ರಾಜ್ಯದಲ್ಲಿ ಮತ್ತೆರೆಡು ಬೈ ಎಲೆಕ್ಷನ್: ವಿಜಯೇಂದ್ರಗೆ ಫುಲ್ ಡಿಮ್ಯಾಂಡ್

ಕರ್ನಾಟಕದಲ್ಲಿ ಮತ್ತೆರೆಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವುದರಿಂದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಬೇಡಿಕೆ ಹೆಚ್ಚಾಗಿದೆ.

Full demand To By vijayendra For Upcoming Maski and basavakalyan By Poll rbj

ಬೆಂಗಳೂರು, (ನ.10): ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದಂತೆ ನೆಲೆ ಇಲ್ಲದ ಶಿರಾ ಬೈ ಎಲೆಕ್ಷನ್‌ನಲ್ಲೂ ಬಿವೈ ವಿಜಯೇಂದ್ರ ಕಮಲ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಮೂಲಕ, ಬಿ.ವೈ.ವಿಜಯೇಂದ್ರ ತಮ್ಮ ಪ್ರಬಾವವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಹೌದು...ಬಿಜೆಪಿ ಪಕ್ಷದ ನಾಯಕರು ಹೇಳಿದಂತೆ ಬಿವೈ ವಿಜಯೇಂದ್ರ ಹೋದಲೆಲ್ಲಾ ಗೆಲುವು ಅಂತ. ಅದನ್ನು ವಿಜಯೇಂದ್ರ ಅವರು ನಿಜ ಮಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ದಳಪತಿಗಳ ಭದ್ರಕೋಟೆ ಕೆ.ಆರ್. ಪೇಟೆಯಲ್ಲಿ ಕಮಲ ಅರಳಿಸುವಲ್ಲಿ ಇದೇ ವಿಜಯೇಂದ್ರ ಪ್ರಮುಖ ಪಾತ್ರವಹಿಸಿದ್ದರು.

ಇದೀಗ ತಮ್ಮ ವರ್ಚಸ್ಸನ್ನು  ಶಿರಾ ಉಪಚುನಾವಣೆಯಲ್ಲು ಸಾಬೀತು ಮಾಡಿತೋರಿಸಿದ್ದಾರೆ. ಇದಿರಂ ದ ಮುಂಬರುವ ಎರಡು ವಿಧಾಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿಜಯೇಂದ್ರಗೆ ಫುಲ್ ಡಿಮ್ಯಾಂಡ್.

ವಿಜಯೇಂದ್ರ ತಂತ್ರಗಳ ಫಲ: ಮೊದಲ ಬಾರಿಗೆ ಶಿರಾದಲ್ಲಿ ಅರಳಿದ ಕಮಲ

ವಿಜಯೇಂದ್ರಗೆ ಫುಲ್ ಡಿಮ್ಯಾಂಡ್
Full demand To By vijayendra For Upcoming Maski and basavakalyan By Poll rbj

ಯೆಸ್.. ಬಿಜೆಪಿ ಪಕ್ಷದ ಉಪಚುನಾವಣೆಯ ಸ್ಪೆಷಲಿಸ್ಟ್ ಎಂದೇ ಗುರುತಿಸಿಕೊಂಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಈಗ ಫುಲ್ ಡಿಮ್ಯಾಂಡ್. ಇಷ್ಟರಲ್ಲಿಯೇ ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಬೀದರ್‌ನ ಬಸವಕಲ್ಯಾಣ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಘೋಷಣೆಯಾಗುವ ಸಾಧ್ಯತೆಗಳಿವೆ. ಇದರಿಂದ ನಾಯಕರು ಹಾಗೂ ಅಭ್ಯರ್ಥಿಗಳು ತಮ್ಮ ಕ್ಷೇತ್ರದ ಉಸ್ತುವಾರಿಯನ್ನು ವಿಜಯೇಂದ್ರ ಅವರಿಗೆ ನೀಡಿ ಎಂದು ಸಿಎಂ ಬಿಎಸ್‌ವೈಗೆ ಮನವಿ ಮಾಡಿದ್ದಾರೆ.

