Asianet Suvarna News Asianet Suvarna News

ಅಟಲ್ ಅವಧಿಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ಯಾವ ಹುದ್ದೆ ಬೇಕಾದ್ರೂ ಸಿಗ್ತಿತ್ತು ಆದರೆ ಅವರು....

ಬಿಜೆಪಿ ಹಿರಿಯ ನಾಯಕ ಕೇಂದ್ರ ಸಚಿವ, ದೇಶದ ಉಪ ರಾಷ್ಟ್ರಪತಿ ಆಗಿ ಕಾರ್ಯನಿರ್ವಹಿಸಿದ ವೆಂಕಯ್ಯ ನಾಯ್ಡು ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ.

BJP leader Venkaiah Naidu could get any post During Atal Bihari Vajpayees tenure as PM but he didnt ask big post PM modi akb
Author
First Published Jul 1, 2024, 1:59 PM IST

ನವದೆಹಲಿ: ಬಿಜೆಪಿ ಹಿರಿಯ ನಾಯಕ ಕೇಂದ್ರ ಸಚಿವ, ದೇಶದ ಉಪ ರಾಷ್ಟ್ರಪತಿ ಆಗಿ ಕಾರ್ಯನಿರ್ವಹಿಸಿದ ವೆಂಕಯ್ಯ ನಾಯ್ಡು ಅವರನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಅಟಲ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಯಾವ ಹುದ್ದೆಯನ್ನು ಬೇಕಾದರೂ ಅವರೇ ಆಯ್ಕೆ ಮಾಡಿಕೊಳ್ಳುವಷ್ಟು ಸ್ವಾತಂತ್ರವಿತ್ತು. ಆದರೆ ಅಂದು ಅವರು ಯಾವುದೇ ಪ್ರಭಾವಿ ಸಚಿವ ಸ್ಥಾನವನ್ನು ಕೇಳದೇ ಗ್ರಾಮೀಣ ಅಭಿವೃದ್ಧಿ ಸಚಿವನ ಹುದ್ದೆಯನ್ನು ಆಯ್ಕೆ ಮಾಡಿಕೊಂಡರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಅವರ 75ನೇ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ನಿನ್ನೆ ವೆಂಕಯ್ಯ ನಾಯ್ಡು ಅವರ ಜೀವನ ಪ್ರಯಾಣದ ಕುರಿತ ಮೂರು ಪುಸ್ತಕಗಳನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ವೆಂಕಯ್ಯ ನಾಯ್ಡು ಅವರ ಆತ್ಮಕತೆ ಹಾಗೂ ಅವರ ಜೀವನಕ್ಕೆ ಸಂಬಂಧಿಸಿದ ಎರಡು ಪುಸ್ತಕಗಳನ್ನು ಬಿಡುಗಡೆಗೊಳಿಸಿದ ಪ್ರಧಾನಿ ಈ ಪುಸ್ತಕಗಳು ಮುಂದಿನ ಪೀಳಿಗೆಗೆ ಪ್ರೇರಣೆಯ ಮೂಲವಾಗಲಿದೆ ಎಂಬ ವಿಶ್ವಾಸ ನನಗಿದೆ  ಹಾಗೂ ರಾಷ್ಟ್ರದ ಸೇವೆಗೆ ಸರಿಯಾದ ಮಾರ್ಗವನ್ನು ಸಹ ಇದು ತೋರಿಸಲಿದೆ ಎಂದು ಪ್ರಧಾನಿ ಹೇಳಿದರು. 

ವೆಂಕಯ್ಯ ನಾಯ್ಡು, ಕರ್ನಾಟಕ ಮತ್ತು ಜನಾರ್ಧನ ಹೋಟೆಲ್: ಸಂಬಂಧ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ!

ವೆಂಕಯ್ಯ ನಾಯ್ಡು ಅವರ ಜೊತೆಗೆ ಬಹಳ ಧೀರ್ಘಕಾಲ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಅವರು ಬಿಜೆಪಿ ರಾಷ್ಟಾಧ್ಯಕ್ಷರೂ ಆಗಿದ್ದರು, ಅವರು ಕ್ಯಾಬಿನೆಟ್ ವರಿಷ್ಠರಾಗಿದ್ದರು, ಅವರು ದೇಶದ ಉಪರಾಷ್ಟ್ರಪತಿಯಾಗಿದ್ದರು, ಹಾಗೂ ರಾಜ್ಯಸಭಾದ ಅಧ್ಯಕ್ಷರಾಗಿದ್ದರು.  ಹೀಗೆ ಹಲವು ಹುದ್ದೆಯನ್ನು ಅವರು ಅಲಂಕರಿಸಿದ್ದಾರೆ. ಪುಟ್ಟ ಹಳ್ಳಿಯೊಂದರ ರೈತ ಕುಟುಂಬದಿಂದ ಬಂದ ಅವರು ಇಷ್ಟು ಎತ್ತರಕ್ಕೆ ಬೆಳೆದಿದ್ದು ಸಾಮಾನ್ಯವೇನಲ್ಲ, ಅವರಿಂದ ನನಗೆ ಹಾಗೂ ನನ್ನಂತಹ ಸಾವಿರಾರು ಕಾರ್ಯಕರ್ತರಿಗೆ ಬಹಳಷ್ಟು ಕಲಿಯುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಪ್ರಧಾನಿ ಹೇಳಿದರು.

