Asianet Suvarna News Asianet Suvarna News

ಸಚಿವ ಅಶ್ವತ್ಥ್ ನಾರಾಯಣ ಮಾದರಿ ಪ್ರತಿನಿಧಿ: ಬಿ.ಎಸ್‌.ಯಡಿಯೂರಪ್ಪ

ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಬೇದಾರ್‌ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಬಿಬಿಎಂಪಿ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ಉದ್ಘಾಟಿಸಿದರು. 

Former CM BS Yediyurappa Talks About Minister Dr CN Ashwath Narayan At Benglauru gvd
Author
First Published Dec 25, 2022, 12:13 PM IST

ಬೆಂಗಳೂರು (ಡಿ.25): ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸುಬೇದಾರ್‌ ಪಾಳ್ಯದಲ್ಲಿ ನೂತನವಾಗಿ ನಿರ್ಮಿಸಿರುವ ಬಿಬಿಎಂಪಿ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶನಿವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಒಬ್ಬ ಜನಪ್ರತಿನಿಧಿಗೆ ತಮ್ಮ ಕ್ಷೇತ್ರವನ್ನು ಹೇಗೆ ಮಾದರಿಯಾಗಿ ಅಭಿವೃದ್ಧಿಪಡಿಸಬಹುದು ಎನ್ನುವುದಕ್ಕೆ ಅಶ್ವತ್ಥನಾರಾಯಣ ಉದಾಹರಣೆ ಆಗಿದ್ದಾರೆ. 

ಮಲ್ಲೇಶ್ವರ ವ್ಯಾಪ್ತಿಯಯಲ್ಲಿ ಆರೋಗ್ಯ, ಶಿಕ್ಷಣ, ನಾಗರಿಕ ಸೇವೆಗಳು ಸೇರಿದಂತೆ ಎಲ್ಲವೂ ಸುಗಮವಾಗಿ ನಡೆಯುತ್ತಿವೆ. ಇದಕ್ಕೆ ಕಾರಣ ಕೇವಲ ಹಣ ಮತ್ತು ಶ್ರೀಮಂತಿಕೆ ಅಲ್ಲ. ಜನಪರವಾದ ಕಳಕಳಿ ಬೇಕಾಗುತ್ತದೆ. ಇದು ಇಡೀ ಬೆಂಗಳೂರಿನ ಜನಪ್ರತಿನಿಧಿಗಳಿಗೆ ಆದರ್ಶಪ್ರಾಯವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣದಲ್ಲಿಯೂ ಸಚಿವರು ವಹಿಸಿದ ಪಾತ್ರವು ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ಷೇತ್ರದ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಲೆಗಳ ಅವಶ್ಯಕತೆ ಇಲ್ಲ.

3-4 ಜನರಿಂದ ಕಾಂಗ್ರೆಸ್‌ ಉಸಿರಾಡುತ್ತಿದೆ: ಬಿ.ಎಸ್‌.ಯಡಿಯೂರಪ್ಪ

ಯಾರು ಬೇಕಾದರೂ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಇಲ್ಲಿ 220 ತರಹದ ಪರೀಕ್ಷೆಗಳು ಲಭ್ಯವಿವೆ. ಅರ್ಹ ರೋಗಿಗಳಿಗೆ ಔಷಧಿಗಳನ್ನು ಸಹ ಉಚಿತವಾಗಿ ಕೊಡಲಾಗುವುದು. ಇಲ್ಲದಿದ್ದರೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಿಂದ ಭಾರೀ ರಿಯಾಯಿತಿ ದರದಲ್ಲಿ ಪೂರೈಸಲಾಗುವುದು ಎಂದು ಮಾಹಿತಿ ನೀಡಿದರು. ಕ್ಷೇತ್ರದಲ್ಲಿ ಇರುವ ಕೆ.ಸಿ ಜನರಲ್‌ ಆಸ್ಪತ್ರೆ, ಗುಟ್ಟಹಳ್ಳಿ, ಮತ್ತೀಕೆರೆ ಸೇರಿದಂತೆ ಹಲವೆಡೆಗಳಲ್ಲಿ ಒಂದೇ ಸ್ಥಳದಲ್ಲಿ ಎಲ್ಲ ಚಿಕಿತ್ಸೆಯೂ ಸಿಗುವಂತೆ ಪರಿಪೂರ್ಣ ವ್ಯವಸ್ಥೆ ಮಾಡಲಾಗಿದೆ. 

