ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ದವೂ  ಎಸ್‌ಐಟಿ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.

ಬೆಂಗಳೂರು (ಮೇ.3): ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಬೆನ್ನಲ್ಲೇ ಅವರು ತಂದೆ ಹೊಳೆನರಸೀಪುರ ಶಾಸಕ , ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಿರುದ್ದವೂ ಕರ್ನಾಟಕದ ವಿಶೇಷ ತನಿಖಾ ದಳ (ಎಸ್‌ಐಟಿ) ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.

ಪ್ರಕರಣ ಸಂಬಂಧ ಸಂಕಷ್ಟದಲ್ಲಿರುವ ರೇವಣ್ಣ ದೇಶ ಬಿಟ್ಟು ಹೊಗುವುದನ್ನ ತಡೆಯುವ ಸಲುವಾಗಿ LOC ನೊಟೀಸ್ ನೀಡಲಾಗಿದೆ. ಎಸ್ಐಟಿ ಯಿಂದ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು, ಪ್ರಕರಣ ಹಿನ್ನೆಲೆ ಕಳೆದ ಮೂರ್ನಾಲ್ಕು ದಿನಗಳಿಂದ ವಿಚಾರಣೆಗೆ ಹಾಜರಾಗದ ಹಿನ್ನೆಲೆ ವಿದೇಶಕ್ಕೆ ಹಾರುವ ಯತ್ನ ತಡೆಯಲು ಮುಂದಾದ ಎಸ್ಐಟಿ ಈ ನೊಟೀಸ್‌ ಜಾರಿ ಮಾಡಿದೆ.

ಗನ್‌ ಪಾಯಿಂಟ್‌ ಇಟ್ಟು ನನ್ನನ್ನು ರೇಪ್‌ ಮಾಡಿದ್ದಾರೆ, ಪ್ರಜ್ವಲ್ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯೆ ದೂರು

ಈಗಾಗಲೇ ರೇವಣ್ಣ ಸಂತ್ರಸ್ಥೆಯ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ನಾಳೆ ಇದರ ವಿಚಾರಣೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಲಿದೆ. ನಾಳೆ ರೇವಣ್ಣ ಎಸ್‌ಐಟಿ ವಿಚಾರಣೆಗೆ ಹಾಜರಾಗಲಿದ್ದಾರೆಂದು ಅವರ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ: ಇನ್ನು ಈಗಾಗಲೇ ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಆಗಿರುವ ಸಂಸದ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ಪೊಲೀಸರು ಲುಕ್‌ ಔಟ್ ನೋಟೀಸ್ ಜಾರಿ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಈ ಮೂಲಕ ವಿಮಾನ ನಿಲ್ದಾಣ, ಭೂ ಗಡಿ ಪ್ರದೇಶ ಅಥವಾ ಬಂದರುಗಳಲ್ಲಿ ಪತ್ತೆಯಾದರೂ ಬಂಧಿಸಲು ಮುಂದಾಗಿದೆ.

Prajwal Revanna Obscene Video Case: ಎಚ್‌ಡಿ ರೇವಣ್ಣಗೆ ಮತ್ತೆ ಬಂಧನ ಭೀತಿ, ಜಾಮೀನಿಗೆ ಅರ್ಜಿ ಸಲ್ಲಿಕೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮರ್ಯಾದೆ ತೆಗೆಯುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜಗ್ಯ ಸರ್ಕಾರದ ಎಸ್‌ಐಟಿ ತನಿಖೆಗೆ ವಹಿಸಿದೆ. ಪ್ರಜ್ವಲ್ ರೇವಣ್ಣ ತನ್ನ ವಿರುದ್ಧ ಕೇಸ್ ದಾಖಲಾಗುವ ಮುನ್ನವೇ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಎಸ್‌ಐಟಿ ಪ್ರಜ್ವಲ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿತ್ತು. ಆದರೆ, ಈ ನೊಟೀಸ್‌ಗೆ ವಕೀಲರ ಮೂಲಕ ಉತ್ತರಿಸಿದ ಪ್ರಜ್ವಲ್ ರೇವಣ್ಣ ನಾನು ವಿದೇಶದಲ್ಲಿದ್ದೇನೆ, ಒಂದು ವಾರ ಕಾಲಾವಕಾಶ ಕೊಡಿ ಎಂದು ಕೇಳಿಕೊಂಡಿದ್ದರು. ಇದಕ್ಕೊಪ್ಪದ ಎಸ್‌ಐಟಿ ತಂಡವು ಸಂಸದ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ.