ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ತುಂಬಾ ದಿನ ಉಳಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭವಿಷ್ಯ ನುಡಿದರು.

ಶಿವಮೊಗ್ಗ (ಜೂ.19): ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ತುಂಬಾ ದಿನ ಉಳಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭವಿಷ್ಯ ನುಡಿದರು. ನಗ​ರದ ಸಾಗರ ರಸ್ತೆಯ ಪಿ.ಇ.ಎಸ್‌. ಕಾಲೇಜು ಆವರಣದ ಪ್ರೇರಣಾ ಸಭಾಂಗಣದಲ್ಲಿ ಕೇಂದ್ರ ಸರ್ಕಾರ 9 ವರ್ಷ ಪೂರೈಸಿದ ಹಿನ್ನೆಲೆ ಭಾನುವಾರ ಜಿಲ್ಲಾ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಜನಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಕಾಂಗ್ರೆಸ್‌ನವರ ಆಶ್ವಾಸನೆ ನಂಬಿ ಜನ ಮೋಸ ಹೋಗಿದ್ದಾರೆ. 

ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಕಾಂಗ್ರೆಸ್‌ನವರಿಗೆ ಅದನ್ನು ಈಡೇರಿಸುವ ಶಕ್ತಿಗೆ ಇಲ್ಲ. ನನಗೆ ವಿಶ್ವಾಸ ಇದೆ, ಸುಳ್ಳು ಭರವಸೆಯ ಕಾಂಗ್ರೆಸ್‌ ಸರ್ಕಾರ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ ಎಂದು ಹರಿಹಾಯ್ದರು. ಮೋದಿ ನೇತೃತ್ವ ಇರುವವರೆಗೂ ನಮ್ಮನ್ನು ಯಾರೂ ಅಲ್ಲಾಡಿಸಲು ಆಗಲ್ಲ. ಮೋದಿ ಕಡೆ ಜಗತ್ತೇ ಅಚ್ಚರಿಯಿಂದ ನೋಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಬೇರೆ ಕಾರಣಕ್ಕೆ ಹಿನ್ನಡೆ ಆಗಿರಬಹುದು. ಮತ್ತೊಮ್ಮೆ ಎದ್ದುನಿಲ್ಲಬೇಕಿದೆ. ಕಾಂಗ್ರೆಸ್‌ ವೈಫಲ್ಯಗಳನ್ನು ಎತ್ತಿಹಿಡಿದು ಪಕ್ಷವನ್ನು ಇನ್ನಷ್ಡು ಬಲಪಡಿಸಬೇಕಿದೆ. 

ಸಾಂಸ್ಕೃತಿಕ, ಚಾರಿತ್ರಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಮೈಸೂರು ಅಭಿವೃದ್ಧಿ: ಸಚಿವ ಮಹದೇವಪ್ಪ

ಭಾಗ್ಯಲಕ್ಷ್ಮೇ, ರೈತರ ಪಂಪ್‌ ಸೆಟ್‌ಗಳ ಹಲವು ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಕಾಂಗ್ರೆ​ಸ್‌ನ ಸುಳ್ಳು ಭರವಸೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ, ಅದರ ಆಧಾರದ ಮೇಲೆ ಬಿಜೆಪಿಯನ್ನು ಕಟ್ಟಬೇಕಿದೆ ಎಂದು ಕರೆ ನೀಡಿದರು. ರಾಜ್ಯದಲ್ಲಿ 65 ಮಂದಿ ಬಿಜೆಪಿ ಶಾಸಕರು ಇದ್ದೇವೆ. ಲೋಕಸಭಾ ಚುನಾವಣೆ ಬರುತ್ತಿದೆ. ಎಲ್ಲ ಒಟ್ಟಾಗಿ ಹೋಗಿ ಮತದಾರರ ಭೇಟಿ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಸೋತಿದ್ದೇವೆ ಎಂದು ಧೃತಿಗೆಟುವ ಅಗತ್ಯ ಇಲ್ಲ. ಆಡಳಿತ ಪಕ್ಷದ ಹುಳುಕನ್ನು ಹೊರತೆಗೆದು ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದರು.

