Asianet Suvarna News Asianet Suvarna News

Bengaluru: ಕಾಂಗ್ರೆಸ್‌ ತರಬೇತಿ ಶಿಬಿರದಲ್ಲಿ ಮಾರಾಮಾರಿ: ಮಹಿಳೆಗೆ ಗಾಯ

ಕಾಂಗ್ರೆಸ್‌ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಎರಡು ಬಣಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಮಹಿಳೆಯರು ಸೇರಿದಂತೆ ಐದಾರು ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವುದಲ್ಲದೆ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. 

Fight in Congress training camp at bengaluru gvd
Author
First Published Nov 10, 2022, 1:36 PM IST

ಪೀಣ್ಯ ದಾಸರಹಳ್ಳಿ (ನ.10): ಕಾಂಗ್ರೆಸ್‌ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಎರಡು ಬಣಗಳ ನಡುವೆ ಮಾರಾಮಾರಿ ನಡೆದು ಇಬ್ಬರು ಮಹಿಳೆಯರು ಸೇರಿದಂತೆ ಐದಾರು ಮಂದಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿರುವುದಲ್ಲದೆ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಪೀಣ್ಯ ಎನ್‌ಟಿಟಿಎಫ್‌ ಸರ್ಕಲ್‌ ಬಳಿ ಇರುವ ಜಿಮ್‌ಖಾನ ಕ್ಲಬ್‌ನಲ್ಲಿ ಪ್ರದೇಶ ಕಾಂಗ್ರೆಸ್‌ ವತಿಯಿಂದ ತಳಮಟ್ಟದ ನಾಯಕತ್ವವನ್ನು ರೂಪಿಸಲು ಸಂಪನ್ಮೂಲ ಅಭಿವರ್ಧಕರ ಮೂರು ದಿನಗಳ ತರಬೇತಿ ಕಾರ್ಯಕ್ರಮ ದಾಸರಹಳ್ಳಿ ಕಾಂಗ್ರೆಸ್‌ ಉಸ್ತುವಾರಿ ಡಾ.ನಾಗಲಕ್ಷ್ಮೀ ನೇತೃತ್ವದಲ್ಲಿ ಯೋಜನೆಗೊಂಡಿತ್ತು. ಇದರಲ್ಲಿ ವಿವಿಧ ಜಿಲ್ಲೆಗಳ 40 ಪ್ರತಿನಿಧಿಗಳು ಭಾಗವಹಿಸಿದ್ದರು.

ತರಬೇತಿ ಸಭಾಂಗಣಕ್ಕೆ ಕೆಪಿಸಿಸಿ ಸದಸ್ಯ ಪಿ.ಎನ್‌. ಕೃಷ್ಣಮೂರ್ತಿ ಬೆಂಬಲಿಗರೆನ್ನಲಾದ ಸುಮಾರು 20 ಜನರಿದ್ದ ಗುಂಪು ಸಭೆ ಮಧ್ಯೆ ನುಗ್ಗಿ ತರಬೇತಿ ಕಾರ್ಯಕ್ರಮಕ್ಕೆ ಕ್ಷೇತ್ರದ ಹಿಂದಿನ ಚುನಾವಣೆ ಅಭ್ಯರ್ಥಿಯಾಗಿರುವ ಕೃಷ್ಣಮೂರ್ತಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಗಲಾಟೆ ಮಾಡಿದ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ನಾಗಲಕ್ಷ್ಮಿ ಹಾಗೂ ಕೃಷ್ಣಮೂರ್ತಿ ಗುಂಪುಗಳ ನಡುವೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿ ದ್ದಾರೆ. ಕೆಲವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆದಿದ್ದಾರೆ.

