Asianet Suvarna News Asianet Suvarna News

ಸಂಸದ ರಾಘವೇಂದ್ರ ಎಷ್ಟು ಪೆದ್ದ ಅಂದರೆ ಯಾರಿಗೆ ಅರ್ಜಿ ಕೊಡಬೇಕು ಎಂದು ಗೊತ್ತಿಲ್ಲ: ಸಚಿವ ಮಧು ಬಂಗಾರಪ್ಪ

ಚುನಾವಣೆಯಲ್ಲಿ ರಾಘವೇಂದ್ರ ಎಷ್ಟು ಸುಳ್ಳು ಹೇಳಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ‌. 15 ಸಾವಿರ ನೌಕರರು ಇದ್ದ ವಿಐಎಸ್ಎಲ್‌ನಲ್ಲಿ ಕೆಲಸ ಇಲ್ಲದೇ ಬೀದಿಗೆ ಬಂದಿದ್ದಾರೆ. ವಿಐಎಸ್‌ಎಲ್‌ ಮುಚ್ಚಿದ್ದೆ ಜಿಲ್ಲೆಗೆ ರಾಘವೇಂದ್ರ ಕೊಡುಗೆ ಎಂದು ಸಚಿವ ಮಧು ಬಂಗಾರಪ್ಪ ಹರಿಹಾಯ್ದರು. 

education minister madhu bangarappa slams on mp by raghavendra at shivamogga gvd
Author
First Published Aug 12, 2024, 4:51 PM IST | Last Updated Aug 12, 2024, 4:51 PM IST

ಶಿವಮೊಗ್ಗ (ಆ.12): ಚುನಾವಣೆಯಲ್ಲಿ ರಾಘವೇಂದ್ರ ಎಷ್ಟು ಸುಳ್ಳು ಹೇಳಿದ್ದಾರೆ ಎನ್ನುವುದು ಜನರಿಗೆ ಗೊತ್ತಿಲ್ಲ‌. 15 ಸಾವಿರ ನೌಕರರು ಇದ್ದ ವಿಐಎಸ್ಎಲ್‌ನಲ್ಲಿ ಕೆಲಸ ಇಲ್ಲದೇ ಬೀದಿಗೆ ಬಂದಿದ್ದಾರೆ. ವಿಐಎಸ್‌ಎಲ್‌ ಮುಚ್ಚಿದ್ದೆ ಜಿಲ್ಲೆಗೆ ರಾಘವೇಂದ್ರ ಕೊಡುಗೆ ಎಂದು ಸಚಿವ ಮಧು ಬಂಗಾರಪ್ಪ ಹರಿಹಾಯ್ದರು. ಸುದ್ದಿಗಾರರೊಂದಿಗೆ ಮಾತನಾಡಿ, ವಿಎಸ್ಐಎಲ್ ಬಗ್ಗೆ ನಾನೂ ಚುನಾವಣೆ ಸಮಯದಲ್ಲಿ ಹೇಳಿದ್ದೆ. ಜನರು ನಂಬಿಕೊಂಡು ಚುನಾವಣೆಯಲ್ಲಿ ಸಹಕಾರ ಮಾಡುವುದು ಸಹಜ. ಆದರೆ, ಬಿಜೆಪಿಯವರು ವಿಐಎಸ್‌ಎಲ್‌ ವಿಚಾರದಲ್ಲಿ ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿಯವರು 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎನ್ನುತ್ತಾರೆ. ಇಲ್ಲಿ ಇರುವ ಕೆಲಸವನ್ನು ತೆಗೆಯುವ ಕಾರ್ಯ ಮಾಡುತ್ತಿದ್ದಾರೆ. ಇದಕ್ಕೆ ರಾಘವೇಂದ್ರನೇ ನೇರ ಕಾರಣ. ರಾಘವೇಂದ್ರ ಭದ್ರಾವತಿ ವಿಐಎಸ್‌ಎಲ್ ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಇಂತಹ ದೊಡ್ಡ ದೊಡ್ಡ ಇಂಡಸ್ಟ್ರೀಸ್‌ನನ್ನು ಮುಚ್ಚುವ ಕೆಲಸ ಮಾಡುತ್ತಿರುವ ರಾಘವೇಂದ್ರ ಹಾಗೂ ವಿಜಯೇಂದ್ರಕ್ಕೆ ಸೇರುತ್ತದೆ ಎಂದು ಆರೋಪಿಸಿದರು. ಚೋಟಾ ಸಿಗ್ನೇಚರ್ ಮಾಡಿ ಅವರ ಅಪ್ಪನನ್ನು ಜೈಲಿಗೆ ಕಳುಹಿಸಿದ್ದು ವಿಜಯೇಂದ್ರ ಅವರು. ಈ ಎಂಪಿ ಎಷ್ಟು ಪೆದ್ದ ಅಂದರೆ ಯಾರಿಗೆ ಅರ್ಜಿ ಕೊಡಬೇಕು ಎಂದು ಗೊತ್ತಿಲ್ಲ. ಅವರಿಗೆ ಬೇನಾಮಿ ದುಡ್ಡನ್ನು ಮಾಡುವುದರಲ್ಲಿ ಬುದ್ದಿವಂತರು. ಏಕೆಂದರೆ ಅವರಿಗೆ ಅದರದಲ್ಲಿ ತುಂಬಾ ಅನುಭವ ಇದೆ ಎಂದು ಹರಿಹಾಯ್ದರು.

