Asianet Suvarna News Asianet Suvarna News

ಸಿದ್ದರಾಮೋತ್ಸದ ಕುರಿತು ಕಾಂಗ್ರೆಸ್‌ ನಾಯಕರಿಗೇ ಆತಂಕ: ಸಚಿವ ಅಶ್ವತ್ಥನಾರಾಯಣ

ರಾಮನಗರದಲ್ಲಿ ನಿರ್ಮಿಸುತ್ತಿರುವ ಜಿಲ್ಲಾಸ್ಪತ್ರೆ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ
 

Even Congress Leaders Worried About Siddaramotsava Says CN Ashwath Narayan grg
Author
Bengaluru, First Published Jul 15, 2022, 3:05 PM IST

ರಾಮನಗರ(ಜು.15): ಸಿದ್ದರಾಮೋತ್ಸವ ಈ ಕುರಿತು ಕಾಂಗ್ರೆಸ್‌ ನಾಯಕರಿಗೆ ಆತಂಕವಿದೆಯೇ ಹೊರತು ನಮಗೆ ಅದರ ಕುರಿತು ಯಾವುದೇ ಆತಂಕವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮೋತ್ಸವದ ಕುರಿತು ಕಾಂಗ್ರೆಸ್‌ ನಾಯಕರಾದ ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆಯವರಿಗೆ ಆತಂಕವಿದೆ. ಅವರು ಸಿದ್ದರಾಮೋತ್ಸವವಾದರೂ ಮಾಡಿಕೊಳ್ಳಲಿ, ಶಿವಕುಮಾರೋತ್ಸವವಾದರೂ ಮಾಡಿಕೊಳ್ಳಲ್ಲಿ ಅದು ಅವರ ಪಕ್ಷದ ವಿಚಾರ. ಅದರಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಿಎಸ್‌ಐ ಹಗರಣದ ಪಿತಾಮಹ: ಪಿಎಸ್‌ಐ ಹಗರಣದ ಪಿತಾಮಹ ಸಿದ್ದರಾಮಯ್ಯ. ಪಿಎಸ್‌ಐ ಹಗರಣದ ಮೂಲವೇ ಅವರು. ಅವರ ಕಾಲದಲ್ಲಿ ನಡೆದ ಅಕ್ರಮದ ಬಗ್ಗೆ ಮಾತನಾಡಲಿ. ಇವರ ಕಾಲದಲ್ಲಿ ಶಾಂತಕುಮಾರ್‌ ತನಿಖೆ ಮಾಡುತ್ತಿದ್ದರು, ಅದು ಅರ್ಧಕ್ಕೆ ನಿಂತು ಹೋಯ್ತು ಯಾಕೆ? ಸಿದ್ದರಾಮಯ್ಯನವರು ಇದರ ಬಗ್ಗೆ ಮಾತನಾಡಿಲಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯನವರು ಮುಕ್ತವಾಗಿ ಮಾತನಾಡಲಿ, ಅವರ ಆಡಳಿತಾವಧಿಯಲ್ಲಿ ಯಾವ ಯಾವ ಜಾತಿಗೆ ಏನೇನು ಕೊಟ್ಟರು ಎಂದು ಅವರು ಉತ್ತರ ನೀಡಲಿ. ಹಿಂದೊಮ್ಮೆ ಅವರು ಮುಖ್ಯಮಂತ್ರಿ ಆಗಿ ನಿವೃತ್ತಿ ಆಗ್ತೀನಿ ಎಂದಿದ್ದರು. ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೀನಿ ಎಂದಿದ್ದರು, ಆದರೆ ಮಾಡಿದ್ದೇನು ಎಂದು ಪ್ರಶ್ನಿಸಿದರು.

ಸಿದ್ದು ಅವರನ್ನು ಮನೆಗೆ ಕಳಿಸುವ ಉತ್ಸವ ಸಿದ್ದರಾಮೋತ್ಸವ: ಅಶ್ವತ್ಥ್‌ ನಾರಾಯಣ್‌

ಸಿದ್ದರಾಮಯ್ಯನವರ ಕಾಲದಲ್ಲಿ ಅವರು ಮಾಡಿರುವ ಅಕ್ರಮಗಳು ಲೋಕಕ್ಕೆ ಗೊತ್ತಿದೆ. ಬಂಡತನದಲ್ಲಿ ಆಡಳಿತ ನಡೆಸಿ ಇಷ್ಟಬಂದಂತೆ ಮಾಡಿ ಮುಂದೆ ಸಾಗಿದರು. ಸಿದ್ದರಾಮಯ್ಯನವರ ಕಾಲದಲ್ಲಿ ಆಗಿರುವ ಅಕ್ರಮ ತನಿಖೆ ಆಗಬೇಕು.
ಮುಚ್ಚಿಹಾಕಿರುವ ಎಲ್ಲಾ ಅಕ್ರಮ ತನಿಖೆ ಆಗಬೇಕು. ಸಿದ್ದರಾಮಯ್ಯನವರ ಕಾಲದಲ್ಲಿ ಆಗಿದ್ದ ಹಗರಣಗಳ ತನಿಖೆ ನಡೆಸುವಂತೆ ಇವತ್ತೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಕಿಡಿಕಾರಿದರು.

ಅವರು ಬಡವರ ಸಿದ್ದರಾಮಯ್ಯ ಅಲ್ಲ, ವೈಭವೀಕರಣದ ಸಿದ್ದರಾಮಯ್ಯ.

ನಾವು ಇವರ ವಿರುದ್ಧ ಯಾವುದೇ ಉತ್ಸವ ಮಾಡಲ್ಲ. ಯಾವುದೇ ಸಮಾವೇಶ ಮಾಡಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲ. ಅದು ಮುಳುಗುತ್ತಿರುವ ಹಡಗು, ಆ ಪಕ್ಷಕ್ಕೆ ಯಾರು ಹೋಗುತ್ತಾರೆ ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ನಮ್ಮ ಮಾರ್ಗದರ್ಶಕರು

ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕಡೆಗಣಿಸಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಉಸ್ತುವಾರಿ ಸಚಿವ ಡಾ. ಸಿ.ಎನ್‌.ಅಶ್ವಥ್‌ ನಾರಾಯಣ ಯಡಿಯೂರಪ್ಪನವರು ನಮಗೆ ಮಾರ್ಗದರ್ಶಕರು ಎಂದರು.

ನಮ್ಮದು ವ್ಯಕ್ತಿಗತ ಪಕ್ಷ ಅಲ್ಲ, ಪಕ್ಷದಿಂದ ವ್ಯಕ್ತಿ ಎಂಬ ಸಿದ್ಧಾಂತ

ನಮ್ಮಲ್ಲಿ ಯಾರ ಕುರಿತು ಯಾವುದೇ ತಾರತಮ್ಯ ಇಲ್ಲ. ಅವಧಿ ಮುಗಿದಿರುವ ಎಲ್ಲರನ್ನು ತೆಗೆಯಲಾಗಿದೆ. ಒಬ್ಬೊಬ್ಬರಿಗೆ ಒಂದೊಂದು ವ್ಯವಸ್ಥೆ ಇಲ್ಲ ಎಲ್ಲರಿಗೂ ಒಂದೇ ವ್ಯವಸ್ಥೆ ಎಂದು ಸ್ಪಷ್ಟಪಡಿಸಿದರು.

ಇವರೇನು ವಿಶೇಷನಾ?: 

ಚನ್ನಪಟ್ಟಣದ ದೇವಾಲಯಗಳಿಗೆ ಮಂಜೂರು ಮಾಡಿದ್ದ 10 ಕೋಟಿ ರು. ಅನುದಾನಕ್ಕೆ ತಡೆ ನೀಡಿರುವ ವಿಚಾರಕ್ಕೆ ಪ್ರತ್ರಿಕಿಯಿಸಿದ ಸಚಿವ ಅಶ್ವತ್ಥನಾರಾಯಣ ಇವರ ಕ್ಷೇತ್ರಕ್ಕೆ ಮಾತ್ರ 10 ಕೋಟಿ ಮಂಜೂರು ಮಾಡಲು ಇವರೇನು ವಿಶೇಷನಾ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೆಸರೇಳದೇ ಪರೋಕ್ಷವಾಗಿ ಅವರ ವಿರುದ್ಧ ಕಿಡಿಕಾರಿದರು. ಎಲ್ಲ ಕ್ಷೇತ್ರಗಳ ಶಾಸಕರಿಗೂ 2 ಕೋಟಿ ಅನುದಾನ ನೀಡಲಾಗಿದೆ. ಇವರೇನು ವಿಶೇಷನಾ 10 ಕೋಟಿ ರು. ಅನುದಾನ ನೀಡಲು. ಅದಕ್ಕೆ ಅನುದಾನ ವಾಪಸ್‌ ಹೋಗಿರಬೇಕು. ಅದರ ಕುರಿತು ನನಗೇನು ಗೊತ್ತಿಲ್ಲ ಎಂದರು.

ಸಚಿವರಿಂದ ರಾಮನಗರ ಜಿಲ್ಲಾಸ್ಪತ್ರೆ ಕಾಮಗಾರಿ ಪರಿಶೀಲನೆ

ರಾಮನಗರ: ಜಿಲ್ಲಾಸ್ಪತ್ರೆಯ ಪ್ರಮುಖ ಕಾಮಗಾರಿಗಳನ್ನು ಜುಲೈ 31ರೊಳಗೆ ಪೂರ್ಣಗೊಳಿಸಲು ಗುತ್ತಿಗೆದಾರ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹೇಳಿದರು.

ಗುರುವಾರ ಇಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾ ಆಸ್ಪತ್ರೆ ಕಟ್ಟಡ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಸ್ಪತ್ರೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಯಾವುದೇ ಕೆಲಸ ಬಾಕಿ ಇಲ್ಲದ ರೀತಿಯಲ್ಲಿ ಸುಸಜ್ಜಿತ ರೀತಿಯಲ್ಲಿ ಕಟ್ಟಡವನ್ನು ಸಜ್ಜುಗೊಳಿಸಲು ಸೆಪ್ಟೆಂಬರ್‌ 30ರವರೆಗೆ ಸಮಯ ಹಿಡಿಯುತ್ತದೆಂದು ಗುತ್ತಿಗೆದಾರರು ಹೇಳಿದ್ದಾರೆ. ಆಸ್ಪತ್ರೆಯ ಪ್ರಮುಖ ಕೆಲಸಗಳನ್ನು ಜುಲೈ 31ರೊಳಗೆ ಪೂರ್ತಿಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಶೀಘ್ರ ಉದ್ಘಾಟನೆ: 

ಮೊದಲಿಗೆ ಈ ಆಸ್ಪತ್ರೆ ನಿರ್ಮಾಣಕ್ಕಾಗಿ 65 ಕೋಟಿ ರು. ಮಂಜೂರಾಗಿತ್ತು. ಆದರೆ, ಆಮೇಲೆ, ಆಸ್ಪತ್ರೆಯ ಸೌಕರ್ಯಗಳನ್ನು ಹೆಚ್ಚಿಸಲಾಗಿ, ನಿರ್ಮಾಣ ಅಂದಾಜು ವೆಚ್ಚ 100 ಕೋಟಿಗೆ ರು.ಗೆ ಹೆಚ್ಚಾಯಿತು. ಹೀಗಾಗಿ, ಆಸ್ಪತ್ರೆ ನಿರ್ಮಾಣ ಮೊದಲು ಅಂದುಕೊಂಡಿದ್ದಕ್ಕಿಂತ ಸ್ವಲ್ಪ ತಡವಾಗಿದೆ. ಮುಖ್ಯಮಂತ್ರಿಯವರನ್ನು ಕರೆಸಿ ಆದಷ್ಟುಶೀಘ್ರ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿಸುವ ಉದ್ದೇಶವಿದೆ ಎಂದು ಮಾಹಿತಿ ನೀಡಿದರು.

ಸೂಟು ಬೂಟು ಹೊಲಿಸಿಕೊಂಡವರೆಲ್ಲ ಸಿಎಂ ಆಗಲ್ಲ: ಡಿಕೆ ಬ್ರದರ್ಸ್‌ ವಿರುದ್ಧ ಅಶ್ವತ್ಥ ನಾರಾಯಣ ಕಿಡಿ

ಆರೋಗ್ಯ ವಿ.ವಿ. ಕಾಮಗಾರಿಗೂ ವೇಗ: 

ರಾಜೀವ್‌ ಗಾಂಧಿ ಆರೋಗ್ಯ ವಿ.ವಿ. ಕ್ಯಾಂಪಸ್‌ ನಿರ್ಮಾಣ ಕಾಮಗಾರಿ ಕೂಡ ತ್ವರಿತವಾಗಿ ನಡೆಯುತ್ತಿದೆ. ಇದನ್ನು ಆದಷ್ಟುಶೀಘ್ರ ಪೂರ್ಣಗೊಳಿಸುವುದಾಗಿ ಸ್ವತಃ ಮುಖ್ಯಮಂತ್ರಿಯವರು ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲೇ ತಿಳಿಸಿದ್ದಾರೆ. ಜೊತೆಗೆ ವೈದ್ಯಕೀಯ ಕಾಲೇಜು ಕೂಡ ಬರಬೇಕಾಗಿದೆ. ಆ ಬಗ್ಗೆಯೂ ಒತ್ತು ಕೊಡಲಾಗುತ್ತದೆ ಎಂದರು.

ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಟೆಂಡರ್‌: 

ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ಕೊಡುವ ಕೆಲಸ ಆಗಿದೆ. ಆದರೆ, ನಿರ್ಮಾಣ ವೆಚ್ಚ 50 ಕೋಟಿ ರು.ಗಿಂತ ಜಾಸ್ತಿ ಇರುವುದರಿಂದ ಸರ್ಕಾರ 15 ದಿನಗಳ ಹಿಂದೆ ರಚಿಸಿರುವ ಪರಿಶೀಲನಾ ಸಮಿತಿ ಮುಂದಕ್ಕೆ ಇದು ಹೋಗಿದೆ. ಆ ಸಮಿತಿ ಅನುಮೋದಿಸಿದ ತಕ್ಷಣ ಇದರ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗುತ್ತದೆ ಎಂದರು. ನಮ್ಮ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದು 3 ವರ್ಷ ಪೂರೈಸುತ್ತಿರುವ ಸಂದರ್ಭ ಇದಾಗಿದೆ. ಎಲ್ಲಾ ಪ್ರಮುಖ ಕೆಲಸ ಮಾಡಬೇಕೆಂಬುದು ಸರ್ಕಾರದ ದೃಢ ನಿಶ್ಚಯವಾಗಿದೆ ಎಂದರು.

Follow Us:
Download App:
  • android
  • ios