Asianet Suvarna News Asianet Suvarna News

Karnataka Politics: ಮಹಾದಾಯಿ ಡಿಪಿಆರ್‌ ಒಪ್ಪಿಗೆ ಕುರಿತು ಅಮಿತ್‌ ಶಾಗೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ

ಕೇಂದ್ರ ಸರ್ಕಾರದಿಂದ ಮಹದಾಯಿ ಯೋಜನೆ ಪರಿಷ್ಕೃತ ಡಿಪಿಆರ್ ಗೆ  ಅನುಮೋದನೆ ನೀಡಿರುವ ಕುರಿತು ಚರ್ಚೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಣ್ಯವಾದ ಸಲ್ಲಿಸಿದರು.

CM Bommai thanked Amit Shah for agreeing to Mahadayi DPR sat
Author
First Published Dec 30, 2022, 12:06 PM IST

ಬೆಂಗಳೂರು (ಡಿ.30): ಕೇಂದ್ರ ಸರ್ಕಾರದಿಂದ ಮಹದಾಯಿ ಯೋಜನೆ ಪರಿಷ್ಕೃತ ಡಿಪಿಆರ್ ಗೆ  ಅನುಮೋದನೆ ನೀಡಿರುವ ಕುರಿತು ಚರ್ಚೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಣ್ಯವಾದ ಸಲ್ಲಿಸಿದರು.

ಮಂಡ್ಯ ಮೆಗಾಡೈರಿ ಉದ್ಘಾಟನೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಅವರನ್ನು ಸ್ವಾಗಿತಿಸಿ ಬೆಳಗ್ಗೆ ಉಪಾಹಾರ ಸೇವನೆ ವೇಳೆ ಕುಶಲೋಪರಿ ವಿಚಾರಿಸಿ ಚರ್ಚೆಗಿಳಿದ ಸಿಎಂ ಬೊಮ್ಮಾಯಿ, ಮಹಾದಾಯಿ ಯೋಜನೆಯು ಕಳಸಾ -ಬಂಡೂರಿ ನೀರಾವರಿ ಯೋಜನೆ ವಿಸ್ತೃತ ಯೋಜನಾ ವರದಿ (ಡಿಪಿಆರ್)ಗೆ ಅನುಮೋದನೆ ನೀಡಿದ್ದಕ್ಕೆ ಧನ್ಯವಾದ ಅರ್ಪಿಸಿದರು.  ಜೊತೆಗೆ, ನಿನ್ನೆ ಬೆಳಗಾವಿಯಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕ್ಯಾಬಿನೆಟ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು. ಬಹಳಷ್ಟು ದಿನಗಳ ಬೇಡಿಕೆ ಈಡೇರಿಸಿದ ಬಗ್ಗೆ ಮಾಹಿತಿ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ನಿರ್ಣಾಯಕ ಹಾಗೂ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ನಿರ್ಣಾಯಕವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

Mandya: ಜೆಡಿಎಸ್‌ ಭದ್ರಕೋಟೆ ಛಿದ್ರ ಆಗುವುದೇ?: ಅಮಿತ್‌ ಶಾ ಆಗಮನಕ್ಕೆ ಸಿದ್ಧಗೊಂಡ ಮಂಡ್ಯ ವೇದಿಕೆ

ಇನ್ನು ಮುಂದಿನ ಚುನಾವಣಾ ದೃಷ್ಟಿಯಿಂದ ಈ ನಿರ್ಧಾರ ಅನುಕೂಲವಾಗಲಿದೆ ಅನ್ನೋ ಬಗ್ಗೆ ಮನವರಿಕೆ ಮಾಡಿಕೊಟ್ಟ ಸಿಎಂ ಬೊಮ್ಮಾಯಿ ಅವರು, ಎಸ್ಸಿ,ಎಸ್ಟಿ ಮೀಸಲಾತಿ ಏರಿಕೆ ಬಳಿಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಘಟನೆ ಚುರುಕಾಗಿರುವುದರ ಬಗ್ಗೆ ಮಾಹಿತಿಯನ್ನು ಅಮಿತ್‌ ಶಾ ಅವರಿಗೆ ನೀಡಿದರು.

ಬ್ರೇಕ್ ಫಾಸ್ಟ್ ಮಿಟಿಂಗ್ ವಿಥ್ ಸ್ಟೇಟ್ ಲೀಡರ್ಸ್: ಬೆಳಗ್ಗೆ ಉಪಾಹಾರ ಸೇವನೆ ವೇಳೆ ಸುಧೀರ್ಘ 45 ನಿಮಿಷಗಳ ಕಾಲ ಸಿಎಂ ಬಸವರಾಜ್ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲು, ಸಂಘಟನಾ ಕಾರ್ಯದರ್ಶಿ ರಾಜೇಶ್, ಉಪಾಧ್ಯಕ್ಷೆ ತೇಜಸ್ವಿನಿ ಅನಂತ ಕುಮಾರ್, ಸಿ ಟಿ ರವಿ ಸೇತಿ ಹಲವು ಮುಖಂಡರು ಕೇಂದ್ರ ಸಚಿವ ಅಮಿತ್ ಶಾ ಜೊತೆಗೆ ಚರ್ಚೆ ಮಾಡಿದರು. ಈ ವೇಳೆ ಜನತಾ ಪರಿವಾರಕ್ಕೆ ಅಧಿಕಾರ ಸಿಕ್ಕಿದ ಇತಿಹಾಸದ ಬಗ್ಗೆ ಅಮಿತ್‌ ಶಾ ಮಾಹಿತಿ ಪಡೆದುಕೊಂಡರು. ಯಾವ ಚುನಾವಣೆಯಲ್ಲಿ ಯಾರಿಗೆ ಯಾವ ಅಂಶ ಬೂಸ್ಟ್ ನೀಡಿದೆ ಅನ್ನೋ ಬಗ್ಗೆ ವಿವರಣೆ ಪಡೆದುಕೊಂಡರು.

