ಅರಗಿಸಿಕೊಳ್ಳಲಾಗದ ಮಗನ ಸೋಲು, ರಾಜಕೀಯ ನಿವೃತ್ತಿಯತ್ತ ಆನಂದ ಸಿಂಗ್!
ಮಾಜಿ ಸಚಿವ ಆನಂದ ಸಿಂಗ್ ರಾಜಕೀಯ ನಿವೃತ್ತಿಯತ್ತ ಹೆಜ್ಜೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಮೂರು ಬಾರಿ ಬಿಜೆಪಿ ಒಮ್ಮೆ ಕಾಂಗ್ರೆಸ್ ನಿಂದ ಗೆದ್ದಿರೋ ಆನಂದ ಸಿಂಗ್ ಗೆ ಮಗನ ಸೋಲು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ವಿಜಯನಗರ (ಜು.15): ಮಾಜಿ ಸಚಿವ ಆನಂದ ಸಿಂಗ್ ರಾಜಕೀಯ ನಿವೃತ್ತಿಯತ್ತ ಹೆಜ್ಜೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಮೂರು ಬಾರಿ ಬಿಜೆಪಿ ಒಮ್ಮೆ ಕಾಂಗ್ರೆಸ್ ನಿಂದ ಗೆದ್ದಿರೋ ಆನಂದ ಸಿಂಗ್ ಗೆ ಮಗ ಸಿದ್ದಾರ್ಥ ಸಿಂಗ್ ಸೋಲು ರಾಜಕೀಯ ನಿರಾಸಕ್ತಿ ಮೂಡಿಸಿದೆಯಾ ಎಂದು ಪ್ರಶ್ನೆ ಮೂಡಿಸಿದೆ. ಸಾವಿರಾರು ಮತಗಳ ಅಂತರದಿಂದ ಗೆದ್ದಿರೋ ಆನಂದ ಸಿಂಗ್ ಅವರಿಗೆ ಮಗನ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಮೊದಲು ಚುನಾವಣೆಯಿಂದ ಹಿಂದೆ ಸರಿದ್ರು. ಇದೀಗ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆನಂದ ಸಿಂಗ್ ರಾಜೀನಾಮೆಯಿಂದ ವಿಜಯನಗರ ಬಳ್ಳಾರಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ. ಆನಂದ್ ಸಿಂಗ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಯಾಗಿದ್ದರು. ಇನ್ನೂ ಎರಡು ಮೂರು ವರ್ಷಗಳ ಅವಧಿ ಇರುವಾಗಲೇ ಆನಂದ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆ ಸಮೀಪ ಇರುವಾಗಲೇ ಆನಂದ ಸಿಂಗ್ ರಾಜೀನಾಮೆ ದೊಡ್ಡ ಸಂಚಲನ ಮೂಡಿಸಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕುಮಾರಸ್ವಾಮಿ ಎಕ್ಸ್‌ಕ್ಲೂಸಿವ್ ಮಾಹಿತಿ,
ಹೊಸಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದಾರ್ಥ ಸಿಂಗ್ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ 33 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ ನ ಶಾಸಕ ಎಚ್.ಆರ್. ಗವಿಯಪ್ಪ ಅವರ ವಿರುದ್ಧ ಸೋಲು ಕಂಡಿದ್ದರು. ಇದು ಆನಂದ್ ಸಿಂಗ್ ನೋವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. 2008ರಲ್ಲಿ ಕ್ಷೇತ್ರ ವಿಂಗಡಣೆ ಆದ ಬಳಿಕ ಈ ಕ್ಷೇತ್ರದಲ್ಲಿ ಆನಂದ ಸಿಂಗ್ ಅವರು ಸೋಲಿಲ್ಲದ ಸರದಾರನಾಗಿ ಮುನ್ನಡೆದಿದ್ದರು ಎಂಬುದು ಗಮನಾರ್ಹ ಸಂಗತಿ.
ನಾನು ಕೂಡ ಲೋಕಸಭೆಗೆ ಟಿಕೆಟ್ ಆಕಾಂಕ್ಷಿ, ರೇಣುಕಾಚಾರ್ಯ ಸಿದ್ಧತೆಗೆ ಮುಳ್ಳಾಗ್ತಾರಾ ಸಿದ್ದೇಶ್ವರ್