Asianet Suvarna News Asianet Suvarna News

ತಾಳ ತಪ್ಪಿದ ರಾಜ್ಯ ಸರ್ಕಾರಕ್ಕೆ ಭವಿಷ್ಯ ಇಲ್ಲ: ಸಿ.ಟಿ.ರವಿ

ರಾಜ್ಯ ಬರ ಆವರಿಸಿದ್ದು, ಎರಡನೇ ಭಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ತಮಟೆಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ. ಇದರಿಂದ ಸರ್ಕಾರ ತಾಳ ತಪ್ಪಿದೆ. ಈ ಸರ್ಕಾರ 5 ವರ್ಷ ಇರುತ್ತದೆ ಎಂದು ಕೊಂಡಿದ್ದೆವು ಆದರೆ ಈಗಲೇ ತಾಳ ತಪ್ಪಿರುವುದರಿಂದ ಈ ಸರ್ಕಾರ ಬಹಳ ದಿವಸ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಭವಿಷ್ಯ ನುಡಿದರು. 

Ex Mla CT Ravi Slams On Congress Govt At Kolar gvd
Author
First Published Nov 9, 2023, 11:59 PM IST

ಕೋಲಾರ (ನ.09): ರಾಜ್ಯ ಬರ ಆವರಿಸಿದ್ದು, ಎರಡನೇ ಭಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ತಮಟೆಗೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದಾರೆ. ಇದರಿಂದ ಸರ್ಕಾರ ತಾಳ ತಪ್ಪಿದೆ. ಈ ಸರ್ಕಾರ 5 ವರ್ಷ ಇರುತ್ತದೆ ಎಂದು ಕೊಂಡಿದ್ದೆವು ಆದರೆ ಈಗಲೇ ತಾಳ ತಪ್ಪಿರುವುದರಿಂದ ಈ ಸರ್ಕಾರ ಬಹಳ ದಿವಸ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಭವಿಷ್ಯ ನುಡಿದರು. ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲೂಕಿನ ಕಲವು ಹಳ್ಳಿಗಳಲ್ಲಿ ಬರ ಅಧ್ಯಯನ ನಡೆಸಿ ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ನಮ್ಮ ಸರ್ಕಾರ ಇದ್ದಾಗ ಏಳು ಗಂಟೆ ತ್ರೀ ಫೇಸ್ ವಿದ್ಯುತ್ ನೀಡಿದ್ದೇವು ಆದರೆ ಇವರಿಗೆ ಆ ಯೋಗ್ಯತೆ ಇಲ್ಲ, ಐದು ಗಂಟೆಯೂ ವಿದ್ಯುತ್ ನೀಡುತ್ತಿಲ್ಲ, ಶೇ.೫೦ರಷ್ಟು ಬೆಳೆಗಳು ನೀರಿಲ್ಲದೆ ಹಾಳಾಗಿವೆ ಎಂದರು.

ಬರದ ಭೀಕರತೆಯ ಅನುಭವ: ನವೆಂಬರ್ ತಿಂಗಳಿನಲ್ಲಿಯೇ ಬರದ ಭೀಕರತೆ ಅನುಭವಕ್ಕೆ ಬರುತ್ತಿದೆ, ಇನ್ನು ಮುಂದಿನ ದಿನಗಳ ಬಗ್ಗೆ ಭಯ ಕಾಡುತ್ತಿದೆ, ರೈತರ ನೆರವಿಗೆ ಬರಬೇಕಾದ್ದು ಸರ್ಕಾರದ ಕರ್ತವ್ಯ, ಆದರೆ ಸರ್ಕಾರಕ್ಕೆ ಅದರ ಚಿಂತೆಯೇ ಇಲ್ಲ, ರಾಜ್ಯ ಸಂಕಷ್ಟದಲ್ಲಿದ್ದರೂ ಮುಖ್ಯಮಂತ್ರಿ ಮನೆಯ ಪೀಠೋಪಕರಣ ಖರೀದಿಗೆ ಮೂರು ಕೋಟಿ ಖರ್ಚು ಮಾಡಿದ್ದಾರೆ, ಇದರ ಜೊತೆಗೆ ಸಭೆ ಸಮಾರಂಭಗಳಲ್ಲಿ ಹೆಜ್ಜೆ ಹಾಕುತ್ತಾ ಕುಣಿಯುತ್ತಿದ್ದಾರೆಂದು ಆರೋಪಿಸಿದರು.

