ಕೂಡಲೇ ಸರಿಪಡಿಸಿಕೊಳ್ಳಬೇಕು. ಕೆಎಂಎಫ್ ಕಷ್ಟದಲ್ಲಿ ಕಟ್ಟಿರುವ ಸಂಸ್ಥೆ. ನಂದಿನಿ ಅಮುಲ್ ಗಿಂತ ಏನು ಕಡಿಮೆ ಇಲ್ಲ. ನಮ್ಮ ರೈತರಿಗೆ ಅಮುಲ್ ಅನ್ನು ಓವರ್ ಟೇಕ್ ಮಾಡುವ ಶಕ್ತಿಯಿದೆ. ಆದರೆ, ರೈತರ ಬದುಕಿನ ವಿಷಯದಲ್ಲಿ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಸೋಮವಾರ ಜೆಡಿಎಸ್ 2ನೇ ಪಟ್ಟಿ: ಜೆಡಿಎಸ್ ಎರಡನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡುತ್ತೇನೆ. ಈಗ ಸಾಕಷ್ಟುಒತ್ತಡಗಳಿದ್ದು, ಒಂದಷ್ಟುಬದಲಾವಣೆಗಳು ಆಗಬೇಕಿದೆ. ಕೆಲವು ಕಡೆ ಮತದಾರರು ನಮಗೆ ಮತ ಹಾಕಲು ಸಿದ್ಧರಿದ್ದಾರೆ. ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕೊರತೆಯಿದೆ. ಅದೆಲ್ಲವನ್ನು ನೀಗಿಸುವ ಕೆಲಸ ಆಗುತ್ತಿದೆ. ರಾಷ್ಟ್ರೀಯ ಪಕ್ಷ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ. ಹಾಗಂತ ಪ್ರಪಂಚ ಏನು ಮುಳುಗಿ ಹೋಗಲ್ಲ. ಜೆಡಿಎಸ್ ಅನ್ನು ಮುಗಿಸಲು ನಮ್ಮ ಶಾಸಕರಿಂದ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಪಕ್ಷಕ್ಕೆ ತುಂಬಿಕೊಂಡು ಹೋಗಿದ್ದರು. ಈಗ ಕಾಂಗ್ರೆಸ್ ನ ಹಲವು ಪ್ರಮುಖರು ಜೆಡಿಎಸ್ ಸೇರ್ಪಡೆ ಪ್ರಕ್ರಿಯೆ ಆರಂಭವಾಗಿದೆ.
ಕುಸ್ತಿಗೆ ಕರೆದ ಸಿಎಂ ಬೊಮ್ಮಾಯಿಯನ್ನು ಸೋಲಿಸ್ತೇವೆ: ಕಾಂಗ್ರೆಸ್ಸಿಗರ ಶಪಥ
ಈಗ ಎಲ್ಲವೂ ಯೂ ಟರ್ನ್ ತೆಗೆದುಕೊಂಡಿದೆ ಎಂದರು. ಕಾಂಗ್ರೆಸ್‌ನಲ್ಲಿ ಓವರ್ ಲೋಡ್ ಆಗಿ ನಮಗೆ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಸುಮಾರು 15ಕ್ಕೂ ಹೆಚ್ಚು ಸಮರ್ಥ ಅಭ್ಯರ್ಥಿಗಳು ಜೆಡಿಎಸ್ಗೆ ಬರುತ್ತಾರೆ. ಜೆಡಿಎಸ್ 123 ಸ್ಥಾನ ಮುಟ್ಟಲು ಬೇಕಾದ ಅಭ್ಯರ್ಥಿಗಳು ಸೇರುವ ವಾತಾವರಣ ನಿರ್ಮಾಣವಾಗಿದೆ ಎಂದು ಕುಮಾರಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.