Asianet Suvarna News Asianet Suvarna News

ಬಿಜೆಪಿ ಸರ್ಕಾರ ದಿವಾಳಿಯಾಗಿದೆ, ಧರ್ಮಗಳ ಮಧ್ಯೆ ಜಗಳ ಹಚ್ಚೋದೇ ಇವರ ಕೆಲಸ: ಶರಣಪ್ರಕಾಶ

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸುಳ್ಳು ಅಶ್ವಾಸನೆ ನೀಡಿ, ಹಣದ ಅಮಿಷ ಮತ್ತು ಕೆಲಸ ನೀಡುತ್ತೇವೆಂದು ಭರವಸೆ ನೀಡಿ ಪಕ್ಷಕ್ಕೆ ಸೆಳೆದುಕೊಳ್ಳುತ್ತಾರೆ. ಬಿಜೆಪಿ ಆಯುಷ್ಯ ಕೇವಲ ನಾಲ್ಕು ತಿಂಗಳ ಮಾತ್ರ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷಾಂತರ ಮಾಡಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ಡಾ. ಶರಣಪ್ರಕಾಶ ಪಾಟೀಲ 

Congress Leader Dr Sharanaprakash Patil Slams BJP Government grg
Author
First Published Dec 6, 2022, 10:30 PM IST

ಚಿಂಚೋಳಿ(ಡಿ.06): ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸುಳ್ಳು ಅಶ್ವಾಸನೆ ನೀಡಿ, ಹಣದ ಅಮಿಷ ಮತ್ತು ಕೆಲಸ ನೀಡುತ್ತೇವೆಂದು ಭರವಸೆ ನೀಡಿ ಪಕ್ಷಕ್ಕೆ ಸೆಳೆದುಕೊಳ್ಳುತ್ತಾರೆ. ಬಿಜೆಪಿ ಆಯುಷ್ಯ ಕೇವಲ ನಾಲ್ಕು ತಿಂಗಳ ಮಾತ್ರ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷಾಂತರ ಮಾಡಿ ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. 2023ರಲ್ಲಿ ಕಾಂಗ್ರೆಸ್‌ ಪಕ್ಷ ಅ​ಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಕಾಂಗ್ರೆಸ್‌ ಪಕ್ಷದ ಹಿಂದುಳಿದ ವರ್ಗಗಳ ಘಟಕದ ಪದಾ​ಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿರುವ ಬಿಜೆಪಿ ಸರಕಾರ 40% ಕಮಿಷನ್‌ ಸರ್ಕಾರ ಎಂಬುದು ಜನರಿಗೆ ಗೊತ್ತಾಗಿದೆ. ಅವರು ಬೆಲೆ ಏರಿಕೆ ಕುರಿತು ಮಾತನಾಡುವುದಿಲ್ಲ. ಅಭಿವೃದ್ಧಿ ಕಡೆಗೆ ಬಿಜೆಪಿ ಸರಕಾರದ ಗಮನವಿಲ್ಲ. ಚುನಾವಣೆ ಸಂದರ್ಭದಲ್ಲಿ ಅಶ್ವಾಸನೆ ನೀಡಿದ ಬಿ.ಎಸ್‌.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಜನರಿಗೆ ಮನೆಗಳೇ ಕೊಟ್ಟಿಲ್ಲ. ಕೇವಲ 20-30 ಮನೆಗಳು ನೀಡಲಾಗಿದೆ. ಚಿಂಚೋಳಿ ಕ್ಷೇತ್ರದಲ್ಲಿ ಮನೆಗಳು ಸರಕಾರದಿಂದ ಮಂಜೂರಿಯಾಗಿಲ್ಲ. ಜನರಿಗೆ ಮೋಸ ಮಾಡುವ ಕುತಂತ್ರ ಇಲ್ಲಿನ ಶಾಸಕರು, ಸಂಸದರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬೀದರ್‌ ಜಿಲ್ಲೆಗೆ ಅನು​ದಾನ ಕೊಡಿ: ಕೇಂದ್ರ ಸಚಿವರಿಗೆ ಖೂಬಾ ಮನವಿ