ಬರಗಾಲದಲ್ಲಿ ರೈತರಿಗೆ ಸಾಂತ್ವನ ಹೇಳದ ರಾಜ್ಯ ಸರ್ಕಾರ: ಕೆ.ಎಸ್.ಈಶ್ವರಪ್ಪ ಆರೋಪ

3 ತಿಂಗಳ 250 ರೈತರ ಆತ್ಮಹತ್ಯೆ: ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಬೆಳೆಯನ್ನೇ ಬೆಳೆಯಬೇಡಿ ಎನ್ನುವ ಸಲಹೆ ರೈತರಿಗೆ ನೀಡುತ್ತಾರೆ, ೨೦೧೩ ರಿಂದ ೨೦೧೮ರ ವರೆಗೆ ೪೨೫೬ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇವರೇ ಹೇಳುತ್ತಾರೆ, ಈಗ ಮೂರು ತಿಂಗಳ ಅವಧಿಯಲ್ಲಿ ೨೫೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪರಿಹಾರ ನೀಡಲು ಮನವಿ ಮಾಡಿದ್ದಾರೆ. ನಾವು ಬರಪ್ರವಾಸ ಹೊರಟಿದ್ದು ನೋಡಿ ಅಲ್ಲೊಂದು ಇಲ್ಲೊಂದು ಪ್ರವಾಸ ಮಾಡುತಿದ್ದಾರೆ, ಹಿರಿಯಕ್ಕನ ಚಾಳಿ ಮನೆ ಮಕ್ಕಳಿಗೆ ಎನ್ನುವಂತೆ ಮುಖ್ಯಮಂತ್ರಿಯಂತೆಯೇ ಎಲ್ಲ ಸಚಿವರೂ ಕೂಡ ಆಗಿದ್ದಾರೆ ಎಂದು ಆರೋಪಿಸಿದರು.

ಕುರ್ಚಿ ಉಳಿಸಿಕೊಳ್ಳಲು ಸಭೆ: ಮೊದಲೇ ಬರದ ಸಮಸ್ಯೆ ಯಿಂದ ಬಳಲುತ್ತಿರುವ ರೈತರಿಗೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ, ಪಂಪ್ ಸೆಟ್ ಹಾಕಿಕೊಳ್ಳಲು ಎರಡು ಲಕ್ಷ ಸರ್ಕಾರಕ್ಕೆ ಕಟ್ಟಬೇಕು ಎನ್ನುವ ಕಾನೂನು ತಂದಿದ್ದಾರೆ, ಇದು ಗಾಯದ ಮೇಲೆ ಬರೆ ಎಳದಂತೆ ಆಗಿದೆ. ರೈತರಿಗೆ ವಿಶ್ವಾಸ ತುಂಬುವ ಕೆಲಸ ಮಾಡಬೇಕಾಗಿರುವುದರಿಂದ ನಾವು ಬಿಜೆಪಿಯಿಂದ ಪ್ರವಾಸ ಮಾಡುತ್ತಿದ್ದೇವೆ, ಮುಖ್ಯಮಂತ್ರಿಗಳಿಗೆ ಬ್ರೇಕ್ ಫಾಸ್ಟ್ ಮತ್ತು ಡಿನ್ನರ್‌ನಲ್ಲಿ ಇಂಟ್ರೆಸ್ಟ್ ಆಗಿದೆ, ಇವರ ಸಭೆಗಳು ಕುರ್ಚಿ ಉಳಿಸಿಕೊಳ್ಳಲು ಆಗಿದೆ ಎಂದರು

ಎಚ್‌ಡಿಕೆ ಯಾವತ್ತು ಸತ್ಯ ಹೇಳಿದ್ದಾರೆ, ಬರಿ ಸುಳ್ಳೆ: ಸಿಎಂ ಸಿದ್ದರಾಮಯ್ಯ ಲೇವಡಿ

ಡಿಎಫ್‌ಒ ವಜಾ ಮಾಡಿ: ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ರೈತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಮರಗಳನ್ನು ಕಡಿಯುವುದು ಅಕ್ಷಮ್ಯ ಅಪರಾಧ, ಡಿ.ಎಫ್.ಓ ಏಡುಕೊಂಡಲ ಕರ್ತವ್ಯದಲ್ಲಿರಲು ಅನರ್ಹರು. ಅವರನ್ನು ಡಿಸ್ಮಿಸ್ ಮಾಡಬೇಕೆಂದು ಒತ್ತಾಯಿಸಿದರು. ಇದು ರೈತರ ಸರ್ಕಾವೇ ಅಲ್ಲ, ಏಡುಕೊಂಡಲ ಅವರು ಆಂಧ್ರಪ್ರದೇಶದಲ್ಲಿ ಈ ರೀತಿ ವರ್ತನೆ ಮಾಡಿದ್ದರೆ ಅದರ ಪರಿಣಾಮವೇ ಬೇರೆಯಾಗುತ್ತಿತ್ತು, ಇಲ್ಲಿಯ ಜನ ಸಜ್ಜನರು ಆದ್ದರಿಂದ ಏನೂ ತಪ್ಪನ್ನು ಎಸಗಿಲ್ಲ. ನೀವೇ ಕಟುಕನಂತೆ ವರ್ತನೆ ಮಾಡುತ್ತಿದ್ದೀರಿ ಎಂದರು. ಸಂಸದ ಮುನಿಸ್ವಾಮಿ, ಎಂ.ಎಲ್.ಸಿ. ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ಓಂಶಕ್ತಿ ಚಲಪತಿ, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.

Follow Us:
Download App:
  • android
  • ios