ಉಳಿದ ವಾರ್ಡ್‌ಗಳಲ್ಲೂ ಇನ್ನು ಕೆಲವೇ ತಿಂಗಳಲ್ಲಿ ಇಂತಹ ಅನುಕೂಲ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ಆಯುಕ್ತ ಡಾ.ತ್ರಿಲೋಕಚಂದ್ರ, ಪಶ್ಚಿಮ ವಲಯ ಆಯುಕ್ತ ಡಾ.ದೀಪಕ್‌, ಮಲ್ಲೇಶ್ವರ ಆರೋಗ್ಯಾಧಿಕಾರಿ ಡಾ. ಮನೋರಂಜನ್‌ ಹೆಗಡೆ, ಲೋಕೇಶ್‌, ಮಾಜಿ ಕಾರ್ಪೊರೇಟರ್‌ಗಳಾದ ಜಯಪ್ರಕಾಶ್‌, ಜೈಪಾಲ್ ಮುಂತಾದವರು ಉಪಸ್ಥಿತರಿದ್ದರು.

ಪಂಚಮಸಾಲಿಗಳಿಗೆ 2ಎ ಸಿಕ್ಕೇ ಸಿಗುತ್ತೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ವಿಚಾರಕ್ಕೆ ನಾನು ಯಾವತ್ತೂ ವಿರೋಧ ಮಾಡಿಲ್ಲ. ನಾನು ಸದಾ ಪಂಚಮಸಾಲಿಗಳ ಪರವಾಗಿದ್ದೇನೆ. ಮೀಸಲಾತಿ ವಿಚಾರದಲ್ಲಿ ಇಂದಲ್ಲ ನಾಳೆ ಅವರಿಗೆ ಸಿಗಬೇಕಾದ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ತಡವಾಗುತ್ತಿರುವುದಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ತಮ್ಮ ಮೇಲೆ ಬೊಟ್ಟು ಮಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಯಡಿಯೂರಪ್ಪಗೆ ಆಮಂತ್ರಣ ನೀಡಬೇಕಾ?: ಶಾಸಕ ಬಸನಗೌಡ ಪಾಟೀಲ ಯತ್ನಾಳ

ನಾನು ಅಧಿಕಾರದಲ್ಲಿದ್ದಾಗ ಮತ್ತು ಈಗ, ಯಾವಾಗಲೂ ಪಂಚಮಸಾಲಿಗಳ ಪರವಾಗಿಯೇ ಇದ್ದೇನೆ. ಆ ಸಮುದಾಯಕ್ಕೆ ಮೀಸಲಾತಿ ಕೊಡಬೇಕೆಂದು ನಾನೂ ಕೂಡ ಹೇಳಿದ್ದೇನೆ. ಸ್ವಾಮೀಜಿ ಯಾಕೆ ನನ್ನ ವಿರುದ್ಧ ಮಾತನಾಡುತ್ತಿದ್ದಾರೋ ಗೊತ್ತಿಲ್ಲ. ನನ್ನ ಅವಧಿಯಲ್ಲಿ ಮೀಸಲಾತಿ ದೊರೆಯಲಿಲ್ಲ ಎಂಬ ಕಾರಣಕ್ಕೆ ಅಸಮಾದಾನ ಇರಬಹುದು. ನಾನು ಸ್ವಾಮೀಜಿ ಅವರ ಜೊತೆ ವೈಯಕ್ತಿಕವಾಗಿ ಮಾತನಾಡುತ್ತೇನೆ. ಮುಖ್ಯಮಂತ್ರಿ ಅವರ ಜೊತೆಗೂ ಚರ್ಚೆ ಮಾಡುತ್ತೇನೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ಬೇಡಿಕೆ ನ್ಯಾಯಸಮ್ಮತವಾಗಿದೆ. ಅದು ಇಂದಲ್ಲ ನಾಳೆ ಅವರಿಗೆ ಸಿಗುತ್ತದೆ ಎಂದರು.

Follow Us:
Download App:
  • android
  • ios