Asianet Suvarna News Asianet Suvarna News

Mandya: ಮೈಶುಗರ್‌ನಲ್ಲಿ ಶೀಘ್ರ ಎಥೆನಾಲ್ ಘಟಕ ಆರಂಭ: ಸಿಎಂ ಬೊಮ್ಮಾಯಿ ಭರವಸೆ

ಮೈ ಶುಗರ್ ಕಾರ್ಖಾನೆ ಈಗಾಗಲೇ ಆರಂಭವಾಗಿದೆ. ಅಲ್ಲಿ ಯಥನಾಯಲ್ ಘಟಕ ಸ್ಥಾಪನೆ ಶೀಘ್ರ ಆಗಲಿದೆ. ಜಿಲ್ಲೆಯ ನೀರಾವರಿ ಕಾಲುವೆಗಳಾದ ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದಲ್ಲಿರುವ ರೈತರಿಗೆ ಯೋಜನೆಗಳ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Ethanon unit of Mysugar factory in Mandya to start soon CM Bommai sat
Author
First Published Dec 30, 2022, 12:45 PM IST

ಮಂಡ್ಯ (ಡಿ.30): ಮಂಡ್ಯದ ಜೀವನಾಡಿ ಆಗಿರುವ ಮೈ ಶುಗರ್ ಕಾರ್ಖಾನೆ ಈಗಾಗಲೇ ಆರಂಭವಾಗಿದೆ. ಅಲ್ಲಿ ಯಥನಾಯಲ್ ಘಟಕ ಸ್ಥಾಪನೆ ಶೀಘ್ರ ಆಗಲಿದೆ. ಜಿಲ್ಲೆಯ ನೀರಾವರಿ ಕಾಲುವೆಗಳಾದ ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದಲ್ಲಿರುವ ರೈತರಿಗೆ ಯೋಜನೆಗಳ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಡ್ಯದ ಗೆಜ್ಜಲಗೆರೆ ಉದ್ಘಟಿಸಿ ಮಾತನಾಡಿ ಅವರು, ಇಂದು ನಮ್ಮ ಕೇಂದ್ರ ಗೃಹಸಚಿವರು ಮೆಗಾಡೈರಿ ಉದ್ಘಾಟಿಸಿದ್ದಾರೆ. ರೈತರ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವಿರತವಾಗಿ ಕೆಲಸ ಮಾಡ್ತಿವೆ. ಹತ್ತು ಹಲವು ಸುಧಾರಣೆಗಳನ್ನ ತಂದಿದೆ. ಸಹಕಾರ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಮೈಲುಗಲ್ಲು ಸಾಧಿಸಿದೆ. ಇದಕ್ಕೆ ಮಾಜಿ ಪ್ರಧಾನಿ ಹೆಚ್ಡಿಡಿ ಅವರ ಕೊಡುಗೆಯೂ ಬಹಳ ಇದೆ. ಸ್ವತಂತ್ರವಾಗಿ ಹಾಲು ಉತ್ಪಾದನೆ ಮಾಡಿ, ಫ್ಯಾಕ್ ಮಾಡಿ ಸ್ವಾವಲಂಬನೆ ಹೊಂದಿದೆ. ಆತ್ಮನಿರ್ಭರಕ್ಕೆ ಹೈನುಗಾರಿಕೆ ದೊಡ್ಡ ಕೊಡುಗೆ ನೀಡಿದೆ ಎಂದು ತಿಳಿಸಿದರು.

ಮೈ ಶುಗರ್‌ ಎಥೆನಾಲ್‌ ಶೀಘ್ರ ಆರಂಭ: ಇನ್ನು ಕರ್ನಾಟಕ ರಾಜ್ಯ ಕ್ಷೀರ ಕ್ರಾಂತಿಗೆ ತನ್ನದೇ ಆದ ಕೊಡುಗೆ ನೀಡಿದೆ. ಕೃಷಿಯಲ್ಲಿ ಹೈನುಗಾರಿಕೆ ಬಹಳ ಪ್ರಮುಖವಾಗಿದೆ. ಹಾಗಾಗಿ ಸರ್ಕಾರ ಹೈನುಗಾರಿಕೆ ಪ್ರೋತ್ಸಾಹ ಧನ ನೀಡುತ್ತಿದೆ. ಬಿ.ಎಸ್‌. ಯಡಿಯೂರಪ್ಪ ಅವರ ಅವಧಿಯಲ್ಲೇ ಪ್ರೋತ್ಸಾಹ ಧನ ನೀಡುವ ಕೆಲಸ ಆರಂಭವಾಗಿದೆ‌. ಮಂಡ್ಯದ ಜೀವನಾಡಿ ಆಗಿರುವ ಮೈ ಶುಗರ್ ಕಾರ್ಖಾನೆ ಈಗಾಗಲೇ ಆರಂಭವಾಗಿದೆ. ಅಲ್ಲಿ ಯಥನಾಯಲ್ ಘಟಕ ಸ್ಥಾಪನೆ ಶೀಘ್ರ ಆಗಲಿದೆ. ಜಿಲ್ಲೆಯ ನೀರಾವರಿ ಕಾಲುವೆಗಳಾದ ವಿಶ್ವೇಶ್ವರಯ್ಯ ನಾಲೆಯ ಕೊನೆ ಭಾಗದಲ್ಲಿರುವ ರೈತರಿಗೆ ಯೋಜನೆಗಳ ನೀಡಲಾಗುವುದು ಎಂದು ತಿಳಿಸಿದರು. 

