Legislative Council; ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಅಚ್ಚರಿ ಮುಖಗಳಿಗೆ ಚಾನ್ಸ್!
* ಕರ್ನಾಟಕ ವಿಧಾನ ಪರಿಷತ್ ಚುನಾವಣೆ
* ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
* ಅಚ್ಚರಿ ಮುಖಗಳಿಗೆ ಸ್ಥಾನ
* ಹಳೆಯ ರಾಜಕಾರಣಿಗಳನ್ನು ಉಳಿಸಿಕೊಂಡ ಬಿಜೆಪಿ
ಬೆಂಗಳೂರು(ನ. 19) ರಾಜ್ಯ ವಿಧಾನ ಪರಿಷತ್‌ನ (Legislative Council)25 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ (BJP)ಮೊದಲ ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಹಲವಾರು ನಿರೀಕ್ಷೆಗಳು ತಲೆಕೆಳಗಾಗಿವೆ. ಬಿಜೆಪಿ ಮೊದಲ ಹಂತದಲ್ಲಿ 20 ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ;
* ಕೊಡುಗು- ಸುಜಾ ಕುಶಾಲಪ್ಪ
* ದಕ್ಷಿಣ ಕನ್ನಡ- ಕೋಟಾ ಶ್ರೀನಿವಾಸ ಪೂಜಾರಿ
* ಚಿಕ್ಕಮಗಳೂರು- ಎಂ.ಕೆ. ಪ್ರಾಣೇಶ್
* ಶಿವಮೊಗ್ಗ- ಡಿ.ಎಸ್. ಅರುಣ್
* ಧಾರವಾಡ- ಪ್ರದೀಪ್ ಶೆಟ್ಟರ್
* ಬೆಳಗಾವಿ- ಮಹಂತೇಶ ಕವಟಗಿಮಠ
* ಕಲಬುರಗಿ- ಬಿ.ಜಿ. ಪಾಟೀಲ್
* ಚಿತ್ರದುರ್ಗ- ಕೆ.ಎಸ್.ನವೀನ್
* ಮೈಸೂರು- ರಘು ಕೌಟಿಲ್ಯ
* ಹಾಸನ- ವಿಶ್ವನಾಥ್
* ಉತ್ತರ ಕನ್ನಡ-ಗಣಪತಿ ಉಳ್ವೇಕರ್
* ಬೀದರ್- ಪ್ರಕಾಶ್ ಖಂಡ್ರೆ
ಬೆಂಗಳೂರು- ಗೋಪಿನಾಥ್ ರೆಡ್ಡಿ
* ಮಂಡ್ಯ- ಮಂಜು ಕೆ.ಆರ್. ಪೇಟೆ
* ಕೋಲಾರ- ಕೆ.ಎನ್. ವೇಣುಗೋಪಾಲ್
* ರಾಯಚೂರು- ವಿಶ್ವನಾಥ್ ಎ ಬನಹಟ್ಟಿ
* ಬೆಂಗಳೂರು ಗ್ರಾಮಾಂತರ-ಬಿ.ಎಂ. ನಾರಾಯಣಸ್ವಾಮಿ
* ಬಳ್ಳಾರಿ- ವೈ.ಎಂ. ಸತೀಶ್
* ತುಮಕೂರು- ಎನ್. ಲೋಕೇಶ್
ವಿಜಯಪುರ- ಪಿ.ಎಚ್. ಪೂಜಾರ್.
ದಕ್ಷಿಣ ಕನ್ನಡದಿಂದ (Dakshina Kannada) ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರೇ ಮುಂದುವರಿಯಲಿದ್ದಾರೆ. ಎಂಕೆ ಪ್ರಾಣೇಶ್ ಅವರಿಗೂ ಅವಕಾಶ ಸಿಗುತ್ತಿದೆ. ಮಾಜಿ ಸಭಾಪತಿ, ಹಿರಿಯ ರಾಜಕಾರಣಿ ಶಂಕರಮೂರ್ತಿ(Shivamogga)ಅವರ ಪುತ್ರ ಡಿಎಸ್ ಅರುಣ್ ಅವರಿಗೆ ಶಿವಮೊಗ್ಗದಿಂದ ಅವಕಾಶ ಸಿಕ್ಕಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಅವರಿಗೂ ಅವಕಾಶ ಲಭ್ಯವಾಗಿದೆ.
ಬೆಳಗಾವಿಯಲ್ಲಿ ಮತ್ತೆ ಸಹೋದರರ ಸವಾಲ್
ಪರಿಷತ್‌ನ 25 ಕ್ಷೇತ್ರಗಳಿಗೆ ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಡಿಸೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ನವೆಂಬರ್ 26 ಕೊನೆ ದಿನ.
ರಾಜಕೀಯ ಜಿದ್ದಾಜಿದ್ದಿ; ಉಪಚುನಾವಣೆ ನಂತರ ವಿಧಾನ ಪರಿಷತ್ ಚುನಾವಣೆ ಸಹ ಕರ್ನಾಟಕದಲ್ಲಿ ರಾಜಕಾರಣ ಜಿದ್ದಾಜಿದ್ದಿಗೆ ವೇದಿಕೆ ಮಾಡಿಕೊಟ್ಟಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿ ಒಂದು ಹಂತದಲ್ಲಿ ಮುಂದೆ ಇದ್ದು ಇದೀಗ ಕಾಂಗ್ರೆಸ್ (Congress)ಮತ್ತು ಜೆಡಿಎಸ್(JDS) ಯಾವ ತಂತ್ರಗಾರಿಕೆ ಅನುಸರಿಸಲಿದೆ ಎಂದು ಕಾದು ನೋಡಬೇಕಿದೆ.
ಬಿಜೆಪಿ ನಾಯಕರು ಪಕ್ಷ ಸಂಘಟನೆ ಹೆಸರಿನಲ್ಲಿ ಜನ ಸ್ವರಾಜ್ ಯಾತ್ರೆ ನಡೆಸುತ್ತಿದ್ದು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮೇಲ್ಮನೆಗೆ ಅತಿ ಹೆಚ್ಚು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವುದು ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.