Asianet Suvarna News Asianet Suvarna News

Karnataka Politics: 3-4 ಜನರಿಂದ ಕಾಂಗ್ರೆಸ್‌ ಉಸಿರಾಡುತ್ತಿದೆ: ಬಿ.ಎಸ್‌.ಯಡಿಯೂರಪ್ಪ

‘ರಾಜ್ಯದಲ್ಲಿ ಸ್ವಲ್ಪ ಉಸಿರಾಡುತ್ತಿರುವ ಕಾಂಗ್ರೆಸ್‌ ಈ ಬಾರಿ ಸೋತರೆ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಧೂಳೀಪಟ ಆಗಲಿದೆ’ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. 

Former CM BS Yediyurappa Slams On Congress gvd
Author
First Published Dec 19, 2022, 1:40 AM IST

ಬೆಂಗಳೂರು (ಡಿ.19): ‘ರಾಜ್ಯದಲ್ಲಿ ಸ್ವಲ್ಪ ಉಸಿರಾಡುತ್ತಿರುವ ಕಾಂಗ್ರೆಸ್‌ ಈ ಬಾರಿ ಸೋತರೆ ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಧೂಳೀಪಟ ಆಗಲಿದೆ’ ಎಂದು ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಭಾನುವಾರ ನಗರದ ಗಾಯತ್ರಿ ವಿಹಾರದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಪ್ರಥಮ ರಾಜ್ಯಮಟ್ಟದ ಸಮಾವೇಶ ‘ಶಕ್ತಿ ಸಂಗಮ’ದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಯಂಕ, ನಾಣಿ, ಸೀನ ಎಂದುಕೊಂಡು ಮೂರ್ನಾಲ್ಕು ಜನರಿಂದ ಕಾಂಗ್ರೆಸ್‌ ಉಸಿರಾಡುತ್ತಿದೆ. ಹೀಗಿದ್ದರೂ ಅಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ತಿರುಕನ ಕನಸು ಕಾಣುತ್ತಿದ್ದಾರೆ. ಮುಳುಗುತ್ತಿರುವ ಹಡಗು ಕಾಂಗ್ರೆಸ್‌ ಜೊತೆ ಸೇರಲು ಯಾರೂ ಇಷ್ಟಪಡುತ್ತಿಲ್ಲ. ಗುಜರಾತ್‌ ಚುನಾವಣೆಯಲ್ಲಿ ದೊಡ್ಡ ಗೆಲುವು ಸಿಕ್ಕಿದ್ದು, ಅದರಂತೆ ಕರ್ನಾಟಕದಲ್ಲಿ 140ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಬೇಕಿದೆ ಎಂದರು.

ಬಿಜೆಪಿಗೆ ಬಿಎಸ್‌ವೈ ನಾಯಕತ್ವದ ಶ್ರೀರಕ್ಷೆಯಿದೆ: ಸಿಎಂ ಬೊಮ್ಮಾಯಿ

ಪೀಪಲ್ಸ್‌ ಪಾರ್ಟಿ ಬಿಜೆಪಿಗೆ ಬಲ ತುಂಬಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ‘ಪೀಪಲ್ಸ್‌ ಪಾರ್ಟಿಯಾದ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಚುನಾವಣೆ ಬಂದಾಗ ಜನರ ಬಳಿ ಬರುವ ಪವರ್‌ ಪಾರ್ಟಿಗಳಿಗೆ ಪಾಠ ಕಲಿಸಿ ಎಂದು ಕರೆ ನೀಡಿದರು. ರಾಜಕಾರಣದಲ್ಲಿ ಪವರ್‌ ಪಾಲಿಟಿಕ್ಸ್‌ ಹಾಗೂ ಪೀಪಲ್ಸ್‌ ಪಾಲಿಟಿಕ್ಸ್‌ ಎಂಬ ಎರಡು ವಿಧಗಳಿವೆ. ಕೆಲವು ಪಕ್ಷಗಳು ಕೇವಲ ಅಧಿಕಾರದ ರಾಜಕಾರಣ ಮಾಡುತ್ತವೆ. ಅಧಿಕಾರಕ್ಕಾಗಿ ಪಕ್ಷ ಕಟ್ಟಿಕೊಂಡು ನೋಂದಣಿ ಮಾಡಿಕೊಂಡಿವೆ. ಆದರೆ, ಬಿಜೆಪಿ ಸಕಾರಾತ್ಮಕ ಆಡಳಿತ, ಸಕಾರಾತ್ಮಕ ರಾಜಕಾರಣದಲ್ಲಿ ನಂಬಿಕೆ ಇಟ್ಟಿದೆ. 

ಹೀಗಾಗಿ ಚುನಾವಣೆ ಬಂದಾಗ ಜನರ ಬಳಿ ಬರುವವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು. ಅವರು ಹಣ, ತೋಳ್ಬಲ, ಜಾತಿಯ ವಿಷಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬಹುದು ಎಂದುಕೊಂಡಿದ್ದಾರೆ. ರಮೇಶ್‌ಕುಮಾರ್‌ ಹೇಳಿದಂತೆ ಅವರು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಮಾಡಿ ಮೂರು ತಲೆಮಾರಿಗೆ ಆಗುವಷ್ಟುಹಣ ಮಾಡಿಕೊಂಡಿದ್ದಾರೆ. ಹೀಗಾಗಿ ಮುಂದಿನ ನಾಲ್ಕು ತಿಂಗಳು ಬಿಜೆಪಿ ಕಾರ್ಯಕರ್ತರು ಮೈಮರೆಯಬಾರದು. ಈ ಅವಧಿಯಲ್ಲಿ ಕೆಲಸ ಮಾಡಿದರೆ ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಜನರು ನೆಮ್ಮದಿಯಿಂದ ಇರಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಎಚ್ಚರಿಸಿದರು. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿ ನುಡಿದಂತೆ ನಡೆದಿದ್ದೇವೆ. ಹೀಗಾಗಿ ಎರಡೂ ವರ್ಗಗಳು ಬಿಜೆಪಿ ಪರವಾಗಿ ನಿಂತಿವೆ. ಆದರೆ, ಇದನ್ನು ಸಹಿಸದ ಕಾಂಗ್ರೆಸ್‌ ಇಲ್ಲಸಲ್ಲದ ಆರೋಪ, ಟೀಕೆ ಮಾಡುತ್ತಿದೆ. ಬೆಳಗಾವಿ ಅಧಿವೇಶದಲ್ಲಿ ಇವೆಲ್ಲದಕ್ಕೂ ಸಮರ್ಥವಾಗಿ ಉತ್ತರಿಸಲಿದ್ದೇವೆ ಎಂದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಅಶ್ವಿನಿಕುಮಾರ್‌ ವೈಷ್ಣವ್‌, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಸೇರಿ ಪ್ರಮುಖರಿದ್ದರು. 

ಯಡಿಯೂರಪ್ಪಗೆ ಆಮಂತ್ರಣ ನೀಡಬೇಕಾ?: ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬಿಜೆಪಿಯ 24 ಪ್ರಕೋಷ್ಠಗಳ ಮುಖಂಡರು, ವಿವಿಧ ಜಿಲ್ಲೆಯಿಂದ ಆಗಮಿಸಿದ್ದ 15 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಮುಂದಿನ 25 ವರ್ಷದಲ್ಲಿ ದೇಶ, ರಾಜ್ಯ ಜಾಗತಿಕವಾಗಿ ನಂ.1 ಸ್ಥಾನಕ್ಕೇರಲು ಪೀಪಲ್ಸ್‌ ಪಾರ್ಟಿ ಪಕ್ಷವಾದ ಬಿಜೆಪಿ ಅಧಿಕಾರದಲ್ಲಿ ಇರಬೇಕು. ದುಡ್ಡೇ ದೊಡ್ಡಪ್ಪ ಎನ್ನುವವರ ಜಾಗದಲ್ಲಿ ದುಡಿಮೆಯೇ ದೊಡ್ಡಪ್ಪ ಎನ್ನುವುದನ್ನು ಸ್ಥಾಪನೆ ಮಾಡಬೇಕು. ಅದಕ್ಕಾಗಿ ಪ್ರಕೋಷ್ಠದ ಕಾರ್ಯಕರ್ತರು ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಒಗ್ಗಟ್ಟಾಗಿ ಕೈ ಜೋಡಿಸಿ’ ಎಂದು ಕರೆಕೊಟ್ಟರು.

Follow Us:
Download App:
  • android
  • ios