ಭಯೋತ್ಪಾದಕರು, ಕೊಲೆಗಡುಕರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ: ಈಶ್ವರಪ್ಪ ಆರೋಪ
ಕರ್ನಾಟಕ ರಾಜ್ಯ ಭಯೋತ್ಪಾದಕರು, ಕೊಲೆಗಡುಕರು, ಗೂಂಡಾಗಳ ಕೇಂದ್ರ ಆಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಲೇ ಇವೆ.
ಶಿವಮೊಗ್ಗ (ಡಿ.13): ಕರ್ನಾಟಕ ರಾಜ್ಯ ಭಯೋತ್ಪಾದಕರು, ಕೊಲೆಗಡುಕರು, ಗೂಂಡಾಗಳ ಕೇಂದ್ರ ಆಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಲೇ ಇವೆ. ಶಾಲೆಗಳಿಗೆ, ರಾಜ ಭವನಕ್ಕೆ ಬಾಂಬ್ ಬೆದರಿಕೆ ಹಾಕಿದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಾಂತಪ್ರಿಯವಾಗಿದ್ದ ಕರ್ನಾಟಕ ಈಗ ಭಯೋತ್ಪಾದಕರು, ಕೊಲೆಗಡುಕರು, ಗೂಂಡಾಗಳ ರಾಜ್ಯವಾಗುತ್ತಿದೆ. ಅವರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ಎದುರುತ್ತಿದೆ: ರಾಜ್ಯದಲ್ಲಿ ಗಾಂಜಾ, ಡ್ರಗ್ಸ್, ಕೊಲೆ, ಸುಲಿಗೆ, ಭಯೋತ್ಪಾದಕ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇದರ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗೆ ಗಂಭೀರತೆ ಇಲ್ಲ. ವಿದೇಶಿ ಭಯೋತ್ಪಾದಕರನ್ನು ಕೇಂದ್ರ ಸರ್ಕಾರ ಮೆಟ್ಟಿ ನಿಂತಿದೆ. ಮುಸ್ಲಿಂ ಗೂಂಡಾಗಳಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಯ ಹುಟ್ಟಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಹೆದರುತ್ತಿದೆ. ಭಯೋತ್ಪಾದಕರಲ್ಲಿ ಹೆಚ್ಚು ಮುಸ್ಲಿಂಮರೇ ಇದ್ದಾರೆ. ಮುಸ್ಲಿಂ ಓಟ್ ಹೋಗುತ್ತೆ ಅಂತ ಮುಸ್ಲಿಂರನ್ನು ಓಲೈಸುತ್ತಾರೆ. ದೇಶದ್ರೋಹಿ ಜಮೀರ್ ಸಚಿವ ಸಂಪುಟದಲ್ಲಿ ಇದ್ದಾನೆ. ಮುಸ್ಲಿಂ ಧರ್ಮವನ್ನು ಒಗ್ಗೂಟಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ತೆಲಂಗಾಣದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಪಾದಿಸಿದರು.
ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡುವವರಿಗೆ ಸರ್ಕಾರದಿಂದ ಬಂಪರ್ ಬಹುಮಾನ: ಸಚಿವ ದಿನೇಶ್
ಭದ್ರಾವತಿ ಪ್ರಕರಣದಲ್ಲಿ ಶಾಸಕ ಪುತ್ರನ ಕುಮ್ಮಕ್ಕು: ಮೊನ್ನೆ ಭದ್ರಾವತಿಯಲ್ಲೂ ಗೂಂಡಾ ವರ್ತನೆ ನಡೆದಿದೆ. ಇದರಲ್ಲಿ ಶಾಸಕರ ಮಗನ ಕುಮ್ಮಕ್ಕಿದೆ ಎನ್ನುವುದು ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ರಾಜ್ಯವಾದರೆ, ಪೊಲೀಸ್ ರಾಜ್ಯ ಗೂಂಡಾ ರಾಜ್ಯವಾಗಿದೆ. ಕೊಲೆ, ಸುಲಿಗೆ, ದರೋಡೆ ಬಗ್ಗೆ ಮೌನವಾಗಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಇದ್ಯೋ, ಇಲ್ವೋ ಗೊತ್ತಿಲ್ಲ. ಭದ್ರಾವತಿ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭಿರವಾಗಿ ತೆಗೆದುಕೊಳ್ಳಬೇಕು ಎಂದರು.
