Asianet Suvarna News Asianet Suvarna News

ಚಂದ್ರಯಾನ ಗುಂಗು ಮುಗಿದ ಮೇಲಷ್ಟೆ ರಾಜಕೀಯ ಮಾತು: ಎಚ್‌.ಡಿ.ಕುಮಾರಸ್ವಾಮಿ

ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆ ಆಗಿದೆ. ದೇಶದೆಲ್ಲೆಡೆ ಈ ಕುರಿತು ಚರ್ಚೆಯಾಗುತ್ತಿದೆ. ಹಾಗಾಗಿ ಇನ್ನೊಂದು ವಾರ ನಾನು ಯಾವ ರಾಜಕಾರಣದ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. 

Ex CM HD Kumaraswamy Talks Over Chandrayaan 3 gvd
Author
First Published Aug 27, 2023, 11:15 AM IST | Last Updated Aug 27, 2023, 11:15 AM IST

ಹಾಸನ (ಆ.27): ಚಂದ್ರಯಾನ-3 ಯಶಸ್ವಿಯಾಗಿ ಉಡಾವಣೆ ಆಗಿದೆ. ದೇಶದೆಲ್ಲೆಡೆ ಈ ಕುರಿತು ಚರ್ಚೆಯಾಗುತ್ತಿದೆ. ಹಾಗಾಗಿ ಇನ್ನೊಂದು ವಾರ ನಾನು ಯಾವ ರಾಜಕಾರಣದ ಬಗ್ಗೆಯೂ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಪ್ರಸ್ತುತ ದೇಶ-ವಿದೇಶಗಳಲ್ಲೂ ಚಂದ್ರಯಾನದ ದೊಡ್ಡಮಟ್ಟದ ಚರ್ಚೆಗಳು ನಡೆಯುತ್ತಿವೆ. ಎಲ್ಲರ ಗಮನವೂ ಅತ್ತ ಇರುವಾಗ ರಾಜ್ಯ ರಾಜಕಾರಣ ಬಗ್ಗೆ ಸದ್ಯ ಚರ್ಚೆ ಮಾಡಲಾರೆ ಎಂದರು. 

ಬಹಳ ಮಂದಿ ನನಗೆ ಸರ್ಕಾರ ತಪ್ಪು ಮಾಡಲಿ ಬಿಡಿ, ಕಠಿಣವಾಗಿ ಮಾತನಾಡಬೇಡಿ ಎನ್ನುತ್ತಾರೆ. ಹಾಗಂತ ಸುಮ್ಮನಿದ್ದರೆ ಹೇಳೋರು ಕೇಳೋರು ಯಾರೂ ಇಲ್ಲದ ಪರಿಸ್ಥಿತಿಗೆ ಸರ್ಕಾರ ಹಾಗೂ ಮಂತ್ರಿಗಳು ಬಂದು ಬಿಡ್ತಾರೆ ಎಂದರು. ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಅನೇಕರಿಗೆ ಟೋಪಿ ಹಾಕಿದೆ. ರಾಜ್ಯದಲ್ಲಿ ಈಗಾಗಲೇ ಲೋಡ್‌ ಶೆಡ್ಡಿಂಗ್‌ ಆರಂಭವಾಗಿದೆ. ಮಂತ್ರಿಗಳು ಮಾತ್ರ ಲೋಡ್‌ ಶೆಡ್ಡಿಂಗ್‌ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಸರ್ಕಾರ ತನ್ನ ‘ಗ್ಯಾರಂಟಿ’ ಬಗ್ಗೆ ವಿಜೃಂಭಿಸದೇ ಮೊದಲು ರೈತರ ಬದುಕು ಏನಾಗಿದೆ ಎಂಬುದರತ್ತ ಕಣ್ಣು ತೆರೆದು ನೋಡಬೇಕಿದೆ ಎಂದರು.

