Asianet Suvarna News Asianet Suvarna News

ವಿಧಾನಸಭಾ ಚುನಾವಣೆ ಸೋಲಿಗೆ ಹೆದರಬೇಡಿ: ಮಾಜಿ ಡಿಸಿಎಂ ಈಶ್ವರಪ್ಪ

ಪ್ರಧಾನಿ ನರೇಂದ್ರ ಮೋದಿ ಒಬ್ಬ ವಿಶ್ವ ನಾಯಕರಾಗಿದ್ದಾರೆ. ಅಂದು ಪ್ರದಾನಿ ಮೋದಿಯವರಿಗೆ ವಿಸಾ ಕೊಡಲು ನಿರಾಕರಿಸಿದ ದೇಶದವರೇ ಇಂದು ನರೇಂದ್ರ ಮೋದಿಯವರ 9 ವರ್ಷಗಳ ಆಡಳಿತ ಕಂಡು ತಮ್ಮ ದೇಶಕ್ಕೆ ಕರೆಯಿಸಿಕೊಂಡು ಅಪ್ಪಿಕೊಳ್ಳುತ್ತಿದ್ದಾರೆ. ಇದೇ ಮೋದಿಯವರ ತಾಕತ್ತು ಮತ್ತು ಹೆಮ್ಮೆಯ ಸಾಧನೆ ಎಂದ ಮಾಜಿ ಡಿಸಿಎಂ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ

Do Not be Afraid of Karnataka Assembly Elections Defeat Says KS Eshwarappa grg
Author
First Published Jul 29, 2023, 1:51 PM IST | Last Updated Jul 29, 2023, 1:51 PM IST

ಅಥಣಿ(ಜು.29):  ಬಿಜೆಪಿ ಕಾರ್ಯಕರ್ತರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಸೋಲಿಗೆ ಹೆದರಬೇಡಿ. ಇವೆಲ್ಲ ಹೊಸದಲ್ಲ. ಒಂದು ಕಾಲದಲ್ಲಿ ಶಿವಮೊಗ್ಗದಲ್ಲಿ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳಿಗೆ ಇರಲಿಲ್ಲ. ಆದರೆ, ಈಗ ಸ್ಥಳೀಯ ಸಂಸ್ಥೆಯಿಂದ ಹಿಡಿದು ಲೋಕಸಭೆವರಗೂ ಎಲ್ಲರೂ ಬಿಜೆಪಿಯವರೇ ಗೆದ್ದಿದ್ದಾರೆ. ಆತ್ಮ ವಿಶ್ವಾಸದಿಂದ ಮುನ್ನುಗ್ಗಿ ನಾವೆಲ್ಲ ನಿಮ್ಮೊಂದಿಗಿದ್ದೇವೆ ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಭಾರತೀಯ ಜನತಾ ಪಕ್ಷ ಅಥಣಿ ಮಂಡಲ ವತಿಯಿಂದ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷಗಳ ಸಾಧನೆ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಒಬ್ಬ ವಿಶ್ವ ನಾಯಕರಾಗಿದ್ದಾರೆ. ಅಂದು ಪ್ರದಾನಿ ಮೋದಿಯವರಿಗೆ ವಿಸಾ ಕೊಡಲು ನಿರಾಕರಿಸಿದ ದೇಶದವರೇ ಇಂದು ನರೇಂದ್ರ ಮೋದಿಯವರ 9 ವರ್ಷಗಳ ಆಡಳಿತ ಕಂಡು ತಮ್ಮ ದೇಶಕ್ಕೆ ಕರೆಯಿಸಿಕೊಂಡು ಅಪ್ಪಿಕೊಳ್ಳುತ್ತಿದ್ದಾರೆ. ಇದೇ ಮೋದಿಯವರ ತಾಕತ್ತು ಮತ್ತು ಹೆಮ್ಮೆಯ ಸಾಧನೆ ಎಂದರು.

ಗ್ಯಾರಂಟಿ ಮಂಜೂರಾತಿ ಪತ್ರದಲ್ಲಿ ಸಿಎಂ, ಡಿಸಿಎಂ ಫೋಟೊ ತೆಗೆಯಿರಿ: ಗಡಾದ

ಪ್ರಧಾನಿ ಮೋದಿಯವರು ವಿಶ್ವ ನಾಯಕ ಅನ್ನೊದು ಈಗ ಎಲ್ಲರಿಗೂ ಗೊತ್ತಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ನಮ್ಮ ವಿಜ್ಞಾನಿಗಳು ಕಂಡು ಹಿಡಿದ ಕೋವಿಡ್‌ ಲಸಿಕೆಯನ್ನು ದೇಶದ ಜನರಿಗೆ ಮಾತ್ರ ಅಲ್ಲದೆ ವಿದೇಶಗಳಿಗೂ ನೀಡುವ ಮೂಲಕ ಭಾರತದ ಸಾಧನೆಯನ್ನು ವಿದೇಶಕ್ಕೆ ಪರಿಚಯಿಸಿ ಅನೇಕ ದೇಶಗಳಿಂದ ಮೆಚ್ಚುಗೆ ಗಳಿಸಿದರು. ಆದರೆ, ಈ ಕೋವಿಡ್‌ ಲಸಿಕೆ ಹಾಕೊಂಡರೇ ಮಕ್ಕಳಾಗಲ್ಲ ಅಂತಾ ಕಾಂಗ್ರೆಸ್‌ಗರು ಅಪಪ್ರಚಾರ ಮಾಡಿದರು. ಕದ್ದು ಮುಚ್ಚಿ ಬಂದು ಲಸಿಕೆ ಹಾಕಿಸಿಕೊಂಡರು. ಈಗ ಮೋದಿ ಒಬ್ಬ ವಿಶ್ವ ನಾಯಕನಾಗಿದ್ದಾರೆ. ಮೋದಿಯವರು ಗೆಲ್ಲದಿದ್ದರೆ ಭಾರತ ವಿದೇಶಿಯರ ಪಾಲಾಗುತ್ತೆ ಅಂತಾ ಕಾಂಗ್ರೆಸ್ಸಿಗರೇ ನನ್ನ ಬಳಿ ಹೇಳುತ್ತಿದ್ದಾರೆ ಎಂದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಪ್ರಧಾನಿ ಮೋದಿಯವರ ಮಾಡಿದ ಸಾಧನೆಯನ್ನು ಮತ್ತು ಅವರು ನೀಡಿದ ವಿಶೇಷ ಯೋಜನೆಗಳ ಬಗ್ಗೆ ನಮ್ಮ ಕಾರ್ಯಕರ್ತರು ಮನೆ ಮನಗಳಿಗೆ ಪ್ರಚಾರ ಮಾಡಬೇಕು. ಒಬ್ಬ ಸಾಧಕನ ಕೆಲಸಗಳ ಬಗ್ಗೆ ಪ್ರಚಾರವಾಗದಿದ್ದರೆ ಆ ಕೆಲಸಗಾರನಿಗೆ ಸೋಲಾಗುತ್ತದೆ. ಇಡೀ ದೇಶವೇ ಕೊಂಡಾಡುವ ಪ್ರಧಾನಿ ಮೋದಿ ಅವರನ್ನು ಅನೇಕ ವಿದೇಶಿಗರು ಅಪ್ಪಿಕೊಳ್ಳುತ್ತಿದ್ದಾರೆ. ದೇಶಕ್ಕೆ ಇಂತಹ ಪ್ರಧಾನಿಯ ಅವಶ್ಯಕತೆ ಇರುವುದರಿಂದ ಅವರ ಸಾಧನೆಗಳನ್ನು ಮಾಡಿದ ಕೆಲಸಗಳನ್ನು ಪ್ರತಿ ಮನೆಗೆ ಮತ್ತು ಮನಗಳಿಗೆ ತಲುಪುವ ನಿಟ್ಟಿನಲ್ಲಿ ಪ್ರಚಾರ ಮಾಡೋಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಮೋದಿ ಅವರು ಮತ್ತೆ ಪ್ರಧಾನಿ ಬೇಕು ಎನ್ನುತಿರುವಾಗ ನಮ್ಮಲ್ಲಿ ಮೋದಿಯನ್ನು ಹೇಗೆ ಸೋಲಿಸಬೇಕೆಂದು ವಿರೋಧ ಪಕ್ಷಗಳು ಮಹಾಘಟಬಂಧನ ಎಂಬ ನಾವಿಕನಿಲ್ಲದ ಹಡಗನ್ನು ನದಿಯಲ್ಲಿ ಬಿಡುತ್ತಿದ್ದಾರೆ. ಅದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದು ಅವರಿಗೂ ಸಹ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಆರ್‌ಎಸ್‌ಎಸ್‌ ಮುಖಂಡರ ಮನೆಗೆ ಈಶ್ವರಪ್ಪ ದಿಢೀರ್‌ ಭೇಟಿ: ಬಿಜೆಪಿ ವಲಯದಲ್ಲಿ ಭಾರೀ ಕುತೂಹಲ