Karnataka Politics: ಮಹಾದಾಯಿ ಡಿಪಿಆರ್‌ ಒಪ್ಪಿಗೆ ಕುರಿತು ಅಮಿತ್‌ ಶಾಗೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ

ಸಹಕಾರಿ ಸಂಘದ ಭ್ರಷ್ಟಾಚಾರ ತಡೆದ ಅಮಿತ್‌ ಶಾ:  ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಮಾತನಾಡಿ, ಇಡೀ ದೇಶದಲ್ಲಿ ಸಹಕಾರ ಸಂಘಗಳಲ್ಲಿ ಮತ್ತು ಸಹಕಾರಿ ಬ್ಯಾಂಕ್‌ಗಳನ್ನು ನಡೆಯುತ್ತಿದ್ದ ಅಕ್ರಮ ಮತ್ತು ಭ್ರಷ್ಟಾಚಾರಗಳಿಂದ ಜನರಿಗೆ ಆಗುತ್ತಿದ್ದ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ತಾವೇ ಕೈಗೆತ್ತಿಕೊಂಡು ಒಂದು ಪ್ರತ್ಯೇಕ ಸಚಿವಾಲಯದ ಸ್ಥಾಪಿಸಿ ನಿಯಂತ್ರಣ ಮಾಡಿರುವುದು ಕೇಂದ್ರ ಸಚಿವ ಅಮಿತ್‌ ಶಾ ಅವರ ಕಾರ್ಯವೈಖರಿಯಾಗಿದೆ. ಇದರಲ್ಲಿ ಯಾವ ರಾಜಕಾರಣವನ್ನೂ ನಾನು ಮಾಡುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರು ಹೇಳಿದರು.

ನಾನು ಪ್ರಧಾನಮಂತ್ರಿ ಆಗಿದ್ದಾಗ ಈ ರಾಜ್ಯದಲ್ಲಿ ಕೇವಲ 12 ಸೊಸೈಟಿಗಳಿದ್ದವು. ಆಗ ಗುಜರಾತ್‌ನಲ್ಲಿ ಕುರಿಯ ಡೈರಿ ಉದ್ಘಾಟನೆಗೆ ಹೋದಾಗ ಕರ್ನಾಟಕದಲ್ಲಿಯೂ ಒಂದು ಇಂತಹ ಘಟಕ ನಿರ್ಮಿಸಲು ಹೇಳಲಾಯಿತು. ಆದರೆ, ಅದಕ್ಕೆ ಒಪ್ಪದೇ ಇಂತಹ ಘಟಕ ಒಂದೇ ಇರಬೇಕು ಎಂದು ತಿಳಿಸಿದ್ದರು. ಆದರೆ, ಕರ್ನಾಟಕಲ್ಲಿಯೂ ಈಗ ಹಾಳು ಒಕ್ಕೂಟ ಬೆಳೆದು ನಿಂತಿದ್ದು, ಅದರಲ್ಲಿ ಮುಖ್ಯವಾಗಿ ಮಂಡ್ಯದ ಗೆಜ್ಜಲಗೆರೆಯ ಮೆಗಾ ಡೇರಿಯನ್ನು ಉದ್ಘಾಟನೆ ಮಾಡಲು ಬಂದಿರುವುದು ಅವರ ಕಾರ್ಯದಕ್ಷತೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.

Mandya: ಜೆಡಿಎಸ್‌ ಭದ್ರಕೋಟೆ ಛಿದ್ರ ಆಗುವುದೇ?: ಅಮಿತ್‌ ಶಾ ಆಗಮನಕ್ಕೆ ಸಿದ್ಧಗೊಂಡ ಮಂಡ್ಯ ವೇದಿಕೆ

ರಾಜ್ಯ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್‌ ಮಾತನಾಡಿ, ಮಂಡ್ಯ ಜಿಲ್ಲೆಯ ಜೀವನಾಡಿ ಹಾಲಿನ ಡೇರಿಯಾಗಿದೆ. ಮಂಡ್ಯ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ಕೊಡಲಾಗಿದೆ. 1 ಲಕ್ಷ ಲೀ ಹಾಲು ಸಂಗ್ರಹವಾಗುವ ಸಾಮಾರ್ಥ್ಯ ಹೊಂದಿದೆ. ರೈತರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗುತ್ತದೆ. ಮಾಜಿ ಪ್ರಧಾನಿ ದೇವೇಗೌರು ಮೆಗಾ ಡೈರಿ ಉದ್ಘಾಟನೆಗೆ ಬಂದಿದ್ದಾರೆ. ಆರೋಗ್ಯ ಸರಿ ಇಲ್ಲದಿದ್ದರೂ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನಮ್ಮ ಸಿಎಂ ಹೆಚ್ಚಿನ ಅನುದಾನ ಕೊಟ್ಟು ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. 15 ಮಿಲ್ಕ್ ಯೂನಿಯನ್ ಆಗಿದೆ. 100 ಕೋಟಿ ಟರ್ನವರ್ ಹಾಗುವ ಸಾಮಾರ್ಥ್ಯ ಇದೆ. ಬೊಮ್ಮಯಿ ಅವರು ಯಶಸ್ವಿ ಕೆಲಸವನ್ನ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಆಡಳಿತ ಮಂಡಳಿ, ಶಾಸಕರು ಸಹಕರಿಸಿದ್ದಾರೆ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

Follow Us:
Download App:
  • android
  • ios