‘ಗಾಜಿನ ಮನೆಯಲ್ಲಿದ್ದು ಕಲ್ಲು ಹೊಡೆಸೋದು ಬೇಡ’: ರಘು ಆಚಾರ್
ಹೆಲಿಕಾಪ್ಟರ್‌ನಲ್ಲಿ ಓಡಾಡುವುದು ನನ್ನ ವೈಯುಕ್ತಿಕ. ನಾನು ಯಾರಿಂದಲೂ ದುಡ್ಡು ಪಡೆದಿಲ್ಲ. ನನ್ನ ವಿರುದ್ಧ ಯಾವುದೇ ಅಕ್ರಮಗಳ ಬಗ್ಗೆ ಆರೋಪವಿಲ್ಲ ಎಂದು ವಿಪ ಮಾಜಿ ಸದಸ್ಯ ರಘು ಆಚಾರ್ ಹೇಳಿದರು.

ಚಿತ್ರದುರ್ಗ (ಜ.30) : ಹೆಲಿಕಾಪ್ಟರ್‌ನಲ್ಲಿ ಓಡಾಡುವುದು ನನ್ನ ವೈಯುಕ್ತಿಕ. ನಾನು ಯಾರಿಂದಲೂ ದುಡ್ಡು ಪಡೆದಿಲ್ಲ. ನನ್ನ ವಿರುದ್ಧ ಯಾವುದೇ ಅಕ್ರಮಗಳ ಬಗ್ಗೆ ಆರೋಪವಿಲ್ಲ ಎಂದು ವಿಪ ಮಾಜಿ ಸದಸ್ಯ ರಘು ಆಚಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಜಿನ ಮನೆಯಲ್ಲಿ ಕುಳಿತು ತಮ್ಮ ಪಟಾಲಂ ಮೂಲಕ ಎದುರಿಗೆ ಇದ್ದವರ ಮೇಲೆ ಕಲ್ಲು ಹೊಡೆ ಸೋದು ಬೇಡ. ಆರೋಪಗಳಿಗೆ ಸ್ವಯಂ ಉತ್ತರ ನೀಡುವಂತೆ ಶಾಸಕ ತಿಪ್ಪಾರೆಡ್ಡಿಗೆ ವಿಧಾನ ಪರಿಷತ್ ಮಾಜಿ ಸದಸ್ಯರಘು ಸಲಹೆ ನೀಡಿದರು.
ಶಾಸಕ ತಿಪ್ಪಾರೆಡ್ಡಿ ವಿರುದ್ಧ ಭ್ರಷ್ಟಾಚಾರ ಆರೋಪ: ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ ರಘು ಆಚಾರ್
ಐತಿಹಾಸಿಕ ಚಿತ್ರದುರ್ಗ ಕೋಟೆ ಮುಂಭಾಗ 200 ರಿಂದ 300 ಮೀಟರ್ ಅಂತರದಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲವೆಂಬ ಕಾನೂನು ಇದೆ. ತಿಪ್ಪಾರೆಡ್ಡಿ ಪಟಾಲಂಗಳು ಬಹು ಅಂತಸ್ತಿನ ಕಟ್ಟಡ ಕಟ್ಟಿದ್ದಾರೆ, ಇದಕ್ಕೆ ಅವರೇನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಶಾಸಕ ಜಿ.ಎಚ್ ತಿಪ್ಪಾರೆಡ್ಡಿ ಅವರ ವಿರುದ್ಧ ‘ಪರ್ಸೆಂಟೇಜ್’ ಪಡೆದರೆಂದು ಗುತ್ತಿಗೆದಾರರೇ ಗಂಭೀರ ಆರೋಪ ಮಾಡಿದ್ದಾರೆ. ಆರೋಪ ಬಂದ ತಕ್ಷಣ ಶಾಸಕರು ಆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಬೇಕಿತ್ತು. ಅದನ್ನು ಬಿಟ್ಟು ಅವರ ಪಟಾಲಂ ಮೂಲಕ ಮಾತನಾಡಿಸುವುದು ಅವರಿಗೆ ಶೋಭೆ ತರುವುದಿಲ್ಲವೆಂದರು.
ಗಂಗಾ ಕಲ್ಯಾಣ, ಆಶ್ರಯ ಮನೆ ಸೇರಿದಂತೆ ಪ್ರತಿಯೊಂದು ಯೋಜನೆಯಲ್ಲೂ ಹಣ ಪಡೆದಿರುವ ಆರೋಪವೂ ಫಲಾನುಭವಿಗಳಿಂದಲೇ ಕೇಳಿ ಬಂದಿದೆ. ಈ ಎಲ್ಲಾ ಆರೋಪಗಳ ಬಗ್ಗೆ ಸ್ವತಃ ತನಿಖೆಗೆ ಶಾಸಕರು ಮುಂದಾಗಬೇಕು. ಇಲ್ಲದಿದ್ದರೆ ಫೆಬ್ರವರಿ 7ರಿಂದ ವಿಧಾನಸಭೆ ಕ್ಷೇತ್ರದ ಪ್ರತಿ ಮನೆಗೂ ಹೋಗಿ ವಾಸ್ತವಾಂಶ ಬಯಲು ಮಾಡುವುದಾಗಿ ರಘು ಆಚಾರ್ ಎಚ್ಚರಿಸಿದರು.
ಕೆಂಪಣ್ಣ ಶೀಘ್ರ ದಾಖಲೆ ನೀಡಲಿ: ಇಲ್ಲದಿದ್ರೆ ಶಿಕ್ಷೆ ಅನುಭವಿಸಲಿ: ಮುನಿರತ್ನ
ರಾಜಕೀಯ ನಿವೃತ್ತಿ ತಗೊಳ್ತೀನಿ:
ಸ್ಥಳೀಯ ಶಾಸಕರ ಕಮಿಷನ್ ದಂಧೆ ಕುರಿತು ಲೋಕಾಯುಕ್ತ ತನಿಖೆæಗೆ ನಾವೇ ಆಗ್ರಹಿಸಿದ್ದೆವು. ಈ ಆರೋಪ ಜನಪ್ರತಿನಿಧಿಗಳಿಗೆ ಅಂಟಿರುವ ಕಳಂಕ. ಶಾಸಕ ಯಾರೇ ಆದ್ರು ಅವರ ಮೇಲೆ ನಂಬಿಕೆ ಇಟ್ಟು ಮತ ಹಾಕಿರ್ತಾರೆ. ಅದನ್ನು ಉಳಿಸಿಕೊಳ್ಳುವುದು ಶಾಸಕರ ಕರ್ತವ್ಯ. ನಾನು ಪ್ರತಿ ಹಳ್ಳಿಗಳಿಗೂ ಹೋಗಿದ್ದೀನಿ. ಚಿತ್ರದುರ್ಗದಲ್ಲಿ ಎಷ್ಟುಕಾಂಕ್ರೀಚ್ ರೋಡ್ ಆಗಿದೆ ಕ್ವಾಲಿಟಿ ಚೆಕ್ ಮಾಡಿಸೋಣ. ಕಳಪೆ ಇಲ್ಲ ಅಂದ್ರೆ ನಾನು ರಾಜಕೀಯ ನಿವೃತ್ತಿ ತಗೊಳ್ತೀನಿ ಎಂದು ತಿಪ್ಪಾರೆಡ್ಡಿಗೆ ವಿಪ ಮಾಜಿ ಸದಸ್ಯ ರಘು ಆಚಾರ್ ಸವಾಲು ಹಾಕಿದರು.