ಅವರ ವಿಚಾರ, ಜೀವನ, ವ್ಯಕ್ತಿತ್ವ, ದೂರದೃಷ್ಟಿಗೆ ಒಂದು ವಿಶೇಷ ಉದಾಹರಣೆ ನೀಡುವೆ. ಇಂದು ಆಂಧ್ರದಲ್ಲಿ ಬಿಜೆಪಿ ಚೆನ್ನಾಗಿದೆ. ಆದರೆ ಹಲವು ದಶಕದ ಹಿಂದೆ ಇಲ್ಲಿ ಜನಸಂಘದ ಒಂದೇ ಒಂದು ನರಪಿಳ್ಳೆಯೂ ಇರಲಿಲ್ಲ, ಆ ಸಮಯದಲ್ಲಿ ನಾಯ್ಡು ಜೀ ಅವರು ಎಬಿವಿಪಿ ಕಾರ್ಯಕರ್ತರ ರೂಪದಲ್ಲಿ ದೇಶ ಮೊದಲು ಎಂಬ ಭಾವನೆಯಿಂದ ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಆಶಾವಾದದಿಂದ ಕೆಲಸ ಮಾಡಿದರು. ಮುಂದೆ ಅವರು ಜನಸಂಘಕ್ಕೆ ಬಂದರು. ಎಮರ್ಜೆನ್ಸಿ ಸಮಯದಲ್ಲೂ ಅವರು ದೇಶಕ್ಕಾಗಿ ಬಹಳ ಕೆಲಸ ಮಾಡಿದರು. ಹಲವು ತಿಂಗಳು ಭೂಗತರಾಗಿದ್ದರು ಎಂದರು. 

ಎತ್ತು ತಿವಿದು ಸಾವು ಕಂಡಿದ್ರು ತಾಯಿ, ಅಮ್ಮನ ಕತೆ ಕೇಳಿ ಸದನದಲ್ಲೇ ಅತ್ತುಬಿಟ್ಟ ಉಪರಾಷ್ಟ್ರಪತಿ!

ಅವರಿಗೆ ಅಟಲ್ ಸರ್ಕಾರದಲ್ಲಿ ಸಚಿವನಾಗುವ ಅವಕಾಶ ಸಿಕ್ಕಿತ್ತು. ನಮ್ಮ ಪಕ್ಷದಲ್ಲಿ ವೆಂಕಯ್ಯ ನಾಯ್ಡು ಅವರ ವ್ಯಕ್ತಿತ್ವ ತುಂಬಾ ಉನ್ನತ ಸ್ಥಾನದಲ್ಲಿದೆ. ಹೀಗಾಗಿ ಅವರಿಗೆ ದೊಡ್ಡ ಹುದ್ದೆಯನ್ನೇ ನೀಡುವ ಮಾತಾಗಿತ್ತು. ಇದು ವೆಂಕಯ್ಯ ಅವರಿಗೂ ಗೊತ್ತಿತ್ತು. ಆದರೆ ವೆಂಕಯ್ಯ ಅವರು ಇದೆಲ್ಲವನ್ನೂ ನಿರಾಕರಿಸಿ ಗ್ರಾಮೀಣ ವಿಕಾಸ ಖಾತೆಯನ್ನು ನೀಡುವಂತೆ ಮನವಿ ಮಾಡಿದರು. ಇದು ಸಣ್ಣ ಮಾತಲ್ಲ, ಗ್ರಾಮೀಣ ಜನರು, ಬಡವರು, ರೈತರ ಸೇವೆ ಮಾಡುವ ಮನಸ್ಸು ಅವರಿಗಿತ್ತು ಎಂದು ಪ್ರಧಾನಿ ಮೋದಿ ವೆಂಕಯ್ಯ ನಾಯ್ಡು ಅವರನ್ನು ಹಾಡಿ ಹೊಗಳಿದ್ದಾರೆ. 

ಹೈದರಾಬಾದ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು. ನಾಯ್ಡು ಅವರು ತಮ್ಮ ಪತ್ನಿ ಉಷಾ ಹಾಗೂ ಕುಟುಂಬ ಸದಸ್ಯರು ಪಕ್ಷದ ಗಣ್ಯರ ಜೊತೆ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. 

Latest Videos
Follow Us:
Download App:
  • android
  • ios