ಮೋದಿ ಸಾಧನೆ ಮೆಚ್ಚಿ ಬಿಜೆಪಿ ಸೇರಿದ ಕಾಂಗ್ರೆಸ್ ಪ್ರಮುಖರು
* ಮೋದಿ ಸಾಧನೆ ಮೆಚ್ಚಿದ ಸುತಗುಂಡಾರ ಗ್ರಾಮಸ್ಥರು
* ಚರಂತಿಮಠ ಅಭಿವೃದ್ಧಿಪರ ಕಾಮಗಾರಿಗಳನ್ನು ಮೆಚ್ಚಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ
* ಕಾಂಗ್ರೆಸ್ ಮುಖಂಡರ ಬೇಜವಾಬ್ದಾರಿ, ದುರ್ನಡತೆಯಿಂದ ಬೇಸತ್ತ ಕಾರ್ಯಕರ್ತರು
ಬಾಗಲಕೋಟೆ(ಜು.11): ಬಾಗಲಕೋಟೆ ಮತಕ್ಷೇತ್ರದ ಸುತಗುಂಡಾರ ಗ್ರಾಮದ ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮಹಾದೇವಪ್ಪ ಕುರಗೋಡಿ, ಮುದಿಯಪ್ಪ ಬೆಳಗಲ್, ಪರಸಪ್ಪ ರೊಟ್ಟಿ, ಹುಲ್ಲಪ್ಪ ದಂಡಾಪೂರ, ಸಿದ್ದಪ್ಪ ರೊಟ್ಟಿ, ಗ್ಯಾನಪ್ಪ ಹುಲ್ಲಿಕೇರಿ, ಮಲ್ಲಪ್ಪ ಪರಮನಟ್ಟಿ, ಹನಮಂತ ಮೇಟಿ, ಹನಮಂತ ಪಲ್ಲೇದ, ಯಲಗುರ್ದಪ್ಪ ಗೌಡರ, ಕರಿಯಪ್ಪ ಪೂಜಾರಿ, ಸಿದ್ದಪ್ಪ ತಳಗಿಹಾಳ, ಯಮನಪ್ಪ ಕೆರೂರ, ಬಸಪ್ಪ ಅವ್ವಣ್ಣವರ, ಸಿದ್ಲಿಂಗಪ್ಪ ಅರಶಿನಬೇಡಿ, ರಮೇಶ ಅವ್ವಣ್ಣವರ, ವಿಠಲ್ ತಳಗಿಹಾಳ, ನವೀನ ಚಿನಿವಾರ ಇವರು ಕಾಂಗ್ರೆಸ್ ಮುಖಂಡರ ಬೇಜವಾಬ್ದಾರಿ, ದುರ್ನಡತೆಯಿಂದ ಬೇಸತ್ತು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಜನಪರ ಯೋಜನೆಗಳನ್ನು, ಶಾಸಕ ವೀರಣ್ಣ ಚರಂತಿಮಠ ಅವರ ಅಭಿವೃದ್ಧಿಪರ ಕಾಮಗಾರಿಗಳನ್ನು ಮೆಚ್ಚಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ವೈಯಕ್ತಿಕ ಅಭಿವೃದ್ಧಿ ಕೆಲಸಗಳನ್ನು ಗ್ರಾಮೀಣ ಭಾಗದ ಸಾರ್ವಜನಿಕ ಕೆಲಸಗಳನ್ನು ಚಾಚೂತಪ್ಪದೇ ಮಾಡುವುದು ನನ್ನ ಕೆಲಸ, ಗ್ರಾಮೀಣ ಭಾಗದ ಪ್ರಮುಖ ಕೆಲಸಗಳಾದ ರಸ್ತೆ, ಗಟಾರು, ನೀರು, ವಿದ್ಯುತ್, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
Bagalkote: ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಲಿ: ಯತ್ನಾಳ ವ್ಯಂಗ್ಯ
ಈ ಸಂದರ್ಭದಲ್ಲಿ ಗ್ರಾಮೀಣ ಅಧ್ಯಕ್ಷರಾದ ಸುರೇಶ ಕೊಣ್ಣೂರ, ಮಲ್ಲೇಶ ವಿಜಾಪೂರ, ಕಲ್ಲಪ್ಪ ಭಗವತಿ, ಸುತಗುಂಡಾರ ಗ್ರಾಮದ ಚುನಾಯಿತ ಪ್ರತಿನಿಧಿಗಳು, ಹಿರಿಯರಾದ ಜಿ.ಎಸ್.ದೇಸಾಯಿ, ಎಚ್.ಜಿ.ಅಂಗಡಿ, ಬಿ.ಸಿ.ಬಸವನಾಳ ಹನಮಂತ ಕುರಗೋಡಿ, ವಿಠಲ್ ಚಿತವಾಡಗಿ, ಯಲಗುರ್ದಪ್ಪ ಮನ್ನಿಕಟ್ಟಿ, ಪರಪ್ಪ ಕೋಟಿ, ಅಡಿವೆಪ್ಪ ಸರೂರ ಮತ್ತು ಕುಂಚಗನೂರು, ಅನೀಲ ಪಾಟೀಲ ಕಾರ್ಯಕರ್ತರು ಉಪಸ್ಥಿತರಿದ್ದರು.