ನಾನು ಹೆಡ್ಗೆವಾರ್‌ ಮ್ಯೂಸಿಯಂನೊಳಗೆ ಹೋಗಿದ್ದನ್ನು ಸಾಬೀತುಪಡಿಸಿದರೆ ನಿಮ್ಮ ಮನೆಯಲ್ಲಿ ಕಸಗುಡಿಸಲು, ಮನೆ ಕಾಯಲೂ ಸಿದ್ಧ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಶಾಸಕ ಸುರೇಶ್‌ ಕುಮಾರ್‌, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ರಾಜೀವ್‌ ಅವರಿಗೆ ಸವಾಲು ಹಾಕಿದ್ದಾರೆ. 

ಹೊಸದುರ್ಗ (ಡಿ.11): ನಾನು ಹೆಡ್ಗೆವಾರ್‌ ಮ್ಯೂಸಿಯಂನೊಳಗೆ ಹೋಗಿದ್ದನ್ನು ಸಾಬೀತುಪಡಿಸಿದರೆ ನಿಮ್ಮ ಮನೆಯಲ್ಲಿ ಕಸಗುಡಿಸಲು, ಮನೆ ಕಾಯಲೂ ಸಿದ್ಧ ಎಂದು ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಶಾಸಕ ಸುರೇಶ್‌ ಕುಮಾರ್‌, ಎಂಎಲ್‌ಸಿ ಚಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ರಾಜೀವ್‌ ಅವರಿಗೆ ಸವಾಲು ಹಾಕಿದ್ದಾರೆ. 

ದಲಿತ ಎಂಬ ಕಾರಣಕ್ಕೆ ನಾಗ್ಪುರದ ಆರೆಸ್ಸೆಸ್‌ ಕಚೇರಿಯಲ್ಲಿರುವ ಹೆಡ್ಗೆವಾರ್‌ ಮ್ಯೂಸಿಯಂಗೆ ಹೋಗಲು ಅವಕಾಶ ನೀಡಿರಲಿಲ್ಲ ಎಂಬ ಗೂಳಿಹಟ್ಟಿ ಶೇಖರ್‌ ಆರೋಪಕ್ಕೆ ಬಿಜೆಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ, ಆರೆಸ್ಸೆಸ್‌ನಲ್ಲಿ ಅಸ್ಪೃಶ್ಯತೆ ಇಲ್ಲ ಎಂದು ಹೇಳಿದ್ದರು. ಇದಕ್ಕೆ ಶುಕ್ರವಾರ ಆಡಿಯೋ ಮೂಲಕ ತಿರುಗೇಟು ನೀಡಿರುವ ಅವರು, ನಾನು ಮ್ಯೂಸಿಯಂ ಒಳಹೋಗಿದ್ದ ಸಿಸಿಟೀವಿ ವಿಡಿಯೋ ರಿಲೀಸ್ ಮಾಡಿಸಿ. 

ರಾಜ್ಯದ ದುಸ್ಥಿತಿಗೆ ಪ್ರಧಾನಿ ಮೋದಿಯೇ ಕಾರಣ: ಜಗದೀಶ್‌ ಶೆಟ್ಟರ್‌

ಒಂದು ವೇಳೆ ನಾನು ಒಳ ಹೋಗಿದ್ದರೆ ನಿಮ್ಮ ಮನೆಯಲ್ಲಿ ಕಸ ಹೊಡೆಯಲು, ಗೇಟ್ ಕಾಯಲೂ ಸಿದ್ಧ ಎಂದು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ ಆಡಿಯೋದಲ್ಲಿ ಗೂಳಿಹಟ್ಟಿ ತಿರುಗೇಟು ನೀಡಿದರು. ಇದೇ ವೇಳೆ ಮಾಜಿ ಶಾಸಕ ರಾಜೀವ್‌ ವಿರುದ್ಧವೂ ಕಿಡಿಕಾರಿರುವ ಅವರು ನಾನು ಕುಡಿಯುತ್ತೇನೆ, ನನ್ನಂಥ ಕುಡುಕರಿಂದಲೇ ಇಂದು ಸರ್ಕಾರಕ್ಕೆ ವಾರ್ಷಿಕ 36 ಸಾವಿರ ಕೋಟಿ ರು. ಆದಾಯ ಬರುತ್ತಿದೆ. ಅದೇ ಹಣದಿಂದ ನನಗೂ, ನಿಮಗೂ ಪೆನ್ಷನ್‌ ಬರುತ್ತಿರೋದು. ನಾನು ರಾಜಕೀಯದಲ್ಲಿ ನಿನಗಿಂತ ಹಿರಿಯ. ನಾನು ಸಚಿವನಾಗಿದ್ದಾಗ ನೀನಿನ್ನೂ ಪೊಲೀಸ್‌ ಇಲಾಖೆಯಲ್ಲಿದ್ದೆ ಎಂದು ಏಕವಚನದಲ್ಲೇ ತಿರುಗೇಟು ನೀಡಿದರು.

ಗೂಳಿಹಟ್ಟಿ ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ: ಗೂಳಿಹಟ್ಟಿ ಶೇಖರ್ ಬಿಜೆಪಿ ತೊರೆದಿದ್ದಕ್ಕೆ ಹಸಿಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಶಾಸಕ ಎನ್. ಮಹೇಶ್ ಹೇಳಿದರು. ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಅಸ್ಪೃಶ್ಯತೆ ನಡೆಸಿದ್ದಾರೆಂದು ಆರೋಪಿಸಿರುವ ಗೂಳಿಹಟ್ಟಿ ಶೇಖರ್ ಹೇಳಿಕೆ ಬಗ್ಗೆ ನಗರದಲ್ಲಿ ಮಾಧ್ಯಮವರೊಟ್ಟಿಗೆ ಮಾತನಾಡಿ, ‘ನಾನು ಆರ್ ಎಸ್ ಎಸ್ ಜೊತೆ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದೇನೆ, ಹಲವು ಕಾರ್ಯಗಳಿಗೆ ಹೋಗಿದ್ದೇನೆ ಎಲ್ಲಿಯೂ ಅಸ್ಪೃಶ್ಯತೆ ಆಚರಣೆ ಇಲ್ಲಾ, ಅವರ ಹೇಳಿಕೆ ಗಮನಿಸಿದರೇ ಅವರು ಬಿಜೆಪಿ ತೊರೆಯುತ್ತಿದ್ದಾರೆ ಎನಿಸುತ್ತದೆ ಅದಕ್ಕೆ ಈ ಸುಳ್ಳು ಹೇಳುತ್ತಿದ್ದಾರೆ’ ಎಂದರು.

ಪ್ರಧಾನಿ ಮೋದಿಗೆ ಬೈಯದಿದ್ದರೆ ಸಿದ್ದರಾಮಯ್ಯಗೆ ಊಟ ರುಚಿಸಲ್ಲ: ಪ್ರಲ್ಹಾದ್‌ ಜೋಶಿ

‘ಅವರ ಹೇಳಿಕೆ ನೋಡಿದರೇ ಏನೋ ಹುನ್ನಾರ ಇಟ್ಟುಕೊಂಡಂತಿದೆ, ಯಾರೇ ಆದರೂ ಇದ್ದ ಮನೆಗೆ ಒದ್ದು ಹೋಗಬಾರದು, ನಾನು ಚುನಾವಣೆಯಲ್ಲಿ ಸೋತಿದ್ದು ನಾನೇನಾದರೂ ಇಲ್ಲದನ್ನು ಮಾತನಾಡುತ್ತಿದ್ದೇನಾ..?’ ಎಂದು ಗೂಳಿಹಟ್ಟಿ ವಿರುದ್ಧ ಕಿಡಿಕಾರಿದರು. ‘ಲೋಕಸಭಾ ಚುನಾವಣೆಯಲ್ಲಿ ನಾನು ಟಿಕೆಟ್ ಆಕಾಂಕ್ಷಿಯಲ್ಲ, ಒಂದು ವೇಳೆ- ಪಕ್ಷ ನಿರ್ಧರಿಸಿದರೇ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ತಿಳಿಸಿದರು.