Asianet Suvarna News Asianet Suvarna News

ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ: ಎಚ್.ಡಿ.ಕುಮಾರಸ್ವಾಮಿ

ಜಾತಿ ಗಣತಿ ಸಂಬಂಧ ಕಾಂತರಾಜು ಸಲ್ಲಿಸಿರುವ ವರದಿಯ ಮೂಲ ಪ್ರತಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಇದೆ. ಮೂಲ ಪ್ರತಿಯೇ ಇಲ್ಲದೆ ಇವರು ಯಾವ ವರದಿಯನ್ನು ಸ್ವೀಕರಿಸುವ ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. 

Ex CM HD Kumaraswamy Slams On Congress Govt At Mandya gvd
Author
First Published Nov 23, 2023, 11:59 PM IST

ಮಂಡ್ಯ (ನ.23): ಜಾತಿ ಗಣತಿ ಸಂಬಂಧ ಕಾಂತರಾಜು ಸಲ್ಲಿಸಿರುವ ವರದಿಯ ಮೂಲ ಪ್ರತಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಇದೆ. ಮೂಲ ಪ್ರತಿಯೇ ಇಲ್ಲದೆ ಇವರು ಯಾವ ವರದಿಯನ್ನು ಸ್ವೀಕರಿಸುವ ನಿರ್ಧಾರ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸುದ್ದಿಗಾರರು ಭೇಟಿ ಮಾಡಿದ ವೇಳೆ, ಕಾಂತರಾಜು ವರದಿಯನ್ನು ಕುಮಾರಸ್ವಾಮಿ ತಿರಸ್ಕಾರ ಮಾಡಿದ್ದರು ಎಂದು ಆರೋಪಿಸಿದ್ದರು. ನನ್ನ ಕಾಲದಲ್ಲಿ ಕಾಂತರಾಜು ವರದಿ ಸಂಪೂರ್ಣ ಸಿದ್ದವಾಗಿದ್ದರೆ ಇವರು ಅಧಿಕಾರ ಹಿಡಿದ ಈ 6 ತಿಂಗಳಲ್ಲಿ ಏಕೆ ವರದಿಗೆ ಒಪ್ಪಿಗೆ ಕೊಡಲಿಲ್ಲ ಎಂದು ಮತ್ತೊಮ್ಮೆ ಪ್ರಶ್ನಿಸಿದರು.

ವೈಜ್ಞಾನಿಕ ರೀತಿಯಲ್ಲಿ ರಾಜ್ಯದ ಜನಗಣತಿ ನಡೆದಿಲ್ಲ, ಮನೆ ಮನೆಗೆ ಭೇಟಿ ಕೊಟ್ಟು ಗಣತಿ ಮಾಡಿಲ್ಲ. ಅವರಿಗೆ ಬೇಕಾದ ರೀತಿಯಲ್ಲಿ ವರದಿ ಸಿದ್ಧಪಡಿಸಿಕೊಂಡಿರುವುದು ಜಗಜ್ಜಾಹೀರವಾಗಿದೆ. ಕಾಂತರಾಜು ಕಮಿಟಿ ರಚನೆ ಮಾಡಿ 10 ವರ್ಷ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ಹಲವಾರು ಬೆಳವಣಿಗೆಗಳಾಗಿವೆ. ಮನೆಯಲ್ಲಿ ಕುಳಿತು ಬರೆದರೋ ಅಥವಾ ಆಗಿನ ಮುಖ್ಯಮಂತ್ರಿ ಕುಳಿತು ಬರೆಸಿದರೋ ಗೊತ್ತಿಲ್ಲ. ಜಾತಿ ಗಣತಿ ಸಮರ್ಪಕವಾಗಿ ನಡೆದಿದ್ದರೆ ಅಂದಿನ ಮೆಂಬರ್ ಸೆಕ್ರೆಟರಿ ವರದಿಗೆ ಸಹಿ ಹಾಕದಿರಲು ಕಾರಣವೇನು. ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ. ಸಮಾಜವನ್ನ ವಿಶ್ವಾಸ ತೆಗೆದುಕೊಳ್ಳುವುದು ಇವರಿಗೆ ಬೇಕಿಲ್ಲ ಎಂದು ಟೀಕಿಸಿದರು.

ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?

ಜಾತಿಗಣತಿಗೆ ಒಕ್ಕಲಿಗರ ವಿರೋಧವಿರುವ ಬಗ್ಗೆ ಕೇಳಿದಾಗ, ಜಾತಿಯ ಹೆಸರಿನಿಂದ ನಾನು ವಿರೋಧ ವ್ಯಕ್ತಪಡಿಸೋಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂದು ಅವರೇ ಹೇಳುತ್ತಾರಲ್ವಾ. ಸುಳ್ಳೇ ನಮ್ಮ ಮನೆದೇವರು ಅಂತಾರೆ. ಪಾಪ ಇವರು ಸತ್ಯಹರಿಶ್ಚಂದ್ರ ವಂಶದವರಲ್ವಾ. ಕಳೆದ ಚುನಾವಣೆಯಲ್ಲಿ ಪೇಪರ್- ಪೆನ್ ಕೇಳಿದವರು ಇಂದು ಚರ್ಚೆ ಮಾಡಬೇಕು. ಇವರಿಗೆ ಅಧಿಕಾರ ಇದೆ, ಕ್ಯಾಬಿನೆಟ್‌ನಲ್ಲಿ ಸತ್ಯಾಂಶ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಕಟುವಾಗಿ ಹೇಳಿದರು.

ವಿ.ಸೋಮಣ್ಣ ಬಿಜೆಪಿ ಪಕ್ಷ ಬಿಡಲ್ಲ: ಮಾಜಿ ಸಚಿವ ರಾಮದಾಸ್ ಸ್ಪಷ್ಟನೆ

ರಾಹುಲ್ ಗಾಂಧಿ ಭಾವನೆಗೆ ಸ್ಪಂದಿಸಿ ಜಾತಿಗಣತಿ ವರದಿ ಪಡೆಯುವ ನಿರ್ಧಾರ ಮಾಡಿದ್ದಾರೆ. ರಾಷ್ಟ್ರೀಯ ನಾಯಕರ ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರಷ್ಟೇ ಎಂದರು. ಬಿಜೆಪಿ ಹೇಳಿದರೆ ಕುಮಾರಸ್ವಾಮಿ ಚಡ್ಡಿನೂ ಹಾಕ್ತಾರೆ, ಮಾಲೆನೂ ಹಾಕ್ತಾರೆ ಎಂಬ ಚಲುವರಾಯಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಅವರು ಯಾರು ಎಂದು ಎಚ್‌ಡಿಕೆ ಪ್ರತಿಕ್ರಿಯಿಸಿದರಲ್ಲದೆ, ಸಿದ್ದರಾಮಯ್ಯ ಹೇಳಿದರೆ ಅವರು ಏನು ಹಾಕಿಕೊಳ್ಳುತ್ತಾರೆಂಬುದನ್ನು ಮೊದಲು ಹೇಳಲಿ. ಆಮೇಲೆ ನಾನು ಏನು ಹಾಕಿಕೊಳ್ಳುತ್ತೇನೆಂಬುದನ್ನು ಹೇಳುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.

Follow Us:
Download App:
  • android
  • ios