Asianet Suvarna News Asianet Suvarna News

ವಿದ್ಯಾರ್ಥಿಗಳು ಕಾಂಗ್ರೆಸ್ ಆಡಳಿತ ಪ್ರಶ್ನಿಸಬೇಕಾ?: ಘೋಷವಾಕ್ಯ ಬದಲಾವಣೆಗೆ ಈಶ್ವರಪ್ಪ ವ್ಯಂಗ್ಯ

ವಸತಿ ಶಾಲೆಗಳಲ್ಲಿನ ಘೋಷವಾಕ್ಯ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಲೇವಡಿ ಮಾಡಿರುವ ಮಾಜಿ ಸಚಿವ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಘೋಷ ವಾಕ್ಯ ಬದಲಾವಣೆ ಸರಿಯಾಗಿದೆ, ಇದನ್ನು ಸ್ವಾಗತಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.

Ex DCM KS Eshwarappa Slams On Congress Govt Over Residential School Slogan Change gvd
Author
First Published Feb 20, 2024, 2:30 AM IST

ಚಿತ್ರದುರ್ಗ (ಫೆ.20): ವಸತಿ ಶಾಲೆಗಳಲ್ಲಿನ ಘೋಷವಾಕ್ಯ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ಲೇವಡಿ ಮಾಡಿರುವ ಮಾಜಿ ಸಚಿವ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಘೋಷ ವಾಕ್ಯ ಬದಲಾವಣೆ ಸರಿಯಾಗಿದೆ, ಇದನ್ನು ಸ್ವಾಗತಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು ಏನನ್ನು ಪ್ರಶ್ನೆ ಮಾಡಬೇಕು?. ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎಂಬ ಘೋಷವಾಕ್ಯ ಬದಲಾವಣೆ ಮಾಡಿ, ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಸೂಚಿಸಲಾಗಿದೆ. 

ಆದರೆ, ವಿದ್ಯಾರ್ಥಿಗಳು ಏನನ್ನು ಪ್ರಶ್ನಿಸಬೇಕು?. ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಪ್ರಶ್ನಿಸಬೇಕಾ?. ವಸತಿ ಶಾಲೆಗಳಲ್ಲಿ ಲೂಟಿ ಹೊಡೆಯುವುದನ್ನು ಪ್ರಶ್ನಿಸಬೇಕಾ?. ಸರಿಯಾಗಿ ಊಟ ಕೊಡುತ್ತಿಲ್ಲ ಎಂದು ಪ್ರಶ್ನಿಸಬೇಕಾ?. ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ ಎಂಬುದನ್ನು ಪ್ರಶ್ನಿಸಬೇಕಾ?. ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಬೇಕಾ? ಎಂದು ಲೇವಡಿ ಮಾಡಿದರು.

ದೇಶ ಒಡೆಯುವ ಹೇಳಿಕೆ ನೀಡಿದವರ ವಿರುದ್ಧ ಕ್ರಮವಾಗಲಿ: ಪ್ರತಿಭಟನೆಗೆ ಸಂಬಂಧಿಸಿದಂತೆ 10 ಸಾವಿರ ರು. ದಂಡ ಹಾಕಿಸಿಕೊಂಡ ಮುಖ್ಯಮಂತ್ರಿ, ಜೈಲಿಗೆ ಹೋಗಿ ಬೇಲ್ ಮೇಲೆ ಹೊರಗಿರುವ ಉಪ ಮುಖ್ಯಮಂತ್ರಿ ಇರುವುದು ಕಾಂಗ್ರೆಸ್ಸಿನ ಪರಿಸ್ಥಿತಿಯಾಗಿದೆ ಎಂದು ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲವೇ ಇಲ್ಲ. ಜಿನ್ನಾ ಸಂಸ್ಕೃತಿಯಂತೆ ದೇಶ ಒಡೆಯುವ ಹೇಳಿಕೆ ನೀಡುವಂತಹ ಯಾರೇ ವ್ಯಕ್ತಿಯಾಗಿದ್ದರೂ, ಗುಂಡಿಕ್ಕಿ ಕೊಲ್ಲುವಂತಹ ಕಾನೂನು ಜಾರಿಗೆ ತರಬೇಕು ಎಂಬುದನ್ನು ಹೇಳಿದ್ದೆ. ಕಾಂಗ್ರೆಸ್ಸಿನವರು ದೇಶ ಒಡೆದಿದ್ದಾರೆ. 

ಯುಗಾದಿ ನಂತರ‌ ರಾಜ್ಯದಲ್ಲಿ ಧಾರ್ಮಿಕ ಮುಖಂಡನ ಸಾವಾಗಲಿದ್ದು, ಒಳ್ಳೆಯ ಮಳೆ-ಬೆಳೆಯಾಗಲಿದೆ: ಕೋಡಿಶ್ರೀ ಸ್ಫೋಟಕ ಭವಿಷ್ಯ!

ಈಗ ಉತ್ತರ ಭಾರತ ಮತ್ತು ದಕ್ಷಿಣ ಭಾರತವೆಂಬ ಹೇಳಿಕೆ ನೀಡುತ್ತಿದ್ದಾರೆ. ಅಂತಹ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಆಗಬೇಕೆಂದು ಹೇಳಿದ್ದೆನೇ ಹೊರತು, ನಾನು ಯಾರ ಹೆಸರನ್ನೂ ಹೇಳಿಲ್ಲ. ಈ ಹೇಳಿಕೆಗೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ನ್ಯಾಯಾಲಯ ತಡೆ ನೀಡಿದೆ ಎಂದು ತಿಳಿಸಿದರು. ಸೆಟ್ಲ್‌ಮೆಂಟ್ ಮಾಡುತ್ತೇವೆಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿದ್ದಾರೆ. ಈಗಾಗಲೇ ಜೈಲಿಗೆ ಹೋಗಿ ಬೇಲ್ ಮೇಲೆ ಡಿ.ಕೆ.ಶಿವಕುಮಾರ ಹೊರಗಿರುವುದು ಅರ್ಧ ಸೆಟ್ಲ್‌ಮೆಂಟ್‌ ಆಗಿದೆ. ಮತ್ತೆ ಜೈಲಿಗೆ ಹೋದ ನಂತರ ಪೂರ್ಣ ಸೆಟ್ಲ್‌ಮೆಂಟ್ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿದರು.

Follow Us:
Download App:
  • android
  • ios