ಪಳನಿಸ್ವಾಮಿಗೆ AIADMK ನಾಯಕತ್ವ, ಪನೀರ್‌ಸೆಲ್ವಂ ಬೆಂಬಲಿಗರ ಮಾರಾಮಾರಿ!

ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಆಯ್ಕೆ, ಪನೀರ್ ಸೆಲ್ವಂ ಬೆಂಬಲಿಗರಿಂದ ವಿರೋಧ ವ್ಯಕ್ತಪಡಿಸಿದ್ದು, ಬೆಂಬ,ಲಿಗರು ಹೊಡೆದಾಡಿಕೊಂಡಿದ್ದಾರೆ.

Edappadi K Palaniswami elected as a AIADMK new Interim General Secretary gow

ಚೆನ್ನೈ (ಜು.11): ತಮಿಳುನಾಡು ವಿಧಾನಸಭೆ ವಿಪಕ್ಷ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರನನ್ನು ಎಐಎಡಿಎಂಕೆ ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಲು ಸೋಮವಾರ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಳನಿಸ್ವಾಮಿ ಅವರನ್ನು ಪಕ್ಷದ ಏಕೈಕ, ಪ್ರಮುಖ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆ ಇತ್ತು. ಹೀಗಾದರೆ ಮತ್ತೊಬ್ಬ ನಾಯಕ ಒ.ಪನ್ನೀರ್‌ ಸೆಲ್ವಂ ಅವರನ್ನು ಪಕ್ಷದಲ್ಲಿ ಸ್ಪಷ್ಟವಾಗಿ ಮೂಲೆಗುಂಪು ಮಾಡಿದಂತಾಗುತ್ತದೆ.

 

ಈ ಸಭೆಯ ಕುರಿತಾಗಿ  ಸೋಮವಾರ ಕೋರ್ಚ್‌ ತೀರ್ಪು ಪ್ರಕಟಿಸಿದ್ದು.  ಸಭೆಗೆ ಅನುಮತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ಎಐಎಡಿಎಂಕೆ ಸಭೆ ನಡೆಸಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಸೋಮವಾರ ನೇಮಕ ಮಾಡಲಾಗಿದೆ. ಇದೇ  ಸಭೆ ವಿರೋಧಿಸಿ ಪನ್ನೀರಸೆಲ್ವಂ ಬಣ ಕೋರ್ಚ್‌ ಮೆಟ್ಟಿಲೇರಿತ್ತು. ಇದೀಗ ಹಿನ್ನಡೆಯಾಗಿದ್ದು, ಪನ್ನೀರಸೆಲ್ವಂ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.

Maharashtra Political Crisis: ಸುಪ್ರೀಂನಲ್ಲಿ ಇಂದು ಶಿಂಧೆ - ಠಾಕ್ರೆ ಅರ್ಜಿ ವಿಚಾರಣೆ

ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಗೂ ಮುನ್ನ ಇ ಪಳನಿಸ್ವಾಮಿ ಮತ್ತು ಓ ಪನೀರ್‌ಸೆಲ್ವಂ ಬೆಂಬಲಿಗರು ಚೆನ್ನೈನಲ್ಲಿ ಘರ್ಷಣೆ ನಡೆಸಿದ್ದು, ವಿಡಿಯೀ ಈಗ ವೈರಲ್ ಆಗಿದೆ. ಸಾಮಾನ್ಯ ಕೌನ್ಸಿಲ್ ಸಭೆಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ ಈ   ಘರ್ಷಣೆ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಸುದ್ದಿ ಸಂಸ್ಥೆ ANI ಹಂಚಿಕೊಂಡ ವೀಡಿಯೊದಲ್ಲಿ, ಜನರು ಪರಸ್ಪರ ಕುರ್ಚಿಗಳನ್ನು ಎಸೆಯುವುದನ್ನು ಕಾಣಬಹುದು.