ಜನರ ಮಧ್ಯೆ ಇರುವುದು ಕಾಂಗ್ರೆಸ್ಸಿಗೆ ಅಪರಾಧ ಅನಿಸುತ್ತೆ: ಸಿ.ಟಿ.ರವಿ

ಎಚ್‌ಡಿಕೆ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ ಅಶ್ಲೀಲ ಚಿತ್ರ: ಕಿಡಿಗೇಡಿಗಳು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ ಅಶ್ಲೀಲ ಚಿತ್ರ ಪೋಸ್ಟ್‌ ಮಾಡಿದ್ದಾರೆ. ಖಾತೆ ಹ್ಯಾಕ್‌ ಆದ ಬೆನ್ನಲ್ಲೇ ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣ ನಿರ್ವಹಿಸುವ ತಂಡ ತಕ್ಷಣ ಎಚ್ಚೆತ್ತು ಆ ಅಶ್ಲೀಲ ಪೋಸ್ಟ್‌ ಡಿಲೀಟ್‌ ಮಾಡಿದೆ. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ದುಷ್ಕರ್ಮಿಗಳು ರಾಜಕೀಯ ನಾಯಕರು, ಸಿನಿಮಾತಾರೆಯರು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಹ್ಯಾಕ್‌ ಮಾಡಿ ಅಸಂಬದ್ಧ ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ಹಲವರು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಸರ್ಕಾರ 5 ವರ್ಷ ಇರುವುದಿಲ್ಲ: ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಜೆಡಿಎಸ್‌ ಚುರುಕಾಗಿದ್ದು, ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷೇತ್ರದ ವ್ಯಾಪ್ತಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು. ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆ ಹೋಬಳಿಯಲ್ಲಿ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಸೇರಿದಂತೆ ನಡೆದ ಜೆಡಿಎಸ್‌ ಕಾರ್ಯಕರ್ತರ ಜತೆ ಕುಮಾರಸ್ವಾಮಿ ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿಯೇ ಕಿತ್ತಾಟ ಶುರುವಾಗಿದ್ದು, ಈ ಸರ್ಕಾರ ಐದು ವರ್ಷ ಇರುವುದಿಲ್ಲ. ಕಾರ್ಯಕರ್ತರು ಭಯಪಡಬೇಕಾದ ಅಗತ್ಯವಿಲ್ಲ. 

ನಾನು ಇಂಧನ ಸಚಿವನಾಗಿದ್ದಾಗ ಸೋಲಾರ್‌ ಪಾರ್ಕ್ ಮಾಡಿ ವಿಶ್ವದ ಗಮನ ಸೆಳೆದಿದ್ದೆ: ಡಿಕೆಶಿ

ಜೆಡಿಎಸ್‌ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ ಎಂದು ಹೇಳಿದರು. ಯಶವಂತಪುರ ವಿಧಾನಸಭೆ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಹಣ ಏನಾಯಿತು? ಅದನ್ನು ರೈಲಿಗೆ ತೆಗೆದುಕೊಂಡು ಹೋದರಾ? ರಸ್ತೆ ಮಾಡದೆಯೇ ಬಿಲ್‌ ಮಾಡಿಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿ ನೋಡಿದರೆ ಈಗ ತನಿಖೆ ಮಾಡುತ್ತಿದ್ದಾರೆ. ಕಳ್ಳ ಬಿಲ್‌ ಮಾಡಿಕೊಂಡಿರುವವರನ್ನು ಕರೆದುಕೊಂಡು ಹೋಗಿ ಏನು ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಕಳೆದ ಬಾರಿ ಸೋಲು ಅನುಭವಿಸಿರುವ ಜವರಾಯಿಗೌಡ ಅವರನ್ನೇ ಮುಂದಿನ ಚುನಾವಣೆಗೂ ಕಣಕ್ಕಿಳಿಸಲಾಗುವುದು ಎಂಬುದನ್ನು ಈಗಲೇ ಹೇಳುವುದಿಲ್ಲ. ಆ ವೇಳೆಯ ಸನ್ನಿವೇಶ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Latest Videos
Follow Us:
Download App:
  • android
  • ios