ಸತೀಶ್‌ ಜಾರಕಿಹೊಳಿ ಬಗ್ಗೆ ಬಿಜೆಪಿ ರಾಜಕೀಯ: ಡಿ.ಕೆ.ಶಿವಕುಮಾರ್‌

ಇನ್ನೂ ಕಾರ್ಯಾಗಾರದಲ್ಲಿ ಕೆ.ಸಿ.ಅಶೋಕ್‌, ನಾಗಭೂಷಣ್‌, ನಾಗಲಕ್ಷ್ಮೀ, ಎಬಿಬಿ ಮಂಜುನಾಥ್‌, ರವಿಕುಮಾರ್‌, ಬಿ.ಎಂ. ಜಗದೀಶ್‌ ಗೋವಿಂದರಾಜು ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಮೂಕವಿಸ್ಮಿತರಾಗಿ ಗಲಭೆಯನ್ನು ನೋಡುತ್ತಿದ್ದರು. ಇಷ್ಟೆಲ್ಲಾ ಗಲಭೆ ನಂತರ ಕಾರ್ಯಕ್ರಮಕ್ಕೆ ಏನೂ ಗೊತ್ತಿಲ್ಲದವರಂತೆ ಆಗಮಿಸಿದ ಪಿ.ಎನ್‌.ಕೃಷ್ಣಮೂರ್ತಿ ಕಾಂಗ್ರೆಸ್ಸಿಗರೇ ತಿದ್ದು ತರಬೇತಿ ನಡುವೆಯೇ ಹೊರಹೋಗಿ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿ ಪೊಲೀಸರೊಂದಿಗೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದರು. ಪೊಲೀಸರ ಸೂಚನೆ ಮೇರೆಗೆ ಮುಖಂಡೆ ನಾಗಲಕ್ಷಿ ್ಮ ಹಾಗೂ ಇತರರು ಠಾಣೆಗೆ ತೆರಳಿ ಸಹ ದೂರು ದಾಖಲಿಸಿದ್ದಾರೆ. ಒಟ್ಟಿನಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಲ್ಲಿ ಮೂರ್ನಾಲ್ಕು ಗುಂಪುಗಳಾಗಿದ್ದು, ಘರ್ಷಣೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಮಹಿಳೆಗೆ ತೀವ್ರ ಗಾಯ, ಆಸ್ಪತ್ರೆಗೆ ದಾಖಲು: ಭಾರತಿ ಎಂಬ ಮಹಿಳೆಗೆ ಕೃಷ್ಣಮೂರ್ತಿ ಹಿಂಬಾಲಕರು ಕೈ ತಿರುಚಿ ಬೂಟುಗಾಲಿನಿಂದ ಹೊಟ್ಟೆಗೆ ಒದ್ದ ಪರಿಣಾಮ ಹೊಟ್ಟೆನೋವು ಕಾಣಿಸಿಕೊಂಡು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಗಾಯಾಳು ಮಹಿಳೆಗೆ ಸ್ಕ್ಯಾ‌ನಿಂಗ್‌ ಮಾಡಿಸಲಾಗಿ ತೀವ್ರ ಪೆಟ್ಟು ಬಿದ್ದಿರುವುದಾಗಿ ತಿಳಿದು ಬಂದಿದೆ. ಗೀತಾ ಎಂಬಾಕೆಯ ಕಾಲು ಬೆರಳನ್ನು ಜಜ್ಜಲಾಗಿದೆ. ರಮೇಶ್‌ ಎಂಬುವವರು ಸಹ ಗಾಯಗೊಂಡಿದ್ದಾರೆ.

Bengaluru: 1.5 ಲಕ್ಷಕ್ಕೆ ನಕಲಿ ಪಾಸ್‌ಪೋರ್ಟ್‌ ದಂಧೆ ಬಯಲು: 9 ಮಂದಿ ಬಂಧನ

ಡಿ.ಕೆ.ಶಿ ಒಗ್ಗಟ್ಟಿನ ಮಂತ್ರ ಪಠನೆ ಫಲ ನೀಡಲಿಲ್ಲ: ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕ್ಷೇತ್ರಕ್ಕೆ ಆಗಮಿಸಿ ಒಗ್ಗಟ್ಟಿನ ಮಂತ್ರ ಪಠಿಸಿ ಹೋಗಿದ್ದರೂ ಸಹ ಯಾವುದೇ ಪ್ರಯೋಜನವಿಲ್ಲ ಎಂಬಂತಾಗಿದೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ಸಾರ್ವತ್ರಿಕ ಚುನಾವಣಾ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ಸಿಗರ ಇಂತಹ ಗಲಾಟೆ ಕಾಂಗ್ರೆಸ್ಸಿಗೆ ಮಗ್ಗಲ ಮುಳ್ಳಾಗುವುದು ಖಚಿತ ಎಂದು ಕೆಲವು ಕಾಂಗ್ರೆಸ್ಸಿಗರೇ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios