136 ಸೀಟಿದ್ರೂ ಕಾಂಗ್ರೆಸ್ ಸರ್ಕಾರ ಅಲುಗಾಡುತ್ತಿದೆ: ಮಾಜಿ ಸಚಿವ ಎಚ್.ಡಿ.ರೇವಣ್ಣ
ರಾಜ್ಯ ಸರ್ಕಾರದಲ್ಲಿ 136 ಸೀಟುಗಳು ಇದ್ದರೂ ಕೂಡ ಕಾಂಗ್ರೆಸ್ ಪಕ್ಷವು ಅಲುಗಾಡುತ್ತಿದ್ದು, ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯಲು ಮುಂದಾಗಿದ್ದು, ಜೆಡಿಎಸ್ ಎಂದರೇ ನಾಯಕರುಗಳನ್ನು ತಯಾರು ಮಾಡುವ ಕಾರ್ಖಾನೆಗಳು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ಹಾಸನ (ನ.17): ರಾಜ್ಯ ಸರ್ಕಾರದಲ್ಲಿ 136 ಸೀಟುಗಳು ಇದ್ದರೂ ಕೂಡ ಕಾಂಗ್ರೆಸ್ ಪಕ್ಷವು ಅಲುಗಾಡುತ್ತಿದ್ದು, ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯಲು ಮುಂದಾಗಿದ್ದು, ಜೆಡಿಎಸ್ ಎಂದರೇ ನಾಯಕರುಗಳನ್ನು ತಯಾರು ಮಾಡುವ ಕಾರ್ಖಾನೆಗಳು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘14 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ನಾಮಕಾವಸ್ತೆ ಸಿಎಂ ಆಗಿದ್ದ ವೇಳೆ ಡಿ.ಕೆ. ಶಿವಕುಮಾರ್ ಬಲವಂತವಾಗಿ ಕಡತಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ನನಗೆ ಬೇಕಾದವರಿಗೆ ರಾಜೋತ್ಸವ ಪ್ರಶಸ್ತಿ ಕೊಡಲು ಆಗಲಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಕಛೇರಿ ಪೂರ್ತಿ ಡಿ.ಕೆ. ಶಿವಕುಮಾರ್ ನಿರ್ವಹಣೆ ಮಾಡುತ್ತಿದ್ದರು.
ಸಿದ್ದರಾಮಯ್ಯ ಮನೆಯಲ್ಲಿ ನಾನು ಕುಳಿತಿರುವಾಗಲೆ ಡಿಕೆ ಶಿವಕುಮಾರ್ ಮತ್ತು ರೇವಣ್ಣನವರನ್ನು ಡಿಸಿಎಂ ಮಾಡುವುದಾಗಿ ದೆಹಲಿ ಕಾಂಗ್ರೆಸ್ ಮುಖಂಡರು ತಿಳಿಸಿದ್ದರು. ಮುಂಬೈಗೆ ಹೊಗಿರುವ ೫ ಜನರನ್ನು ಶಾಸಕರನ್ನು ಮುಂಬೈನಿಂದ ವಾಪಸು ಕರೆದುಕೊಂಡು ಬರುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದು, ಈ ಬಗ್ಗೆ ಸಿದ್ದರಾಮಯ್ಯನವರೇ ಸಾಕ್ಚಿ’ ಎಂದು ಹೇಳಿದರು. ದೆಹಲಿ ನಾಯಕರು ಮಾತನಾಡುವಾಗ ಈ ವಿಚಾರ ಡಿ.ಕೆ. ಶಿವಕುಮಾರ್ ನನಗೆ ತಿಳಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆ ಸಮಯದಲ್ಲಿ ಹೇಳಿದ್ದರು. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಮುಂದೆಯೇ ತಿಳಿಸಿದ್ದಾರೆ ಎಂದು ದೂರಿದರು.