ರಾಜ್ಯದ ರಾಜಕಾರಣ ಪರಿಸ್ಥಿತಿ ಮಾಹಿತಿ: ದೇವೆಗೌಡರು ಸಿಎಂ ಆದ ಬಗ್ಗೆ ಸಹ ವಿವರಣೆ ಪಡೆದ ಅಮಿತ್ ಶಾ ಅವರು, ಜೊತೆಗೆ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿರುವ ಬಗ್ಗೆ ಮಾಹಿತಿ ಪಡೆದರು. ಬಿಜೆಪಿ ಎರಡು ಸ್ಥಾನ ಪಡೆದಿದ್ದ ಬಗ್ಗೆ ಸಹ ವಿವರಣೆ ಪಡೆದುಕೊಂಡು, ಪಕ್ಷ ಈಗಿರುವ ವೇಗ ಹೆಚ್ಚಿಸಿಕೊಳ್ಳಬೇಕು ಎಂದು ಅಮಿತ್‌ ಶಾ ಸಲಹೆ ನೀಡಿದರು. ಚರ್ಚೆ ವೇಳೆ ಯಾವುದೇ ಸಂದರ್ಭದಲ್ಲೂ ಕಾಂಗ್ರೆಸ್ ಸಂಘಟನೆ ಬಗ್ಗೆ ಉಲ್ಲೇಖವಿಲ್ಲ. ರಾಜ್ಯ ನಾಯಕರು ಕೊಟ್ಟ ವಿವರಣೆ ಆಲಿಸುವಲ್ಲೇ ಬಹುತೇಕ ಸಮಯ ಕಳೆದ ಅಮಿತ್ ಷಾ. ಸಭೆ ಮುಕ್ತಾಯದ ಅವಧಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗಮಿಸಿದ್ದು, ಅವರೊಂದಿಗೆ ಸಂಜೆ ಮಾತನಾಡುವುದಾಗಿ ತಿಳಿಸಿದರು.

ಕುಮಾರಸ್ವಾಮಿಯಿಂದ ಸುಳ್ಳು ಆಶ್ವಾಸನೆ: ಸಿ.ಪಿ.ಯೋಗೇಶ್ವರ್‌

ಜಿಲ್ಲೆಯಾದ್ಯಂತ ಬಸ್ ಗಳ ಸಮಸ್ಯೆ: ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಬಸ್ಸಿಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು,ಸಾರ್ವಜನಿಕರ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಸರ್ಕಾರಿ ಹಾಗೂ ಖಾಸಗಿ ಬಸ್ ಗಳ ಬಳಕೆ ಮಾಡಲಾಗಿಯತ್ತು. ಅಮಿತ್ ಶಾ ಆಗಮನದಿಂದ ಮಂಡ್ಯ ಜಿಲ್ಲಾಧ್ಯಂತ ಎದುರಾದ ಬಸ್ ಗಳ ಸಮಸ್ಯೆ ಎದುರಾಗಿತ್ತು. ಗಂಟೆ ಗಟ್ಟಲೆ ಬಸ್ ಗಾಗಿ ಕಾದು ಕಾದು ಹೈರಾಣದ ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರು. ಜನಸಂಕಲ್ಪ ಯಾತ್ರೆಗೆ ತೆರಳಿದ ಸರ್ಕಾರಿ, ಖಾಸಗಿ ಸಾವಿರಾರು ಬಸ್ಸುಗಳು. ಅಮಿತ್ ಷಾ ಕಾರ್ಯಕ್ರಮಕ್ಕೆ ಜನರ ಕರೆತರಲು ಪ್ರತಿ ಹಳ್ಳಿ ಹಳ್ಳಿಗೂ ಬಸ್ಸುಗಳ ವ್ಯವಸ್ಥೆ ಮಾಡಿರುವ ಬಿಜೆಪಿ ನಾಯಕರು. ಮಂಡ್ಯದ ವಿವಿ ಆವರಣದಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಯಾತ್ರೆ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಬಿಜೆಪಿ ವಿರುದ್ದ ಹಿಡಿ ಶಾಪ ಹಾಕಿ ಬಸ್ಸಿಗಾಗಿ ಕಾಯುತ್ತಿರುವ ಸಾರ್ವಜನಿಕರು. 

Follow Us:
Download App:
  • android
  • ios