ರಾಜ್ಯ ಬಿಜೆಪಿ ಸರಕಾರ ದಿವಾಳಿಯಾಗಿದೆ. ಸಮಾಜ ಧರ್ಮಗಳ ಮಧ್ಯೆ ಭಾವನಾತ್ಮಕ ಜಗಳ ಹಚ್ಚುವುದು ಇವರ ಕೆಲಸವಾಗಿದೆ. ಕಾಂಗ್ರೆಸ್‌ ಪಕ್ಷ ಬಿಟ್ಟು ಬಿಜೆಪಿ,ಜೆಡಿಎಸ್‌ಗೆ ಹೋದವರಿಗೆ ಭವಿಷ್ಯ ಇಲ್ಲ. ಸೇರ್ಪಡೆ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ. ಭಾರತ ಜೋಡೋ ಪಾದಯಾತ್ರೆಯಿಂದ ದೇಶದಲ್ಲಿ ಸಾಕಷ್ಟುಬದಲಾವಣೆ ಗಾಳಿ ಬೀಸುತ್ತಿದೆ. ಎಸ್‌ಟಿ ಮಾಡುತ್ತೇವೆಂದು ಭರವಸೆ ನೀಡಿ ಕಬ್ಬಲಿಗ ಸಮಾಜಕ್ಕೆ ಬಿಜೆಪಿ ಮೋಸ ಮಾಡಿದೆ. ಚಿಂಚೋಳಿ ಬಿಜೆಪಿ ಶಾಸಕ ಡಾ. ಅವಿನಾಶ ಜಾಧವ್‌ ಕಲಬುರಗಿ ಸಂಸದ ಡಾ. ಉಮೇಶ ಜಾಧವ್‌ ಪಕ್ಷಕ್ಕೆ ದ್ರೋಹ ಮಾಡಿದ ಬಗ್ಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಎಐಸಿಸಿ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆರವರು ಹಿಂದುಳಿದ ಪ್ರದೇಶಕ್ಕೆ ಸಂವಿಧಾನದ 371(ಜೆ)ಕಲಂ ಜಾರಿಗೊಳಿಸಿ ಕಲ್ಯಾಣ ಕರ್ನಾಟಕ ಪ್ರದೇಶದ ಜನರಿಗೆ ಭಾಗ್ಯದ ಬೆಳಕು ನೀಡಿದ್ದಾರೆ. ಡಿ.10ರಂದು ಕಲಬುರಗಿ ನಗರಕ್ಕೆ ಆಗಮಿಸುತ್ತಿರುವುದರಿಂದ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಸುಭಾಷ ರಾಠೋಡ ಮಾತನಾಡಿ, ತಾಲೂಕಿಗೆ ಹೆಚ್ಚುವರಿ ಮನೆಗಳು ಮಂಜೂರಿಯಾಗಿವೆ ಎಂದು ಶಾಸಕರು, ಸಂಸದರು ಹೇಳಿ ಈಗಾಗಲೇ ಅವರ ಚೇಲಾಗಳಿಂದ ಪಟ್ಟಿಸಿದ್ಧಪಡಿಸಿದ್ದಾರೆ. ಗ್ರಾಮಸಭೆ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆಗೊಳಿಸಬೇಕು. ಕಾನೂನು ಬಾಹಿರವಾಗಿ ಆಯ್ಕೆ ನಡೆದರೆ ಪಕ್ಷದಿಂದ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಬೀದರ್ ಶಾಸಕ ರಹೀಂ ಖಾನ್‌ಗೆ ಗ್ರಾಮಸ್ಥರಿಂದ ಫುಲ್ ಕ್ಲಾಸ್

ಸಮಾರಂಭದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೆದಾರ, ಮಲ್ಲಿಕಾರ್ಜುನ ಪೂಜಾರಿ, ದೇವೆಂದ್ರಪ್ಪ ಮರತೂರ, ಚಿತ್ರಶೇಖರ ಪಾಟೀಲ, ರೇವಣಸಿದ್ದಪ್ಪ ಅಣಕಲ, ವೀರಭಧ್ರಯ್ಯ ಸ್ವಾಮಿ ಸಾಲಿಮಠ, ರಾಜಗೋಪಾಲರೆಡ್ಡಿ ಮಾತನಾಡಿದರು. ವೇದಿಕೆಯಲ್ಲಿ ತಾಲೂಕ ಬ್ಲಾಕ್‌ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಬಸವರಾಜ ಮಲಿ, ಗೋಪಾಲರಾವ ಕಟ್ಟಿಮನಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಸುರೇಶ ಭಂಟಾ, ಚಿರಂಜೀವಿ ಶಿವರಾಮಪೂರ, ಪ್ರಭುಲಿಂಗ ಲೇವಡಿ, ಮಹೆಮೂದ ಪಟೇಲ್‌ ಸಾಸರಗಾಂವ, ಬಾಸೀತ, ಮಲ್ಲಿಕಾರ್ಜುನ ಕೋಟಪಳ್ಳಿ, ಅನೀಲಕುಮಾರ ಜಮಾದಾರ, ಜಗನ್ನಾಥ ಕಟ್ಟಿ, ನರಸಿಂಹಲು ಸವಾರಿ, ನರಸಿಂಹ ಕುಂಬಾರ, ಸಂತೋಷ ಗುತ್ತೆದಾರ, ನಾಗೇಶ ಗುಣಾಣಿ, ಸಿದ್ದಪ್ಪ ಪೂಜಾರಿ, ಶಬ್ಬೀರ ಅಹೆಮದ, ಬಸವರಾಜ ಕೋಲಕುಂದಿ, ಶಬ್ಬೀರಮಿಯ ಕೋಡ್ಲಿ, ಮಲ್ಲಿಕಾರ್ಜುನ ಭೂಶೆಟ್ಟಿ, ಜರ್ನಾಧನ ಕುಂಚಾವರಂ ಇನ್ನಿತರಿದ್ದರು. ತಾಲೂಕ ಕಾಂಗ್ರೆಸ್‌ ಹಿಂದುಳಿದ ವರ್ಗಗಳ ಘಟಕ ಅಧ್ಯಕ್ಷ ಸುರೇಶ ಬಂಟಾ ಸ್ವಾಗತಿಸಿದರು. ಶರಣು ಪಾಟೀಲ ಮೋತಕಪಳ್ಳಿ ನಿರೂಪಿಸಿದರು. ಪ್ರಭುಲಿಂಗ ಲೇವಡಿ ವಂದಿಸಿದರು.
 

Follow Us:
Download App:
  • android
  • ios