ನೀಟ್ ಮೇಲಿನ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದರೂ ಸದನದಿಂದ ಹೊರನಡೆದ ವಿಪಕ್ಷಗಳು

ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸಿದ ಮೇಲೆ ನೀಟ್‌ ಪರೀಕ್ಷಾ ಅಕ್ರಮಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು ಕೇಳದ ವಿರೋಧ ಪಕ್ಷಗಳು ಸದನದಿಂದ ಹೊರ ನಡೆದ ಘಟನೆ ನಡೆದಿದೆ.

Even though Government said that the discussion on NEET irregularities will be allowed, the opposition parties staged walk out in Lok sabha akb

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸಿದ ಮೇಲೆ ನೀಟ್‌ ಪರೀಕ್ಷಾ ಅಕ್ರಮಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು ಕೇಳದ ವಿರೋಧ ಪಕ್ಷಗಳು ಸದನದಿಂದ ಹೊರ ನಡೆದ ಘಟನೆ ನಡೆದಿದೆ.  ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳು ನೀಟ್ ಅಕ್ರಮಗಳ ಬಗ್ಗೆ ಚರ್ಚೆ ನಡೆಸಲು ಪ್ರತ್ಯೇಕ ಒಂದು ದಿನವನ್ನೂ ನೀಡುವಂತೆ ಕೇಳಿದವು. 

ಸದನ ಆರಂಭವಾಗುತ್ತಿದ್ದಂತೆ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಟ್ ಪರೀಕ್ಷಾ ಅಕ್ರಮಗಳ ಬಗ್ಗೆ ಚರ್ಚೆ ಮಾಡಲು ಪ್ರತ್ಯೇಕ ಒಂದು ದಿನವನ್ನು ಮೀಸಲಿಡುವಂತೆ ಕೇಳಿದರು. ನೀಟ್ ಪರೀಕ್ಷಾ ಅಕ್ರಮದಿಂದ 2 ಕೋಟಿಗೂ ಅಧಿಕ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ. 70 ಬಾರಿ ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ವರದಿ ಇದೆ. ಈ ವಿಚಾರದ ಬಗ್ಗೆ ಚರ್ಚೆ ಮಾಡಲು ಪ್ರತ್ಯೇಕವಾಗಿ ಒಂದು ದಿನ ನಿಗದಿ ಮಾಡಿದರೆ ನಾವು ಖುಷಿ ಪಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು. 

ಹಿಂದೂಗಳು ಹಿಂಸಾವಾದಿಗಳು ಎಂದ ರಾಹುಲ್‌ ಗಾಂಧಿ, 'ಇದು ಗಂಭೀರ ಟೀಕೆ..' ಎಚ್ಚರಿಸಿದ ಪ್ರಧಾನಿ ಮೋದಿ!

ಈ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಪೂರ್ಣವಾಗುವವರೆಗೂ ನೀಟ್ ಪರೀಕ್ಷಾ ಅಕ್ರಮದ ಚರ್ಚೆಗೆ ಪ್ರತ್ಯೇಕ ದಿನ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಲೋಕಸಭೆಯ ಉಪನಾಯಕನಾಗಿಯೂ (deputy leader of lok sabha)ಕಾರ್ಯ ನಿರ್ವಹಿಸುತ್ತಿರುವ ರಾಜನಾಥ್ ಸಿಂಗ್ ಮಾತನಾಡುತ್ತಾ, ಸದನಕ್ಕೆ ತನ್ನದೇ ಆದ ನೀತಿ ನಿಯಮಗಳಿವೆ. ಅಲ್ಲದೇ ಆರೋಗ್ಯಕರವಾದ ಸಂಪ್ರದಾಯವಿದೆ.  ಅವುಗಳೇ ಸದನದ ಶಕ್ತಿ. ನಾನು ದಶಕಕ್ಕಿಂತಲೂ ಅಧಿಕ ಸಮಯದಿಂದ ಓರ್ವ ಸಂಸತ್ ಸದಸ್ಯನಾಗಿರುವ ನಾನು ಎಂದೂ ಕೂಡ, ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸುವುದಕ್ಕೂ ಮೊದಲು ಬೇರೆ ವಿಚಾರಗಳನ್ನು ಚರ್ಚೆ ಮಾಡಿದ್ದನ್ನು ನೋಡಿಲ್ಲ,  ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸಿದ ಮೇಲಷ್ಟೇ ಬೇರೆ ವಿಚಾರಗಳ ಚರ್ಚೆ ನಡೆಯುತ್ತದೆ ಎಂದರು. 

ಅಟಲ್ ಅವಧಿಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ಯಾವ ಹುದ್ದೆ ಬೇಕಾದ್ರೂ ಸಿಗ್ತಿತ್ತು ಆದರೆ ಅವರು....

ಆದರೆ ಮತ್ತೆ ಮಾತನಾಡಿದ ರಾಹುಲ್ ಹಾಗೂ ವಿರೋಧ ಪಕ್ಷದ ನಾಯಕರು ವಂದನಾ ನಿರ್ಣಯ ಸಲ್ಲಿಸಿದ ಮೇಲೆ ಈ ವಿಚಾರ ಚರ್ಚಿಸುವ ಬಗ್ಗೆ ಸರ್ಕಾರ ನಮಗೆ ಸರಿಯಾದ ಭರವಸೆ ನೀಡಬೇಕು ಎಂದರು. ನೀಟ್ ವಿಚಾರ ನಮಗೆ ಬಹಳ ಮಹತ್ವದ್ದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಾವು ಸಂಸತ್‌ನಿಂದ ವಿದ್ಯಾರ್ಥಿಗಳಿಗೆ ಸಂದೇಶ ಕಳುಹಿಸಬಹುದು ಎಂದರು. 

ಈ ವೇಳೆ ಮಾತನಾಡಿದ ಸ್ಪೀಕರ್ ಓಂ ಬಿರ್ಲಾ, ವಂದನಾ ನಿರ್ಣಯದ ವೇಳೆ ಬೇರೆ ವಿಚಾರಗಳ ಬಗ್ಗೆ ಚರ್ಚಿಸುವ ಸಂಪ್ರದಾಯವಿಲ್ಲ, ನೀಟ್ ಬಗ್ಗೆ ಚರ್ಚಿಸಲು ಪ್ರತ್ಯೇಕವಾಗಿ ಸದಸ್ಯರಿಗೆ ನೋಟೀಸ್ ನೀಡಲಾಗುವುದು ಎಂದು ಹೇಳಿದರು.  ಅಲ್ಲದೇ ವಿರೋಧಪಕ್ಷಗಳ ಸದಸ್ಯರು ನಿಂತಿರುವಾಗಲೇ ಸ್ಪೀಕರ್, ಸಚಿವ ಅನುರಾಗ್ ಠಾಕೂರ್ ಅವರನ್ನು ರಾಷ್ಟ್ರಪತಿ ಭಾಷಣದ ಮೇಲೆ ವಂದನಾ ನಿರ್ಣಯ ಸಲ್ಲಿಸಲು ಕರೆದರು.  ಆದರೆ ಈ ವೇಳೆ ವಿರೋಧ ಪಕ್ಷದ ಸದಸ್ಯರು ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಚರ್ಚೆ ನಡೆಸಲು ಅವಕಾಶದ ಬಗ್ಗೆ ಭರವಸೆ ನೀಡುವಂತೆ ಮತ್ತೆ ಬೊಬ್ಬೆ ಹಾಕಲು ಶುರು ಮಾಡಿ ಸದನದಿಂದ ಹೊರನಡೆದರು.

Latest Videos
Follow Us:
Download App:
  • android
  • ios