ಸನಾತನ ಧರ್ಮ ಎಲ್ಲಕ್ಕೂ ಮೂಲ. ಧರ್ಮದ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಧರ್ಮಕ್ಕೆ ಗೌರವ ಕೊಡಬೇಕು ಎಂದು ಮೈಸೂರು ರಾಜವಂಶಸ್ಥ ಶ್ರೀಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.

ಮಂಡ್ಯ (ಸೆ.11): ಸನಾತನ ಧರ್ಮ ಎಲ್ಲಕ್ಕೂ ಮೂಲ. ಧರ್ಮದ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಧರ್ಮಕ್ಕೆ ಗೌರವ ಕೊಡಬೇಕು ಎಂದು ಮೈಸೂರು ರಾಜವಂಶಸ್ಥ ಶ್ರೀಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಗಳ ಕುರಿತು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮದ ಬಗ್ಗೆ ಮಾತನೋಡೋದು ತಪ್ಪು. ಎಲ್ಲ ಧರ್ಮಕ್ಕೂ ಒಂದು ಗೌರವ ಮರ್ಯಾದೆ ಇದೆ. ನಮ್ಮ ದೇಶದಲ್ಲಿ ಸನಾತನ ಧರ್ಮ ಎಲ್ಲಕ್ಕೂ ಮೂಲ. ಧರ್ಮದ ವಿರುದ್ಧವಾಗಿ ನೀಡುವ ಹೇಳಿಕೆ ಒಪ್ಪುವುದಿಲ್ಲ. ಧರ್ಮಕ್ಕೆ ಗೌರವ ಕೊಡಬೇಕು ಎಂದು ನುಡಿದರು.

ಪ್ರತಿ ವರ್ಷದಂತೆ ಮೈಸೂರು ದಸರಾ ಆಚರಣೆಗಳು ನಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ರೈತರ ಕಷ್ಟದಲ್ಲಿ ನಾವು ಜೊತೆ ಇದ್ದೇವೆ. ಅದು ನಮ್ಮ ಕರ್ತವ್ಯ. ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಬೇಕೋ, ಬೇಡವೋ ಎಂಬ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದ ಯದುವೀರ್‌ ಅವರು, ಮಹಿಷಾ ದಸರಾ ಆಚರಣೆ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಂವಿಧಾನದ ಪ್ರಕಾರ ಯಾರು ಏನು ಬೇಕಾದರೂ ಅನುಸರಿಸಬಹುದು ಎಂದರು.

ಕೆಂಪೇಗೌಡರ ಸಮಾಧಿ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಂಸದ ಸುರೇಶ್‌ ಭರವಸೆ

ತಮಿಳುನಾಡಿಗೆ ನೀರು ಹರಿಸಿದ ವಿಚಾರವಾಗಿ, ಇತಿಹಾಸ ನೋಡಿ ನಮ್ಮ ರಾಜ್ಯ, ಸುಪ್ರೀಂ ಕೋರ್ಟ್ ಏನು ನಿರ್ಧಾರ ತೆಗೆದುಕೊಂಡಿದ್ದಾರೋ ನೋಡಬೇಕು. ಅದರ ಜೊತೆಗೆ ಸಮಸ್ಯೆ ಬಗೆಹರಿಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕು. ಸಂಪೂರ್ಣವಾಗಿ ರಾಜ್ಯ ಹಾಗೂ ರೈತರ ಜೊತೆ ನಮ್ಮ ಬೆಂಬಲ ಇದೆ. ಅಧಿಕಾರದಲ್ಲಿರುವವರನ್ನ ಪ್ರಶ್ನೆ ಮಾಡಿ. ನಾವು ರಾಜ್ಯದ ಜೊತೆ ಇರುತ್ತೇವೆ ಎಂದರು.

ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡೋಲ್ಲ. ಮುಂದೆಯೂ ರಾಜಕೀಯದಲ್ಲಿ ನಮ್ಮ ಪಾತ್ರ ಏನೂ ಇರುವುದಿಲ್ಲ. ನಾವು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇವೆ. ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಬೇರೆ ರೀತಿಯಲ್ಲೂ ಮಾಡಬಹುದು. ಅದನ್ನು ಮಾಡಲು ನಾವು ಪ್ರಯತ್ನ ಮಾಡುತ್ತೇವೆ ಎಂದರು.

ನನಗೆ ರಾಜ​ಕೀ​ಯ​ದಲ್ಲಿ ಆಸಕ್ತಿ ಇಲ್ಲ: ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಮೈಸೂರು ರಾಜವಂಶಸ್ಥ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ಮುಂದೆಯೂ ರಾಜಕೀಯದಲ್ಲಿ ನನ್ನ ಪಾತ್ರ ಏನೂ ಇರುವುದಿಲ್ಲ. ನಾನು ಸಮಾಜದ ಕಾರ್ಯಕ್ರಮದಲ್ಲಿ ಸದಾ ಭಾಗವಹಿಸುತ್ತೇನೆ. ಸಮಾಜದ ಹಿತರಕ್ಷಣೆಗಾಗಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಬೇರೆ ರೀತಿಯಲ್ಲೂ ಮಾಡಬಹುದು. ಅದನ್ನು ಮಾಡಲು ನಾನು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. 

ಬಿಜೆಪಿಯ ಮಾಜಿ ಉಚ್ಚಾಟಿತ ಶಾಸಕ ಸಿದ್ದನಗೌಡ ಹಾಗೂ ವಿರೂಪಾಕ್ಷಪ್ಪ ಜೊತೆ ರೇಣುಕಾಚಾರ್ಯ ಮಾತುಕತೆ: ಯಾಕೆ ಗೊತ್ತಾ?

ಇದೇ ವೇಳೆ ಸನಾತನ ಧರ್ಮ ಎಲ್ಲಕ್ಕೂ ಮೂಲ ಎಂದ ಅವ​ರು, ಧರ್ಮದ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ಧರ್ಮಕ್ಕೆ ಗೌರವ ಕೊಡಬೇಕು ಎಂದರು. ಪ್ರತಿ ವರ್ಷದಂತೆ ಮೈಸೂರು ದಸರಾ ಆಚರಣೆಗಳು ನಡೆಯಲಿವೆ. ಇದರಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ರೈತರ ಕಷ್ಟದ ಸಮ​ಯ​ದ​ಲ್ಲಿ ನಾವು ಜೊತೆಗಿದ್ದೇವೆ. ಅದು ನಮ್ಮ ಕರ್ತವ್ಯ ಎಂದರು. ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಬೇಕೋ, ಬೇಡವೋ ಎಂಬ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ ಎಂದ ಯದುವೀರ್‌ ಅವರು, ಮಹಿಷಾ ದಸರಾ ಆಚರಣೆ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಂವಿಧಾನದ ಪ್ರಕಾರ ಯಾರು ಯಾವ ಆಚ​ರಣೆ ಬೇಕಿ​ದ್ದರೂ ಮಾಡ​ಬ​ಹುದು ಎಂದ​ರು.