ಎಚ್‌ಡಿಕೆ, ಮೋದಿ ಹಾಗೂ ಬಿಜೆಪಿಯವರು ಬರೀ ಹುಲ್ಲು ಮೇಯುತ್ತಾರಾ: ವೀರಪ್ಪ ಮೊಯ್ಲಿ
ಕುಮಾರಸ್ವಾಮಿ, ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಬರೀ ಹುಲ್ಲು ಮೇಯುತ್ತಾರಾ, ಅವರು ಊಟ ಮಾಡುವುದಿಲ್ಲವೇ, ಬರೀ ಹುಲ್ಲನ್ನೇ ಮೇಯುತ್ತಾರೆಯೇ. ಚುನಾವಣಾ ಪೂರ್ವ ಆಶ್ವಾಸನೆ ಕೊಟ್ಟಂತೆ ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಮಾಜಿ ಸಂಸದ ವೀರಪ್ಪ ಮೋಯ್ಲಿ ಹೇಳಿದರು.
ಚಿಕ್ಕಬಳ್ಳಾಪುರ (ಅ.17): ಕುಮಾರಸ್ವಾಮಿ, ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಬರೀ ಹುಲ್ಲು ಮೇಯುತ್ತಾರಾ, ಅವರು ಊಟ ಮಾಡುವುದಿಲ್ಲವೇ, ಬರೀ ಹುಲ್ಲನ್ನೇ ಮೇಯುತ್ತಾರೆಯೇ. ಚುನಾವಣಾ ಪೂರ್ವ ಆಶ್ವಾಸನೆ ಕೊಟ್ಟಂತೆ ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದು ಮಾಜಿ ಸಂಸದ ವೀರಪ್ಪ ಮೋಯ್ಲಿ ಹೇಳಿದರು. ನಗರದ ಉತ್ತರ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರು ಕೇಳಿದ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಹಣದ ಲೂಟಿ ಬಗ್ಗೆ ಮೈಸೂರಿನ ಸಿದ್ದಪುರುಷರಾದ ರಾಜ್ಯದ ಸಿ.ಎಂ. ಸತ್ಯ ಹೊರಗಿಡಲಿ ಎಂಬ ಹೇಳಿಕೆಗೆ ಪ್ರತಿ ಕ್ರಿಯಿಸಿದ ಅವರು, ಪಾಪ ಕುಮಾರಸ್ವಾಮಿ ಪರಿಸ್ಥಿತಿ ಈಗ ಚಿಂತಾಜನಕವಾಗಿದೆ ಎಂದರು.
ಎಚ್ಡಿಕೆ ಕನಸು ನನಸಾಗಲಿಲ್ಲ: ಕಳೆದ ವಿಧನ ಸಭಾ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ, ಸಿಂಗಪೂರಕ್ಕೆ ಹಾರಿ ಚುನಾವಣೆ ಲೆಕ್ಕಾಚಾರ ಹಾಕಿ ಕೊಂಡು ಬಿಜೆಪಿಯೊಂದಿಗೆ ಸೇರಿ ಮುಖ್ಯಮಂತ್ರಿ ಆಗಬೇಕು ತುಂಬಾ ಕನಸು ಕಂಡಿದ್ದರು. ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಅವರು ಸೋಲಿನಿಂದ ತುಂಬಾ ಹತಾಶರಾಗಿ, ನಮ್ಮ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ ಎಂದರು. ಬೆಂಗಳೂರಿನಲ್ಲಿ ಐಟಿ ರೈಡ್ ಕುರಿತು ಬಜೆಪಿಯ ಸಿಟಿ ರವಿ ಹೇಳಿಕೆಗೆ ಪ್ರತಿ ಕ್ರಿಯಿಸಿ ಅವರು, ಸೋಲಿನಿಂದ ಹತಾಶರಾಗಿದ್ದಾರೆ. ಅದಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಹೀಗೆ ಇಲ್ಲ ಸಲ್ಲದ್ದನ್ನು ಮಾತನಾಡಿ ಬಾಯಿ ಚಪಲ ತೀರಿಸಿಕೊಳ್ಳುತ್ತಿದ್ದಾರೆ. ಯಾರ ಮೇಲೆ ರೈಡಾಗಿ ಹಣ ಸಿಕ್ಕಿದೆಯೋ ಅವರು ಕಾಂಗ್ರೆಸಿಗರೇ ಅಲ್ಲಾ. ಅವರಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ಜನರು ನನ್ನನ್ನು ಮನೆಮಗಳಂತೆ ಪ್ರೀತಿಯಿಂದ ಕಾಣುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಇನ್ಮುಂದೆ ಮೋದಿ ಗಿಮಿಕ್ ನಡೆಯೋಲ್ಲ: ವಿಧಾನಸಭಾ ಚುನಾವಣೆ ಸಮಯದಲ್ಲಿ 20 ದಿನ ಪ್ರಧಾನಿ ನರೇಂದ್ರ ಮೋದಿ ಬಂದು ಪ್ರಚಾರದಲ್ಲಿ ಡಬಲ್ ಇಂಜನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಆದರೆ ಸಿಂಗಲ್ ಇಂಜನ್‌ನ ಕೇಂದ್ರ ಸರ್ಕಾರ ಮಾತ್ರ ಉಳಿದಿದೆ. ಅದು 2024ರ ಚುಣಾವಣೆಯಲ್ಲಿ ಮಕಾಡೆ ಮಲಗುತ್ತದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಗಿಮಿಕ್ ಮಾಡಿ ಅಧಿಕಾರಕ್ಕೆ ಬಂದ ಮೋದಿಯವರು, ಈ ಬಾರಿ ಅವರ ಗಿಮಿಕ್‌ಗೆ ದೇಶದ ಜನತೆ ಮರಳಾಗುವುದಿಲ್ಲಾ ಎಂದರು.
ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇವರೆಲ್ಲಾ ಚಿಗುರುತ್ತಾರೆ: ಭಗವಾನ್ ವಿರುದ್ಧ ಸುಧಾಕರ್ ಆಕ್ರೋಶ
ಸುಧಾಕರ್ ಜನರಿಗೂ ಟೋಪಿ ಹಾಕಿದರು: ಮಾಜಿ ಸಚಿವ ಸುಧಾಕರ್ ಹೇಳಿಕೆಗೆ ನಾನೇನು ಸ್ಪಷ್ಟನೆ ಕೊಡುವ ಅವಶ್ಯಕತೆ ಇಲ್ಲ. ಅವರು ಮೊದಲು ನನ್ನನ್ನು ನಂಬಿ ಚುನಾವಣೆಗೆ ಎಂಟ್ರಿ ಕೊಟ್ಟಿದ್ದು, ಸುಧಾಕರ್ ಅಧಿಕಾರಕ್ಕೆ ಬಂದ ನಂತರ ನಮಗೂ ಟೋಪಿ ಹಾಕಿ ಜನರಿಗೂ ಟೋಪಿ ಹಾಕಿದ್ದಾರೆ. ಆದುದರಿಂದ ಸುಧಾಕರ್ ಹೇಳಿಕೆಗೆ ನಾನೇನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅವರು ಟೀಕಿಸಿದರೂ ನಾನು ಸಹಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್, ಎಂ. ವಿ. ಕೃಷ್ಣಪ್ಪ,ನಂದಿ.ಎಂ.ಆಂಜಿನಪ್ಪ, ಹನುಮಂತಪ್ಪ, ಮಮತಾ ಮೂರ್ತಿ, ನಾಯನಹಳ್ಳಿ ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಷಾಹೀದ್,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುದಾಸಿರ್ ದಾವೂದ್, ಷಾಹೀದ್, ಮತ್ತಿತರರು ಇದ್ದರು.