Asianet Suvarna News Asianet Suvarna News

ಕಾಂಗ್ರೆಸ್‌ V/S ಬಿಜೆಪಿ ಜಿಂದಾಲ್‌ ಭೂಮಿ ದಂಗಲ್‌..!

ಭೂಮಿ ಮಾರಾಟ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದು, ಬಿಜೆಪಿ ಮುಖಂಡರು ಇದು ಮತ್ತೊಂದು ಹಗರಣ ಎಂದು ಟೀಕೆ ಮಾಡುತ್ತಿದ್ದಾರೆ.

fight between Congress BJP fro Jindal Land in Karnataka grg
Author
First Published Aug 25, 2024, 12:16 PM IST | Last Updated Aug 25, 2024, 12:16 PM IST

ಬೆಂಗಳೂರು(ಆ.25): ಜಿಂದಾಲ್ ಕಂಪನಿಗೆ 3667ಎಕರೆ ಭೂಮಿಯನ್ನು ಮಾರಾಟ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತನ್ನ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದ ಬೆನ್ನಲ್ಲೇ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪರ-ವಿರೋಧ ಚರ್ಚೆ ಜೋರಾಗಿದೆ. ಭೂಮಿ ಮಾರಾಟ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದು, ಬಿಜೆಪಿ ಮುಖಂಡರು ಇದು ಮತ್ತೊಂದು ಹಗರಣ ಎಂದು ಟೀಕೆ ಮಾಡುತ್ತಿದ್ದಾರೆ.

ಜಿಂದಾಲ್‌ಗೆ ₹20 ಕೋಟಿಗೆ ಜಾಗ ದೊಡ್ಡ ಗೋಲ್ಮಾಲ್‌: ಬೆಲ್ಲದ್‌

ರಾಜ್ಯ ಕಾಂಗ್ರೆಸ್‌ ಸರ್ಕಾರವು ಹಗರಣಗಳ ಮೇಲೆ ಹಗರಣಗಳನ್ನು ಮಾಡುತ್ತಿದ್ದು, ಇದೀಗ ಜಿಂದಾಲ್‌ ಕಂಪನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ನೀಡುವ ಮೂಲಕ ಮತ್ತೊಂದು ಹಗರಣ ಮಾಡಿದೆ ಎಂದು ಶಾಸಕ ಅರವಿಂದ ಬೆಲ್ಲದ್‌ ಟೀಕಿಸಿದ್ದಾರೆ.

ಜಿಂದಾಲ್‌ಗೆ ಭೂಮಿ ಕೊಡುವಲ್ಲಿ ಸರ್ಕಾರದ್ದು ಎಳ್ಳಷ್ಟೂ ತಪ್ಪಿಲ್ಲ: ಎಂ. ಬಿ. ಪಾಟೀಲ

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಖನಿಜಭರಿತ ಜಾಗ ಇರುವ ಸಂಡೂರಿನಲ್ಲಿ ಸುಮಾರು 3,667 ಎಕರೆಯ ಪೈಕಿ 2 ಸಾವಿರ ಎಕರೆಯನ್ನು ಪ್ರತಿ ಎಕರೆಗೆ 1.20 ಲಕ್ಷ ರು.ಗೆ ಮತ್ತು 1,667 ಎಕರೆಯನ್ನು 1.50 ಲಕ್ಷ ರು.ಗೆ ಕೊಡುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಕೋಟ್ಯಂತರ ರು. ಮೌಲ್ಯದ ಆಸ್ತಿಯನ್ನು ಕೇವಲ 20 ಕೋಟಿ ರು.ಗೆ ಜೆಎಸ್‌ಡಬ್ಲ್ಯೂ ಕಂಪನಿಗೆ ಕೊಡಲಾಗುತ್ತಿದೆ. ಇದರ ಹಿಂದೆ ಬಹಳ ದೊಡ್ಡ ಗೋಲ್ಮಾಲ್ ಇದೆ ಎಂದು ಆರೋಪಿಸಿದರು.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಹಗರಣದ ತನಿಖೆ ಬಂದಿದೆ. ಮುಖ್ಯಮಂತ್ರಿಗಳ ಬಗ್ಗೆ ಇಡೀ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿಗಳು ಬಹಳ ಬೇಗನೆ ಮನೆಗೆ ಹೋಗುವ ಸಂದರ್ಭ ಬಂದಂತಿದೆ. ಸಿದ್ದರಾಮಯ್ಯನವರಿಗೆ ಕುರ್ಚಿ ಹೋಗುವ ಬಗ್ಗೆ ತಿಳಿದಿದೆ. ಈ ಸಂದರ್ಭದಲ್ಲಿ ಅವರು ಮತ್ತೊಂದು ದೊಡ್ಡ ಹಗರಣವನ್ನು ತಮ್ಮ ಮೇಲೆ ಎಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಕೇವಲ 15 ತಿಂಗಳಲ್ಲಿ ಅತ್ಯಂತ ಭ್ರಷ್ಟ ಎಂದು ಜನರಿಂದ ಬಿಂಬಿತವಾಗಿದೆ ಎಂದು ಕಿಡಿಕಾರಿದರು.

