ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌: ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ಎಚ್‌ಡಿಕೆ

ಪ್ರಜ್ವಲ್ ರೇವಣ್ಣ ಆರೋಪಿ ಸ್ಥಾನದಲ್ಲಿ ಇದ್ದಾರೆ. ಪ್ರಕರಣ ಹೊರಬಂದ ದಿನವೇ ಹೇಳಿದ್ದೇನೆ. ನೆಲದ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಎಸ್‌ಐಟಿ ರಚನೆ ಆಗಿ ಅಧಿಕಾರಿಗಳು ಕೆಲಸ ಶುರು ಮಾಡಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ ಅಲ್ಲಿಯವರೆಗೂ ಕಾಯಿರಿ ಎಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ

Former CM HD Kumaraswamy Slams Karnataka Congress grg

ರಾಯಚೂರು(ಮೇ.03):  ಏಪ್ರಿಲ್ 24-25 ರಿಂದ ಮಾಧ್ಯಮಗಳಲ್ಲಿ ಎಪಿಸೋಡ್ ಬರುತ್ತಿವೆ. ಅಂದಿನಿಂದ ಮಾಧ್ಯಮದವರು ನನ್ನ ಮನೆ ಮುಂದೆ, ದೇವೇಗೌಡರ ಮನೆ ಮುಂದೆ ನಿಲ್ಲುತ್ತಿದ್ದಾರೆ. ಈ ಎಪಿಸೋಡ್‌ನಲ್ಲಿ ನನ್ನ ಮತ್ತು ದೇವೇಗೌಡರ ಸುತ್ತ ಏಕೆ ಸುತ್ತುತ್ತಿದ್ದಾರೆ ನನಗೆ ಗೊತ್ತಿಲ್ಲ. ಪ್ರಜ್ವಲ್ ರೇವಣ್ಣ ಆರೋಪಿ ಸ್ಥಾನದಲ್ಲಿ ಇದ್ದಾರೆ. ಪ್ರಕರಣ ಹೊರಬಂದ ದಿನವೇ ಹೇಳಿದ್ದೇನೆ. ನೆಲದ ಕಾನೂನಿಗೆ ಎಲ್ಲರೂ ತಲೆಬಾಗಲೇಬೇಕು. ಎಸ್‌ಐಟಿ ರಚನೆ ಆಗಿ ಅಧಿಕಾರಿಗಳು ಕೆಲಸ ಶುರು ಮಾಡಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ ಅಲ್ಲಿಯವರೆಗೂ ಕಾಯಿರಿ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸಿಎಂ ಪ್ರಧಾನಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ಸಿಂಧನೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಪಾಸ್ ಪೋರ್ಟ್ ಹೇಗೆ ಕೊಟ್ಟಿರಿ. ವಿಸಾ ಕೊಡುವುದು ಆ ದೇಶದವರು. ಆ ವ್ಯಕ್ತಿ ‌ವಿದೇಶಕ್ಕೆ ಏ.26 ರಂದು ಹೋಗಿದ್ದು, ಆ ವ್ಯಕ್ತಿ ವಿದೇಶಕ್ಕೆ ಹೋಗುವ ವೇಳೆ ಯಾವುದೇ ಕೇಸ್ ಬುಕ್ ಆಗಿರಲಿಲ್ಲ. ತನಿಖೆ ಮಾಡುವ ಚಿಂತನೆ ಇದೆ ಎಂದು ಎಕ್ಸ್ ಅಕೌಂಟ್ ನಲ್ಲಿ ಹಾಕಿಕೊಂಡಿದ್ರಿ. ಪದೇ ಪದೇ ಪ್ರಧಾನಿಮಂತ್ರಿ ಮತ್ತು ಬಿಜೆಪಿಗೆ ಯಾಕೆ ಎಳೆಯುತ್ತಿದ್ದೀರಿ. ಈ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಅಂತ ಹೇಳಿದ್ದಾರೆ. 

ಮಗನಂತೆ ತಂದೆ ವಿದೇಶಕ್ಕೆ ತೆರಳದಂತೆ ಹೆಚ್‌ಡಿ ರೇವಣ್ಣ ವಿರುದ್ಧವೂ ಲುಕ್ ಔಟ್ ನೋಟಿಸ್ ಜಾರಿ

ಆ ವ್ಯಕ್ತಿ ಒಂದು ವಾರ ಸಮಯ ಕೇಳಿ ತನಿಖಾ ಕಚೇರಿಗೆ ಬರುವುದಾಗಿ ಹೇಳಿದ್ದಾನೆ. ಕೇಸ್ ಆಗಿರುವುದು ಬೇಲ್ ಎಬಲ್ ಕೇಸ್ ಹಾಕಿದ್ರಿ. 8-10 ಬಾರಿ ಸಮನ್ಸ್ ಕೊಟ್ಟು, ಆ ಸಮನ್ಸ್ ಗೂ ಬೆಲೆ ಇಲ್ಲದಂತೆ ಆಗಿದೆ. ನೀವೂಗಳೇ ಸರ್ಕಾರದಲ್ಲಿ ಈ ರೀತಿಯ ಹೇಳಿಕೆ ನೀಡುವುದು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. 

ನಾನು ಸ್ವಲ್ಪ ದಾಖಲೆಗಳನ್ನ ರೆಡಿ ಮಾಡಿ ಇಟ್ಟಿಕೊಂಡಿದ್ದೇನೆ. ಈ ಕ್ಯಾಸೆಟ್ ಕುಮಾರಸ್ವಾಮಿನೇ ಬಿಟ್ಟಿದ್ದಾರೆ ಅಂ ಹೇಳಿದ್ದಾರೆ. ನನಗೆ ಏನು ಹುಚ್ಚ, ಇಲ್ಲಿ ನನ್ನ ಹೆಸರು ಕೆಣಕಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ನಿಮಗೆ ತಂದೆ- ತಾಯಿ ಮೇಲೆ ‌ಗೌರವ ಇದ್ರೆ. ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು ಅಂತೀರಾ?. ಈ ಮುಖ್ಯಮಂತ್ರಿಗೆ ಮನುಷ್ಯತ್ವ ಇಲ್ಲದೆ ಇರಬಹುದು. ನನ್ನ ತಂದೆ- ತಾಯಿ ಯಾವ ನೋವಿನಲ್ಲಿ‌ ಇದ್ದಾರೆ. ನಿನ್ನೆ ಮತ್ತು ‌ಮೊನ್ನೆ ನಮ್ಮ ತಂದೆ- ತಾಯಿಗೆ ಆತ್ಮಸೈರ್ಯ ತುಂಬಲು ಬೆಂಗಳೂರಿನಲ್ಲಿ ಇದ್ದೆ. ನಿಮ್ಮ ಯೋಗ್ಯತೆಗೆ ತಂದೆ- ತಾಯಿ ಇಲ್ಲದೆ ಇರಬಹುದು. ನನಗೆ ತಂದೆ- ತಾಯಿ ಜೀವಕ್ಕೆ ಅಪಾಯವಾಗಬಹುದು. ತಪ್ಪು ಯಾರೇ ಮಾಡಿದ್ರೂ ಶಕ್ತಿ ಆಗಲಿ ಎಂದು ನೂರಾರು ಬಾರಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ. 

ಎಸ್ ಐಟಿ ರಚನೆ ಮಾಡಿದ ಕೇಸ್ ನಲ್ಲಿ ಒಂದಕ್ಕಾದ್ರೂ ಶಿಕ್ಷೆಯಾಗಿದೀಯಾ?. ಇದೇ ಬಾಗಲಕೋಟೆ ಮೇಟಿ ವಿಚಾರ, ಮೇಟಿ ಜೊತೆಗೆ ನೀವೂ ಪ್ರಚಾರ ಮಾಡಿಲ್ವಾ?. ಯಾಕೆ 26ನೇ ತಾರೀಖಿನವರೇ‌‌ ನಿಮಗೆ ಬೇಕಾಗಿದ್ದು, ಜನರಿಗೆ ದಾರಿ ತಪ್ಪಿಸುವುದು ಆಗಿದೆ ಎಂದು ಕಿಡಿ ಕಾರಿದ್ದಾರೆ. 

Latest Videos
Follow Us:
Download App:
  • android
  • ios