ಬಿಜೆಪಿ ಪಾದಯಾತ್ರೆಗೆ ಜನಾಂದೋಲನ ತಕ್ಕ ಉತ್ತರ: ಸಚಿವ ಎಂ.ಬಿ.ಪಾಟೀಲ್‌

ತುಂಗಾಭದ್ರಾ ಗೇಟ್ ರಿಪೇರಿಗೆ ಕೇಂದ್ರ ಅನುದಾನ ನೀಡಲಿ: ತುಂಗಾಭದ್ರಾ ಗೇಟ್ ಹಾಳಾಗಿದೆ. ಜಲಾಶಯ ರಿಪೇರಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಹಣ ನೀಡಬೇಕು. ನಮ್ಮ ಜಿಲ್ಲೆಯಲ್ಲಿ ಎಲ್ಲಾ ಜಲಾಶಯಗಳು ಚೆನ್ನಾಗಿವೆ. ಎಲ್ಲಾ ಜಲಾಶಯಗಳ ಡಿಟೇಲ್ಸ್ ತೆಗೆದುಕೊಂಡಿದ್ದೇನೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಾಲ್ಕು ದಿನದಲ್ಲಿ ರಿಪೇರಿ ಮಾಡುತ್ತಾರೆ. ಡಿ.ಕೆ.ಶಿವಕುಮಾರ್ ಅವರೇ ಖುದ್ದು ಅಲ್ಲಿಗೆ ಭೇಟಿ ನೀಡಿದ್ದಾರೆ. ಶೀಘ್ರದಲ್ಲೇ ರಿಪೇರಿ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಪಾದಯಾತ್ರೆ ಬಿಜೆಪಿಗೇ ತಿರುಗು ಬಾಣ: ನಂಬರ್ ಒನ್ ಭ್ರಷ್ಟಾಚಾರಿ ವಿಜಯೇಂದ್ರ ಮತ್ತು ಆತನ ಗ್ಯಾಂಗ್ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸಿದೆ. ಇದು ಅವರಿಗೆ ತಿರುಗುಬಾಣವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಾತ್ರ ಇಲ್ಲದಿದ್ದರೂ ಕೂಡ ತನಿಖೆಗೆ ಆದೇಶ ನೀಡಿದ್ದರೂ ಕೂಡ ಬಿಜೆಪಿ ಇದನ್ನು ಸೃಷ್ಟಿಸಿ ಗೊಂದಲ ಹುಟ್ಟಿಸುತ್ತಿದೆ. ಮೈಸೂರು ಪಾದಯಾತ್ರೆ ಬಿಜೆಪಿ, ಜೆಡಿಎಸ್ ನಾಯಕರ ಕರ್ಮಕಾಂಡಗಳ ಬಯಲಿಗೆ ಎಳೆಯುವ ದಾರಿಯಾಗಲಿದೆ ಎಂದರು.

ವಿಜಯೇಂದ್ರನ ಸಹವಾಸದಿಂದ ಯಡಿಯೂರಪ್ಪ ಜೈಲಿಗೋದ್ರು: ಸಚಿವ ಮಧು ಬಂಗಾರಪ್ಪ

ಬಿಜೆಪಿ ಇದ್ದಾಗಲೇ ಮುಡಾ ಸೈಟ್ ನೀಡಿದ್ದು, ಆಗ ಇದೇ ವಿಜಯೇಂದ್ರನೇ ಇದನ್ನು ನಿರ್ವಹಣೆ ಮಾಡಿದ್ದು. ಎಲ್ಲಾ ಪಕ್ಷದವರು ನಿವೇಶನವನ್ನು ತೆಗೆದುಕೊಂಡಿದ್ದಾರೆ. ಇದಾದ ನಂತರ ಅನೇಕ ಮುಖ್ಯಮಂತ್ರಿಗಳು ಈ ರಾಜ್ಯಕ್ಕೆ ಬಂದು ಹೋಗಿದ್ದಾರೆ. ಏಕೆ ಆಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಡಲಿಲ್ಲ. ಈಗ ಯಾಕೆ ಕೊಟ್ಟಿ ದ್ದಾರೆ. ಅವರು ಕೊಟ್ಟಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆಯುವಂತೆ ಈಗಾಗಲೇ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಇದನ್ನು ಎಲ್ಲರೂ ಒಟ್ಟಾಗಿ ಎದುರಿಸುತ್ತೇವೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios