ರಾಜ್ಯದ 5 ಎಸ್ಕಾಂಗಳಲ್ಲಿ ಈ 2 ದಿನ ಆನ್‌ಲೈನ್‌ ಸೇವೆ ಸ್ಥಗಿತ: ಕಾರಣ ಇಲ್ಲಿದೆ?

ರಾಜ್ಯದ ಐದೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್‌ ಪೋರ್ಟಲ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ನ.24 ರಂದು ಮಧ್ಯಾಹ್ನ 12 ಗಂಟೆಯಿಂದ ನ.26 ರಂದು ಬೆಳಗ್ಗೆ 11.59 ಗಂಟೆವರೆಗೆ ಎಲ್ಲಾ ರೀತಿಯ ಆನ್‌ಲೈನ್‌ ಸೇವೆಗಳನ್ನು ಸ್ಥಗಿತಗೊಳ್ಳಲಿದೆ. 

ESKOM Online Service Outage In Karnataka On November 24 And November 26 gvd

ಬೆಂಗಳೂರು (ನ.18): ರಾಜ್ಯದ ಐದೂ ಎಸ್ಕಾಂಗಳ ವ್ಯಾಪ್ತಿಯಲ್ಲಿ ವೆಬ್‌ ಪೋರ್ಟಲ್ ಗೆ ಸಂಬಂಧಿಸಿದಂತೆ ತುರ್ತು ತಾಂತ್ರಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ನ.24 ರಂದು ಮಧ್ಯಾಹ್ನ 12 ಗಂಟೆಯಿಂದ ನ.26 ರಂದು ಬೆಳಗ್ಗೆ 11.59 ಗಂಟೆವರೆಗೆ ಎಲ್ಲಾ ರೀತಿಯ ಆನ್‌ಲೈನ್‌ ಸೇವೆಗಳನ್ನು ಸ್ಥಗಿತಗೊಳ್ಳಲಿದೆ. 

ಐದೂ ಎಸ್ಕಾಂಗಳ ಪೋರ್ಟಲ್ ಗಳನ್ನು ಏಕೀಕೃತಗೊಳಿಸಿ ಒಂದೇ ಸೂರಿನಡಿ ಆನ್ಲೈನ್‌ ಪಾವತಿ ವ್ಯವಸ್ಥೆ ಕಲ್ಪಿಸಲು ಆರ್‌-ಎಪಿಡಿಆರ್‌ಪಿ (ರಿಸ್ಟ್ರಕ್ಚರ್ಡ್ ಆ್ಯಕ್ಸಿಲರೇಟೆಡ್‌ ಪವರ್‌ ಡೆವಲ್ಮೆಂಟ್‌ ಅಂಡ್ ರಿಫಾರ್ಮ್ ಪ್ರೋಗ್ರಾಂ) ಅನುಷ್ಠಾನಗೊಳಿಸಲಾಗುತ್ತಿದೆ. ಇದರಡಿ ಈಗಾಗಲೇ ವಿವಿಧ ಪೋರ್ಟಲ್ ಗಳಲ್ಲಿರುವ ಡಾಟಾವನ್ನು ನೂತನ ಪೋರ್ಟಲ್‌ ಗೆ ವರ್ಗಾವಣೆ ಮಾಡುವ ಕೆಲಸ ಮಾಡುವ ಹಿನ್ನೆಲೆಯಲ್ಲಿ ಆನ್‌ಲೈನ್‌ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಎರಡು ದಿನಗಳ ಕಾಲ ವಿದ್ಯುತ್‌ ಬಿಲ್‌ ಪಾವತಿ, ಹೊಸ ಸಂಪರ್ಕಕ್ಕಾಗಿ ಆನ್‌ಲೈನ್‌ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ಆನ್‌ಲೈನ್‌ ಸೇವೆ ಲಭ್ಯವಿರುವುದಿಲ್ಲ. 

ಯಡಿಯೂರಪ್ಪ ಅಭಿಪ್ರಾಯದಂತೆ ವಿಪಕ್ಷ ನಾಯಕನಾಗಿ ಅಶೋಕ್‌ ನೇಮಕ!

