ಮೋದಿ ಮತ್ತೊಮ್ಮೆ ಪ್ರಧಾನಿ: ಮಂಗಳೂರಲ್ಲಿ ‘ಮೋದಿ ಬ್ರಿಗೇಡ್‌’ ಸಂಘಟನೆ ಅಸ್ತಿತ್ವಕ್ಕೆ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ  ಅವರನ್ನು ಪ್ರಧಾನಿಯಾಗಿ ಮಾಡುವ ಉದ್ದೇಶದಿಂದ ಮಂಗಳೂರಿನಲ್ಲಿ ಮೋದಿ ಬ್ರಿಗೇಡ್‌ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. 

For the existence of Modi Brigade organization in Mangaluru gvd

ಮಂಗಳೂರು (ಅ.09): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡುವ ಉದ್ದೇಶದಿಂದ ಮಂಗಳೂರಿನಲ್ಲಿ ಮೋದಿ ಬ್ರಿಗೇಡ್‌ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾ, ಶ್ರೀರಾಮಸೇನೆ, ಅಭಿನವ ಭಾರತ, ಸಿಂಹವಾಹಿನಿ ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಈ ಮೋದಿ ಬ್ರಿಗೇಡ್‌ನಲ್ಲಿ ಇದ್ದಾರೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದರು.

ಕದ್ರಿಯ ಅಭಿಷೇಕ ಮಂದಿರದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮೋದಿ ಬ್ರಿಗೇಡ್‌ ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಸಲುವಾಗಿ ಚದುರಿಹೋದ ವಿವಿಧ ಸಂಘಟನೆಗಳನ್ನು ಒಂದೇ ಛತ್ರದಡಿ ತರುವ ಸಲುವಾಗಿ ಸಂಘಟನೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

BBK 10: ಮೊದಲ ದಿನವೇ ಬಿಗ್ ಬಾಸ್ ಮನೆಗೆ ಕಾಲಿಟ್ಟ ಎಂಎಲ್ಎ ಪ್ರದೀಪ್ ಈಶ್ವರ್‌: ಸ್ಫರ್ಧಿಗಳಿಗೆ ಶಾಕ್‌!

ದೇಶದಲ್ಲಿ ಧರ್ಮವನ್ನು ಒಡೆಯುವ ಹುನ್ನಾರ ನಡೆಯುತ್ತಿದ್ದು, ಇದರ ವಿರುದ್ಧ ಎಲ್ಲ ಹಿಂದುಗಳು ಜಾಗೃತರಾಗಿರಬೇಕು. ಕ್ಷುಲ್ಲಕ ಕಾರಣಕ್ಕೆ ವೈಮಸ್ಸು ತಾಳದೆ, ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೆ ತಲೆಬಾಗದೆ, ಹಿಂದು ಸಮಾಜದ ಅಖಂಡತೆ ಹಾಗೂ ದೇಶದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಮೋದಿ ಮತ್ತೊಮ್ಮೆ ಎಂಬ ಭಾವನೆಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಮೋದಿ ಬ್ರಿಗೇಡ್‌ ಮುಖ್ಯಸ್ಥ ಪ್ರಶಾಂತ್‌ ಬಂಗೇರ, ವಿವಿಧ ಸಂಘಟನೆಗಳ ಪ್ರಮುಖರು ಈ ವೇಳೆ ಹಾಜರಿದ್ದರು.

ಶ್ರೇಷ್ಠತೆಯ ಇನ್ನೊಂದು ಹೆಸರೇ ಭಾರತ: ಜನಗಣಮನ ಬೆಸೆಯೋಣ ಎಂಬ ಸಂದೇಶ ಹೊತ್ತು ಬೈಕ್ ರ್‍ಯಾಲಿ ಆರಂಭಿಸಿರುವ ಖ್ಯಾತ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ವಿಜಯಪುರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಅವರನ್ನು ನಮೋ ಬ್ರಿಗೇಡ್ ಮೊದಲಾದ ಸಂಘಟನೆಯ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ವೀರಸಾರ್ವಕರ ವೃತ್ತದಲ್ಲಿರುವ ವೀರ ಸಾರ್ವಕರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೈಕ್ ಯಾತ್ರೆ ಪ್ರಾರಂಭಗೊಂಡಿತು. ಚಕ್ರವರ್ತಿ ಸೂಲಿಬೆಲೆ ಅವರೊಂದಿಗೆ ನೂರಾರು ಯುವಕರು ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡರು.

ಸ್ಯಾಟಲೈಟ್ ಬಸ್ ನಿಲ್ದಾಣ, ಛತ್ರಪತಿ ಶಿವಾಜಿ ವೃತ್ತ, ಗಾಂಧಿ ವೃತ್ತ, ಸರಾಫ್ ಬಜಾರ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸಿ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ತಲುಪಿತು. ಅಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಅಲ್ಲಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ಸಂಚರಿಸಿ ಕನಕದಾಸ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಭಾರತ ಒಂದು ಭವ್ಯತೆಯ ಸಂಕೇತ, ಶ್ರೇಷ್ಠತೆಯ ಇನ್ನೊಂದು ಹೆಸರು, ಆದರ್ಶಗಳ ಪ್ರತಿರೂಪ. ಭಾರತ ಎಂದರೆ ಒಂದು ಶಕ್ತಿ, ಭಾರತ ಈಗ ವಿಶ್ವಗುರು ಸ್ಥಾನದಲ್ಲಿ ನಿಂತಿದೆ. ಭಾರತವನ್ನು ವಿಶ್ವದಲ್ಲಿ ಇನ್ನಷ್ಟೂ ಪ್ರಜ್ವಲಿಸುವಂತೆ ಮಾಡುತ್ತಿರುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿಜಿ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿಸಬೇಕಿದೆ. ಈ ಉದ್ದೇಶದಿಂದ ಸಮಾಜದ ಎಲ್ಲ ಜನರೊಂದಿಗೆ ಬೆಸೆಯುವ ಅವರ ಅನಿವಾರ್ಯತೆ ಮತ್ತು ಅವಶ್ಯಕತೆಯ ಬಗ್ಗೆ ಜನರಲ್ಲಿ ತಲುಪಿಸುವ ಉದ್ದೇಶದಿಂದ ಜನ ಗಣ ಮನ ಬೆಸೆಯೋಣ ಯಾತ್ರೆ ನಡೆಸಲಾಗುತ್ತಿದೆ ಎಂದರು.

ಹೊಸ ಗೆಟಪ್‌ನಲ್ಲಿ ರಾಜವೀರ ಮದಕರಿ ನಾಯಕ: ಕಿಚ್ಚ ಸುದೀಪ್‌ರಿಂದ ಭಾವಚಿತ್ರ ಅನಾವರಣ

ಯುವ ಭಾರತ ಸಮಿತಿಯ ಸಂಸ್ಥಾಪಕ ಉಮೇಶ ಕಾರಜೋಳ, ಸಂತೋಷ ಬಂಗಾರಿ, ರಾಜು ಪಾಟೀಲ, ವಿರೇಶ ಗೊಬ್ಬೂರ, ಸಂತೋಷ ಝಳಕಿ, ಆನಂದ ಕುಲಕರ್ಣಿ, ಕಲ್ಮೇಶ ಅಮರಾವಿ, ವಿಜಯಕುಮಾರ ಮುರಗಾನೂರ, ಶ್ರೀಕಾಂತ ಅವಟಿ, ಬಸವರಾಜ ಕರಿಕಬ್ಡಿ, ಸುರೇಶ ಗೌಡಪ್ಪಗೊಳ ಮೊದಲಾದವರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios