ಕಾಂಗ್ರೆಸ್‌ಗೆ ಹಾರುವ ಸುಳಿವು ನೀಡಿದ ಬಿಜೆಪಿ ಮುಖಂಡ
ದೇಶದೆಲ್ಲೆಡೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರುತ್ತಿರುವ ಮುಖಂಡರ ಸುದ್ದಿಯ ಬೆನ್ನಲ್ಲೇ, ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ಮುಖಂಡ ಕಾಂಗ್ರೆಸ್‌ಗೆ ಸೇರುವ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಬರುವ ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಯಾರದು?
ಕಾಗವಾಡ (ಅ.29): ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಪರ ತೀರ್ಪು ಬಂದಲ್ಲಿ ಅಥಣಿ ಕ್ಷೇತ್ರದಿಂದ, ವಿರುದ್ಧವಾಗಿ ಬಂದರೆ ಕಾಗವಾಡದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುವುದು ಖಚಿತ ಎಂದು ಮಾಜಿ ಶಾಸಕ ರಾಜು ಕಾಗೆ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆಂತರಿಕ ಭಿನ್ನಮತವನ್ನು ಶಮನಗೊಳಿಸಲು ಯತ್ನಿಸುತ್ತಿರುವ ಬಿಜೆಪಿಗೆ ಬಂಡಾಯದ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲವೆಂದು ನೇರವಾಗಿ ಹೇಳಿದ್ದಾರೆ. ನನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತೇನೆ, ಕಾಂಗ್ರೆಸ್ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. 17 ಜನ ಅನರ್ಹ ಶಾಸಕರ ಕೇಸ್ ಸುಪ್ರೀಂ ಕೋರ್ಟ್‌ನಲ್ಲಿದೆ. ತೀರ್ಪು ಅನರ್ಹರ ಪರವಾಗಿ ಬಂದರೆ ನಾನು ಅಥಣಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಅವರ ವಿರುದ್ಧವಾಗಿ ಬಂದರೆ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಸ್ಪರ್ಧೆಯಂತೂ ಖಚಿತ ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ: ಸಿದ್ದು ಗರಂ
ಟಿಕೆಟ್ ಕೊಡುವುದಿಲ್ಲವೆಂದ ಬಿಎಸ್‌ವೈ:
ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ನನಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲವೆಂದು ನೇರವಾಗಿ ಹೇಳಿದ್ದಾರೆ. ಆದ್ದರಿಂದರಿಂದ ನನ್ನ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ನಿಂದ ಸ್ಪರ್ಧೆರ್‍ಸುತ್ತೇನೆ. ಕಾಂಗ್ರೆಸ್ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ. ಹೀಗಾಗಿ ನನ್ನ ನಂಬಿದ 60 ಸಾವಿರ ಕಾರ್ಯಕರ್ತರಗೋಸ್ಕರ ಸ್ಪರ್ಧಿಸುವುದಾಗಿ ತಿಳಿಸಿದರು.
ನನಗೆ ಮತದಾರರೇ ಹೈ ಕಮಾಂಡ್:
ಕಳೆದ 20 ವರ್ಷಗಿಂದ ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಕಟ್ಟಿದ್ದೇವೆ. 60 ಸಾವಿರ ಕಾರ್ಯಕರ್ತರ ಸೈನ್ಯವೇ ನನ್ನ ಬೆಂಬಲಿಕ್ಕಿದೆ. ನನಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡದಿದ್ದರೇನಂತೆ, ನನಗೆ ನನ್ನ ಮತದಾರರರು ಹಸಿರು ನೀಶಾನೆ ತೋರಿಸಿದ್ದಾರೆ. ಬರುವ ಉಪ ಚುನಾವಣೆಯಲ್ಲಿ ತಾವು ಯಾವ ನಿರ್ಣಯ ಕೈಗೊಳ್ಳುತ್ತಿರೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕಾರ್ಯಮರ್ತರು ಹೇಳಿರುವಾಗ ಅವರೇ ನನಗೆ ಹೈಕಮಾಂಡ್ ಎಂದರು.
ಟಿಕೆಟ್ ವಿಚಾರದಲ್ಲಿ ಬಿಜೆಪಿಯಲ್ಲಿ ಭಿನ್ನಮತ: ಕೈ ಕದ ತಟ್ಟಿದ ಅನರ್ಹರು
ಜೀವದ ಗೆಳೆಯನ ಕ್ಷೇತ್ರದಲ್ಲಿಯೇ ಸ್ಪರ್ಧೆ:
ನಾನು ಲಕ್ಷ್ಮಣ ಸವದಿ ಇಬ್ಬರು ಜೀವದ ಗೆಳೆಯರು ಇದರಲ್ಲಿ ಎರಡು ಮಾತಿಲ್ಲ. ಬದಲಾದ ರಾಜಕೀಯ ಪರಿಸ್ಥಿತಿ ಎದುರಾದಾಗ ಅನಿವಾರ್ಯ. ರಾಜಕೀಯದಲ್ಲಿ ಅಣ್ಣ ತಮ್ಮ, ಮಾವ ಅಳಿಯ ಯಾವುದು ಲೆಕ್ಕಕ್ಕೆ ಬರುವುದಿಲ್ಲ ಎಂದು ರಾಜು ಕಾಗೆ ಹೇಳಿದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ವಿರುದ್ಧ ಬಂಡಾಯವೆದ್ದ 17 ಶಾಸಕರು ರಾಜೀನಾಮೆ ನೀಡಿದ್ದರು. ರಾಜೀನಾಮೆ ಸ್ವೀಕರಿಸುವ ಮುನ್ನವೇ ಅವರನ್ನು ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರು. ಈ ಬೆನ್ನಲ್ಲೇ ಸುಪ್ರೀಂ ಕೋರ್ಟಿನಲ್ಲಿ ಈ ಪ್ರಕರಣದ ತೀರ್ಪಿನ್ನು ಬಾಕಿ ಇದೆ. ಅಲ್ಲದೇ ಡಿಸೆಂಬರ್‌ನಲ್ಲಿ ಉಪ ಚುನಾವಣೆಯೂ ನಡೆಯಲಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದೆ. ಎಲ್ಲೆಡೆ ಪಕ್ಷದಿಂದ ಪಕ್ಷಕ್ಕೆ ಹಾರುವವರಿಗೆ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದರೂ, ಪಕ್ಷಾಂತಕ ಚಟುವಟಿಕೆಗಳು ಮುಂದುವರಿದಿದೆ.