ಈಗಾಗಲೇ ಬಸವಕಲ್ಯಾಣ್ ಪ್ರವಾಸ ಕೈಗೊಳ್ಳಲು ಮುಂದಾಗಿರುವ ವಿಜಯೇಂದ್ರ ಉಪಚುನಾವನೆಯ ಕಾರ್ಯತಂತ್ರಗಳ ಬಗ್ಗೆ ಸ್ಥಳೀಯ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಮತ್ತೊಂದೆಡೆ ವಿಜಯೇಂದ್ರ ಅವರನ್ನ ಮಸ್ಕಿಗೆ ಕಳುಹಿಸಿ ಎನ್ನುವ ಆಗ್ರಹ ಕೇಳಿಬಂದಿದೆ.

ಮಸ್ಕಿ ಬಿಜೆಪಿ ಸಂಭವನೀಯ ಅಭ್ಯರ್ಥಿ ಮನವಿ
Full demand To By vijayendra For Upcoming Maski and basavakalyan By Poll rbj

ಉಪ ಚುನಾವಣೆಯಲ್ಲಿ ಬಿವೈ ವಿಜಯೇಂದ್ರ ಅವರ ಕಾರ್ಯತಂತ್ರಗಳನ್ನ ಸೂಕ್ಷ್ಮವಾಗಿ ಗಮನಿಸಿರುವ ಮಸ್ಕಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್ ಸಿಎಂಗೆ ಮನವಿಯೊಂದನ್ನ ಮಾಡಿಕೊಂಡಿದ್ದಾರೆ. ಮಸ್ಕಿ ಕ್ಷೇತ್ರದ ಉಪ ಚುನಾವಣೆಯ ನೇತೃತ್ವವನ್ನೂ ಬಿ.ವೈ. ವಿಜೇಯಂದ್ರ ಅವರಿಗೆ ಕೊಡುವಂತೆ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡುತ್ತೇವೆ ಎಂದು ಸ್ವತಃ ಬಿಜೆಪಿ ಸಂಭವನೀಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಯಾಕಂದ್ರೆ ಮಸ್ಕಿಯಿಂದ ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳಿಮದ ಸೋಲು ಕಂಡಿದ್ದ ಬಸನಗೌಡ ತುರ್ವಿಹಾಳ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಪ್ರತಾಪ್ ಗೌಡ ಅವರಿಗೆ ದೊಡ್ಡ ಚಿಂತೆಯಾಗಿದೆ. ಇದರಿಂದ ವಿಜಯೇಂದ್ರ ಅವರ ಮೂಲಕ ಉಪಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎನ್ನುವುದು ಪ್ರತಾಪ್ ಗೌಡರ ಲೆಕ್ಕಾಚಾರವಾಗಿದೆ.

ಇನ್ನೊಂದು ಪ್ರಮುಖ ಅಂಶ ಅಂದ್ರೆ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯತರು ಇದ್ದಾರೆ. ಹೀಗಾಗಿ ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಿದರೆ ಗೆಲ್ಲಲು ಪ್ಲಸ್ ಪಾಯಿಂಟ್ ಆಗಬಹುದು ಎನ್ನುವುದು ಪ್ರತಾಪಗೌಡ ಪಾಟೀಲ್ ಪ್ಲಾನ್..

ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ವಿವೈ ವಿಜಯೇಂದ್ರ ಅವರ ವರ್ಚಸ್ಸು ದಿನೇ ದಿನೇ ಏರಿಕೆಯಾಗುತ್ತಿದ್ದು, ಅವರಿಗೆ ಫುಲ್ ಡಿಮ್ಯಾಂಡ್ ಬಂದಿದೆ.

Latest Videos
Follow Us:
Download App:
  • android
  • ios