ವಂಶ ಬಗ್ಗೆ ಹೇಳಿಕೆ: ಶ್ರುತಿ ವಿರುದ್ಧ ಚುನಾವಣಾ ಆಯೋಗಕ್ಕೆ ಜೆಡಿಎಸ್‌ನಿಂದ ದೂರು

ನೀತಿ ಸಂಹಿತೆ ಉಲ್ಲಂಘಿಸಿ ಬಿಜೆಪಿ ನಾಯಕಿ ಹಾಗೂ ನಟಿ ಶ್ರುತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು ನೀಡಿದೆ. ಪಕ್ಷದ ಕಾನೂನು ವಿಭಾಗ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ಪ್ರದೀಪ್‌ ಕುಮಾರ್‌ ದೂರು ನೀಡಿದ್ದಾರೆ. 

JDS Registered complaint against Actor bjp leader Shruti to Election Commission gvd

ಬೆಂಗಳೂರು (ಏ.09): ನೀತಿ ಸಂಹಿತೆ ಉಲ್ಲಂಘಿಸಿ ಬಿಜೆಪಿ ನಾಯಕಿ ಹಾಗೂ ನಟಿ ಶ್ರುತಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಜೆಡಿಎಸ್‌ ದೂರು ನೀಡಿದೆ. ಪಕ್ಷದ ಕಾನೂನು ವಿಭಾಗ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ಪ್ರದೀಪ್‌ ಕುಮಾರ್‌ ದೂರು ನೀಡಿದ್ದಾರೆ. ನಟಿ ಶ್ರುತಿ ಅವರು, ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ, ‘ರಾಜ್ಯದಲ್ಲಿ ಬೇರೆಯವರ ವಂಶ ಉದ್ಧಾರವಾಗಬೇಕಾದರೆ ಜೆಡಿಎಸ್‌ಗೆ ಮತಹಾಕಿ. ನಿಮ್ಮಗಳ ವಂಶಬಿಟ್ಟು ಬೇರೆ ದೇಶದವರ ವಂಶ ಉದ್ಧಾರವಾಗಬೇಕಾದರೆ ಕಾಂಗ್ರೆಸ್‌ಗೆ ಮತಹಾಕಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಜೆಡಿಎಸ್‌ ಪಕ್ಷವನ್ನು ಒಂದು ವಂಶಕ್ಕೆ ಓಲೈಕೆ ಮಾಡಿ ನಿಂದನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಶ್ರುತಿ ಅವರು ಒಬ್ಬ ಜವಾಬ್ದಾರಿಯುತ ನಟಿಯಾಗಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡಿ ಮತದಾರರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇವರ ಹೇಳಿಕೆಯು ನೀತಿ ಸಂಹಿತೆಯ ಸ್ಪಷ್ಟಉಲ್ಲಂಘನೆಯಾಗಿದೆ. ಹೀಗಾಗಿ ಶ್ರುತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಕುಸ್ತಿಗೆ ಕರೆದ ಸಿಎಂ ಬೊಮ್ಮಾಯಿಯನ್ನು ಸೋಲಿಸ್ತೇವೆ: ಕಾಂಗ್ರೆಸ್ಸಿಗರ ಶಪಥ

ರೈತರು, ಕೆಎಂಎಫ್‌ಗೆ ಅಮುಲ್‌ನಿಂದ ಖೆಡ್ಡಾ: ‘ರಾಜ್ಯದ ಬಿಜೆಪಿ ಸರ್ಕಾರ ಗುಜರಾತ್‌ ಹಾಲು ಮಹಾಮಂಡಳಿ ಅಮುಲ್‌ಗೆ ಬೆಂಗಳೂರಿನ ಕೋರಮಂಗಲದಲ್ಲಿ ಅತಿ ಕಡಿಮೆ ದರಕ್ಕೆ ಬೆಲೆ ಬಾಳುವ ಆರು ಎಕರೆಯಷ್ಟುಜಮೀನು ನೀಡಿದೆ. ಇಷ್ಟುಔದಾರ್ಯ ತೋರಿದ ಕರ್ನಾಟಕ ಹಾಲು ಉತ್ಪಾದಕರು ಮತ್ತು ಕೆಎಂಎಫ್‌ಗೆ ದೊಡ್ಡ ಖೆಡ್ಡಾ ತೋಡಲು ಅಮುಲ್‌ ಹೊರಟಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು. 

