ಇಬ್ಬರು ಪ್ರತ್ಯೇಕ ನಾಯಕರ ಕಾಂಗ್ರೆಸ್‌ ಗುಂಪಿನ ನಡುವೆ ಗುರುವಾರ ರಾತ್ರಿ ಮಾರಾಮಾರಿ ನಡೆದಿದ್ದು, ಗಾಯಾಳುಗಳು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಯಿಂದಾಗಿ ಕಾಂಗ್ರೆಸ್‌ ಮುಖಂಡ ಸೋಮಶೇಖರ್‌ಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಬ್ಬಿನ ಹೊಳೆ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಹಿರಿಯೂರು (ಡಿ.24) : ಇಬ್ಬರು ಪ್ರತ್ಯೇಕ ನಾಯಕರ ಕಾಂಗ್ರೆಸ್‌ ಗುಂಪಿನ ನಡುವೆ ಗುರುವಾರ ರಾತ್ರಿ ಮಾರಾಮಾರಿ ನಡೆದಿದ್ದು, ಗಾಯಾಳುಗಳು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲ್ಲೆಯಿಂದಾಗಿ ಕಾಂಗ್ರೆಸ್‌ ಮುಖಂಡ ಸೋಮಶೇಖರ್‌ಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಬ್ಬಿನ ಹೊಳೆ ಪೊಲೀಸ್‌ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್‌ ಅವರು ಧರ್ಮಪುರಕ್ಕೆ ಆಗಮಿಸಿದ ವೇಳೆ ಅವರನ್ನು ಭೇಟಿಯಾಗಲು ಮಾಜಿ ಸಚಿವ ಡಿ. ಸುಧಾಕರ್‌ ಹಾಗೂ ಕಳೆದ ವಿಧಾನಪರಿಷತ್‌ ಚುನಾವಣೆಯ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಸೋಮಶೇಖರ್‌ ತೆರಳಿದ್ದರು. ಈ ವೇಳೆ ಇಬ್ಬರು ನಾಯಕರ ಬೆಂಬಲಿಗರ ನಡುವೆ ಮಾತಿಗೆ ಮಾತು ಬೆಳೆದು ಸಂಘರ್ಷದ ವಾತಾವರಣ ಸೃಷ್ಟಿಯಾಯಿತೆಂದು ಹೇಳಲಾಗಿದೆ.

Bengaluru: ಕಾಂಗ್ರೆಸ್‌ ತರಬೇತಿ ಶಿಬಿರದಲ್ಲಿ ಮಾರಾಮಾರಿ: ಮಹಿಳೆಗೆ ಗಾಯ

ಮಯೂರ್‌ ಜಯಕುಮಾರ್‌ ವೇದಿಕೆಗೆ ಆಗಮಿಸುತ್ತಿದ್ದಂತೆ ಒಂದಿಷ್ಟುಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಸುಧಾಕರ್‌ಗೆ ಜೈಕಾರ ಹಾಕಿದ್ದಾರೆ. ಇದೇ ವೇಳೆ ಪ್ರತಿಯಾಗಿ ಮುಂದಿನ ಶಾಸಕ ಸೋಮಶೇಖರ್‌ ಎಂದು ಮತ್ತೊಂದಿಷ್ಟುಮಂದಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಘೋಷಣೆ ನಡುವೆ ತಳ್ಳಾಟ, ನೂಕಾಟ ನಡೆದಿವೆ. ಇಬ್ಬರೂ ನಾಯಕರ ಬೆಂಬಲಿಗರು ಕೈ ಕೈ ಮಿಲಾಯಿಸಿದ್ದಾರೆ. ಹಲ್ಲೆಗೊಳಗಾದ ಸೋಮಶೇಖರ್‌ ಆಸ್ಪತ್ರಗೆ ದಾಖಲಾಗುತ್ತಿದ್ದಂತೆ ಸುಧಾಕರ್‌ ಕಡೆಯವರೂ ಆಸ್ಪತ್ರೆಗೆ ತೆರಳಿ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದರು.

ಮಾಜಿ ಸಚಿವ ಡಿ. ಸುಧಾಕರ್‌ಗೆ ಅವರ ಬೆಂಬಲಿಗರು ಜೈಕಾರ ಕೂಗಿ, ಸೋಮಶೇಖರ್‌ ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ. ಇಲ್ಲಿ ಸುಧಾಕರ್‌ ಅವರದು ಬಿಟ್ಟರೆ ಮತ್ಯಾರದ್ದೂ, ಏನೂ ನಡೆಯಲಾರದು ಎಂದು ಸೋಮಶೇಖರ್‌ ಅವರ ಕೊರಳ ಪಟ್ಟಿಹಿಡಿದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸೋಮಶೇಖರ್‌ ಬೆಂಬಲಿಗರಾದ ಓಬಳಪ್ಪ ಎನ್ನುವವರು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಲಿಂಗೇಗೌಡ, ಗಿಡ್ಡೋಬನಹಳ್ಳಿ ಅಶೋಕ್‌, ಕಲ್ಲಟ್ಟಿಹರೀಶ್‌, ಸುಧಾಕರ್‌ ಮತ್ತು ಇತರರ ಮೇಲೆ ದೂರು ದಾಖಲಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಸುಧಾಕರ್‌ ಬೆಂಬಲಿಗ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಪ್ಪ ದೂರು ದಾಖಲಿಸಿ, ಸೋಮಶೇಖರ್‌ ಮತ್ತು ಅವರ ಕಡೆಯವರು ವೇದಿಕೆಯ ಬಳಿ ಬಂದು ಸುಧಾಕರ್‌ರವರಿಗೆ ಧಿಕ್ಕಾರ ಕೂಗುತ್ತಿದ್ದರು. ಅದನ್ನ ಪ್ರಶ್ನಿಸಿದ್ದಕ್ಕಾಗಿ ನನ್ನನ್ನೂ ಸೇರಿದಂತೆ ನಮ್ಮ ಕಡೆಯವರನ್ನು ಅವಾಚ್ಯ ಶಬ್ದಗಳಿಟದ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಹಾಗಾಗಿ ಸೋಮಶೇಖರ್‌ ಮತ್ತು ಅವರ ಕಡೆಯವರ ಮೇಲೆ ಸೂಕ್ತ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಹಾಲಿನ ಡೇರಿ ಕಟ್ಟಡ ಉದ್ಘಾಟನೆ ವಿಚಾರವಾಗಿ ಕೈ ಹಾಗೂ ದಳ ಕಾರ್ಯಕರ್ತರ ನಡುವೆ ಮಾರಾಮಾರಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಎಸ್ಪಿ ಪರಶುರಾಂ ಎರಡೂ ಕಡೆಯವರು ಜಾತಿ ನಿಂದನೆ ದೂರು ನೀಡಿದ್ದು ದಾಖಲಿಸಿಕೊಳ್ಳಲಾಗಿದೆ. ಅಬ್ಬಿನಹೊಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ ಎಂದರು.