ಬರ ನಿರ್ವಹಣೆ: ರೈತರ ನೆರವಿಗೆ ಧಾವಿಸಲು ಸಚಿವ ಕೃಷ್ಣ ಬೈರೇಗೌಡ ತಾಕೀತು
‘ಕೋಮುವಾದಿ ಜೊತೆ ಹೋಗದ ದೇವೇಗೌಡರನ್ನು ಕೇವಲ ೧೦ ತಿಂಗಳಲ್ಲಿ ಕಾಂಗ್ರೆಸ್‌ನವರು ಪ್ರಧಾನಿ ಹುದ್ದೆಯಿಂದ ತೆಗೆದರು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕುಮಾರಸ್ವಾಮಿಯವರಿಗೆ ನಿಮ್ಮ ಅಪ್ಪನನ್ನು ತೆಗೆದ ಕಾಂಗ್ರೆಸ್ ನಂಬಿ ಯಾಕೆ ಹೋಗುತ್ತಿರಾ! ನೀವೆ 5 ವರ್ಷ ಸಿಎಂ ಆಗಿ ಅಂತ ೨೦೧೮ ರಲ್ಲಿ ಕುಮಾರಸ್ವಾಮಿಗೆ ತಿಳಿಸಿದರು’ ಎಂದು ಹೇಳಿದರು. ‘ಜೆಡಿಎಸ್‌ನಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಗುವ ನಾಯಕರಿಗೆ ನಮ್ಮ ಅಭ್ಯಂತರ ಇಲ್ಲ. ೨೦೧೮ ರಲ್ಲಿ ಇದೇ ರಿತಿ ಕಾಂಗ್ರೆಸ್ ಪಕ್ಷವು ಜೆಡಿಸ್ ಶಾಸಕರನ್ನು ಖರೀದಿ ಮಾಡಿರು, ಮುಂದಿನ ಚುನಾವಣೆಯಲ್ಲಿ ಅವರ ಪರಿಸ್ಥಿತಿ ಎನಾಯಿತು ಗೊತ್ತಿದೆ. ೧೩೬ ಸೀಟು ಇದ್ದರೂ ಕಾಂಗ್ರೆಸ್ ಅಲುಗಾಡುತ್ತಿದೆ. ಜೆಡಿಎಸ್‌ನಿಂದ ಹೊಗಿರುವ ಗೌರಿಶಂಕರ ಮಂಜುನಾಥ ಡಕೋಟ ಸ್ಟೆಪ್ನಿಗಳು. ಕಾಂಗ್ರೆಸ್‌ನಲ್ಲಿ ವ್ಯಾಪಾರ ಮಾಡಿಕೊಂಡು ನಮ್ಮ ಹತ್ತಿರ ಮತ್ತೆ ವಾಪಸ್ ಬರುತ್ತಾರೆ ಎಂದು ಅಣಕವಾಡಿದರು.
ಜೆಡಿಎಸ್ ಎಂದರೆ ನಾಯಕರಗಳನ್ನು ತಯಾರು ಮಾಡುವ ಕಾರ್ಖಾನೆ. ೨೦೧೮ ರಲ್ಲಿ ಕಾಂಗ್ರೆಸ್ ದೇವೇಗೌಡರ ಕುಮಾರಸ್ವಾಮಿ ಕಾಲಿಗೆ ಬಿಳಲು ಕಾಂಗ್ರೆಸ್ ನಾಯಕರು ಬಂದಿದ್ದರು. ಕಾಂಗ್ರೆಸ್ ಬೇಕಾದಾಗ ಅಲ್ಪಸಂಖ್ಯಾತರನ್ನು ತಬ್ಬಿಕೊಳ್ಳುತ್ತಾರೆ. ಮುಸ್ಲಿಂ ಸಮುದಾಯಕ್ಕೆ ೪ ಪರ್ಸೆಂಟ್ ಮೀಸಲಾತಿ ನೀಡಿದ್ದು ದೇವೇಗೌಡರು. ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಕೈಯಲ್ಲಿ ಕಣ್ಣಿರು ಹಾಕಿಸಿ ಹೊಡಿಸಿದರು ಎಂದು ಹೇಳಿದರು. ಕಾಂಗ್ರೆಸ್ ಎಂದರೇ ನಕಲಿ ಕಾಂಗ್ರೆಸ್. ಜಾತ್ಯತೀತ ಪದ ತೆಗೆಯುವರು ನಾವಲ್ಲ. ಕಳೆದ ಲೊಕಸಭೆ ಚುನಾವಣೆಯಲ್ಲಿ ತುಮಕೂರು, ಕೋಲಾರದಲ್ಲಿ ಬಿಜೆಪಿ ಜೊತೆ ಸೆರಿಸಿಕೊಂಡ ನಾಯಕರು ಆ ಬಗ್ಗೆ ತಿಳಿದುಕೊಳ್ಳಲಿ. ಕೋಲಾರದಲ್ಲಿ ದಲಿತ ನಾಯಕ ಮುನಿಯಪ್ಪನನ್ಜು ಸೋಲಿಸಿದವರು ಯಾರು? ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಗ್ಯಾರಂಟಿಗಳೆಲ್ಲಾ ಲೊಕಸಭಾ ಚುನಾವಣೆಯವರಗೆ ಮಾತ್ರ. ಕುಮಾರಸ್ವಾಮಿ ಮನೆಯಲ್ಲಿ ಯಾರೋ ಕರೆಂಟ್ ಎಳೆಯುವ ಹುಡುಗ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ ಕರೆಂಟ್ ಕಳ್ಳ ಎಂದರು. ಇದಕ್ಕೆ ಪೋಸ್ಟ್ ಹಾಕಿದರು. ರಾಜ್ಯದ ಹಣ ಹೊಡೆಯುವ ಕಾಂಗ್ರೆಸ್ ಪೋಸ್ಟ್ ಹಾಕಲಿ ಎಂದು ಸವಾಲು ಎಸೆದರು. ಸಿಎಂ ಪುತ್ರ ಯತೀಂದ್ರರ ವೀಡಿಯೋ ವೈರಲ್ ವಿಚಾರವಾಗಿ ಮಾತನಾಡಿ, ‘ಸಿದ್ದು ಪುತ್ರನ ಪರ ರೇವಣ್ಣ ಬ್ಯಾಟ್ ಬೀಸಿದಂತಿತ್ತು. ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಅಧಿಕಾರ ಇದ್ದಾಗ ಕೆಲಸ ಮಾಡಬೇಕು ಅಂತಾ ಹೇಳ್ತಾರೆ ಅದು ತಪ್ಪ! ಅವರೂ ಶಾಸಕರಾಗಿದ್ದಾಗ ಕೆಲಸ ಆಗಬೇಕು ಅಂತಾ ಹೇಳಿರಬಹುದು. ಸಿಎಂ ಕ್ಷೇತ್ರದ ಜವಾಬ್ದಾರಿ ತಗೊಂಡಿದ್ದಾರೆ. ಹಾಗಾಗಿ ಏನೋ ಮಾತಾಡಿರಬಹುದು. ಅದಕ್ಕೆಲ್ಲಾ ನಾನು ಸಣ್ಣದಾಗಿ ಮಾತಾಡೋಕೆ ಹೋಗಲ್ಲ. ನಾನೂ ಕೂಡ ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ಅವರ ಕ್ಷೇತ್ರ ನಾನು ನೋಡಿಕೊಳ್ತಾ ಇದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತಾಡಿರ್ತಾರೆ, ಅದಕ್ಕೆಲ್ಲಾ ನಾನು ಸಣ್ಣದಾಗಿ ಮಾತಾಡಲ್ಲ’ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಅಭ್ಯಂತರವಿಲ್ಲ: ರೇವಣ್ಣನವರಿಗೆ ಇಂಧನ ಖಾತೆ ಕೊಡಲು ನಿರಾಕರಣೆ ಮಾಡಿ ಡಿ.ಕೆ. ಶಿವಕುಮಾರಗೆ ನೀಡಿದರು. ನನಗೆ ನೀರಾವರಿ ಖಾತೆ ಬೇಡ ಎಂದು ಎಂ.ಬಿ. ಪಾಟೀಲ್‌ಗೆ ಬಿಟ್ಟುಕೊಟ್ಟೆ. ನನಗೆ ಇಂಧನ ಖಾತೆ ಕೂಡ ತಪ್ಪಿಸಿದ್ದು ಡಿ.ಕೆ. ಶಿವಕುಮಾರ್, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದನ್ನು ಕುಮಾರಸ್ವಾಮಿ ತಪ್ಪಿಸಿಲ್ಲ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವುದಾದರೆ ನಮಗೆ ಯಾವುದೇ ಅಭ್ಯಂತರ ಇಲ್ಲ ಆದರೇ ಮುಖ್ಯಮಂತ್ರಿಯಾಗಿ ಸಾರ್ವಜನಿಕರ ಕೆಲಸ ಮಾಡಲಿ ಎಂದು ಎಚ್.ಡಿ.ರೇವಣ್ಣ ಹೇಳಿದರು.
ಪ್ರಧಾನಿ ಮೋದಿಯಿಂದ ಪ್ರಚಾರಕ್ಕೆ ಐಎಎಸ್‌ಗಳ ಬಳಕೆ: ಸಚಿವ ಮಹದೇವಪ್ಪ
ಕರ್ನಾಟಕದಲ್ಲಿ ಮ್ಯಾಜಿಕ್‌ನಿಂದ ಕಾಂಗ್ರೆಸ್ ಅಧಿಕಾರ: ಪ್ರಾದೇಶಿಕ ಪಕ್ಷ ಮುಗಿಸುವುದೇ ಕಾಂಗ್ರೆಸ್ ಕೆಲಸ ಆಗಿದ್ದು, ಪ್ರಾದೇಶಿಕ ಪಕ್ಷಗಳಿಗೆ ಗೂಟ ಹೊಡೆಯಲು ಕಾಂಗ್ರೆಸ್ ೩೦ ರಿಂದ ೪೪ ಸೀಟು ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮ್ಯಾಜಿಕ್‌ನಿಂದ ಇಂದು ಅಧಿಕಾರ ಹಿಡಿದಿದೆ. ಇದು ಜಾಸ್ತಿ ದಿನ ಇರುವುದಿಲ್ಲ. ಕೆಲ ತಿಂಗಳಲ್ಲೆ ಈ ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ ಎಳ್ಳು ನೀರು ಬಿಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಗಂಗಾ ನದಿಯಲ್ಲಿ ಮುಳುಗಿಸುತ್ತಾರೆ. ಹಾಗೇ ಸಂಹಾರ ಮಾಡಲು ತಾಯಿ ಚಾಮುಂಡೇಶ್ವರಿ ಕಾಯುತ್ತಿದ್ದಾಳೆ. ಸಮಯ ಬಂದಾಗ ಸಂಹಾರ ಮಾಡುತ್ತಾಳೆ ಎಂದು ರೇವಣ್ಣ ಭವಿಷ್ಯ ನುಡಿದರು.