ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಇವರೆಲ್ಲಾ ಚಿಗುರುತ್ತಾರೆ: ಭಗವಾನ್ ವಿರುದ್ಧ ಸುಧಾಕರ್ ಆಕ್ರೋಶ
ಒಕ್ಕಲಿಗ ಸಮುದಾಯದ ಬಗ್ಗೆ ಪ್ರೊ.ಭಗವಾನ್ ಹೇಳಿಕೆಗೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಇಂಥವರು ಚಿಗುರಿಕೊಳ್ಳುವುದು ಯಾಕೆ ಎಂಬುದನ್ನು ಕನ್ನಡಿಗರು ಯೋಚನೆ ಮಾಡಬೇಕು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ (ಅ.16): ಒಕ್ಕಲಿಗ ಸಮುದಾಯದ ಬಗ್ಗೆ ಪ್ರೊ.ಭಗವಾನ್ ಹೇಳಿಕೆಗೆ ಮಾಜಿ ಸಚಿವ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಇಂಥವರು ಚಿಗುರಿಕೊಳ್ಳುವುದು ಯಾಕೆ ಎಂಬುದನ್ನು ಕನ್ನಡಿಗರು ಯೋಚನೆ ಮಾಡಬೇಕು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಭಗವಾನ್ ಹೇಳಿಕೆಗೆ ಖಂಡನೆ: ಒಕ್ಕಲಿಗ ಒಕ್ಕಿದರೆ ನಕ್ಕು ನಲಿಯುವುದು ಜಗವೆಲ್ಲ, ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ಗಾದೆ ಮಾತು ಸತ್ಯವಾದದ್ದು. ಒಕ್ಕಲಿಗ ಸಮಾಜ ಎಂದರೆ ಅದು ನಾಡಿಗೆ ಅನ್ನ ನೀಡುವ ನೇಗಿಲ ಯೋಗಿಗಳ ಸಮುದಾಯ. ಈ ನಾಡಿನ ಮಣ್ಣಿನ ಜೊತೆ ಕರುಳಬಳ್ಳಿಯ ಸಂಬಂಧ ಹೊಂದಿರುವ ಮಣ್ಣಿನ ಮಕ್ಕಳ ಸಮುದಾಯ. ಪ್ರೊ.ಭಗವಾನ್ ಅವರು ಒಕ್ಕಲಿಗ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಗಳು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ.
4 ಸಾವಿರಕ್ಕೂ ಅಧಿಕ ಜನರ ಜೀವ ಕಾಪಾಡಿದ ಭೂದೇವಮ್ಮ: ಜೀವರಕ್ಷಕಿಗೆ ಸೀಗಬೇಕಿದೆ ರಾಜ್ಯೋತ್ಸವದ ಗರಿ?
ಶ್ರೀರಾಮನನ್ನೇ ಬಿಡದ ಪ್ರೊ.ಭಗವಾನ್ ರಂತಹವರಿಂದ ಹೆಚ್ಚೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಂತಹವರಿಂದ ನಮ್ಮ ಒಕ್ಕಲಿಗ ಸಮುದಾಯಕ್ಕೆ ಸರ್ಟಿಫಿಕೇಟ್ ಸಹ ಬೇಕಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಇಂಥವರು ಚಿಗುರಿಕೊಳ್ಳುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೂ ಇಂತಹ ದೇಶ ವಿರೋಧಿ, ಧರ್ಮ ವಿರೋಧಿ, ಕನ್ನಡ ವಿರೋಧಿ ಬುದ್ಧಿ ಜೀವಿಗಳಿಗೂ ಇರುವ ಅವಿನಾಭಾವ ಸಂಬಂಧ ಆದರೂ ಏನು. ಇದು ಕನ್ನಡಿಗರು ಅರಿತುಕೊಳ್ಳಬೇಕು ಎಂದು ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ರಾಜ್ಯ ಹಿತ ಬಲಿ ಕೊಟ್ಟ ಸರ್ಕಾರ: ನಾಡಿನ ಜಲ, ಜನರ ರಕ್ಷಣೆ ಮಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆ ಕೆಲಸ ಮಾಡದೆ ಬೇಜವ್ದಾರಿ ನಡೆಯಿಂದ ಇಡೀ ರಾಜ್ಯ ತತ್ತರಿಸಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಟೀಕಿಸಿದರು. ವಿಶ್ವಕರ್ಮಮೂರ್ತಿ ಉತ್ಸವ ಸಮಿತಿ ವತಿಯಿಂದ ನಗರದಲ್ಲಿ ಶ್ರೀ ವಿರಾಟ್ ವಿಶ್ವಕರ್ಮ ಪರ ಬ್ರಹ್ಮ ಸ್ವರ್ಣ ಖಚಿತ ನೂತನ ಪಂಚಲೋಹದ ಶಿಲಾ ಮೂರ್ತಿಯ ಮೆರವಣಿಗೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತರುವುದು ವಿಷಾದನೀಯ ಎಂದರು.
ಕರ್ನಾಟಕ ಬಂದ್‌ಗೆ ಬಿಜೆಪಿ ಬೆಂಬಲ: ತಮಿಳುನಾಡಿನ ಡಿ.ಎಂ.ಕೆ ಸರ್ಕಾರವನ್ನು ಓಲೈಸಿಕೊಳ್ಳಲು ಅಲ್ಲಿನ ನಾಯಕರನ್ನುತೃಪ್ತಿ ಪಡಿಸಲು ಕಾಂಗ್ರೆಸ್ ಸರ್ಕಾರ ರಾಜ್ಯದ ಹಿತವನ್ನು ಬಲಿನೀಡಿದೆ. ಕಾವೇರಿ ಉಳಿಸಿದರೆ ಮಾತ್ರ ರಾಜ್ಯದ ರೈತರ ಹಿತಾಸಕ್ತಿ ಕಾಪಾಡಲು ಸಾಧ್ಯ. ಆದ್ದರಿಂದ ರಾಜ್ಯದ ಆರೂವರೆ ಕೋಟಿ ಜನರು ಹೋರಾಟಕ್ಕೆ ಇಳಿದಿದ್ದು ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ನನ್ನ ವೈಯಕ್ತಿಕ ಮತ್ತು ಬಿಜೆಪಿ ಸಂಪೂರ್ಣ ಬೆಂಬಲ ಸಿಗಲಿದೆ ಎಂದರು. ಜಿಲ್ಲೆಯಲ್ಲಿ ಬೆಳೆಯುತ್ತಿರುವ ಹೂವು ಮತ್ತು ತರಕಾರಿಗೆಲು ಅತಿ ವೃಷ್ಟಿಯ ಪರಿಣಾವಾಗಿ ತಿಪ್ಪೆಗೆ ಎಸೆಯುತ್ತಿದ್ದಾರೆ. ಈ ಬಗ್ಗೆ ಈಗಿನ ಸರ್ಕಾರಕ್ಕೆ ಕಾಳಜಿ ಇಲ್ಲ. ಈ ಹಿಂದೆ ನಮ್ಮ ಸರ್ಕಾರವು 10 ಎಕರೆ ವಿಸ್ತೀರ್ಣದಲ್ಲಿ ನೂತನ ಹೂವು ಮಾರುಕಟ್ಟೆಗೆ ಸ್ಥಳವನ್ನು ಗುರ್ತಿಸುವುದರ ಜೊತೆಗೆ 100 ಕೋಟಿ ಹಣವನ್ನು ಸಹ ಮೀಸಲು ಇಡಲಾಗಿತ್ತು. ಆದರೆ ಈಗಿನ ಸರ್ಕಾರ ಮಾರುಕಟ್ಟೆ ಸ್ಥಳವನ್ನು ಬದಲಾಯಿಸುತ್ತಿದೆ.
ಜನಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಲು ಬಿಡಲ್ಲ: ಎಚ್.ಡಿ.ಕುಮಾರಸ್ವಾಮಿ
ರೈತರ ಕಷ್ಟ ಕೇಳುವವರೇ ಇಲ್ಲ: ತರಕಾರಿ ಮತ್ತು ಆಲೂಗಡ್ಡ ಸಂಸ್ಕರಣೆ ಮತ್ತು ಶೇಖರಣೆ ಮಾಡಲು ಆರಂಭಿಸಿದ ಶೀತಲ ಗೃಹಗಳ ಕಟ್ಟಡ ಕಾಮಾಗಿ ಮುಕ್ತಾಯದ ಹಂತ ತಲುಪಿವೆ. ಅದರ ಉಗ್ಧಾಟನೆಯನ್ನಾದರೂ ಮಾಡಬಹುದಿತ್ತು. ಶಿಡ್ಲಘಟ್ಟದಲ್ಲಿ ರೇಷ್ಮೇ ಮಾರುಕಟ್ಟೆಯನ್ನು ಹೈಟೆಕ್ ಮಾಡುವ ಉದ್ದೇಶದಿಂದ ಹಣ ಮೀಸಲಿಟ್ಟದ್ದೆವು. ಅದೂ ಜಾರಿಯಾಗಿಲ್ಲ. ಎಚ್.ಎನ್. ವ್ಯಾಲಿ ನೀರನ್ನು 3ನೇ ಬಾರಿ ಶುದ್ದೀಕರಣ ಮಾಡಿ ಕುಡಿಯವ ನೀರಿನ ಅಭಾವ ತೀರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿತ್ತು. ಈ ಸರ್ಕಾರ ಅದರ ಪ್ರಸ್ತಾವನೆಯನ್ನೇ ಕೈಬಿಟ್ಟಿದೆ ಎಂದರು.