ಸಾಮಾನ್ಯ ಮಂಡಳಿ ಸಭೆಯ ನಿರ್ವಹಣೆಗೆ ತಡೆ ನೀಡುವಂತೆ ಓ ಪನೀರ್ಸೆಲ್ವಂ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿ,  ರಾಜಕೀಯ ಪಕ್ಷಗಳ ಜಗಳದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಇಂದು ಹೇಳಿದೆ.  ನ್ಯಾಯಮೂರ್ತಿ ಕೃಷ್ಣನ್ ರಾಮಸ್ವಾಮಿ ಅವರು ಸೋಮವಾರ ಬೆಳಿಗ್ಗೆ ತೀರ್ಪು ನೀಡಿದ್ದು, ತಮಿಳುನಾಡಿನ ಪ್ರಮುಖ ವಿರೋಧ ಪಕ್ಷದ ಸರ್ವೋಚ್ಚ ನಿರ್ಧಾರ ತೆಗೆದುಕೊಳ್ಳುವ ಸಾಮಾನ್ಯ ಮಂಡಳಿ  ಸಭೆಯನ್ನು ನಡೆಸಲು   ಎಡಪ್ಪಾಡಿ ಪಳನಿಸ್ವಾಮಿ  ಬಣಕ್ಕೆ ಅನುಮತಿ ನೀಡಿದೆ.

ಮೋದಿ ಸಾಧನೆ ಮೆಚ್ಚಿ ಬಿಜೆಪಿ ಸೇರಿದ ಕಾಂಗ್ರೆಸ್‌ ಪ್ರಮುಖರು

ಹೀಗಾಗಿ ಈ ಮೊದಲೇ ನಿರ್ಧರಿಸಿದಂತೆ  ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದೆ. ಇದೇ ಸಭೆ ವಿರೋಧಿಸಿ ಪನ್ನೀರಸೆಲ್ವಂ ಬಣ ಕೋರ್ಚ್‌ ಮೆಟ್ಟಿಲೇರಿತ್ತು. ಈ ಸಭೆಗೆ  ಸುಮಾರು 3,000 ಬೆಂಬಲಿಗರಿಗೆ ಅವಕಾಶ ಕಲ್ಪಿಸಲು ಆವರಣದಲ್ಲಿ ದೊಡ್ಡ ತೆರೆದ ಪ್ರದೇಶವನ್ನು ಬಳಸಿಕೊಂಡು ಪೆಂಡಾಲ್ ಹಾಕಲಾಗಿದೆ.  ಸುಮಾರು 80 ಅಡಿ ಉದ್ದ ಮತ್ತು 40 ಅಡಿ ಅಗಲದ ಭವ್ಯ ವೇದಿಕೆಯನ್ನು ನಿರ್ಮಿಸಲಾಗಿದ್ದು,  ಹಿರಿಯ ನಾಯಕರಿಗೆ ಅವಕಾಶ ಕಲ್ಪಿಸಲಾಗಿದೆ. ಇಡೀ ಆವರಣವನ್ನು ಪಕ್ಷದ ಕೇಂದ್ರ ಬಿಂದುಗಳಾದ ಎಂ ಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಭಾವಚಿತ್ರಗಳಿಂದ ಅಲಂಕರಿಸಲಾಗಿದೆ. 

 

ಇನ್ನೊಂದೆಡೆ ಪಳನಿಸ್ವಾಮಿ ನೇತೃತ್ವದ ಜನರಲ್ ಕೌನ್ಸಿಲ್ ಸಭೆಯ ಹಿನ್ನೆಲೆಯಲ್ಲಿ ಪನೀರ್‌ಸೆಲ್ವಂ ಬೆಂಬಲಿಗರು ಚೆನ್ನೈನ ರಾಯಪೆಟ್ಟಾದಲ್ಲಿರುವ ಎಐಎಡಿಎಂಕೆಯ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು,  ಪಳನಿಸ್ವಾಮಿ  ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios