Maharashtra Political Crisis: ಸುಪ್ರೀಂನಲ್ಲಿ ಇಂದು ಶಿಂಧೆ - ಠಾಕ್ರೆ ಅರ್ಜಿ ವಿಚಾರಣೆ

  • ಮಹಾರಾಷ್ಟ್ರ ವಿದ್ಯಮಾನ ಬಗ್ಗೆ ಇಂದು ಸುಪ್ರೀಂ ವಿಚಾರಣೆ
  • ಅನರ್ಹತೆ ನೋಟಿಸ್‌ ಪ್ರಶ್ನಿಸಿ ಶಿಂಧೆ ಬಣ ಅರ್ಜಿ
  • ಸರ್ಕಾರ ರಚನೆಗೆ ರಾಜ್ಯಪಾಲರ ಆಹ್ವಾನ ಪ್ರಶ್ನಿಸಿ ಉದ್ಧವ್‌ ಬಣ ಅರ್ಜಿ
Eknath Shinde and Uddhav Thackeray Supreme Court Hearing gow

ನವದೆಹಲಿ (ಜು.11): ಮಹಾರಾಷ್ಟ್ರ ರಾಜಕೀಯದ ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದ ಘಟನಾವಳಿಗಳ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಮಹತ್ವದ ವಿಚಾರಣೆ ಸುಪ್ರೀಂ ಕೋರ್ಚ್‌ನಲ್ಲಿ ಸೋಮವಾರ ನಡೆಯಲಿದೆ.

ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದ 16 ಬಂಡಾಯ ಶಾಸಕರು ತಮಗೆ ಉಪ-ಸ್ಪೀಕರ್‌ ನೀಡಿದ್ದ ಅನರ್ಹತೆ ನೋಟಿಸ್‌ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇನ್ನೊಂದೆಡೆ ಸರ್ಕಾರ ರಚನೆಗೆ ಹಾಗೂ ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ಶಿಂಧೆಗೆ ನೀಡಿದ್ದ ಆಹ್ವಾನ ಪ್ರಶ್ನಿಸಿ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನೆ ಅರ್ಜಿ ಸಲ್ಲಿಸಿತ್ತು. ಇದೇ ವೇಳೆ ಹೊಸ ಸ್ಪೀಕರ್‌ ಅವರು ಶಿವಸೇನೆಯ ಹೊಸ ಮುಖ್ಯ ಸಚೇತಕರನ್ನು ನೇಮಿಸಿದ್ದನ್ನೂ ಶಿವಸೇನೆ ಪ್ರಶ್ನಿಸಿದೆ. ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಚ್‌ನ ನ್ಯಾ ಇಂದಿರಾ ಬ್ಯಾನರ್ಜಿ ಹಾಗೂ ನ್ಯಾ ದಿನೇಶ್‌ ಮಹೇಶ್ವರಿ ಅವರ ಪೀಠ ವಿಚಾರಣೆ ನಡೆಸಲಿದೆ.

ಒಂದು ವೇಳೆ ಸೋಮವಾರವೇ ಸುಪ್ರೀಂ ಕೋರ್ಚ್‌ ತೀರ್ಪು ಪ್ರಕಟಿಸಿದರೆ ಮಹಾರಾಷ್ಟ್ರ ರಾಜಕಾರಣದ ಮೇಲೆ ತೀವ್ರ ತರದ ಪರಿಣಾಮ ಬೀರುವ ಸಾಧ್ಯತೆ ಇದೆ.

ಶಾಸಕರು ಮಲಗಿದ್ದಾಗ ಫಡ್ನವೀಸ್‌ ರಹಸ್ಯ ಭೇಟಿ: ಸಿಎಂ ಶಿಂಧೆ!

ಬಿಜೆಪಿಗೆ 25, ಶಿಂಧೆ ಬಣಕ್ಕೆ 13 ಸಚಿವ ಹುದ್ದೆ?: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಸಚಿವ ಸಂಪುಟದಲ್ಲಿ ಶೀಘ್ರ ರಚನೆ ಆಗುವ ಸಾಧ್ಯತೆ ಇದೆ. ಮಂತ್ರಿಮಂಡಲದಲ್ಲಿ ಬಹುಪಾಲು ಸ್ಥಾನಗಳು ‘ದೊಡ್ಡಣ್ಣ’ ಬಿಜೆಪಿ ಪಾಲಾಗಲಿವೆ.

ಸರ್ಕಾರ ರಚನೆ ಮಾಡಲು ಶಿಂಧೆ ಬಣದ ಜೊತೆ ಒಪ್ಪಂದ ಮಾಡಿಕೊಂಡ ಬಿಜೆಪಿಯಿಂದ 25 ಸಚಿವರು ನೇಮಕವಾಗಲಿದ್ದಾರೆ. ಶಿಂಧೆ ನೇತೃತ್ವದ ಶಿವಸೇನೆಯಲ್ಲಿರುವ 13 ಮಂದಿಗೆ ಸಚಿವ ಸಂಪುಟದಲ್ಲಿ ಸ್ಥಾನದಲ್ಲಿ ಸ್ಥಾನ ದೊರೆಯಲಿದೆ. ಕೆಲವು ಪಕ್ಷೇತರರು ಹಾಗೂ ಇತರರಿಗೂ ಸಚಿವಪಟ್ಟಲಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ರಾಜ್ಯ ಸಂಪುಟದಲ್ಲಿ ಗರಿಷ್ಠ 43 ಸಚಿವರು ಇರಲು ಅವಕಾಶವಿದೆ.

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಸಿಎಂ ಶಿಂಧೆ, ಮಹಾರಾಷ್ಟ್ರದಲ್ಲಿ ಇಂಧನ ಅಗ್ಗ!

‘ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಕೆಲವು ಅನುಭವಿಗಳನ್ನು ಹೊರತುಪಡಿಸಿ ಅನೇಕ ಸ್ಥಾನಗಳನ್ನು ಹೊಸಬರಿಗೆ ನೀಡಲಾಗುತ್ತದೆ. ಬಿಜೆಪಿಯೂ ಸಹ ಮುಂದಿನ ಚುನಾವಣೆ ದೃಷ್ಟಿಯಿಂದ ಹೊಸ ಮುಖಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ’ ಎಂದು ಮೂಲಗಳು ಹೇಳಿವೆ.

ಸಚಿವ ಸಂಪುಟದ ಕುರಿತಾಗಿ ಬಿಜೆಪಿ ಮತ್ತು ಶಿಂಧೆ ಬಣ ಈಗಾಗಲೇ ಒಪ್ಪಂದ ಮಾಡಿಕೊಂಡಿವೆ. ಇದರ ಪ್ರಕಾರ ಶಿಂಧೆ ಬಣದಲ್ಲಿರುವ ಪ್ರತಿ ಮೂವರಲ್ಲಿ ಒಬ್ಬ ಶಾಸಕ ಸಚಿವನಾಗುತ್ತಾರೆ ಮತ್ತು ಬಿಜೆಪಿಯಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎಂದು ಗೊತ್ತಾಗಿದೆ.

Latest Videos
Follow Us:
Download App:
  • android
  • ios