ಸೋಲು ತಾತ್ಕಾ​ಲಿಕ ಹಿನ್ನ​ಡೆ- ರಾಘ​ವೇಂದ್ರ: ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಮೋದಿ ನೇತೃತ್ವದಲ್ಲಿ ರಾಜ್ಯ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಆಗಿವೆ. ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ನರೇಂದ್ರ ಮೋದಿ ಅವರು .15 ಲಕ್ಷ ಅಕೌಂಟಿಗೆ ಹಾಕದೇ ಇರಬಹುದು. ಆದರೆ, ಅವರು ಕೊಟ್ಟಯೋಜನೆಗಳುನ್ನು ಲೆಕ್ಕ ಹಾಕಿದರೆ .15 ಲಕ್ಷಕ್ಕೂ ಹೆಚ್ಚು ಹಣ ಕೊಟ್ಟಂತಾಗುತ್ತದೆ. ಕೇಂದ್ರ ಸರ್ಕಾರ ಜನಪ್ರಿಯ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ. ಶಿವಮೊಗ್ಗ ಕ್ಷೇತ್ರ ಎಲ್ಲದಕ್ಕೂ ಧ್ವನಿಯಾಗಿದೆ. ರಾಜಕೀಯ ಸಂಘಟನೆಯೊಂದಿಗೆ ಮುಖ್ಯಮಂತ್ರಿ ಕೊಟ್ಟಕ್ಷೇತ್ರ ಇದಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಶಾಸಕರು ಸೋತಿದ್ದಾರೆ. ಇದು ತಾತ್ಕಾಲಿಕ ಹಿನ್ನಡೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಕೆ.ಎಸ್‌.ಈಶ್ವರಪ್ಪ, ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಶಾಸಕರಾದ ಬಿ.ವೈ.ವಿಜೇಂದ್ರ, ಎಸ್‌.ಎನ್‌.ಚನ್ನವಸಪ್ಪ, ಪ್ರಮೋದ್‌ ಮಧ್ವರಾಜ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್‌, ಮಾಜಿ ಶಾಸಕ ಕೆ.ಬಿ.ಅಶೋಕ್‌ಕುಮಾರ್‌, ಪ್ರಮುಖರಾದ ಆರ್‌.ಕೆ. ಸಿದ್ದರಾಮಯ್ಯ, ಗಿರೀಶ್‌ ಪಟೇಲ್‌ ಸೇರಿದಂತೆ ಹಲವರು ಉಪಸ್ಥಿತರಿರುವರು.

ಮತೀಯ ಕೈವ​ಶ​ದಲ್ಲಿ ರಾಜ್ಯ: ಮಾಜಿ ಸಚಿವ ಕೋಟಾ ಶ್ರೀನಿವಾಸ್‌ ಪೂಜಾರಿ ಮಾತನಾಡಿ, ನಾನು ನನ್ನ ಕಣ್ಣಲ್ಲಿ ಆರ್ಟಿಕಲ… 371 ರದ್ದು ಕಂಡೆ, ನನ್ನ ಕಣ್ಣಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಆಗುವುದನ್ನು ಕಂಡಿದ್ದೆನೆ . ಪೌರೆ ಕಾಯ್ದೆ ರದ್ದಾಗುವುದನ್ನು ಕಂಡೆದ್ದೇನೆ. ಇದಕ್ಕಿಂತ ಬೇರೆನೂ ಬೇಕು. ದೇಶದಲ್ಲಿ ಇನ್ನೊಂದು ಕೊಹಿನೂರು ವಜ್ರ ಇದ್ದರೆ, ಅದು ನರೇಂದ್ರ ಮೋದಿ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯ ಮತೀಯ ಕೈವಶದಲ್ಲಿದೆ. ಮತಾಂತರ ನಿಷೇಧ ಕಾಯ್ದೆ ಸರ್ಕಾರ ಕನಸಾಗಿತ್ತು. ಈ ಕಾಯ್ದೆಯನ್ನು ಜಾರಿಗೆ ತಂದು ಲವ್‌ ಜಿಹಾದ್‌, ಮತಾಂತರಕ್ಕೆ ಕಾಂಗ್ರೆಸ್‌ ಸರ್ಕಾರ ಪುಷ್ಠಿ ನೀಡುವುದೇ ಕಾಂಗ್ರೆಸ್‌ ಉದ್ದೇಶವಾಗಿದೆ. ನಿಮಗೆ ತಾಕತ್ತಿದ್ದರೆ ಮತಾಂತರ ಕಾಯ್ದೆಯನ್ನು ಜಾರಿಗೆ ತಂದು ನೋಡಿ, ಹಿಂದೂ ಧರ್ಮದ ಉಳಿವಿಗಾಗಿ ಮತಾಂತರದ ನಿಷೇಧ ಕಾಯ್ದೆ ವಾಪಸ್‌ ಪಡೆಯಲು ಮುಂದಾದರೆ ಜೈಲಿಗೆ ಹೋಗಲು ಸಿದ್ಧರಾಗಿ ಎಂದು ತಿಳಿ​ಸಿ​ದರು.

‘ಖಾಸಗಿ ಬಸ್‌ನಲ್ಲೂ ಉಚಿತ ಪ್ರಯಾಣ ಕೊಡಲಿ’: ಮಹಿಳೆಯರಿಗೆ ಸರ್ಕಾರದಿಂದ ಉಚಿತ ಬಸ್‌ ಪ್ರಯಾಣ ಸೌಲಭ್ಯ ಎಂದಿದೆ. ಆದರೆ, ಹಲವೆಡೆ ಸರ್ಕಾರಿ ಬಸ್‌ಗಳ ಸೌಲಭ್ಯವೇ ಇಲ್ಲ. ಎಲ್ಲೆಲ್ಲಿ ಸರ್ಕಾರಿ ಬಸ್‌ ಸೌಲಭ್ಯ ಇಲ್ಲವೋ ಅಲ್ಲಿ ಖಾಸಗಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಸರ್ಕಾರಿ ಬಸ್‌ ಓಡಾಡದ ಪ್ರದೇಶಗಳ ಮಹಿಳೆಯರನ್ನು ಈ ಸೌಲಭ್ಯದಿಂದ ವಂಚನೆ ಮಾಡಿದಂತಾಗುತ್ತದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಡವರಿಗೆ ಕೊಡುವ ಅಕ್ಕಿಯಲ್ಲಿ ಕೇಂದ್ರ ಸರ್ಕಾರ ರಾಜಕೀಯ: ಸಚಿವ ಚಲುವರಾಯಸ್ವಾಮಿ

ಇಷ್ಟು ದಿನ ಕಾಂಗ್ರೆಸ್‌ನವರು ಅಕ್ಕಿ ಯೋಜನೆ ನಮ್ಮದು ಎಂದು ಬೀಗುತ್ತಿದ್ದರು. ಈಗ ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಎಂದು ಗಲಾಟೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಕೊಡುವ 5 ಕೆ.ಜಿ. ಅಕ್ಕಿಯನ್ನು ಬಿಟ್ಟು ಕಾಂಗ್ರೆಸ್‌ನವರು 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೊಡಬೇಕು. ಎಲ್ಲ ನಿರುದ್ಯೋಗ ಯುವಕರಿಗೂ 3 ಸಾವಿರ ಕೊಡಬೇಕು. ಮಹಿಳೆಯರ ಖಾತೆಗೆ ಇನ್ನೂ .2000 ಹಾಕುವ ಕೆಲಸ ಮಾಡುತ್ತಿಲ್ಲ. ವಿದ್ಯುತ್‌ ಉಚಿತ ಎಂದು ಈಗ ವಿದ್ಯುತ್‌ ಬೆಲೆ ಏರಿಕೆ ಮಾಡಿದ್ದಾರೆ ಎಂದು ದೂರಿದರು.