ಖರ್ಗೆ ಬಾಕ್ಸ್ ನ್ಯೂಸ್ ನಾಯಕ: ಸ್ವಾತಂತ್ರ್ಯ ಹೋರಾಟಗಾರರಿಗೂ ಪ್ರಿಯಾಂಕ್ ಖರ್ಗೆಗೂ ಏನೂ ಸಂಬಂಧವಿಲ್ಲ. ಅವರಂಥ ಕೀಳುಮಟ್ಟದ ವ್ಯಕ್ತಿ ಬಗ್ಗೆ ನಾನು ಮಾತನಾಡಲ್ಲ. ತಾಕತ್ತಿದ್ದರೆ ವೀರ ಸಾವರ್ಕರ್ ಪೋಟೋ ಮುಟ್ಟಲಿ, ಅವತ್ತೇ ಈ ಸರ್ಕಾರ ಇರಲ್ಲ. ಸರ್ವಪಕ್ಷಗಳ ಒಪ್ಪಿಗೆ ಪಡೆದುಕೊಂಡೇ ಬಿಜೆಪಿ ಸರ್ಕಾರ ವಿಧಾನಸೌಧದಲ್ಲಿ ವೀರ ಸಾರ್ವಕರ್ ಪೋಟೋ ಹಾಕಿದೆ. ಅವಾಗ ಇವರೇನೂ ಬಾಯಿಗೆ ಬೀಗ ಹಾಕಿದ್ದರಾ? ಅವತ್ತೇ ಬೇಡ ಎಂದು ಬಾಯ್ಕಾಟ್ ಮಾಡಬೇಕಿತ್ತು. ಬಾಯಿಗೆ ಬಂದಂಗೆ ಮಾತನಾಡಿದರೆ ಬಾಕ್ಸ್‌ನಲ್ಲಿ ನ್ಯೂಸ್ ಆಗತ್ತೆ ಅಂತ ಪ್ರಿಯಾಂಕ್ ಖರ್ಗೆ ಮಾತನಾಡುತ್ತಾರೆ, ಅವರು ಬಾಕ್ಸ್ ನ್ಯೂಸ್ ನಾಯಕ ಎಂದು ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದರು.
ಖೈದಿಗೆ ಜೈಲರ್ ಕಿರುಕುಳ ಆರೋಪ: ನೋಟಿಸ್ ಜಾರಿ ಮಾಡಿದ ದಾವಣಗೆರೆ ಕೋರ್ಟ್!
ಯತ್ನಾಳ್ ಉತ್ತರ ಕುಮಾರ: ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಅವರಿಗೆ ಅಸಮಾಧಾನ ಇದ್ದರೆ ಅದನ್ನು ಎಲ್ಲಿ ವ್ಯಕ್ತಪಡಿಸಬೇಕೋ, ಅಲ್ಲಿ ಹೇಳಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಅಸಮಾಧಾನ ತೋರಿಸುವುದು ಸರಿಯಲ್ಲ ಎಂದು ಕೆ.ಎಸ್. ಈಶ್ವರಪ್ಪ ಚಾಟಿ ಬೀಸಿದರು. ಯತ್ನಾಳ್ ಹಿಂದುತ್ವವಾದಿ, ರಾಷ್ಟ್ರೀಯತಾವಾದಿ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಡ್ಡಾ, ನರೇಂದ್ರ ಮೋದಿ, ಅಮಿತ್ ಶಾ ಅವರಿಗಿಂತ ಯತ್ನಾಳ್ ದೊಡ್ಡವರಲ್ಲ. ಅವರಿಗೆ ಅಸಮಾಧಾನ ಇರುವುದು ನಿಜ. ಅದನ್ನು ಪಕ್ಷದ ಚೌಕಟ್ಟಿನಲ್ಲಿ ಕೇಳುವುದು ಬಿಟ್ಟು, ಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ. ಇದಕ್ಕಾಗಿ ಪಕ್ಷದ ಸಭೆಗೆ ಹೋಗಲ್ಲ ಎನ್ನುವುದು ಉತ್ತರಕುಮಾರನ ಪೌರುಷ ಆಗುತ್ತದೆ. ಅವರು ಹೋಗದೇ ಇರುವುದರಿಂದ ಯಾವುದೇ ನಷ್ಟ ಇಲ್ಲ. ಅವರನ್ನು ತಿದ್ದಬೇಕು. ಆ ಕೆಲಸವನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.