Asianet Suvarna News Asianet Suvarna News

ಕಲಬುರಗಿ: ಡಾ. ಶರಣಪ್ರಕಾಶ ಪಾಟೀಲರಿಗೆ ಮತ್ತೆ ಮಂತ್ರಿ ಭಾಗ್ಯ!

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ಜೋಡೆತ್ತು ಸರ್ಕಾರ ಶನಿವಾರ ರಚಿಸಿರುವ ಪೂರ್ಣ ಪ್ರಮಾಣದ ಸಚಿವ ಸಂಪುಟದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲರಿಗೆ ಮಂತ್ರಿಗಿರಿ ಭಾಗ್ಯ ದೊರಕಿದೆ. ಇದರೊಂದಿಗೆ ಮೊದಲ ಹಂತದಲ್ಲೇ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಜಿಲ್ಲೆಗೆ 2 ಸಚಿವ ಸ್ಥಾನ ದೊರಕಿವೆ.

Dr  Sharanprakash Patil is lucky to be minister again kalaburagi rav
Author
First Published May 28, 2023, 4:59 AM IST

ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.28) : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ಜೋಡೆತ್ತು ಸರ್ಕಾರ ಶನಿವಾರ ರಚಿಸಿರುವ ಪೂರ್ಣ ಪ್ರಮಾಣದ ಸಚಿವ ಸಂಪುಟದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲರಿಗೆ ಮಂತ್ರಿಗಿರಿ ಭಾಗ್ಯ ದೊರಕಿದೆ. ಇದರೊಂದಿಗೆ ಮೊದಲ ಹಂತದಲ್ಲೇ ಸಚಿವರಾಗಿದ್ದ ಪ್ರಿಯಾಂಕ್‌ ಖರ್ಗೆ ಸೇರಿದಂತೆ ಜಿಲ್ಲೆಗೆ 2 ಸಚಿವ ಸ್ಥಾನ ದೊರಕಿವೆ.

ಆದರೆ ಜಿಲ್ಲೆಯಿಂದಲೇ ಸಚಿವ ಸ್ಥಾನದ ಆಕಾಂಕ್ಷಿಗಾಗಿದ್ದ ಜೇವರ್ಗಿ ಶಾಸಕ, ಸತತ 3 ಬಾರಿಗೆದ್ದಿದ್ದ ಡಾ. ಅಜಯ್‌ ಸಿಂಗ್‌ ಹಾಗೂ ಆಳಂದದ ಶಾಸಕರಾದ ಬಿಆರ್‌ ಪಾಟೀಲರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು ಅವರಿಬ್ಬರು ಅಭಿಮಾನಿಗಳ ಬಳಗದಲ್ಲಿ ತೀವ್ರ ನಿರಾಶೆ ಮೂಡಿದೆ.

ಬಿಜೆಪಿ ಸರ್ಕಾರ ದಿವಾಳಿಯಾಗಿದೆ, ಧರ್ಮಗಳ ಮಧ್ಯೆ ಜಗಳ ಹಚ್ಚೋದೇ ಇವರ ಕೆಲಸ: ಶರಣಪ್ರಕಾಶ

ಕ್ಲೈಮ್ಯಾಕ್ಸ್‌ನಲ್ಲಿ ಅಜಯ್‌ ಹೆಸರು ಮಾಯ:

ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಈ ಬಾರಿ ಜೇವರ್ಗಿ ಶಾಸಕ ಡಾ. ಅಜಯ್‌ ಸಿಂಗ್‌ರಿಗೆ ಸಚಿವಗಿರಿ ಖಚಿತ ಎಂದು ಕಾರ್ಯಕರ್ತರು, ಅಭಿಮಾನಿಗಳು ಆಡಿಕೊಳ್ಳುತ್ತಿದ್ದು. ಕಾಂಗ್ರೆಸ್‌ ವಲಯದಲ್ಲಿಯೂ ಈ ಬಗ್ಗೆ ಸಾಕಷ್ಟುಹಿರಿಯರೇ ಹೇಳುತ್ತಿದ್ದರು. ಆರೆ ಸಂಪುಟ ವಿಸ್ತರಣೆಯ ಕಸರತ್ತಿನ ಕೊನೆಯ ಹಂತದ ಕ್ಲೈಮ್ಯಾಕ್ಸ್‌ನಲ್ಲಿ ಡಾ. ಅಜಯ್‌ ಸಿಂಗ್‌ ಹೆಸರು ಕೈಬಿಟ್ಟು ಹೋಗಿರೋದು ಜಿಲ್ಲೆಯ ರಾಜಕೀ ವಲಯದಲ್ಲಿ ಅಚ್ಚರಿಗೂ ಕಾರಣವಾಗಿದೆ.