ನಮ್ಮ ಜನತೆ, ಗ್ರಾಹಕರು ನಂದಿನಿ ಉತ್ಪನ್ನವನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ ಬದುಕನ್ನು ಕಾಪಾಡಬೇಕು. ಇಲ್ಲಿನ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ. ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್‌ನ ಪ್ಯಾಕೆಟ್‌ ಹಾಲಿನ ಮಾರಾಟಕ್ಕೆ ತಡೆವೊಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್‌ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್‌ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್‌ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಹೇಳಿದರು. ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲಿಯೇ ಅಡ್ಡಿ ಮಾಡಬೇಕೆನ್ನುವುದು ಅಮುಲ್‌ ದುರಾಲೋಚನೆ. ‘ಒಂದು ದೇಶ, ಒಂದು ಅಮುಲ್‌, ಒಂದೇಹಾಲು, ಒಂದೇ ಗುಜರಾತ್‌’ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ ಎಂದರು. ‘ರಾಜ್ಯದ ನಮ್ಮ ಆಸ್ತಿಗಳನ್ನು ಉಳಿಸುವ ಯಾವುದೇ ಜವಾಬ್ದಾರಿ ಇಲ್ಲ. 

ದೇವೇಗೌಡರ ರೀತಿ ನನ್ನ ಬ್ಲಾಕ್ಮೇಲ್‌ ಅಸಾಧ್ಯ: ಭವಾನಿಗೆ ಪರೋಕ್ಷ ಟಾಂಗ್‌ ಕೊಟ್ಟ ಎಚ್‌ಡಿಕೆ

ಕೆಎಂಎಫ್‌ ಬೆಳವಣಿಗೆಯನ್ನು ಕಡೆಗಣಿಸಿ ಅಮುಲ್‌ ಅನ್ನು ಮೇಲೆ ಎತ್ತಲೂ ಹೊರಟಿದಾರೆ. ಬೆಂಗಳೂರಿನಲ್ಲಿ ನೀಡಿರುವ ಜಮೀನು ಯಾವಾಗ ನೀಡಲಾಗಿದೆಯೋ ಗೊತ್ತಿಲ್ಲ. ಅದರ ಮಾಹಿತಿಯನ್ನು ತೆಗೆಸುತ್ತೇನೆ. ಒಂದು ಕಾಲದಲ್ಲಿ ನಷ್ಟದಲ್ಲಿದ್ದ ನಂದಿನಿಯನ್ನು ಲಾಭದಾಯಕ ಮಾಡಿದ್ದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು. ಜಾಗತಿಕವಾಗಿ ಪರಿಸ್ಥಿತಿ ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ಬಿಜೆಪಿಗರು ಅರ್ಥ ಮಾಡಿಕೊಂಡಿದ್ದಾರಾ? ಇವರಿಗೆ ಅದರ ಬೆಲೆ ಏನು ಎಂಬುದು ಗೊತ್ತಾ? ಕಷ್ಟಪಟ್ಟು ಸಂಪಾದನೆ ಮಾಡಿದರೆ ಅದರ ಬೆಲೆ ಗೊತ್ತಾಗುತ್ತಿತ್ತು. ಯಾರೋ ದುಡಿಮೆ ಮಾಡಿದರೆ, ನಾವು ಮಾಡಿದ್ದು ಎಂದು ಪ್ರಚಾರ ತೆಗೆದುಕೊಳ್ಳುವುದು ಬಿಟ್ಟರೆ ಅವರ ಕೊಡುಗೆ ಏನು? ಬಿಜೆಪಿ ಆಡಳಿತದಲ್ಲಿ ಎಲ್ಲಾ ನಾಶ ಮಾಡಲು ಹೊರಟಿದ್ದು, ಜನರನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

Latest Videos
Follow Us:
Download App:
  • android
  • ios