ಅಂಬೇಡ್ಕರ್‌, ಖರ್ಗೆಗೆ ಕಾಂಗ್ರೆಸ್‌ ಅನ್ಯಾಯ: ಮಾಜಿ ಸಚಿವ ಮಹೇಶ್‌ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾನ್ನಾಗಿ ಮಾಡಿದ ಕಾಂಗ್ರೆಸ್‌, ರಾಜ್ಯ ವಿಧಾನಸಭೆಯನ್ನು ದಲಿತರ ಮತಗಳನ್ನು ದೋಚಿ ಅಧಿಕಾರಕ್ಕೆ ಬಂತು. ಈಗ ರಾಹುಲ್‌ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ಎನ್‌.ಮಹೇಶ್‌ ತೀವ್ರ ವಾಗ್ದಾಳಿ ಮಾಡಿದರು. 
 

Ex Minister N Mahesh Slams On Congress At Chamarajanagar gvd

ಚಾಮರಾಜನಗರ (ಆ.30): ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾನ್ನಾಗಿ ಮಾಡಿದ ಕಾಂಗ್ರೆಸ್‌, ರಾಜ್ಯ ವಿಧಾನಸಭೆಯನ್ನು ದಲಿತರ ಮತಗಳನ್ನು ದೋಚಿ ಅಧಿಕಾರಕ್ಕೆ ಬಂತು. ಈಗ ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಮೂಲಕ ದಲಿತರಿಗೆ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಸಚಿವ ಎನ್‌. ಮಹೇಶ್‌ ತೀವ್ರ ವಾಗ್ದಾಳಿ ಮಾಡಿದರು. ಜಿಲ್ಲಾ ಪರಿಶಿಷ್ಟಜಾತಿ ಮೋರ್ಚಾದ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ, ಕಾಂಗ್ರೆಸ್‌ ಕಳೆದ 70 ವರ್ಷಗಳಿಂದ ದಲಿತರು, ಹಿಂದುಳಿದ ವರ್ಗಗಳಿಗೆ ಮೋಸ ಮಾಡುತ್ತಲೇ ಅಧಿಕಾರ ಪಡೆದುಕೊಳ್ಳುತ್ತಾ ಬಂದಿದೆ. 

ಈಗ 2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿ, ಮುಂಬರುವ ಲೋಕಸಭಾ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ. ಅವರೇ ಪ್ರಧಾನಿ ಅಭ್ಯರ್ಥಿ ಎಂಬಂತೆ ಬಿಂಬಿಸಿತ್ತು. ಇದನ್ನು ನಂಬಿದ ಜನ ವಿಧಾನಸಭಾ ಚುನವಣೆಯಲ್ಲಿ ದಲಿತ ನಾಯಕನಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ದೊರೆತಿದೆ. ಇನ್ನೇನು ಅವರು ಪ್ರಧಾನಿಯಾಗಲಿದ್ದಾರೆ ಎಂದು ಹೆಚ್ಚಿನ ಪ್ರಮಾಣದಲ್ಲಿ ಓಟು ಹಾಕಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವಂತೆ ಮಾಡಿದರು.

ರಾಜೀವ್‌ಗಾಂಧಿ ಮೆಡಿಕಲ್‌ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ

ಸಿದ್ದರಾಮಯ್ಯ ನೀಡಿರುವ 5 ಗ್ಯಾರಂಟಿಗಳು ಸಹ ಬಡತನ ನಿರ್ಮೂಲನೆಗಾಗಿ ಎಂಬಂತಿವೆ. ಇದರರ್ಥ ಕಾಂಗ್ರೆಸ್ಸಿಗರಿಗೆ ದೇಶದ ಜನರು ಶ್ರೀಮಂತರಾಗುವುದಕ್ಕೆ ಇಷ್ಟವಿಲ್ಲ. ಅವರನ್ನು ಬಡವರನ್ನಾಗಿಸಿಕೊಂಡೇ ಮತ ಪಡೆದು ಪಕ್ಷ ಶ್ರೀಮಂತವಾಗುತ್ತಿದೆ. ಕಾಂಗ್ರೆಸ್‌ ಪಕ್ಷದ ಮುಖಂಡರ ಆಸ್ತಿ ಪಾಸ್ತಿ ಗಳ ಹೊರರಾಜ್ಯಗಳಲ್ಲಿವೆ. ಇದನ್ನು ದಲಿತರು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಅಧಿಕಾರ ಕೊಡಲಿಲ್ಲ. ಅವರ ಜೀವಿತ ಅವಧಿ ಹಾಗೂ ಅವರ ಸತ್ತ ನಂತರವು ಶೋಷಣೆ ಮಾಡಿತ್ತು. ಕಾಂಗ್ರೆಸ್‌ ಉರಿಯುವ ಮನೆ. ನನ್ನ ಜನಾಂಗ ಆ ಪಕ್ಷದ ಹತ್ತಿರವು ಸುಳಿಯಬೇಡಿ ಎಂದಿದ್ದರು.

ಆದರೆ, ನಮ್ಮವರು ಆ ಪಕ್ಷವನ್ನೇ ಅಪ್ಪಿಕೊಂಡು ಮತ್ತಷ್ಟುನೋವು ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ಮಹೇಶ್‌ ವಿಷಾಧ ವ್ಯಕ್ತಪಡಿಸಿದರು. ಜಿ.ಪಂ. ಮಾಜಿ ಅಧ್ಯಕ್ಷ ಎಸ್‌. ಮಹದೇವಯ್ಯ, ಬಿಜೆಪಿ ದಲಿತರ ಪರವಾಗಿ ಮಾಡಿದ ಒಳ್ಳೆಯ ಕೆಲಸಗಳು ಪ್ರಚಾರಕ್ಕೆ ಬರುವುದಿಲ್ಲ. ಯಾರು ಬಿಜೆಪಿ ಪುಡಿ ಲೀಡರ್‌ ಹೇಳಿದ ಮಾತು ಕೇಳಿಕೊಂಡು ನಮ್ಮವರು ವೃಥ ಆರೋಪ ಮಾಡುವುದು ಸರಿಯಲ್ಲ. ಪ್ರಧಾನಿ ನರೇಂದ್ರ, ಅಂಬೇಡ್ಕರ್‌ ಬರೆದಿರುವ ಸಂವಿಧಾನ ನಮ್ಮ ಗ್ರಂಥ ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ದಲಿತರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಖರ್ಗೆ ಪ್ರಧಾನಿಯಲ್ಲ ರಾಷ್ಟ್ರಪತಿಯಾಗಬೇಕಾ: ಮೂಡ್ನಾಕೂಡು ಪ್ರಕಾಶ್‌, ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್‌ ದಲಿತರ ಮತ ಪಡೆಯಲು ಒಂದೊಂದು ತಂತ್ರ ರೂಪಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ದಲಿತರಿಗೆ ಖರ್ಗೆಯವರನ್ನು ರಾಷ್ಟ್ರಪತಿ ಮಾಡುತ್ತೇವೆ ಎಂದು ಹೊಸ ನಾಟಕ ಶುರು ಮಾಡಿದರು ಅಚ್ಚರಿ ಇಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್‌

ಸಭೆಯಲ್ಲಿ ಬಿಜೆಪಿ ಮುಖಂಡರಾದ ಎಸ್‌.ಬಾಲರಾಜು, ವೆಂಕಟರಮಣಸ್ವಾಮಿ, ಅರಲಕವಾಡಿ ನಾಗೇಂದ್ರ, ಎಸ್ಸಿ ಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷ ಮುತ್ತಿಗೆ ಮೂರ್ತಿ, ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ್‌, ರಾಜಗೋಪಾಲ್‌, ಮಹಿಳಾ ಮೋರ್ಚಾ ಅಧ್ಯಕ್ಷೆ ಮಲೆಯೂರು ಕಮಲಮ್ಮ, ಜಯಶೀಲಾ, ವನಾಜಾಕ್ಷಿ, ದಾಕ್ಷಾಯಿಣಿ, ಬಸವನಪುರ ರಾಜಶೇಖರ್‌, ಹಾಗೂ ಜಿಲ್ಲೆಯ ನಾಲ್ಕು ವಿಧಾನಸಬಾ ಕ್ಷೇತ್ರಗಳ ಎಸ್ಸಿ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

Latest Videos
Follow Us:
Download App:
  • android
  • ios