Asianet Suvarna News Asianet Suvarna News

ಬರಗಾಲದಲ್ಲಿ ರೈತರಿಗೆ ಸಾಂತ್ವನ ಹೇಳದ ರಾಜ್ಯ ಸರ್ಕಾರ: ಕೆ.ಎಸ್.ಈಶ್ವರಪ್ಪ ಆರೋಪ

ರಾಜ್ಯದಲ್ಲಿ ಭೀಕರ ಬರ ಬಂದಿದೆ. ಸರ್ಕಾರದ ಯಾವುದೇ ಪ್ರತಿನಿಧಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಾಂತ್ವನ ಹೇಳದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

Ex DCM KS Eshwarappa Slams On Congress Govt At Koppal gvd
Author
First Published Nov 9, 2023, 10:43 PM IST

ಕುಷ್ಟಗಿ (ನ.09): ರಾಜ್ಯದಲ್ಲಿ ಭೀಕರ ಬರ ಬಂದಿದೆ. ಸರ್ಕಾರದ ಯಾವುದೇ ಪ್ರತಿನಿಧಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಾಂತ್ವನ ಹೇಳದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು. ತಾಲೂಕಿಗೆ ಬರ ಅಧ್ಯಯನ ಪ್ರವಾಸಕ್ಕಾಗಿ ಬಂದ ಸಂದರ್ಭದಲ್ಲಿ ಪಟ್ಟಣದ ಸರ್ಕ್ಯೂಟ್ ಹೌಸಿನಲ್ಲಿ ಬರಗಾಲದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹುಟ್ಟಿನಿಂದ ಇಲ್ಲಿವರೆಗೂ ಇಂತಹ ಭೀಕರ ಬರಗಾಲ ಕಂಡಿಲ್ಲ. ಇಂತಹ ಬರಗಾಲದಲ್ಲಿ ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ, ಸಚಿವರು, ಶಾಸಕರನ್ನು ಒಳಗೊಂಡಂತೆ ಯಾರೊಬ್ಬರು ಸಹಿತ ರೈತರ ಹೊಲಗಳಿಗೆ ಹೋಗಿ ಬೆಳೆ ನಷ್ಟ ಆಗಿರುವ ಕುರಿತು ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ. 

ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದರು. ಇಂತಹ ಬರಗಾಲದಲ್ಲಿ ಸಚಿವರಿಗೆ ಹೊಸ ಕಾರು ಕೊಡುತ್ತಿರುವುದು ಕಂಡರೆ ಇವರು ರಾಜ್ಯವನ್ನು ಲೂಟಿ ಮಾಡೋಕೆ ಬಂದಿರುವಂತೆ ಕಾಣುತ್ತದೆ. ಇಂತಹ ಬರಗಾಲದಲ್ಲಿ ಇದು ಬೇಕಿತ್ತೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರವು ಬರಗಾಲದ ಕುರಿತು ಇಲ್ಲಿಯವರೆಗೂ ಒಂದು ರುಪಾಯಿ ಪರಿಹಾರ ಕೊಟ್ಟಿಲ್ಲ. ಕೇವಲ ಪ್ರಚಾರಕ್ಕಾಗಿ ಅಷ್ಟು ಕೊಟ್ಟಿದ್ದೇನೆ, ಇಷ್ಟು ಕೊಟ್ಟಿದ್ದೇನೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಡೇಸಗೂರು ಇದ್ದರು.

ಕಾಂಗ್ರೆಸ್ ನಾಯಕರೇ ಕೇಂದ್ರದ ಕಡೆ ಬೆಟ್ಟು ಮಾಡುವುದನ್ನು ಬಿಡಿ: ಕೆ.ಎಸ್.ಈಶ್ವರಪ್ಪ

ರೈತರು ಎದೆಗುಂದುವುದು ಬೇಡ: ರೈತರ ಜತೆ ನಾವಿದ್ದೇವೆ. ನಮ್ಮ ಪಕ್ಷ ಇದೆ. ಎಂದಿಗೂ ಎದೆಗುಂದದೆ ಧೈರ್ಯವಾಗಿರಿ. ಯಾವುದಕ್ಕೂ ಹೆದರಬೇಡಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು. ತಾಲೂಕಿನ ಮಲಕಾಪುರ ಗ್ರಾಮದ ರೈತ ಈರಪ್ಪ ಗಾಣಿಗೇರ ಅವರ ಶೇಂಗಾ ಹೊಲಕ್ಕೆ ಭೇಟಿ ನೀಡಿ ಶೇಂಗಾ ಬೆಳೆಯ ಕುರಿತು ಸಂಪೂರ್ಣ ಮಾಹಿತಿ ಪಡೆದು ಮಾತನಾಡಿದ ಅವರು, ರಾಜ್ಯಾದ್ಯಂತ ಬರಗಾಲ ಸೃಷ್ಟಿಯಾಗಿದೆ. ಯಾವುದಕ್ಕೂ ಎದೆಗುಂದಬೇಡಿ ಎಂದು ಧೈರ್ಯ ತುಂಬುವ ಕೆಲಸ ಮಾಡಿದರು. ಅಧಿಕಾರಿಗಳ ಕುರಿತು ಮಾಹಿತಿಯನ್ನು ಪಡೆದಾಗ ರೈತರು ನಮ್ಮ ಹೊಲಕ್ಕೆ ಯಾವುದೇ ಅಧಿಕಾರಿಗಳು ಬಂದು ಸರ್ವೆ ಸಹಿತ ಮಾಡಿರುವುದಿಲ್ಲ. 

ಸಿಎಂ ಸೂಚನೆ ಹಿನ್ನೆಲೆಯಲ್ಲಿ ಕಾಡಾನೆ ಸೆರೆಗೆ ಕಾರ್ಯಾಚರಣೆ ಆರಂಭ: ಮೂರು ಆನೆಗಳು ಭಾಗಿ!

ನಮ್ಮ ಖಾತೆಗೆ ಬರಗಾಲದ ಪರಿಹಾರದ ಹಣ ಹಾಕಿಲ್ಲ. ನಮಗೆ ಬೆಳೆ ವಿಮಾ ಹಣವು ಬಂದಿಲ್ಲ. ನೀವು ಬಂದಿದ್ದು ಅಧಿಕಾರಿಗಳ ಗಮನಕ್ಕೆ ತಂದು ನಮಗೆ ಶೀಘ್ರದಲ್ಲಿ ಪರಿಹಾರ ಕೊಡಿಸಬೇಕು ಎಂದು ಕೈಮುಗಿದು ವಿನಂತಿ ಮಾಡಿಕೊಂಡರು. ತಾಲೂಕಿನಲ್ಲಿ ಕೆರೆ ತುಂಬಿಸುವ ಕಾರ್ಯಗಳು ನಡೆದಿದ್ದು, ಶೀಘ್ರದಲ್ಲಿ ಕೆರೆಯನ್ನು ತುಂಬಿಸುವ ಕಾರ್ಯ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ಬಸವರಾಜ ದಡೇಸುಗೂರು, ಮಲ್ಲಣ್ಣ ಪಲ್ಲೇದ, ಬಸವರಾಜ ಹಳ್ಳೂರು, ತುಕಾರಾಂ ಸುರ್ವೆ ಇದ್ದರು.

Follow Us:
Download App:
  • android
  • ios