Asianet Suvarna News Asianet Suvarna News

Mandya: ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಹಾಲಿನ ಡೈರಿ ಸ್ಥಾಪನೆ: ಅಮಿತ್‌ ಶಾ ಘೋಷಣೆ

ಗುಜರಾತ್‌ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಂದಾಗಿ ಕೆಲಸ ಮಾಡಿದರೆ ಎಲ್ಲಾ ಊರು ಜಿಲ್ಲೆಗಳಲ್ಲಿ ಇಂತಹ ಡೇರಿ ಸ್ಥಾಪಿಸಬಹುದು. ಮೂರು ವರ್ಷದಲ್ಲಿ ಪ್ರತಿ ಪಂಚಾಯತಿಯಲ್ಲಿ ಹಾಲಿನ ಡೈರಿ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು.

Establishment of milk dairies in every panchayat of the state: Amit Shah contribution sat
Author
First Published Dec 30, 2022, 1:25 PM IST

ಮಂಡ್ಯ (ಡಿ.30):  ಗುಜರಾತ್‌ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಂದಾಗಿ ಕೆಲಸ ಮಾಡಿದರೆ ಎಲ್ಲಾ ಊರು ಜಿಲ್ಲೆಗಳಲ್ಲಿ ಇಂತಹ ಡೇರಿ ಸ್ಥಾಪಿಸಬಹುದು. ಮೂರು ವರ್ಷದಲ್ಲಿ ಪ್ರತಿ ಪಂಚಾಯತಿಯಲ್ಲಿ ಹಾಲಿನ ಡೈರಿ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು. ಮಂಡ್ಯದ 10 ಲಕ್ಷ ಲೀ. ಸಾಮರ್ಥ್ಯದ ಘಟಕವನ್ನು 14 ಲಕ್ಷ ಲೀ. ಸಾಮರ್ಥ್ಯಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್‌ ಶಾ ಭರವಸೆ ನೀಡಿದ್ದಾರೆ.

ಮಂಡ್ಯದ ಗೆಜ್ಜಲಗೆರೆಯಲ್ಲಿ ಮನ್‌ಮುಲ್‌ ಮೆಗಾ ಡೃರಿ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಲೇ ಸಹಕಾರ ಇಲಾಖೆಗೆ ರೈತರ ಬೇಡಿಕೆ ಇಟ್ಟಿದ್ದರು. ಅಂದೇ ಬೇಡಿಕೆ ಈಡೇರಿಸಿದ್ದರೆ ಪರಿಸ್ಥಿತಿಯೇ ಬೇರೆ ಇರುತಿತ್ತು. ಇದನ್ನು ಮಾಡಿದ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಹಕಾರಿ ಕ್ಷೇತ್ರಕ್ಕೆ ಅನ್ಯಾಯವಾಗದಂತೆ ನಮ್ಮ ಸರ್ಕಾರ ನೋಡಿಕೊಳ್ಳುತ್ತದೆ. ಕರ್ನಾಟಕದಲ್ಲಿ ಸಹಕಾರ ಕ್ಷೇತ್ರದಲ್ಲಿ ತುಂಬಾ ಚೆನ್ನಾಗಿ ಕೆಲಸ ಆಗುತ್ತಿದೆ. 210 ಗ್ರಾಮಗಳ 22 ಲಕ್ಷ ರೈತರು ಭಾಗಿಯಾಗಿದ್ದಾರೆ. 16 ಜಿಲ್ಲೆಗಳಿಂದ ಪ್ರತಿ ತಿಂಗಳು 28 ಕೋಟಿ 26 ಲಕ್ಷ ರೈತರಿಗೆ ಸಿಗುತ್ತಿದೆ ಎಂದು ತಿಳಿಸಿದರು.

Mandya: ಮೈಶುಗರ್‌ನಲ್ಲಿ ಶೀಘ್ರ ಎಥೆನಾಲ್ ಘಟಕ ಆರಂಭ: ಸಿಎಂ ಬೊಮ್ಮಾಯಿ ಭರವಸೆ

ಹಾಲಿನ ಕ್ರಾಂತಿಗೆ ರೈತರ ಸೇರ್ಪಡೆ: ಇನ್ನು ದೇಶದ ಎರಡು ಪ್ರಮುಖ ಹಾಲು ಉತ್ಪಾದಿಸುವ ರಾಜ್ಯಗಳಾದ ಗುಜರಾತ್‌ನ ಅಮೂಲ್ ಹಾಗೂ ಕರ್ನಾಟಕದ ನಂದಿನಿ ಒಂದಾಗಿ ಕೆಲಸ ಮಾಡಿದರೆ ಎಲ್ಲಾ ಊರು ಜಿಲ್ಲೆಗಳಲ್ಲಿ ಇಂತಹ ಡೇರಿ ಸ್ಥಾಪಿಸಬಹುದು. ಮೂರು ವರ್ಷದಲ್ಲಿ ಪ್ರತಿ ಪಂಚಾಯತಿಯಲ್ಲಿ ಡೇರಿ ಸ್ಥಾಪನೆಗೆ ಯೋಜನೆ ರೂಪಿಸಲಾಗುವುದು.  ಈ ಮೂಲಕ ದೇಶದ ಎಲ್ಲಾ ರೈತರನ್ನು ಹಾಲಿನ ಕ್ರಾಂತಿ  ಮೂಲಕ ಸೇರಿಸುತ್ತೇವೆ. ತಾಂತ್ರಿಕ ಸಹಕಾರ ಸೇರಿ ಎಲ್ಲಾ ಸಹಕಾರ ನೀಡಲು ನಾವು ಬದ್ದವಾಗಿದ್ದೇವೆ. ಗುಜರಾತ್, ಕರ್ನಾಟಕ ಎರಡು ರಾಜ್ಯಗಳು ದೇಶಕ್ಕಾಗಿ ಒಳ್ಳೆ ಕೆಲಸ ಮಾಡಬಹುದು. ಇದಕ್ಕೆ ಬೇಕಾದ ಸೌಲಭ್ಯವನ್ನು ನಮ್ಮ ಸಹಕಾರ ಇಲಾಖೆ ನೀಡುತ್ತದೆ. ರೈತರ ಖಾತೆಗೆ ನೇರ ಹಣ ಜಮಾವಣೆ ಮಾಡಿದಕ್ಕೆ ಬೊಮ್ಮಾಯಿ‌ ಸರ್ಕಾರಕ್ಕೆ ಅಭಿನಂದನೆ. ಇನ್ನು ಶಾಲಾ ಮಕ್ಕಳಿಗೂ ಹಾಲಿನ ವ್ಯವಸ್ಥೆ ಮಾಡಿದ್ದಕ್ಕೆ ಧನ್ಯವಾದ ತಿಳಿಸಿದರು.

ಮೆಗಾ ಡೈರಿ ಸಾಮರ್ಥ್ಯ ಹೆಚ್ಚಳ: ಕೃಷಿ ಮತ್ತು ಸಹಕಾರ ಇಲಾಖೆ ಬೇರೆ ಬೇರೆಯಾಗಿರಬೇಕು ಎಂಬುದು ಸ್ವಾತಂತ್ರ್ಯ ಬಂದ ದಿನದಿಂದಲೂ  ಜನರ ಬೇಡಿಕೆಯಾಗಿದ್ದು, ಈಗ ಅದು ಈಡೇರಿದೆ. ಜೊತೆಗೆ ಮಂಡ್ಯದಲ್ಲಿ ನಿರ್ಮಾಣ ಮಾಡಲಾಗಿರುವ ಗೆಜ್ಜಲಗೆರೆಯ 260 ಕೋಟಿ ರೂ ವೆಚ್ಚದ ಮೆಗಾ ಡೇರಿಯಲ್ಲಿ ಸದ್ಯ 10 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸಬಹುದಾಗಿದೆ. ಮುಂದೆ ಇದನ್ನ 14 ಲಕ್ಷ ಲೀಟರ್ ಗೆ ಹೆಚ್ವಳ ಮಾಡಲಾಗುತ್ತದೆ. ದೇಶದಲ್ಲಿ ಕರ್ನಾಟಕ ರಾಜ್ಯ ಸಹಕಾರ ಕ್ಷೇತ್ರದಲ್ಲಿ ಮುಂದಿದೆ ಎಂದು ತಿಳಿಸಿದರು.