ಭೂಮಿ ಮಾರುವ ಬದಲು ಲೀಸ್‌ಗೆ ಕೊಡಿ: ಕಾರಜೋಳ 

ಚಿತ್ರದುರ್ಗ: ಬಳ್ಳಾರಿ ಜಿಲ್ಲೆಯ ತೋರಣಗಲ್‌ನಲ್ಲಿರುವ ಜಿಂದಾಲ್ ಉಕ್ಕು ಕಂಪನಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ 3667 ಎಕರೆಯಷ್ಟು ಭೂಮಿಯನ್ನು ಮಾರಾಟ ಮಾಡುವುದು ಬೇಡ, ಬೇಕಿದ್ದರೆ ಲೀಸ್ (ಭೋಗ್ಯ)ಗೆ ಕೊಡಲಿ ಎಂದು ಚಿತ್ರದುರ್ಗ ಬಿಜೆಪಿ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಂದಾಲ್‌ಗೆ 3,667 ಎಕರೆ ಮಾರಾಟ ಮಾಡುವ ವಿಷಯ ಪ್ರಸ್ತಾವವಾಗಿತ್ತು. ಆಗ ನಮ್ಮ ಸಿಎಂ ಮತ್ತು ಸಚಿವ ಸಂಪುಟ ಸದಸ್ಯರು ವಿರೋಧಮಾಡಿದ್ದೆವು. ಈಗಿನ ರಾಜ್ಯ ಸರ್ಕಾರ ಎಕರೆಗೆ 1.20 ಲಕ್ಷ ರು.ನಂತೆ ಜಿಂದಾಬ್‌ಗೆ ಸರ್ಕಾರದ ಭೂಮಿಯನ್ನು ಮಾರಾಟ ಮಾಡುತ್ತಾರೆ ಎಂಬುದು ಗಮನಕ್ಕೆ ಬಂದಿದೆ. ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಲೀಸ್‌ಗೆ ಕೊಟ್ಟು ಮಾಲೀಕತ್ವವನ್ನು ಸರ್ಕಾರವೇ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. 

ಜಿಂದಾಲ್, ಅಂಬಾನಿ ಸೋಲಿಸಿ ಅದಾನಿ ಗೆಲುವು, 4100 ಕೋಟಿಗೆ ಈ ಕಂಪನಿ ಖರೀದಿ

ರಾಜ್ಯದ ಹಿತದೃಷ್ಟಿಯಿಂದ ಜಿಂದಾಲ್‌ಗೆ ಭೂಮಿ: ಪರಂ 

ನವದೆಹಲಿ: ಜಿಂದಾಲ್ ಕಂಪನಿಗೆ ಸಂಡೂರಿನಲ್ಲಿ 3667 ಎಕ್ರೆ ಭೂಮಿಯನ್ನು ಪ್ರತಿ ಎಕರೆಗೆ 1.20 ಲಕ್ಷ ರು.ಗೆ ಮಾರಾಟ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. 

ದೆಹಲಿಯಲ್ಲಿ ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಕಂಪನಿಗಳನ್ನು ಆಕರ್ಷಿಸಲು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಸರ್ಕಾರ ಜಿಂದಾಲ್ ಕಂಪನಿಗೆ ಭೂಮಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಈ ರೀತಿ ಮಾಡದೇ ಹೋದರೆ ಕಂಪನಿಗಳು ಬೇರೆ ರಾಜ್ಯಕ್ಕೆ ಹೋಗುತ್ತವೆ. ಓಲಾ, ಕಿಯಾ ಸಂಸ್ಥೆಗಳು ಬೇರೆ ರಾಜ್ಯಗಳಿಗೆ ಹೋದವು. ಹೀಗಾಗಿ ಕಂಪನಿ ಗಳನ್ನು ಆಕರ್ಷಿಸುವ ಉದ್ದೇಶದಿಂದ ನೀಡಲಾಗಿದೆ. ಬಿಜೆಪಿ ತನ್ನ ಅವಧಿಯಲ್ಲಿ ಜಿಂದಾಲ್‌ ಭೂಮಿ ನೀಡುವ ವಿಚಾರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ಪಡೆದಿರಲಿಲ್ಲ, ಹೀಗಾಗಿ ವಿರೋ ಧಿಸಿದ್ದೆವು. ಈಗ ರಾಜ್ಯದ ಹಿತ ದೃಷ್ಟಿ ಯಿಂದ ನಿರ್ಧಾರಿಸಿದ್ದೇವೆ ಎಂದರು. ನೀಡಿದೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios