ಬೆಂಗಳೂರು, (ಮಾ.27): ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರು ಆ ಮಹಾನ್ ನಾಯಕ ಡಿಕೆ ಶಿವಕುಮಾರ್ ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

'11 ಸಾಕ್ಷಿಗಳಿವೆ..ಮಹಾನ್ ನಾಯಕನ ಹೆಸರು ಬಹಿರಂಗ.. 'ನಾನು ಗಂಡು..ಡಿಕೆಶಿ..!' 

ರಮೇಶ್ ಜಾರಕಿಹೊಳಿ ಆರೋಪದ ಬಳಿಕ ಇಂದು (ಶನಿವಾರ) ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಅವರು ಫಸ್ಟ್ರೆಷನ್‍ನಲ್ಲಿದ್ದಾರೆ. ಅವರಿಗೆ ಏನೋ ಸಮಸ್ಯೆ ಇರಬಹುದು. ಅವರು ಏನು ಬೇಕಾದ್ದನ್ನು ಮಾತಾಡ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳೋಕೆ ಆಗೋಲ್ಲ. ಅವರಿಗೆ ಉತ್ತರ ಕೋಡೋಕೆ ಆಗೋಲ್ಲ. ಕಾನೂನು ಇದೆ, ಅಧಿಕಾರಿ ಇದೆ, ತನಿಖೆ ಮಾಡಲಿ. ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್ ದಿನಕ್ಕೆ ಒಂದು ರೀತಿ ಮಾತಾಡ್ತಾರೆ. ಅವರಿಗೆ ಉತ್ತರ ಕೊಡೋಕೆ ಆಗೋಲ್ಲ. ಅದು ವ್ಯಯಕ್ತಿಕ ಸಮಸ್ಯೆ, ಅವರೇ ಬಗೆಹರಿಸಿಕೊಳ್ಳಬೇಕು. ಕಾನೂನು ಪ್ರಕಾರ ಅವರು ಏನು ಬೇಕಾದ್ದನ್ನು ಮಾಡಲಿ. ಅವರದೇ ಸರ್ಕಾರ ಇದೆ, ತನಿಖೆ ಮಾಡಿಸಿ ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲಿ ಎಂದರು.

ಸಿ.ಡಿ ಲೇಡಿ ಪೋಷಕರ ಸುದ್ದಿಗೋಷ್ಠಿ: ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ

ತಮ್ಮ ಮಗಳನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ ಎಂದು ಯುವತಿ ಪೋಷಕರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಕೆಶಿ, ನನಗೆ ಅದು ಬೇಕಾಗಿಲ್ಲ. ಇಂದು ಬೆಳಿಗ್ಗೆ ಹೇಳಿದಂತೆ ಆ ಯುವತಿಯನ್ನು ನಾನು ಭೇಟಿಯಾಗಿಲ್ಲ ಎಂದು ಹೇಳಿದರು.