ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!
ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಕೆ ಮಾಡುವ ಮೂಲಕ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ವಿವಾದದ ಮಾತುಗಳನ್ನಾಡಿದ್ದಾರೆ. ಧರ್ಮ ಅಂದ್ರೆ ಎಂದೂ ಬದಲಾಗದ ಅನಾದಿ ಕಾಲದ ಧರ್ಮವಂತೆ. ಎಂದೂ ಬದಲಾಗೋದಿಲ್ಲ ಅನ್ನೋದೇ ಪ್ರಕೃತಿಗೆ ವಿರುದ್ಧವಾದದ್ದು ಅಲ್ಲವೆ?
ಕಲಬುರಗಿ (ಸೆ.12): ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಕೆ ಮಾಡುವ ಮೂಲಕ ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತೆ ವಿವಾದದ ಮಾತುಗಳನ್ನಾಡಿದ್ದಾರೆ. ಧರ್ಮ ಅಂದ್ರೆ ಎಂದೂ ಬದಲಾಗದ ಅನಾದಿ ಕಾಲದ ಧರ್ಮವಂತೆ. ಎಂದೂ ಬದಲಾಗೋದಿಲ್ಲ ಅನ್ನೋದೇ ಪ್ರಕೃತಿಗೆ ವಿರುದ್ಧವಾದದ್ದು ಅಲ್ಲವೆ? ಬದಾಲವಣೆ ಪ್ರಕೃತಿ ನಿಯಮ ತಾನೆ? ಸನಾತನಿಗಳು ಬದಲಾಗದೆ ಇರೋದೇ ನಮ್ಮ ಧರ್ಮ ಅಂತಿದ್ದಾರಲ್ಲ , ಇದನ್ನು ನಾವು ನಂಬಬೇಕೆ? ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ. ಕಲಬುರಗಿ ಪಂಡಿತ ರಂಗ ಮಂದಿರದಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಕಾಶ್ ರೈ ಸನಾತನ ಧರ್ಮ ಆಚರಿಸುವವರನ್ನು ಕಾಗೆಗಳಿಗೆ ಹೋಲಿಸಿದರು.
ಸನಾತನ ಧರ್ಮ ಅಂದರೆ ಏನೆಂಬ ಪ್ರಶ್ನೆಗೆ ಉತ್ತರಿಸುವಾಗ ಬದಲಾವಣೆಯಾಗದೆ ಇರುವ ಧರ್ಮವಂತೆ ಅದು. ನಾವು ಕಾಲಕ್ಕೆ ತಕ್ಕಂತೆ ಬದಲಾಗಲೇಬೇಕು, ಬದಲಾಗೋದಿಲ್ಲ ಎನ್ನುವುದು ಪ್ರಕೃತಿಗೆ ವಿರುದ್ಧ, ನಾನೇ ಶ್ರೇಷ್ಠ ಅಂದರೆ ಹೇಗೆ? ಸದ್ಯ ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ, ನವಿಲು ಸಹ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿವೆ. ಇದು ಸಾಧ್ಯವೆ? ಎಂದು ಹೇಳುವ ಮೂಲಕ ಪ್ರಕಾಶ ರೈ ಸನಾತನ ಧರ್ಮ ಆಚರಣೆ ಮಾಡುವವರನ್ನು ಕಾಗೆಗಳಿಗೆ ಹೋಲಿಕೆ ಮಾಡಿದರು.
ನಾನು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷಿ ಅಲ್ಲ: ಎಂಟಿಬಿ ನಾಗರಾಜ್
ಸನಾತನ ಧರ್ಮದ ಬಗ್ಗೆ ಇವವರೆಲ್ಲರೂ ಸೇರಿ ದಾರಿ ತಪ್ಪಿಸಲು ಬರುತ್ತಿದ್ದಾರೆ. ನಾವು ಜಾಗೃತವಾಗಿದ್ದೇವೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಯಾರೂ ಹಿಂದೂಗಳಲ್ಲ. ಇವರೆಲ್ಲಾ ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ ಎಂದರು. ಇವರಿಗೆ ಅಮಾವಾಸ್ಯೆ ಅಂದ್ರೆ ಕೆಟ್ಟದಿನವಂತೆ, ಆ ದಿನ ಚೆನ್ನಾಗಿಲ್ವಂತೆ, ಆದ್ರೆ ಚಂದ್ರಯಾನ ಯಶಸ್ಸು ಕಂಡಾಗ ವಿಜಯೋತ್ಸವ ಮಾಡ್ತಾರೆ. ಇದೇನಿದು ದ್ವಂದ್ವ ನಿಲುವು? ಇದೇ ರೀತಿ ಎಲ್ಲಾ ಧರ್ಮಗಳಲ್ಲೂ ವಿಕಾರ ಇದೆ ಎಂದರು.