ಅಜಯ್‌ ಅಭಿಮಾನಿಗಳು ಅದೆಷ್ಟರ ಮಟ್ಟಿಗೆ ಸಚಿವ ಸ್ಥಾನದ ಬಗ್ಗೆ ನಿಖರವಾಗಿದ್ದರೆಂದರೆ ಡಾ. ಅಜಯ್‌ ಸಿಂಗ್‌ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನೂ ಹಿಸಿಬಿಟ್ಟಿದ್ದರು. ಆದರೆ ರಾಜಕೀಯದಲ್ಲಿ ಏನಾದರೂ ಆಗುತ್ತದೆ ಎಂಬ ಮಾತಿನಂತೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ಡಾ. ಅಜಯ್‌ ಸಿಂಗ್‌ ಕೈ ತಪ್ಪಿಹೋಗಿದೆ.

ಕಳೆದ 3 ದಿನದಿಂದಲೂ ದೆಹಲಿಯಲ್ಲಿಯೇ ಬೀಡು ಬ್ಟಿದ್ದ ಡಾ. ಅಜಯ್‌ ಸಿಂಗ್‌ ಶತಾಯು ಗತಾಯ ಸಚಿವಗಿಇ ಹೊಂದಲೇಬೇಕು ಎಂದು ಪ್ರಯತ್ನಿ$್ಸದ್ದಲ್ಲದೆ ಅದಕ್ಕಾಗಿ ಹೈಕಮಾಂಡ್‌ ಹಂತದಲ್ಲಿ ಸಾಕಷ್ಟುಪ್ರಯತ್ನಿಸಿದ್ದರೂ ಕೂಡಾ ಅದು ಅವರಿಂದ ದೂರ ಹೋಯ್ತು, ಇದಕ್ಕೇನು ಕಾರಣವೋ? 3ಬಾರಿ ಶಾಸಕರು, ಅಭಿವೃದ್ಧಿ ಚಂತನೆಯ ಜನನಾಯಕರಾದರೂ ಸಚಿವ ಸ್ಥಾನ ಯಾಕೆ ದೊರಕಿಲಲ್ಲ ಎಂದು ಅವರೇ ಅಚ್ಚರಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಈ ಬಾರಿ 9ರಲ್ಲಿ 7 ಕ್ಷೇತ್ರಗಳು ಕೈವಶವಾಗಿದ್ದವು. ಹೀಗಾಗಿ ಬಹುಮತದ ಕಾಂಗ್ರೆಸ್‌ ಪಕ್ಷಕ್ಕೆ ಜೇವರ್ಗಿ ಹಾಗೂ ಆಳಂದ ಸೇರಿದಂತೆ ಎಲ್ಲಾ 7 ಕ್ಷೇತ್ರಗಳ ಮತದಾರರು ಹರಸಿದ್ದರಾದರೂ ಮಂತ್ರಿಗಿರಿ ಹಂಚಿಕೆಯಲ್ಲಿ ಹೊಸಬರಿಗೆ ಅವಕಾಶ ಸಿಕ್ಕಿಲ್ಲ, ಈಗಾಗಲೇ ಮೊದಲ ಹಂತದಲ್ಲೇ ಕ್ಯಾಬಿನೆಟ್‌ ದರ್ಜೆಯಲ್ಲಿ ಪ್ರಿಯಾಂಕ್‌ ಖರ್ಗೆ ಸಚಿವರಾಗಿದ್ದರು. ವಿಸ್ತರಣೆಯಲ್ಲಿ ಇದೀಗ ಹೈಕಮಾಂಡ್‌ Ó4 ನೇ ಬಾರಿಯ ಸಾಸಕರಾಗಿರುವ ಡಾ. ಶರಣಪ್ರಕಾಶ ಪಾಟೀಲರಿಗೆ ಸಚಿವ ಸ್ಥಾನ ನೀಡಿದೆ.

