ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ರೀತಿ ಕಾಂಗ್ರೆಸ್‌ ಸರ್ಕಾರ: ಶ್ರೀರಾಮುಲು ಲೇವಡಿ

ಹಣ ಇಲ್ಲದ ಕಾರಣ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ, ಖಜಾನೆ ಖಾಲಿ, ಆರ್ಥಿಕ ದಿವಾಳಿಯಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರು ಜುಟ್ಟಿಗೆ ಮಲ್ಲಿಗೆ ಎಂಬಂತಾಗಿದೆ ಕಾಂಗ್ರೆಸ್‌ ಸರ್ಕಾರದ ಸ್ಥಿತಿ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮಲು ಲೇವಡಿ ಮಾಡಿದ್ದಾರೆ.

Ex Minister B Sriramulu Slams On Congress Govt At Kalaburagi gvd

ಕಲಬುರಗಿ (ನ.17): ಹಣ ಇಲ್ಲದ ಕಾರಣ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ, ಖಜಾನೆ ಖಾಲಿ, ಆರ್ಥಿಕ ದಿವಾಳಿಯಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರು ಜುಟ್ಟಿಗೆ ಮಲ್ಲಿಗೆ ಎಂಬಂತಾಗಿದೆ ಕಾಂಗ್ರೆಸ್‌ ಸರ್ಕಾರದ ಸ್ಥಿತಿ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮಲು ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸ ಮಾಡಿರುವ ಗುತ್ತಿಗೆದಾರರಿಗೆ ನೀಡಲೂ ಇವರ ಬಳಿ ಹಣ ಇಲ್ಲ, ಬಿಟ್ಟಿ ಭಾಗ್ಯವೂ ತಲುಪಿಸಲು ಆಗುತ್ತಿಲ್ಲ. ಖಜಾನೆ ಖಾಲಿಯಾಗಿದೆ. ವರ್ಗಾವಣೆ ದಂಧೆಯಲ್ಲಿ ಸರ್ಕಾರ ಸಂಪೂರ್ಣ ತೊಡಗಿಸಿಕೊಂಡಿದೆ ಎಂದರು.

ಯತೀಂದ್ರ ಸೂಪರ್ ಸಿಎಂ ರೀತಿ ಹಿಂಬಾಗಿಲಿನಿಂದ ಸರ್ಕಾರ ನಡೆಸುತ್ತಿದ್ದಾರೆ. ಇದು ಅಪ್ಪ ಮಕ್ಕಳ ಸರ್ಕಾರವಾ? ಇಲ್ಲಾ ಯತೀಂದ್ರನ ಸರ್ಕಾರವಾ? ಯತೀಂದ್ರ ಸೂಪರ್ ಸಿಎಂ ರೀತಿ ವರ್ತಿಸುತ್ತಿದ್ದಾರೆ. ಎಲ್ಲಾ ಆದೇಶಗಳನ್ನೂ ಮಗನೇ ನೀಡುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ರಾಮಯ್ಯ ಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು. ಸಿಎಸ್ಆರ್ ಫಂಡ್‌ಗೆ ಸಂಬಂಧಿಸಿದ ಚರ್ಚೆ ಇದು ಎಂದು ಡಿಸಿಎಂ ಡಿಕೆಶಿ ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ಇದ್ದರೆ ಕೊಡಲಿ ಎಂದರು.

Ayodhya ರಾಮಮಂದಿರದಲ್ಲಿ ಸಾಮಾಜಿಕ ಸೇವೆಯೇ ಹರಕೆ: ಪೇಜಾವರ ಶ್ರೀ

ಪ್ರಿಯಾಂಕ್‌ ಹೇಳಿಕೆಗೆ ತಿರುಗೇಟು: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಕುಂಟುಂಬ ರಾಜಕಾರಣ ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶ್ರೀರಾಮುಲು ತಿರುಗೇಟು ನೀಡುತ್ತ ಪ್ರಿಯಾಂಕ್‌ ಖರ್ಗೆ ತನ್ನಷ್ಟಕ್ಕೆ ತಾನೇ ಎರಡನೇ ಅಂಬೇಡ್ಕರ್ ಅಂದುಕೊಂಡಿದ್ದಾರೆ. ಇ‍ವರು ಕಲಬುರಗಿಯಲ್ಲಿ ಒಂದು ಮಾತಾಡ್ತಾರೆ, ಬೆಂಗಳೂರಿನಲ್ಲಿ ಮತ್ತೊಂದು ಮಾತಾಡ್ತಾರೆ ಎಂದರು. ಪ್ರಿಯಾಂಕ್‌ ಖರ್ಗೆ ಅವರದ್ದು ಕುಟುಂಬ ರಾಜಕಾರಣಾ ಅಲ್ವಾ? ಪ್ರಿಯಾಂಕ್‌ ಬೆಳೆದಿದ್ದೆ ಅವರ ತಂದೆ ಆಶ್ರಯದಲ್ಲಿ, ವಿಜಯೇಂದ್ರ ಅವರಿಗೆ ನನ್ನ ಸಂಪೂರ್ಣ ಬೆಂಬಲ ಇದೆ, ವಿಜಯೇಂದ್ರ ನೇತೃತ್ವದಲ್ಲಿ ಕಳೆದ ಬಾರಿಗಿಂತ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರಲ್ಲದೆ ಲೋಕಸಭೆ ಚುನಾವಣೆ ನಿಲ್ಲುವ ಬಗ್ಗೆ ತಾವಿನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

Latest Videos
Follow Us:
Download App:
  • android
  • ios