Asianet Suvarna News Asianet Suvarna News

ಭ್ರೂಣ ಲಿಂಗ ಪತ್ತೆ ಕುರಿತು ಮಾಹಿತಿ ನೀಡುವವರಿಗೆ ಸರ್ಕಾರದಿಂದ ಬಂಪರ್‌ ಬಹುಮಾನ: ಸಚಿವ ದಿನೇಶ್‌

ಮಂಡ್ಯ- ಮೈಸೂರು ಭಾಗದಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರಿಗೆ ಈಗಿರುವ 50 ಸಾವಿರ ರು. ಬಹುಮಾನದ ಮೊತ್ತವನ್ನು 1 ಲಕ್ಷ ರು.ಗಳಿಗೆ ಹೆಚ್ಚಿಸುವುದಾಗಿ ಹೇಳಿದೆ. 

reward of one lakh for information about the finder of female foeticide says dinesh gundu rao gvd
Author
First Published Dec 13, 2023, 2:24 PM IST

ವಿಧಾನ ಪರಿಷತ್ತು (ಡಿ.13): ಮಂಡ್ಯ- ಮೈಸೂರು ಭಾಗದಲ್ಲಿ ಭ್ರೂಣ ಲಿಂಗ ಪತ್ತೆ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರಿಗೆ ಈಗಿರುವ 50 ಸಾವಿರ ರು. ಬಹುಮಾನದ ಮೊತ್ತವನ್ನು 1 ಲಕ್ಷ ರು.ಗಳಿಗೆ ಹೆಚ್ಚಿಸುವುದಾಗಿ ಹೇಳಿದೆ. ಅಲ್ಲದೆ, ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ರಾಜ್ಯಮಟ್ಟದಲ್ಲಿ ವಿಶೇಷ ಕಾರ್ಯಪಡೆ ರಚಿಸುವುದು ಹಾಗೂ ತಮಿಳುನಾಡು ಮಾದರಿಯಲ್ಲಿ ಆರೋಗ್ಯ ಇಲಾಖೆ ಮತ್ತು ಪೊಲೀಸ್‌ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲು ಆಲೋಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಮೇಲ್ಮನೆಯಲ್ಲಿ ಮಂಗಳವಾರ ಜೆಡಿಎಸ್‌ನ ತಿಪ್ಪೇಸ್ವಾಮಿ, ಶರವಣ, ಬಿಜೆಪಿಯ ಭಾರತಿ ಶೆಟ್ಟಿ, ಮಂಜೇಗೌಡ, ಕಾಂಗ್ರೆಸ್‌ನ ಉಮಾಶ್ರೀ, ಬಿ.ಎಂ.ಫಾರೂಕ್‌ ಮತ್ತಿತರ ಸದಸ್ಯರು ಪಕ್ಷಾತೀತವಾಗಿ ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ಗಮನ ಸಳೆದರು. ಇದಕ್ಕೆ ಉತ್ತರ ನೀಡಿದ ಸಚಿವರು, ಭ್ಯೂಣ ಹತ್ಯೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಣಗಣಿಸಿದೆ. ಕೃತ್ಯವನ್ನು ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‌ 307ರ ಅಡಿಯಲ್ಲಿ ತರಲು ಪರಿಶೀಲಿಸುತ್ತೇವೆ. ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯ ಮಾಹಿತಿ ನೀಡವವರಿಗೆ ನೀಡುವ ದಂಡವನ್ನು 1 ಲಕ್ಷ ರು.ಗೆ ಹೆಚ್ಚಿಸಲಾಗುವುದು. 

ಖೈದಿಗೆ ಜೈಲರ್ ಕಿರುಕುಳ ಆರೋಪ: ನೋಟಿಸ್ ಜಾರಿ ಮಾಡಿದ ದಾವಣಗೆರೆ ಕೋರ್ಟ್!

ಕಳೆದ ನಾಲ್ಕು ವರ್ಷಗಳಿಂದ ಬಂದ್‌ ಮಾಡಲಾಗಿರುವ 104 ಸಹಾಯವಾಣಿಯನ್ನು ಜನವರಿಯಲ್ಲಿ ಪುನರ್ ಆರಂಭಿಸಿ ತಾತ್ಕಾಲಿಕ ಸಂಖ್ಯೆಯನ್ನು ನೀಡಿ ಈ ಕುರಿತು ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಲಾಗುವುದು. ಆ ನಂತರ 104 ಸಹಾಯವಾಣಿಗೆ ಸೇರ್ಪಡೆ ಮಾಡಲಾಗುವುದು. ಭ್ರೂಣ ಲಿಂಗ ಪತ್ತೆ ಮಾಡುವವರು ಮತ್ತು ಪತ್ತೆ ಮಾಡಿಸಿಕೊಳ್ಳುವ ಇಬ್ಬರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾನೂನಿಗೆ ಇನ್ನಷ್ಟು ತಿದ್ದುಪಡಿ ತರುವ ಚಿಂತನೆ ನಡೆಸಲಾಗಿದೆ ಎಂದರು.

ಕಾರ್ಯಪಡೆ ರಚನೆ: ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿ ಭ್ರೂಣ ಹತ್ಯೆ ಪ್ರಕರಣಗಳು ಮರುಕಳಿಸದಂತೆ ತಡೆಯಲು ರಾಜ್ಯಮಟ್ಟದ ಕಾರ್ಯಪಡೆ ರಚಿಸುವುದು. ಈ ಕಾರ್ಯಪಡೆಯು ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಸವ ಪೂರ್ವ ಲಿಂಗ ನಿರ್ಧರಣೆ ತಡೆ ಘಟಕ (ಪಿಸಿಪಿಎಂಡಿಟಿ) ಸೇರಿದಂತೆ ಸಂಬಂಧಿಸಿದ ವಿಭಾಗ, ಘಟಕಗಳು, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಭ್ರೂಣ ಹತ್ಯೆ ತಡೆವ ನಿಟ್ಟಿನಲ್ಲಿ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸುವುದು. ಸರಿಯಾಗಿ ಕಾರ್ಯನಿರ್ವಹಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ನೀಡಲಾಗುವುದು ಎಂದು ತಿಳಿಸಿದರು. ಅದೇ ರೀತಿ ಪಿಸಿಪಿಎಂಟಿಸಿ ಘಟಕವನ್ನು ತಾಲ್ಲೂಕು ಮಟ್ಟದಲ್ಲೂ ರಚಿಸಿ ಡಿವೈಎಸ್‌ಪಿ, ಎಸಿಪಿ ಮಟ್ಟದ ಅಧಿಕಾರಿಗಳನ್ನು ಕೂಡ ಈ ಘಟಕಕ್ಕೆ ನೇಮಿಸುವ ಕೆಲಸಮಾಡಲಾಗುವುದು. 

BJP-JDS ದೋಸ್ತಿಯಲ್ಲಿ ಟಿಕೆಟ್ ಯಾರಿಗೆ?: ಸುಮಲತಾಗೆ ಮತ್ತೊಮ್ಮೆ ಸಿಗುವುದೇ ಮಂಡ್ಯ ಲೋಕಸಭಾ ಟಿಕೆಟ್

ತನ್ಮೂಲಕ ಪೊಲೀಸ್‌ ಮತ್ತು ಆರೋಗ್ಯ ಇಲಾಖೆ ಎರಡೂ ಸೇರಿ ಜಂಟಿ ಕಾರ್ಯಾಚರಣೆ ನಡೆಲು ಆಲೋಚಿಸಲಾಗಿದೆ ಎಂದರು. ರಾಜ್ಯದ ಮಂಡ್ಯ, ಮೈಸೂರು ಭಾಗಗಳಲ್ಲಿ ಬೆಳಕಿಗೆ ಬಂದಿರುವ ಭ್ರೂಣ ಹತ್ಯೆ ಪ್ರಕರಣಗಳು ಎಲ್ಲರಲ್ಲೂ ಆತಂಕ ಮೂಡಿಸಿದೆ. ಪ್ರಕರಣವನ್ನುಸರ್ಕಾರ ಸಿಐಡಿಗೆ ವಹಿಸಿದೆ. ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪ್ರಕರಣ ಹೊರಬಂದ ಬಳಿಕ ಹಿಂದಿನ 270 ದಿನದಲ್ಲಿ 700 ಭ್ರೂಣ ಹತ್ಯೆ ಮಾಡಿರುವ ಮಾಹಿತಿ ಸಿಕ್ಕಿದೆ. ಹಳೆಯ ಮಾಹಿತಿಯನ್ನು ಡಿಲೀಟ್‌ ಮಾಡಿದ್ದಾರೆ. ಇಂತಹ ಪ್ರಕರಣಗಳಿಂದ ರಾಜ್ಯದಲ್ಲಿ ಲಿಂಗಾನುಪಾತ ಕಡಿಮೆಯಾಗಿದೆ. ಹೆಣ್ಣು ಮಕ್ಕಳ ಬಗೆಗಿನ ತಾತ್ಕಾರ, ಗಂಡು ಮಕ್ಕಳಾದರೇ ವಂಶ ಬೆಳೆಯುತ್ತದೆ ಎಂಬ ಭಾವನೆ ಇದಕ್ಕೆ ಕಾರಣ ಎಂದು ಸಚಿವರು ಹೇಳಿದರು.

Follow Us:
Download App:
  • android
  • ios