ಈ ವೇಳೆ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜೇಶ ನೇರ್ಲಿ, ಅಥಣಿ ಮಂಡಲ ಬಿಜೆಪಿ ಅಧ್ಯಕ್ಷ ಡಾ.ರವಿ ಸಂಕ, ಮುಖಂಡರಾದ ಧರೇಪ್ಪ ಠಕ್ಕಣ್ಣವರ, ಗಿರೀಶ ಬುಟಾಳಿ ಮಾತನಾಡಿದರು. ಮುಖಂಡರಾದ ಸಿದ್ದಪ್ಪ ಮುದಕಣ್ಣವರ, ಅಪ್ಪಾಸಾಹೇಬ್‌ ಅವತಾಡೆ, ಸತ್ಯಪ್ಪ ಬಾಗೆನ್ನವರ, ನಿಂಗಪ್ಪ ನಂದೇಶ್ವರ, ಶಿವಾನಂದ ಸಿಂಧೂರ, ರವಿ ಪೂಜಾರಿ, ವಿನಯ ಪಾಟೀಲ, ಪುಟ್ಟು ಹೀರೆಮಠ, ಸಿದ್ದು ಮಾಳಿ, ಅಭಯ ಸಗರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಉಡುಪಿಯಲ್ಲಿ ಹಿಂದೂ ಹೆಣ್ಣು ಮಕ್ಕಳು ಹೋಗುವ ಶೌಚಾಲಯದಲ್ಲಿ ಕ್ಯಾಮೆರಾವಿಟ್ಟು ವಿದೇಶ ಮುಸಲ್ಮಾನರಿಗೆ ಕಳುಹಿಸುತ್ತಿದ್ದಾರೆ ಎಂದರೆ ಅವರಿಗೆ ಎಷ್ಟುಸೊಕ್ಕು ಇರಬಹುದು ನೀವು ಲೆಕ್ಕಾ ಹಾಕಿ. ಈ ಎಲ್ಲಾದಕ್ಕೂ ಒಂದೇ ಉತ್ತರ ಅದು

ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಮೊದಲೂ ನಮ್ಮ ದೇಶದ ಸೈನಿಕರಿಗೆ ಸುರಕ್ಷತೆ ಇರಲಿಲ್ಲ ಹಾಗೂ ಯಾವುದೇ ಕೆಲಸ ಮಾಡಲೂ ಪರವಾನಿಗೇನು ಇರಲಿಲ್ಲ. ಮೋದಿ ಬಂದ ಮೇಲೆ ಸೈನಿಕರಿಗೆ ಎಲ್ಲ ತರಹ ಶಸ್ತ್ರಾಸ್ತ್ರಗಳು ಸಿಕ್ಕಿದೆ ಹಾಗೂ ಶತ್ರು ರಾಷ್ಟ್ರಗಳ ವಿರುದ್ಧ ಹೋರಾಡಲೂ ಸನ್ನದ್ಧರಾಗಿದ್ದಾರೆ. ಸೈನಿಕರಿಗೆ ವಿಶ್ವಾಸ ಬಂದಿದೆ.

Latest Videos
Follow Us:
Download App:
  • android
  • ios