ಧರ್ಮಯುದ್ಧ ಯಾವಾಗ ಮುಗಿಯುತ್ತೆ ಎನ್ನೊದು ಗೊತ್ತಾಗಲ್ಲ. ಧರ್ಮ ಯುದ್ಧ ಕಾಳ್ಗಿಚ್ಚು ಇದ್ದಂತೆ ಮೂಲನೂ ಗೊತ್ತಾಗಲ್ಲಾ ಅಂತ್ಯನೂ ಗೊತ್ತಾಗಲ್ಲ. ಹಿಂದೆ ರಾಜರ ಕಾಲದಲ್ಲಿ ರಾಜರ ಜೊತೆ ಕೆಲಸ ಮಾಡುವವರಿಗೆ ಕೆಲವೊಮ್ಮೆ ಸಂಬಳ ಕೊಡೋಕೆ ಆಗುತ್ತಿರಲಿಲ್ಲ. ಆಗ ಆ ಸೈನಿಕರು ಲೂಟಿ, ಅತ್ಯಾಚಾರ ಹಾಗೂ ದರೋಡೆ ಮಾಡಿಕೊಂಡು ಹೋಗುತ್ತಿದ್ದರು. ಇಂತಹವರನ್ನೇ ರಾಜಕಿಯದಲ್ಲೂ ಬಳಸಿಕೊಳ್ಳುತ್ತಿದ್ದಾರೆ ಎಂದರು. ರೌಡಿಗಳನ್ನು ರಾಜಕೀಯಕ್ಕೆ ಯಾಕೆ ಸೇರಿಸಿಕೊಳ್ಳುತ್ತೀರಾ? ಅಂತವರನ್ನೇ ಎಂಪಿ ಮಾಡ್ತೀರಾ?, ರೌಡಿಶೀಟರ್‌ಗಳನ್ನು ಸೇರಿಸಿಕೊಳ್ಳುತ್ತಿರಾ ಎಂದು ವಿವಿಧ ರಾಜಕೀಯ ಪಕ್ಷಗಳವರನ್ನು ಪ್ರಶ್ನಿಸಿದರು.
ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಸಿದ್ದನಗೌಡ ಹಾಗೂ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ: ಯಾಕೆ ಗೊತ್ತಾ?
ನಿಮ್ಮಂತೆಯೇ ಸಿನಿಮಾ ರಂಗದಲ್ಲಿರುವ ಇತರೆ ಖ್ಯಾತನಾಮ ನಟರು ಯಾಕೆ ದೇಶದಲ್ಲಿನ ಇಂತಹ ಆಗು ಹೋಗುಗಳ ಬಗ್ಗೆ ಮಾತನಾಡುತ್ತಿಲ್ಲ? ಯಾಕೆ ಅವರಿಗೆ ಇವೆಲ್ಲವೂ ಕಾಣುತ್ತಿಲ್ಲವೆ? ಎಂಬ ಪ್ರಶ್ನೆಗೂ ಸಹ ಪ್ರಕಾಶ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅವರು ಚಡ್ಡಿ ಹಾಕಿಕೊಂಡು ಇರುವುದು ಇದುವರೆಗೂ ನನಗೆ ಗೊತ್ತಿರಲಿಲ್ಲ, ಹೀಗಾಗಿ ಅವರು ಮಾತನಾಡಲ್ಲ ಎಂದರು. ಮರುಕ್ಷಣವೇ ಚಡ್ಡಿ ಹಾಕಿಕೊಂಡವರಿಗೆ ದೇಶ, ಅಲ್ಲಿನ ಜ್ವಂಲತ ಸಮಸ್ಯೆಗಳು ಕಾಣಿಸೋದಿಲ್ಲವೆಂದರು.