ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದಿರುವ ಎಲ್ಲ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಸ್‌ಐಟಿ, ನಿವೃತ್ತ ನ್ಯಾಯಾಧೀಶರು ಅಥವಾ ಸಿಬಿಐಗೆ ವಹಿಸುವ ಧೈರ್ಯವಿದೆಯೇ? ಎಂದು ಸಂಸದ ಜಗದೀಶ್‌ ಶೆಟ್ಟರ್‌ ಸವಾಲು ಹಾಕಿದರು. 

ಹುಬ್ಬಳ್ಳಿ (ಜು.20): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದಿರುವ ಎಲ್ಲ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಸ್‌ಐಟಿ, ನಿವೃತ್ತ ನ್ಯಾಯಾಧೀಶರು ಅಥವಾ ಸಿಬಿಐಗೆ ವಹಿಸುವ ಧೈರ್ಯವಿದೆಯೇ? ಎಂದು ಸಂಸದ ಜಗದೀಶ್‌ ಶೆಟ್ಟರ್‌ ಸವಾಲು ಹಾಕಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಹಗರಣ ಕುರಿತು ಒಂದೊಂದೇ ಮಾಹಿತಿಗಳು ಹೊರಗಡೆ ಬರುತ್ತಿವೆ. ಇಷ್ಟೆಲ್ಲ ಹಗರಣ ನಡೆದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೂ ಅಗಿಯೇ ಇಲ್ಲ ಎನ್ನುತ್ತಿದ್ದರು. ಆದರೆ, ಈಗ ಹಗರಣವಾಗಿರುವುದು ಸತ್ಯ ಎನ್ನುತ್ತಿದ್ದಾರೆ. ಇಂತಹ ಭಂಡತನದ ಹೇಳಿಕೆ ಸರಿಯಲ್ಲ ಎಂದರು.

Add Asianetnews Kannada as a Preferred SourcegooglePreferred

ಮುಡಾದಲ್ಲಿ ಪತ್ನಿ ಹೆಸರಿನಲ್ಲಿ ಮುಖ್ಯಮಂತ್ರಿ ಬೇರೆ ಜಾಗ ತೆಗೆದುಕೊಂಡಿದ್ದಾರೆ. ಇವಿನ್ನೂ ಅಧಿವೇಶನದಲ್ಲಿ ಚರ್ಚೆಗೆ ಬಂದಿಲ್ಲ. ಇದರ ಮಧ್ಯೆ ಹಿಂದಿನ ಸರ್ಕಾರದ ಹಗರಣಗಳ ಹೊರಗೆ ಬರಲಿವೆ ಎಂದು ಪ್ರತಿಪಕ್ಷವನ್ನು ಹೆದರಿಸುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ಹಗರಣ ಆಗಿದ್ದರೆ ನಿಮ್ಮ ಸರ್ಕಾರ ಬಂದು ವರ್ಷವಾಯಿತು. ಈ ವರೆಗೂ ಏಕೆ ತನಿಖೆಗೆ ಒಪ್ಪಿಸಲಿಲ್ಲ ಎಂದು ಪ್ರಶ್ನಿಸಿದರು.

ದರ್ಶನ್ ಫ್ಯಾನ್ಸ್‌ಗಳೇ ನನ್ನ ಮಗಳ ಬಗ್ಗೆ ಕೆಟ್ಟದಾಗಿ ಮಾತನಾಡಿರೋದು: ಕಣ್ಣೀರಿಟ್ಟ ದಿವ್ಯಾ ವಸಂತ ತಾಯಿ!

ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣ ಹೊರಗಡೆ ತಂದಿದ್ದು ನಾನು. ಆಗ ಕೆಂಪಣ್ಣ ಆಯೋಗದಿಂದ ತನಿಖೆ ಮಾಡಿಸಲಾಯಿತು. ವರದಿ ಕೊಟ್ಟಿದ್ದರೂ ಅದನ್ನು ಸಿದ್ದರಾಮಯ್ಯ ಮುಚ್ಚಿಟ್ಟರು. ವರದಿ ಕೊಟ್ಟ ನಂತರ ಸದನದಲ್ಲಿ ಮಂಡನೆ ಮಾಡಬೇಕು. ಇದಕ್ಕೂ ಮೊದಲೇ ನಾನು ನಿರಪರಾಧಿ ಎಂದು ಹೇಳುತ್ತಿದ್ದಾರೆ. ನೀವು ನಿರಪರಾಧಿ ಆಗಿದ್ದರೆ ಅರ್ಕಾವತಿ ವರದಿ ಮಂಡನೆ ಮಾಡಿ. ನೀವು ಮಾಡದೇ ಇದ್ದರೆ ತಪ್ಪಿತಸ್ಥರು ಎಂದಾಗುತ್ತದೆ. ವಿತಂಡವಾದ ಮಾಡಬಾರದು. ಇವೆಲ್ಲ ಪ್ರಕರಣ ಡೈವರ್ಟ್ ಮಾಡುವ ಸಲುವಾಗಿಯೇ ಸಿದ್ದರಾಮಯ್ಯ ಕನ್ನಡಿಗರಿಗೆ ಮೀಸಲು ವಿಷಯವನ್ನು ಇಂದು ಮುನ್ನೆಲೆಗೆ ಬಿಟ್ಟಿದ್ದಾರೆ ಎಂದು ಹರಿಹಾಯ್ದರು.

ಸಿದ್ದು ರಾಜೀನಾಮೆಗೆ ನೀಡಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸಾವಿರಾರು ಕೋಟಿ ರು. ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಸರು ತಳುಕು ಹಾಕಿಕೊಂಡಿರುವುದರಿಂದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಜಗದೀಶ್‌ ಶೆಟ್ಟರ್‌ ಆಗ್ರಹಿಸಿದ್ದಾರೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಡಾದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿಗೆ ಬದಲಿ ನಿವೇಶನ ಹಂಚಿಕೆಯಾಗಿರುವುದು ಬಹಳ ಚರ್ಚೆಗೆ ಗ್ರಾಸವಾಗಿದೆ. 

ಮಾಜಿ ಸಿಎಂಗಳಾದ ಬಿಎಸ್‌ವೈ, ಬೊಮ್ಮಾಯಿ ಇದ್ದಾಗ ₹300 ಕೋಟಿ ಅಕ್ರಮ: ಡಿ.ಕೆ.ಶಿವಕುಮಾರ್‌

ಈ ಮುಖ್ಯಮಂತ್ರಿಗಳ ಹೆಸರು ಕೇಳಿ ಬಂದಿರುವುದರಿಂದ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಮುಡಾ ಹಗರಣ ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ವಿರೋಧ ಪಕ್ಷಗಳನ್ನು ಹೆದರಿಸಲಾಗುತ್ತಿದೆ. ಈ ನಡುವೆ ಅವರದೇ ಪಕ್ಷದ ಕೆಲ ಸಚಿವರು, ಶಾಸಕರು ಹಗರಣ ನಡೆದಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಪಕ್ಷದವರು ನಿಯಮ ಮೀರಿ ಬದಲಿ ನಿವೇಶ ಪಡೆದಿದ್ದರೂ ಕ್ರಮ ಆಗಬೇಕು. ಹೀಗಾಗಿ ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.