7 ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡೋದು ಎಂದು ಹೈಕಮÞಂಡ್‌ ಹಂತದಲ್ಲಿ ಮಾತುಕತೆಯಾಗಿತ್ತು, ಅದರಂತೆಯೇ ಡಾ. ಅಜಯ್‌ ಅಭಿಮಾನಿಗಳು ತಮ್ಮ ನಾಯಕನಿಗೇ ಸಚಿವಗಿರಿ ನಿಶ್ಚಿತ ಎಂದುಕೊಂಡಿದ್ದರೆ, ಇತ್ತ ಆಳಂದದ ಬಿಆರ್‌ ಅಭಿಮಾನಿಗಳೂ ತಮ್ಮವರಿಗೆ ಸಚಿವಸ್ಥಾನ ಪಕ್ಕಾ ಎಂದು ತಿಳಿದಿದ್ದರು. ಆದರೆ ಹೈಕಮಾಂಡ್‌ ಆಯ್ಕೆ ಸೇಡಂ®ನಿಂದ ಈಗಾಗಲೇ 1 ಬಾರಿ ಸಚಿವರಗಿದ್ದ ಡಾ. ಶರಣಪ್ರಕಾಶ ಆಗಿತ್ತು. ಡಾ. ಶರಣಪ್ರಕಾಶ ಶನಿವಾರ ಬೆಂಗಳೂರಲ್ಲಿ ನಡೆದ ಸಂಪುಟ ವಿಸ್ತರಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಂತ್ರಿಗಿರಿ ಅಜಯ್‌ ಸಿಂಗ್‌ ಕೈತಪ್ಪಿದ್ದು ಯಾಕೆ?

ಇಂಥವರೇ ಸಚಿವರು ಎಂಬ ಅಂತಿಮ ಪಟ್ಟಿಹೊರಬೀಳುತ್ತಿದ್ದಂತೆಯೇ ಜೇವರ್ಗಿಯಲ್ಲಿ ಹಾಗೂ ಕಲಬುರಗಿಯಲ್ಲಿರುವ ಡಾ. ಅಜಯ್‌ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟುನಿರಾಶೆಯ, ಕೋಪದ ಭಾವನೆಗಳಿರುವ ಪೋಸ್ಟ್‌ ಹಾಕುತ್ತ ಕಾಂಗ್ರೆಸ್‌ ಹೈಕಮಾಂಡ್‌ ಗಮನ ಸೆಳೆಯುವ ಯತ್ನ ಮಾಡಿದ್ದಾರೆ.

ಜೆಡಿಎಸ್‌ನಿಂದ ಬಂದ ಮದು ಬಂಗಾರಪ್ಪಗೆ ಮಂತ್ರಿಗಿರಿ ಕೊಟ್ರಿ, ಕಾಂಗ್ರೆಸ್‌ನ ಡಾ. ಅಜಯ್‌ ಸಿಂಗ್‌ಗೆ ಮಂತ್ರಿಗಿರಿ ಇಲ್ಲ, ಕಾಂಗ್ರೆಸ್‌ ಪಕ್ಷದ ಈ ಧೋರಣೆಗೆ ದಿಕ್ಕಾರ, ಅಜಯ್‌ ಸಿಂಗ್‌ ಮಂತ್ರಿಯಾಗದೆ ಹೋದೆ ಉಗ್ರವಾಗಿ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅಜಯ್‌ ಅಭಿಮಾನಿಗಳು ಹಲವರು ಫೇಸ್ಬುಕ್‌, ವಾಟ್ಸಅಪ್‌ ಗುಂಪುಗಳಲ್ಲಿ ಪೋಸ್ಟ್‌ ಹಾಕಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆಯವರೇ ಇರೋದರಿಂದ ಈ ಬಾರಿ ಡಾ. ಅಜಯ್‌ ಸಿಂಗ್‌ ಅವರಿಗೆ ಮಂತ್ರಿಗಿರಿ ಪಕ್ಕಾ ಎನ್ನಲಾಗಿತ್ತು. ದಿ. ಧರಂಸಿಂಗ್‌ ಅವರ ದೋಸ್ತಿ ಕೊಂಡಾಡುವ ಡಾ. ಖರ್ಗೆಯವರೇ ಏಐಸಿಸಿಯಲ್ಲಿರೋದರಿಂದ ಹಾಗೂ ಡಾ. ಖರ್ಗೆಯವರನ್ನ ತಂದೆ ಸಮಾನರೆಂದು ಡಾ. ಅಜಯ್‌ ಸಿಂಗ್‌ ಹೇಳೋದರಿಂದ ಜನ ಇಟ್ಟುಕೊಂಡಿದ್ದ ಮಂತ್ರಿಗಿರಿ ನಿರೀಕ್ಷೆ ಕೊನೆ ಹಂತದಲ್ಲಿ ಹುಸಿಯಾಗಿದೆ.