Karnataka Politics: ಮಹಾದಾಯಿ ಡಿಪಿಆರ್‌ ಒಪ್ಪಿಗೆ ಕುರಿತು ಅಮಿತ್‌ ಶಾಗೆ ಧನ್ಯವಾದ ಅರ್ಪಿಸಿದ ಸಿಎಂ ಬೊಮ್ಮಾಯಿ

ಮಂಡ್ಯ ಅರ್ಥವಾದರೆ ಇಂಡಿಯಾ ಅರ್ಥಮಾಡಿಕೊಂಡಂತೆ:  ಮೆಗಾ ಡೇರಿ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ, ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಂಡ್ಯವನ್ನ ಅರ್ಥ ಮಾಡಿಕೊಂಡ್ರೆ ಇಡೀ ಇಂಡ್ಯಾವನ್ನ ಅರ್ಥ ಮಾಡಿಕೊಂಡ ಹಾಗಾಗುತ್ತದೆ. ಭಾರತದ ಶೇಕಡಾ 65 ಜನ ದೇಶದಲ್ಲಿ ವ್ಯವಸಾಯ ಮಾಡ್ತಿದ್ದಾರೆ. ಹೀಗಾಗಿ ಭಾರತದ ಶಕ್ತಿ ರೈತರು ಆಗಿದ್ದಾರೆ. ರೈತರ ಬದುಕು ಹಸನಾಗಲು ಸರ್ಕಾರಗಳು ಶ್ರಮಿಸುತ್ತಿವೆ. ನಮ್ಮ ಜಿಡಿಪಿಗೆ ಶೇ20ರಷ್ಟು ಕೊಡುಗೆ ಕೃಷಿಯಿಂದಲೇ ಸಿಗ್ತಿದೆ ಎಂದು ತಿಳಿಸಿದರು.

ಕಬ್ಬಿಗೆ ಬೆಂಬಲ ಬೆಲೆಯೂ ಘೋಷಿಸಬೇಕು:  ಸರ್ಕಾರ ಮತ್ತಷ್ಟು ರೈತರಿಗೆ ಅನುಕೂಲ ಆಗುವ ಯೋಜನೆ ತರಬೇಕು. ಸಹಕಾರ ಇಲಾಖೆ ಕೂಡಾ ಹೈನುಗಾರಿಕೆಗೆ ಉತ್ತೇಜನ ನೀಡ್ತಿದೆ. ಎಲ್ಲಾ ಜಿಲ್ಲೆಗಳಿಗಿಂತ ಮಂಡ್ಯದಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಆಗುತ್ತಿದೆ. ಸಹಕಾರ ಇಲಾಖೆಯಲ್ಲಿನ ಸಮಸ್ಯೆಗಳ ಬಗೆಹರಿಸಬೇಕು. ಈ ಬಗ್ಗೆ ಮಾಜಿ ಪ್ರಧಾನಿಗಳು ಮಾತನಾಡಿದ್ದರು. ಈ ಬಗ್ಗೆ ಸರ್ಕಾರ ಚಿಂತನೆ ಮಾಡಬೇಕು. ಸಹಕಾರಿ ಇಲಾಖೆಯ ನ್ಯೂನ್ಯತೆಗಳನ್ನ ಸರಿಮಾಡಬೇಕು. ಬಹಳ ದಿನಗಳಿಂದ ರೈತರಿಗೆ ಮೈಶುಗರ್ ಆರಂಭದ ಬೇಡಿಕೆ ಇತ್ತು. ಸರ್ಕಾರ ಮೈಶುಗರ್ ಆರಂಭಿಸಿದೆ. ಕಬ್ಬಿನ ಬೆಲೆಗೆ ಬೆಂಬಲ ಬೆಲೆಗೂ ಒತ್ತಡ ಇದೆ. ಕಳೆದ ವಾರವಷ್ಟೇ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲೇ ರೈತರ ಎಲ್ಲಾ ಸಮಸ್ಯೆಗಳನ್ನ ಪರಿಹರಿಸುವ ಕೆಲಸ ಆಗುತ್ತದೆ ಎಂಬ ಭರವಸೆಯಿದೆ ಎಂದು ತಿಳಿಸಿದರು.

Follow Us:
Download App:
  • android
  • ios