ಯಾರಿಗೆ ಅನಾನುಕೂಲ: ಈಗಾಗಲೇ ಆಲೈಲೈನ್‌ ಪಾವತಿ ವ್ಯವಸ್ಥೆ ಜಾರಿಯಲ್ಲಿರುವ 96 ಪಟ್ಟಣಗಳ ವಿದ್ಯುತ್‌ ಗ್ರಾಹಕರಿಗೆ ಇದರಿಂದ ಸಮಸ್ಯೆಯಾಗಲಿದ್ದು, ಆ ಪಟ್ಟಣಗಳ ಪಟ್ಟಿ ಕೆಳಕಂಡಂತಿದೆ.

ಬೆಸ್ಕಾಂ: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ-1, ದಾವಣಗೆರೆ -2, ಚಿತ್ರದುರ್ಗ, ತುಮಕೂರು-1, ತುಮಕೂರು-2, ಕ್ಯಾತಸಂದ್ರ, ಸಿರಾ, ಚನ್ನಪಟ್ಟಣ, ಆನೇಕಲ್‌, ಮುಳಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆಜಿಎಫ್‌, ಚಳ್ಳಕೆರೆ, ಕುಣಿಗಲ್‌, ಹರಪ್ಪನಹಳ್ಳಿ, ಹಿರಿಯೂರು, ತಿಪಟೂರು, ಗೌರೀಬಿದನೂರು.

ಸೆಸ್ಕ್- ಮೈಸೂರು: ಮಳವಳ್ಳಿ, ನಂಜನಗೂಡು, ಮೈಸೂರು, ಮಂಡ್ಯ, ಹುಣಸೂರು, ಚಾಮರಾಜನಗರ, ಕೆ.ಆರ್‌. ನಗರ, ಅರಸೀಕೆರೆ, ಮಡಿಕೇರಿ, ಕೊಳ್ಳೇಗಾಲ, ಹಾಸನ, ಚನ್ನರಾಯಪಟ್ಟಣ,.

ಮೆಸ್ಕಾಂ- ಮಂಗಳೂರು: ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು

ಜೆಸ್ಕಾಂ- ಕಲಬುರಗಿ: ಮಾನ್ವಿ, ಸಿಂಧನೂರು, ಬೀದರ್‌, ಗಂಗಾವತಿ, ಕಲಬುರಗಿ, ಸೇಡಂ, ಬಸವಕಲ್ಯಾಣ, ವಾಡಿ, ಅಲನಾಡ್‌, ಭಾಲ್ಕಿ, ಶಹಾಬಾದ್, ಶಹಾಪುರ, ಸುರಪುರ, ಸಿರಗುಪ್ಪಾ, ಕಂಪ್ಲಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಹುಮ್ನಾಬಾದ್‌, ಹೊಸಪೇಟೆ

ಡಿಕೆಶಿ ಆಫರ್‌ ನಿಜ, ಆದರೆ ನಾನು ಕಾಂಗ್ರೆಸ್‌ ಪಕ್ಷಕ್ಕೆ ಹೋಗಲ್ಲ: ಜಿ.ಟಿ.ದೇವೇಗೌಡ

ಹೆಸ್ಕಾಂ- ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ನಿಪ್ಪಾಣಿ, ಜಮಖಂಡಿ, ಬೈಲಹೊಂಗಲ, ಲಕ್ಷ್ಮೇಶ್ವರ, ನರಗುಂದ, ರಾಮದುರ್ಗ, ಚಿಕ್ಕೋಡಿ, ಗುಳೇದಗುಡ್ಡ, ಮಹಾಲಿಂಗಪುರ, ಅಥಣಿ, ಭಟ್ಕಳ, ದಾಂಡೇಲಿ, ಇಂಡಿ, ಸವದತ್ತಿ, ಸವಣೂರು, ಶಿರಸಿ, ಕುಮಟಾ, ಬಾಗಲಕೋಟೆ, ರಬಕವಿ-ಬನಹಟ್ಟಿ, ಗದಗ, ಗೋಕಾಕ್‌, ಹಾವೇರಿ, ಇಳಕಲ್, ಮುಧೋಳ, ರಾಣೆಬೆನ್ನೂರು, ವಿಜಯಪುರ.

Latest Videos
Follow Us:
Download App:
  • android
  • ios