ಬಿಆರ್‌ ಪಾಟೀಲರಿಗೂ ಕೈ ತಪ್ಪಿದ ಮಂತ್ರಿಗಿರಿ

ಸಿಎಂ ಸಿದ್ದರಾಮಯ್ಯ(CM Siddaramaiah) ಹಾಗೂ ಎಐಸಿಸಿ ಅಧ್ಯಕ್ಷ ಡಾ. ಖರ್ಗೆ(AICC President Mallikarjun kharge) ಅವರಿಗೆ ತುಂಬ ಹತ್ತಿರವಾಗಿದ್ದರೂ ಆಳಂದ ಶಾಸಕರಾದ ಬಿಆರ್‌ ಪಾಟೀಲರಿಗೆ ಸಚಿವ ಸ್ಥಾನ ಕೈ ತಪ್ಪಿರೋದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ, ಬಿಆರ್‌ ಪಾಟೀಲರಿಗೆ ತುಂಬ ನಿರಾಶೆಯಾದರೆ, ಅವರ ಅಭಿಮಾನಿಗಳನ್ನು ಕೆರಳಿಸಿದೆ.

ಬಿಆರ್‌ ಪಾಟೀಲರಿಗೆ ಸಚಿವ ಸ್ಥಾನಕ್ಕೆ ಯಾಕೆ ಪರಿಗಣಿಸಲಾಗಿಲ್ಲ? ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ. ಆದಾಗ್ಯೂ ಅಭಿಮಾನಿಗಳು ಪಾಟೀಲರಿಗೆ ಸಚಿವಸ್ಥಾನ ನೀಡದ ಕಾಂಗ್ರೆಸ್‌ ವಿರುದ್ಧ ಮುನಿಸಿಕೊಂಡಿದ್ದಾರೆ.

ಪ್ರಿಯಾಂಕ್‌ಗೆ ಆರ್‌ಡಿಪಿಆರ್‌ ಖಾತೆ, ಡಾ. ಶರಣಪ್ರಕಾಶಗೆ ಉನ್ನತಶಿಕ್ಷಣ

ಜಿಲ್ಲೆಯಿಂದ ಸಚಿವರಾಗಿರುವ ಚಿತ್ತಾಪುರದ ಶಾಸಕ ಪ್ರಿಯಾಂಕ್‌ ಖರ್ಗೆ(Priyank kharge)ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಸೇಡಂನ ಡಾ. ಶರಣಪ್ರಕಾಶ ಪಾಟೀಲ(Sharana prakash patil)ರಿಗೆ ಉನ್ನತ ಶಿಕ್ಷಣ ಖಾತೆಗಳು ಹಂಚಿಕೆಯಾಗಿವೆ. ಪ್ರಿಯಾಂಕ್‌ ಖರ್ಗೆ ಕಳೆದೆರಡು ಬಾರಿಯ ಸಚಿವ ಸ್ಥಾನದಲ್ಲಿ ಪ್ರವಾಸೋದ್ಯಮ, ಐಟಿಬಿಟಿ ಖಾತೆ ಹಾಗೂ ಸಮಾಜ ಕಲ್ಯಾಣ ಕಾತೆಗಳನ್ನು ನಿರ್ವಹಿಸಿದ್ದರು. ಈ ಬಾರಿಯ ಸಂಪುಟದಲ್ಲಿ ಇವರಿಗೆ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಖಾತೆ ದೊರಕಿದೆ. ಈ ಕಾತೆಯಲ್ಲಿ ಕೆಲಸ ಮಾಡಲು ಸಾಕಷ್ಟುಅವಕಾಶಗಲಿರೋದರಿಂದ ಪ್ರಿಯಾಂಕ್‌ರಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಭಾಗದಲ್ಲಿನ ಜನ ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ.

RSS Ban: ಇಷ್ಟು ದಿನ ಕುರುಡರ ಆಡಳಿತದಲ್ಲಿ ಆಟವಾಡಿದ ಹಾಗಲ್ಲ: ಬಿಜೆಪಿಗೆ ಪ್ರಿಯಾಂಕ್ ತಿರುಗೇಟು

ಇನ್ನು ಕಳೆದ ಬಾರಿಯ ಸಿದ್ದರಾಮಯ್ಯ ಸರ್ಕಾರದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ನಿಭಾಯಿಸಿದ್ದ ಡಾ. ಶರಣಪ್ರಕಾಶ ಪಾಟೀಲರಿಗೆ ಈ ಬಾರಿ ಉನ್ನತ ಶಿಕ್ಷಣ ಖಾತೆ ದೊರಕಿದೆ. ರಾಜ್ಯದ ವಿಶ್ವವಿದ್ಯಾಲಯಗಳು ಸೇರಿದಂತೆ ಉನ್ನತ ಶಿಕ್ಷಣ ರಂಗದಲ್ಲಿ ಸಾಕಷ್ಟುಕೆಲಸ ಮಾಡಲು ಅವಕಾಶ ಇರೋದರಿಂದ ಡಾ. ಶರಣಪ್ರಕಾಶರ ಮೇಲೆ ನಿರೀಕ್ಷೆಗಳು ಹೆಚ್ಚಿವೆ.

Follow Us:
Download App:
  • android
  • ios